Vijayanagara News:
MYLARA LINGESHWARA TEMPLEದಲ್ಲಿ ಕಂಚಾವೀರರು ಮೈಜುಮ್ಮೆನಿಸುವ ಪವಾಡಗಳನ್ನು ಪ್ರದರ್ಶಿಸುವುದು ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿರುವ ವಿಶಿಷ್ಠ ಪದ್ಧತಿ. ಪಲ್ಲಕ್ಕಿಯೊಂದಿಗೆ ಆಗಮಿಸುವ ಕ್ಷೇತ್ರದ ಧರ್ಮದರ್ಶಿ ವೆಂಕಪ್ಪಯ್ಯ ಒಡೆಯರ್ ಅವರ ಆಶೀರ್ವಾದ ಪಡೆಯುವ ಕಂಚಾವೀರರು ಕೈ ಪವಾಡ, ಕಾಲು ಪವಾಡ ಮತ್ತು ಸರಪಳಿ ಪವಾಡ ಎಂಬ ಮೂರು ವಿಭಾಗಗಳಲ್ಲಿ ಪವಾಡ ಮಾಡುತ್ತಾರೆ.
ನೋಡನೋಡುತ್ತಿದ್ದಂತೆ ಕೇಕೆ, ಚೀತ್ಕಾರಗಳ ನಡುವೆ ಕಾಲಿಗೆ ಬಗಣಿ ಗೂಟ ಬಡಿದುಕೊಳ್ಳುತ್ತಾರೆ. ಅದರಲ್ಲಿ ಮುಳ್ಳಿನ ಕಂಟಿಗಳನ್ನು ದಾಟಿಸಿಕೊಳ್ಳುತ್ತಾರೆ. ಸುಮಾರು 5 ಅಡಿ ಕಬ್ಬಿಣದ ಸಲಾಖೆಯನ್ನು ಕಾಲಿನೊಳಗಿನ ರಂಧ್ರದೊಳಗೆ ದಾಟಿಸುತ್ತಾರೆ. MYLARA LINGESHWARA TEMPLE ಕೈಪವಾಡದಲ್ಲಿ ಕೈಗೆ ಪಂಚಾರತಿ ಇರುವ ಕಬ್ಬಿಣ ಚುಚ್ಚಿಕೊಳ್ಳುತ್ತಾರೆ. ಪಂಚಾರತಿಗೆ ದೀಪ ಹಚ್ಚಿ ಮೈಲಾರಲಿಂಗೇಶ್ವರನಿಗೆ ಬೆಳಗುತ್ತಾರೆ.
ಕಬ್ಬಿಣದ ಸರಪಳಿಗಳನ್ನು ಏಳುಕೋಟಿ ಏಳುಕೋಟಿ ಎನ್ನುತ್ತಲೇ ಕ್ಷಣಾರ್ಧದಲ್ಲಿ ತುಂಡು ಮಾಡುತ್ತಾರೆ. ಹೂವಿನಹಡಗಲಿ ತಾಲೂಕಿನ ಮೈಲಾರದಲ್ಲಿ ಭರತ ಹುಣ್ಣಿಮೆಯ ಎರಡನೇ ದಿನ ಕಾರ್ಣಿಕೋತ್ಸವ ನೆರವೇರಿತು. ಇದಾದ ಮರುದಿನ ಕಂಚಾವೀರರು ಶ್ರೀ ಕ್ಷೇತ್ರ MYLARA LINGESHWARA TEMPLEದ ಪಕ್ಕದಲ್ಲಿರುವ ಗಂಗಮಾಳಮ್ಮ ದೇವಸ್ಥಾನದಲ್ಲಿ ವಿವಿಧ ಪವಾಡಗಳನ್ನು ಪ್ರದರ್ಶಿಸಿದ್ದು, ಭಕ್ತರು ಮೂಕವಿಸ್ಮಿತರಾದರು.
As if cutting the head and then assembling it:
ಇಲ್ಲಿ ಹಲವು ಶತಮಾನಗಳಿಂದ ಈ ರೀತಿಯ ಪವಾಡಗಳು ನಡೆಯುತ್ತಿವೆ. ಈ ಹಿಂದೆ ಕಂಚಾವೀರರು ತಮ್ಮ ಶಿರವನ್ನೇ ತುಂಡರಿಸಿ, ನಂತರ ಜೋಡಿಸುವ ಪವಾಡ ಮಾಡುತ್ತಿದ್ದರಂತೆ. ಆದರೆ ಮೈಲಾರಲಿಂಗೇಶ್ವರ ಕನಸಲ್ಲಿ ಬಂದು ನಾನು ಒಮ್ಮೊಮ್ಮೆ ಕ್ಷೇತ್ರದಲ್ಲಿ ಇರುವುದಿಲ್ಲ.
