ಚೆನೈ: ಹಿಂದಿ ಹೇರಿಕೆ ಪ್ರಯತ್ನಗಳನ್ನು ತಡೆಯಲು ತಮ್ಮ ಮಕ್ಕಳಿಗೆ ತಮಿಳಿನ ಹೆಸರನ್ನು ಇಡಬೇಕು ಎಂದು ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಹೇಳಿದ್ದಾರೆ.
ಪೋಷಕರು ತಮ್ಮ ಮಕ್ಕಳಿಗೆ ಸುಂದರವಾದ ತಮಿಳು ಹೆಸರನ್ನು ಇಡಬೇಕು,” ಕಾರ್ಯಕ್ರಮವೊಂದರಲ್ಲಿ ಅವರು ಅವರು ಹೇಳಿದರು.
ಪೋಷಕರು ತಮ್ಮ ಮಗುವಿಗೆ ಸುಂದರವಾದ ತಮಿಳು ಹೆಸರನ್ನುಇಡಬೇಕು. ಆಗ ನಮ್ಮ ನಾಡಗೀತೆಯಲ್ಲಿರುವ (ತಮಿಳು ತಾಯಿ ವಾಳ್ತು) ದ್ರಾವಿಡಂ ಪದ ತೆಗೆಯಲು ಪ್ರಯತ್ನ ಪಟ್ಟಿದ್ದರು,
ಈಗ ಹೊಸ ಶಿಕ್ಷಣ ನೀತಿಯ ಮೂಲಕ ಹಿಂದಿ ಹೇರಲು ಪ್ರಯತ್ನಿಸುತ್ತಿದ್ದಾರೆ.
30 ವರ್ಷಗಳ ಹಿಂದೆ ಡಿಎಂಕೆಯ ನಾಯಕ ಎಂ ಕರುಣಾನಿಧಿ ಅವರು ಪಿತ್ರಾರ್ಜಿತ ಆಸ್ತಿಯಲ್ಲಿ ಮಹಿಳೆಯರಿಗೆ ಸಮಾನ ಪಾಲು ಸಿಗುವಂತೆ ಮಾಡಿದ್ದರು.
ಅದೇ ಹಾದಿಯಲ್ಲೇ ಇಂದಿನ ಮುಖ್ಯಮಂತ್ರಿಗಳು ಮಹಿಳಾ ಕಲ್ಯಾಣಕ್ಕಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ.
ಉಚಿತ ಬಸ್ ಪ್ರಯಾಣ ಯೋಜನೆಯು ಕೋಟಿಗಟ್ಟಲೆ ಮಹಿಳೆಯರಿಗೆ ಪ್ರಯೋಜನ ನೀಡಿದೆ. ಅನೇಕ ರಾಜ್ಯಗಳಿಗೆ ಈ ಯೋಜನೆಯು ಪ್ರೇರೇಪಿಸಿದೆ ಎಂದು ಹೇಳಿದ್ದಾರೆ.
ಹಿಂದಿನ ಕಾಲದಲ್ಲಿ ಹಿರಿಯರು ನವ ದಂಪತಿಗಳಿಗೆ 16 ಬಗೆಯ ಸಂಪತ್ತು ಹೊಂದುವಂತೆ ಆಶೀರ್ವದಿಸುತ್ತಿದ್ದರು. ಬಹುಶಃ ಈಗ 16 ಬಗೆಯ ಸಂಪತ್ತಿನ ಬದಲು 16 ಮಕ್ಕಳನ್ನು ಹೊಂದುವಂತೆ ಆಶೀರ್ವಾದ ನೀಡುವ ಸಮಯ ಬಂದಿದೆ ಎಂದಿದ್ದರು.
ಇತ್ತೀಚೆಗಷ್ಟೇ ಆಂಧ್ರಪ್ರದೇಶದ ಸಿಎಂ ಚಂದ್ರಬಾಬು ನಾಯ್ಡು ದಕ್ಷಿಣ ಭಾರತ ರಾಜ್ಯಗಳ ಜನರು ಹೆಚ್ಚಿನ ಮಕ್ಕಳನ್ನು ಹೊಂದಬೇಕು ಎಂದು ಕರೆ ನೀಡಿದ್ದರು.
ಎರಡಕ್ಕಿಂತ ಹೆಚ್ಚು ಮಕ್ಕಳಿರುವವರು ಮಾತ್ರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ಪರ್ಧಿಸಲು ಅರ್ಹರಾಗುವ ಕಾನೂನು ತರಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎಂದು ಸಹ ಜೇಳಿದ್ದರು.
WhatsApp Group
Join Now
Telegram Group
Join Now
Instagram Account
Follow Now
Facebook Page
Follow Now