ಬೆಂಗಳೂರು: ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಲಿಮಿಟೆಡ್ (ಕೆಎಂಎಫ್) ನ ನಂದಿನಿ ತುಪ್ಪ ಉತ್ಪಾದನೆಯನ್ನು ಹೊರಗುತ್ತಿಗೆ ನೀಡಿರುವ ವಿಚಾರ, ಅದರ ಗುಣಮಟ್ಟ ಹೀಗೆ ಹಲವು ವಿಷಯಗಳು ಚರ್ಚೆಯಲ್ಲಿವೆ.
ಎನ್‌ಕೆ ಬಿಎಲ್‌ಆರ್ ಎಂಬ ಎಕ್ಸ್ ಖಾತೆಯಲ್ಲಿ ನಂದಿನಿ ತುಪ್ಪದ ಉತ್ಪಾದನೆ ಹೊರಗುತ್ತಿಗೆ ನೀಡಲಾಗಿದೆ ಎಂಬ ವಿಚಾರ ಪ್ರಸ್ತಾಪವಾಗಿದೆ. ಅವರು ನಂದಿನಿ ತುಪ್ಪದ ಪ್ಯಾಕೆಟ್ ಮೇಲಿರುವ ಉತ್ಪಾದಕರ ವಿವರ ಇರುವ ಚಿತ್ರವನ್ನೂ ಶೇರ್ ಮಾಡಿದ್ದಾರೆ.
“ಹಾಗಾದರೆ ನಂದಿನಿ ತುಪ್ಪ ಉತ್ಪಾದನೆಯನ್ನೂ ಹೊರಗುತ್ತಿಗೆ ನೀಡುತ್ತಿದ್ದಾರೆ ಎಂದಾಯಿತು ಎಂಬರ್ಥದಲ್ಲಿ ವಿಷಯವನ್ನೂ ಅಲ್ಲಿ ಪ್ರಸ್ತಾಪಿಸಿದ್ದರು.
ಹಾವೇರಿ ಹಾಲು ಒಕ್ಕೂಟಕ್ಕೆ ಉತ್ಪಾದಕರು ಎಂದು ಹೇಳುವಂತೆ ಇದು ಆ ಪ್ರದೇಶಕ್ಕೆ ಮಾತ್ರ ಸೀಮಿತ ಎಂದು ನಾನು ಭಾವಿಸುತ್ತೇನೆ. ಇದು ಪ್ರತಿ ಪ್ರದೇಶದಲ್ಲಿ ಒಂದೇ ಆಗಿದೆಯೇ ಎಂದು ಖಚಿತವಾಗಿಲ್ಲ. ಬೇಡಿಕೆ ಘಾತೀಯವಾಗಿದ್ದಾಗ ಒಪ್ಪಂದದ ತಯಾರಿಕೆಯು ವ್ಯವಹಾರಗಳಲ್ಲಿ ಸಾಮಾನ್ಯವಾಗಿದೆ. ಆದಾಗ್ಯೂ, ಸ್ಪಷ್ಟತೆಗಾಗಿ ಇನ್ನಷ್ಟು ವಿವರ ತಿಳಿದುಕೊಳ್ಳಬೇಕು ಎಂದು ನವೀನ್ ಶಾಂಡಿಲ್ಯ ಹೇಳಿದ್ದಾರೆ.
” ಸೇವ್ ನಂದಿನಿ ವಾರಿಯರ್ಸ್ ಎಲ್ಲಿ ಹೋದರು? ತುಪ್ಪ ತಯಾರಿಸೋಕೆ ಆಗದಷ್ಟು ಬರಗೆಟ್ರಾ? ಎಂದು ಮಹೇಂದ್ರ ಕುಮಾರ್ ಅವರು ಟೀಕಿಸಿದ್ದಾರೆ. ಕೆಎಂಎಫ್ ಈ ಬಗ್ಗೆ ಸ್ಪಷ್ಟೀಕರಣ ನೀಡಬೇಕು ನವೀನ್ ಹಿತ್ತಲಮನಿ ಎಂಬುವವರು ಪ್ರತಿಕ್ರಿಯಿಸಿದ್ದಾರೆ.
ನಿಷ್ಕಾಮ ಕರ್ಮ ಎಂಬ ಖಾತೆಯಿಂದ ಬರೆದಿರುವ ಪ್ರತಿಕ್ರಿಯೆಯಲ್ಲಿ, ಇತ್ತೀಚಿನ ದಿನಗಳಲ್ಲಿ ಬಹುತೇಕ ಉತ್ಪನ್ನಗಳು ಹೊರಗುತ್ತಿಗೆಯಲ್ಲಿ ಉತ್ಪಾದಿಸಲ್ಪಡುತ್ತಿವೆ. ಕೆಎಂಎಫ್‌ಗೆ ಅದರದ್ದೇ ಆದ ಮಾನವ ಸಂಪನ್ಮೂಲ ಮತ್ತು ತಂತ್ರಜ್ಞಾನ ಇಲ್ಲ. ಜಿಲ್ಲಾ ಹಾಲು ಒಕ್ಕೂಟಗಳು ನೇಮಕಾತಿ, ನಿರ್ವಹಣೆಯಲ್ಲಿ ಭಾರಿ ಭ್ರಷ್ಟಾಚಾರದಿಂದ ನಲುಗಿವೆ ಎಂದು ಹೇಳಿದ್ದಾರೆ.
