ಹೊಸ ವರ್ಷಕ್ಕೆ ಸರ್ಕಾರದಿಂದ ರಾಜ್ಯದ ಜನರಿಗೆ ಶಾಕ್ ಕೊಡಲು ಸಜ್ಜಾಗಿದೆ ಅನ್ನೋ ಮಾಹಿತಿಗಳು ಸದ್ಯ ಆಚೆ ಬರುತ್ತಿವೆ. ನಂದಿನಿ ಹಾಲಿನ ದರ ಏರಿಕೆ ಮಾಡಲು ಸದ್ಯ ಸರ್ಕಾರ ಚಿಂತನೆ ನಡೆಸಿದೆ. ನಂದಿನಿ ಹಾಲು ಪ್ರತಿ ಲೀಟರ್ಗೆ ಒಂದಲ್ಲ, ಎರಡಲ್ಲ ಬರೋಬ್ಬರಿ 5 ರೂಪಾಯಿ ಏರಿಕೆ ಮಾಡಲು ಚಿಂತನೆ ನಡೆಸುತ್ತಿದೆ. ಕರ್ನಾಟಕ ಹಾಲು ಮಹಾ ಮಂಡಳಿಯಿಂದ ಇಂತಹದೊಂದು ಪ್ರಸ್ತಾವನೆ ರಾಜ್ಯ ಸರ್ಕಾರಕ್ಕೆ ಬಂದಿದ್ದು. ಚಳಿಗಾಲದ ಅಧಿವೇಶನದ ಬಳಿಕ ದರ ಏರಿಕೆ ಬಗ್ಗೆ ಸರ್ಕಾರ ನಿರ್ಧಾರ ಮಾಡಲಿದೆ.
ಡಿಸೆಂಬರ್ 20 ರಿಂದ ಮಂಡ್ಯದಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆರಂಭಗೊಳ್ಳಲಿದೆ. ಸಮ್ಮೇಳನಕ್ಕೆ ಚಾಲನೆ ನೀಡಿದ ಬಳಿಕ ಕೆಎಂಎಫ್ ಅಧಿಕಾರಿಗಳ ಜೊತೆ ಸಿಎಂ ಡಿಸೆಂಬರ್ 21 ಅಥವಾ 22 ರಂದು ಸಭೆ ನಡೆಸಲಿದ್ದಾರೆ. ಸಭೆಯ ಬಳಿಕ ಹಾಲಿನ ದರ ಏರಿಕೆ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ.
ಈಗಾಗಲೇ ಹೇಳಿದಂತೆ ಹಾಲಿನ ದರ ಏರಿಕೆಗೆ ಕರ್ನಾಟಕ ಹಾಲು ಮಹಾ ಮಂಡಳಿಯಿಂದ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಸದ್ಯ ಡಿಸೆಂಬರ್ 19ರವರೆಗೂ ಬೆಳಗಾವಿಯಲ್ಲಿ ಚಳಿಗಾಲ ಅಧಿವೇಶನ ನಡೆಯಲಿದ್ದು ಅಧಿವೇಶನದ ಬಳಿಕ ಕನ್ನಡ ಸಾಹಿತ್ಯ ಸಮ್ಮೇಳನವಿದೆ.
ಒಂದು ವೇಳೆ ಅಂದಕೊಂಡಂತೆಯೇ ಆದಲ್ಲಿ ಜನವರಿ 1 ರಿಂದ ನೂತನ ದರ ಜಾರಿಗೆ ಬರೋದು ನಿಶ್ಚಿತವಾಗಿದೆ. ಆಗ ಪ್ರತಿ ಲೀಟರ್ ನಂದಿನಿ ಹಾಲಿನ ದರದಲ್ಲಿ 5 ರೂಪಾಯಿ ಏರಿಕೆಯಾಗಲಿದೆ. ಈಗಾಗಲೇ ಶ್ರೀಸಾಮಾನ್ಯ ಬೆಲೆ ಏರಿಕೆಯಿಂದಾಗಿ ಕಂಗಾಲಾಗಿದ್ದಾನೆ. ಈಗ ಹಾಲಿನ ದರದಲ್ಲಿಯೂ ಏರಿಕೆಯಾಗಿದ್ದೆ ಆದಲ್ಲಿ ಈಗಾಗಲೇ ಬಿದ್ದ ಬೆಲೆ ಏರಿಕೆಯ ಬರೆಯ ಮೇಲೆ ಉಪ್ಪು ಸವರಿದಂತಾಗುವುದು ನಿಶ್ಚಿತ.
WhatsApp Group
Join Now
Telegram Group
Join Now
Instagram Account
Follow Now
Facebook Page
Follow Now