ಕ್ಷೇತ್ರದಲ್ಲಿ ಇಲ್ಲದ ವೇಳೆ ಈ ರೀತಿಯ ಪವಾಡವಾದರೆ ಯಾವುದಾದರೂ ಅನಾಹುತವಾಗಬಹುದು.ಕಂಚಾವೀರರು ವಂಶಪಾರಂಪರ್ಯವಾಗಿ ಪವಾಡ ಆಚರಿಸಿಕೊಂಡು ಬರುತ್ತಾರೆ. ಇವರು ಪವಾಡ ಮಾಡಿದ ನಂತರ ಮದುವೆಯಾಗದ ಯುವಕರಿಗೆ ಮದುವೆ ಭಾಗ್ಯ ಕೂಡಿ ಬರುತ್ತದಂತೆ. ಮೈಲಾರದಲ್ಲಿ ಕಂಚಾವೀರರ ಮನೆತನಗಳಿದ್ದು ಅವರು ಮೈಲಾರಲಿಂಗೇಶ್ವರ ಭಕ್ತರಾಗಿದ್ದಾರೆ.
ದೇಹಕ್ಕೆ ಬಗಣಿ ಗೂಟ, ಸಲಾಕೆ, ಮುಳ್ಳಿನಕಂಟೆ, ಕೈಯಲ್ಲಿ ಆರತಿ ಚುಚ್ಚಿಕೊಂಡು ಬೆಳಗಿದರೂ ಇವರಿಗೆ ಯಾವುದೇ ನೋವು ಆಗುವುದಿಲ್ಲ ಎಂಬುದು ವಿಶೇಷ. ನನ್ನ ಆರಾಧಕರಿಗೆ ಕೇಡಾಗಬಾರದು ಎಂದು ತಿಳಿಸಿದ್ದರಿಂದ ಅಂದಿನಿಂದ ಇಲ್ಲಿ ಶಿರಚ್ಚೇದನ ಪವಾಡವನ್ನು ನಿಲ್ಲಿಸಲಾಗಿದೆ.
ಪ್ರತಿ ವರ್ಷ ಸುಮಾರು 32 ಕಂಚಾವೀರರ ಮನೆತನಗಳು ಇಂಥ ಪವಾಡ ಮಾಡುತ್ತವೆ. ಇಲ್ಲಿ ಮೈಲಾರಲಿಂಗೇಶ್ವರ ಮಣಿಕಾಸುರ ಮಲ್ಲಾಸುರನ ವಧೆ ಮಾಡಿದ ನಂತರ ಮಾನವನ ರಕ್ತ ಭೂಮಿ ಮೇಲೆ ಚೆಲ್ಲಬೇಕು ಎನ್ನುವ ಕಾರಣದಿಂದ ಇಂಥ ಪವಾಡ ಮಾಡುವ ಪರಂಪರೆ ಬೆಳೆದು ಬಂದಿದೆ.
ಈ ಪವಾಡಗಳೊಂದಿಗೆ ಪ್ರಸ್ತುತ ವರ್ಷದ ಮೈಲಾರಲಿಂಗೇಶ್ವರ ಜಾತ್ರೆಗೆ ವಿಧ್ಯುಕ್ತ ತೆರೆ ಬಿದ್ದಿದೆ ಎಂದು ದೇವಾಲಯದ ಧರ್ಮಾಧಿಕಾರಿ ವೆಂಕಪ್ಪಯ್ಯ ಒಡೆಯರ್ ತಿಳಿಸಿದರು. ಒಂದು ಹನಿ ರಕ್ತವೂ ಹೊರಬರದಿರುವುದು ಭಕ್ತರನ್ನು ಆಶ್ಚರ್ಯಗೊಳಿಸುತ್ತದೆ.
ಹೊಸ ಕಂಚಾವೀರರಿಗೆ ಹಿರಿಯ ಕಂಚಾವೀರರು ಮಾರ್ಗದರ್ಶನ ಮಾಡುವ ಮೂಲಕ ಪವಾಡಗಳನ್ನು ಮಾಡಿಸುತ್ತಾರೆ. ಕ್ಷೇತ್ರದ ಧರ್ಮದರ್ಶಿ ನೀಡುವ ಭಂಡಾರವನ್ನು ಇವರು ಗಾಯಕ್ಕೆ ಹಚ್ಚಿಕೊಂಡು ಮನೆಗಳಿಗೆ ತೆರಳುತ್ತಾರೆ.
ಇದನ್ನು ಓದಿರಿ : Delhi Railway Station Stampede: Railways Takes Several Measures To Avoid Untoward Incidents