ಸುಮಂತ್ ಎಂಬುವವರು, “ ಪ್ರತಿ ಜಿಲ್ಲೆಯಲ್ಲಿ ಕೆಎಂಎಫ್ ಉತ್ಪಾದನಾ ಸೌಲಭ್ಯವನ್ನು ಹೊಂದಿಲ್ಲ – ನನಗೆ ತಿಳಿದಿರುವಂತೆ ಅವರು ಅದನ್ನು ಬೆಂಗಳೂರು, ಹಾಸನದಲ್ಲಿ ಹೊಂದಿದ್ದಾರೆ ಮತ್ತು ಮಧ್ಯ ಕರ್ನಾಟಕದಲ್ಲಿ ಇನ್ನೂ ಒಂದಾಗಿರಬಹುದು. ಕೆಎಂಎಫ್‌ಗಾಗಿ ಎಷ್ಟು ಥರ್ಡ್ ಪಾರ್ಟಿ ತಯಾರಕರು ಇದನ್ನು ಮಾಡುತ್ತಿದ್ದಾರೆ ಮತ್ತು ಯಾವ ಗುಣಮಟ್ಟದ ತಪಾಸಣೆಗಳನ್ನು ನಡೆಸುತ್ತಾರೆ ಎಂಬುದನ್ನು ತಿಳಿದುಕೊಳ್ಳುವ ಅಗತ್ಯ ಇದೆ” ಎಂದು ಹೇಳಿದ್ದಾರೆ.
ಹಾವೇರಿ ಹಾಲು ಒಕ್ಕೂಟಕ್ಕೆ ಉತ್ಪಾದಕರು ಎಂದು ಹೇಳುವಂತೆ ಇದು ಆ ಪ್ರದೇಶಕ್ಕೆ ಮಾತ್ರ ಸೀಮಿತ ಎಂದು ನಾನು ಭಾವಿಸುತ್ತೇನೆ. ಇದು ಪ್ರತಿ ಪ್ರದೇಶದಲ್ಲಿ ಒಂದೇ ಆಗಿದೆಯೇ ಎಂದು ಖಚಿತವಾಗಿಲ್ಲ. ಬೇಡಿಕೆ ಘಾತೀಯವಾಗಿದ್ದಾಗ ಒಪ್ಪಂದದ ತಯಾರಿಕೆಯು ವ್ಯವಹಾರಗಳಲ್ಲಿ ಸಾಮಾನ್ಯವಾಗಿದೆ. ಆದಾಗ್ಯೂ, ಸ್ಪಷ್ಟತೆಗಾಗಿ ಇನ್ನಷ್ಟು ವಿವರ ತಿಳಿದುಕೊಳ್ಳಬೇಕು ಎಂದು ನವೀನ್ ಶಾಂಡಿಲ್ಯ ಹೇಳಿದ್ದಾರೆ.
ನವೀನ್ ಹಿತ್ತಲಮನಿ ಎಂಬುವವರು ಪ್ರತಿಕ್ರಿಯೆ ನೀಡುತ್ತ, ಕೆಎಂಎಫ್ ಈ ಬಗ್ಗೆ ಸ್ಪಷ್ಟೀಕರಣ ನೀಡಬೇಕು ಎಂದಿದ್ದಾರೆ.
ರಾಜ್ಯದಲ್ಲೇ ಪ್ರಥಮ ಸ್ಥಾನಕ್ಕೆ ಕೊಂಡೊಯ್ಯಬೇಕು ಎಂಬ ನಿಟ್ಟಿನಲ್ಲಿ ಕೌಶಿಕದ ಕೈಗಾರಿಕಾ ಪ್ರದೇಶದಲ್ಲಿ ಮೆಗಾ ಡೇರಿ ಸ್ಥಾಪನೆ ಮಾಡಲಾಗುತ್ತಿದ್ದು, ಡಿಸೆಂಬರ್ ವೇಳೆಗೆ ಉದ್ಘಾಟಿಧಿಸಬೇಕೆಂಬ ಚಿಂತನೆ ನಡೆದಿದೆ. ಈಧಿಗಾಧಿಗಲೇ ಯಂತ್ರೋಪಕರಣಗಳನ್ನು ಆಮದು ಮಾಡಿಕೊಳ್ಳಲಾಗಿದೆ. ಹೀಗಾಗಿ ಹಾಲು ಮತ್ತು ಹಾಲಿನ ಉತ್ಪನ್ನಗಧಿಳ ತಯಾರಿಕೆಯೂ ಹೆಚ್ಚಳವಾಗಲಿದ್ದು, ಮಾರುಕಟ್ಟೆ ವಿಸ್ತರಣೆಗೂ ಯೋಜನೆ ರೂಪಿಸಲಾಗುತ್ತಿದೆ” ಅಧಿಕಾರಿಗಳು ಹೇಳಿದ್ದಾರೆ.
WhatsApp Group
Join Now
Telegram Group
Join Now
Instagram Account
Follow Now
Facebook Page
Follow Now