spot_img
spot_img

ನರೇಗಾ ಖಾತರಿ ಯೋಜನೆ : ಕ್ಯೂ ಆರ್ ಕೋಡ್ ಬಳಸಿ ಹೆಸರು ನೋಂದಣಿ

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

ಮಂಗಳೂರು: 2025-26ನೇ ಸಾಲಿನ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (Nrega Work Project) ಅಡಿಯಲ್ಲಿ

ಕ್ರಿಯಾ ಯೋಜನೆ ತಯಾರಿಗೆ ವೈಯಕ್ತಿಕ ಮತ್ತು ಸಾರ್ವಜನಿಕ ಕಾಮಗಾರಿ ಕೈಗೊಳ್ಳುವವರು ಗ್ರಾಮ ಪಂಚಾಯತಿಗೆ ಅಥವಾ ಆನ್‌ಲೈನ್‌ ಮೂಲಕ ಬೇಡಿಕೆ ಸಲ್ಲಿಸಬಹುದು.

ಕ್ರಿಯಾ ಯೋಜನೆ ತಯಾರಿಗೆ ವೈಯಕ್ತಿಕ ಮತ್ತು ಸಾರ್ವಜನಿಕ ಕಾಮಗಾರಿ ಕೈಗೊಳ್ಳುವವರು ಗ್ರಾಮ ಪಂಚಾಯತಿಗೆ ಅಥವಾ ಆನ್‌ಲೈನ್‌ ಮೂಲಕ ಬೇಡಿಕೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಸಾರ್ವಜನಿಕ ಕಾಮಗಾರಿಗಳಾದ ಸಾರ್ವಜನಿಕ ತೋಡಿನ ಹೂಳೆತ್ತುವಿಕೆ, ಇಂಗುಗುಂಡಿ ನಿರ್ಮಾಣ, ಕಾಂಕ್ರಿಟ್ ರಸ್ತೆ ನಿರ್ಮಾಣ, ಶಾಲೆ ಆವರಣ ಗೋಡೆ, ಶಾಲಾ ಆಟದ ಮೈದಾನ, ಸಮಗ್ರ ಕೆರೆ ಅಭಿವೃದ್ಧಿ, ಶಾಲಾ ಅಡುಗೆ ಕೋಣೆ ನಿರ್ಮಾಣ, ಕಚ್ಚಾ ರಸ್ತೆ, ಸಮುದಾಯ ಸೋಕ್ಪಿಟ್ (ಅಂಗನವಾಡಿ, ಸರ್ಕಾರಿ ಶಾಲೆ, ಕಾಲೋನಿಗಳಲ್ಲಿ), ಅಂಗನವಾಡಿ, ಸರ್ಕಾರಿ ಶಾಲೆ ಆವರಣದಲ್ಲಿ ಪೌಷ್ಟಿಕ ತೋಟ ರಚನೆ ಸೇರಿ ವಿವಿಧ ಕಾಮಗಾರಿಗಳಿಗೆ

ಅರ್ಜಿಯನ್ನು ನಿಮ್ಮ ಹತ್ತಿರದ ಗ್ರಾಮ ಪಂಚಾಯಿತಿಗೆ ಇಲ್ಲವೇ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು.
ಉದ್ಯೋಗ ಖಾತರಿ ನಡಿಗೆ ಸಬಲತೆಯೆಡೆಗೆ ಅಭಿಯಾನದಡಿ ವೈಯಕ್ತಿಕ ಕಾಮಗಾರಿಗಳಾದ ತೆರೆದ ಬಾವಿ, ದನದ ಹಟ್ಟಿ ಮೇಕೆ/ಕುರಿ ಶೆಡ್‌, ಹಂದಿ ಶೆಡ್, ಕೋಳಿ ಶೆಡ್‌, ಕೊಳವೆ ಬಾವಿ ಮರುಪೂರಣ ಘಟಕ, ದ್ರವತ್ಯಾಜ್ಯ ಗುಂಡಿ, ಎರೆಹುಳು ಗೊಬ್ಬರ ಘಟಕ, ಬಯೋಗ್ಯಾಸ್‌, ಕೃಷಿ ಹೊಂಡ ರಚನೆ, ಗೊಬ್ಬರ ಗುಂಡಿ, ಇಂಗುಗುಂಡಿ , ಅಡಿಕೆ ಕೃಷಿ, ತೆಂಗು ಕೃಷಿ, ಚಿಕ್ಕು, ಕಾಳುಮೆಣಸು, ಕ್ಕೊಕ್ಕೋ, ವೀಳ್ಯದೆಲೆ, ಮಾವು, ಗುಲಾಬಿ, ತಾಳೆ, ಗೇರು, ಮಲ್ಲಿಗೆ ಅಂಗಾಂಶ ಬಾಳೆ, ಪಪ್ಪಾಯ, ನುಗ್ಗೆ ಕೃಷಿ, ರಂಬೂಟನ್‌, ಪೇರಳೆ, ಪೌಷ್ಟಿಕ ತೋಟ ರಚನೆ, ಬಸಿಗಾಲುವೆ(ಉಜಿರ್ ಕಣಿ) ರಚನೆ, ಡ್ರ್ಯಾಗನ್‌ ಫ್ರೂಟ್‌ ಬೆಳೆಯಲು ಇತರೆ ಕಾಮಗಾರಿಗೆ ಆರ್ಥಿಕ ಸಹಾಯಧನ ಪಡೆಯಬಹುದು.

2025-26ನೇ ಸಾಲಿನ ಕ್ರಿಯಾ ಯೋಜನೆ ತಯಾರಿ ಸಲುವಾಗಿ ಜನರು ಗ್ರಾಮ ಪಂಚಾಯತಿಗೆ ಬಂದು ಅರ್ಜಿ ಸಲ್ಲಿಸಬಹುದು. ಮೊಬೈಲ್‌ನಲ್ಲಿ ಲಿಂಕ್‌ ಟೈಪ್‌ ಮಾಡಿ ಆನ್‌ಲೈನ್‌ ಮೂಲಕ ಬೇಡಿಕೆ ಸಲ್ಲಿಸಲು ಅವಕಾಶವಿದೆ. ಕಾಮಗಾರಿ ಬೇಡಿಕೆ ಬಂದ ನಂತರ ಕ್ರಿಯಾ ಯೋಜನೆ ತಯಾರಾಗುತ್ತದೆ.

ವೈಯಕ್ತಿಕ ಇಲ್ಲವೇ ಸಾರ್ವಜನಿಕ ಕಾಮಗಾರಿ ಬೇಡಿಕೆ ಸಲ್ಲಿಸಿ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಪಂ ಕಾರ್ಯನಿರ್ವಹಣಾಧಿಕಾರಿ ಸಚಿನ್ ಕುಮಾರ್ ಎಂದು ತಿಳಿಸಿದ್ದಾರೆ.

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

Bigg Boss ಮನೆಯಲ್ಲಿ ಒಂಬತ್ತನೇ ಅದ್ಭುತ: ಮತ್ತೆ ಒಂದಾದ ಮಂಜಣ್ಣ – ತ್ರಿವಿಕ್ರಮ್, ಈ ಬಾರಿ ಹೊಸ ಒಪ್ಪಂದ!

ದಿನಗಳು ಉರುಳಿದಂತೆ ‘ಬಿಗ್ ಬಾಸ್’ ಮನೆಯಲ್ಲಿ ಸ್ಪರ್ಧೆಯ ಕಾವೇರುತ್ತಿದೆ. ಹೀಗಿರುವಾಗಲೇ, ತೊಡೆ ತಟ್ಟಿ ನಿಂತಿದ್ದ ತ್ರಿವಿಕ್ರಮ್ ಹಾಗೂ ಮಂಜು ಕೈಜೋಡಿಸಿಬಿಟ್ಟಿದ್ದಾರೆ. ಹೊಸ ಒಪ್ಪಂದಕ್ಕೆ ನಾಂದಿ...

ರೋಗಗಳಿಂದ ಕಂಗೆಟ್ಟಿದ್ದ ಮಲೆನಾಡಿನ ರೈತರಲ್ಲಿ ಆಶಾಕಿರಣ: ಭರವಸೆ ಮೂಡಿಸಿದ ಮಂಗಳ ಅಡಕೆ

ಶೃಂಗೇರಿ: ಹಳದಿ ಎಲೆ. ಬೇರು ಹುಳ, ಎಲೆ ಚುಕ್ಕಿ ರೋಗ ಹೀಗೆ ಮಲೆನಾಡಿನ ಅಡಕೆ ಬೆಳೆಗಾರರು ಕಳೆದ ಕೆಲವು ವರ್ಷಗಳಿಂದ ಸಾಲು ಸಾಲು ರೋಗ...

5.80 ಕೋಟಿಗೂ ಹೆಚ್ಚು Ration Card ರದ್ದು ಮಾಡಿದ ಮೋದಿ ಸರ್ಕಾರ!

ನವದೆಹಲಿ: ದೇಶಾದ್ಯಂತ 80 ಕೋಟಿಗೂ ಹೆಚ್ಚು ಜನರು ಉಚಿತ ಪಡಿತರ ಪಡೆಯುತ್ತಿದ್ದಾರೆ. ದೇಶದಲ್ಲಿ ಕೇಂದ್ರ ಸರ್ಕಾರವು ಪ್ರಸ್ತುತ 20.4 ಕೋಟಿ ಪಡಿತರ ಚೀಟಿಗಳ ಮೂಲಕ...

Jio, Airtelಗೆ ಮತ್ತೊಂದು ಮಾಸ್ಟರ್​ ಸ್ಟ್ರೋಕ್​​ ಕೊಟ್ಟ ಬಿಎಸ್​ಎನ್​​ಎಲ್..!

ಸರ್ಕಾರಿ ಸ್ವಾಮ್ಯದ BSNL ಸಂಸ್ಥೆಗೆ ಸೆಪ್ಟೆಂಬರ್ ಒಂದೇ ತಿಂಗಳಲ್ಲಿ 8 ಲಕ್ಷ ಹೊಸ ಗ್ರಾಹಕರು ಸೇರ್ಪಡೆಯಾಗಿದ್ದಾರೆ. ಈ ಬಗ್ಗೆ ಮಾಹಿತಿ ಟ್ರಾಯ್ ನೀಡಿದ್ದು, ಬಿಎಸ್ಎನ್ಎಲ್​ಗೆ ಹೆಚ್ಚಿನ...