PUNCH Mission:
ಸೂರ್ಯನ ಕರೋನ ಮತ್ತು ಸೋಲಾರ್ ವಿಂಡ್ ಅನ್ನು 3D ಯಲ್ಲಿ ಅಳೆಯಲು ಬೆಳಕಿನ ಧ್ರುವೀಕರಣವನ್ನು ಬಳಸಿಕೊಳ್ಳಲು ಸೌರ ಮಿಷನ್ ಅನ್ನು ನಿರ್ದಿಷ್ಟವಾಗಿ ವಿನ್ಯಾಸಗೊಳಿಸಲಾಗಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ.
NASA PUNCH Mission:
ಸೌರ ವಾತಾವರಣವನ್ನು ಸೂಕ್ಷ್ಮವಾಗಿ ಗಮನಿಸುವುದು, ರಚನೆಯನ್ನು ಪುನರ್ನಿರ್ಮಿಸುವುದು, ಮೂಲವನ್ನು ಪತ್ತೆ ಹಚ್ಚುವುದು ಮತ್ತು ಸೌರ ಮಾರುತಗಳು ಅಂದ್ರೆ ಸೋಲಾರ್ ವಿಂಡ್ಗಳನ್ನು ಮತ್ತು ಕರೋನಲ್ ಮಾಸ್ ಎಜೆಕ್ಷನ್‌ಗಳ (CME) ವಿಕಸನವನ್ನು ನಕ್ಷೆ ಮಾಡುವುದೂ ಸೇರಿದಂತೆ ಬಾಹ್ಯಾಕಾಶ ಹವಾಮಾನದ ಮೇಲೆ ಪ್ರಭಾವ ಬೀರುವ ಹೊಸ ಮತ್ತು ಮೊದಲ ರೀತಿಯ ಸೌರ ಕಾರ್ಯಾಚರಣೆಗೆ ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಾದ ನಾಸಾ ಸಜ್ಜಾಗಿದೆ.
Study of space weather extremes effects:
ಬಾಹ್ಯಾಕಾಶ ಹವಾಮಾನದಲ್ಲಿನ ಯಾವುದೇ ವೈಪರೀತ್ಯವು ಭೂಮಿಯ ಉಪಗ್ರಹ ಆಧಾರಿತ ಸಂವಹನ ಸೇವೆಗಳ ಮೇಲೆ ಪ್ರತಿಕೂಲ, ನೇರ ಪರಿಣಾಮಗಳನ್ನು ಬೀರಬಹುದು. ಜಿಪಿಎಸ್ ಆಧಾರಿತ ಸಂಚರಣೆಯನ್ನು ಹಳಿ ತಪ್ಪಿಸಬಹುದು. ಪವರ್‌ಗ್ರಿಡ್ ಕಾರ್ಯಾಚರಣೆಗಳನ್ನು ದುರ್ಬಲಗೊಳಿಸಬಹುದು ಮತ್ತು ಇನ್ನೂ ಹೆಚ್ಚಿನದನ್ನು ಉಂಟುಮಾಡಬಹುದು. ಆದ್ದರಿಂದ ಬಾಹ್ಯಾಕಾಶ ಹವಾಮಾನ ಮತ್ತು ಅದರ ಮುನ್ಸೂಚನೆಗಳ ಕುರಿತು ಮಾಹಿತಿ ಅತ್ಯಗತ್ಯ.
ಇದು ಭೂಮಿಯ ಮೇಲೆ ಬಾಹ್ಯಾಕಾಶ ಹವಾಮಾನ ಘಟನೆಗಳ ಆಗಮನ ಮತ್ತು ಬಾಹ್ಯಾಕಾಶದಲ್ಲಿ ಮಾನವೀಯತೆಯ ರೋಬೋಟಿಕ್ ಪರಿಶೋಧಕರ ಮೇಲಿನ ಪರಿಣಾಮದ ಬಗ್ಗೆ ಹೆಚ್ಚು ನಿಖರ ಮುನ್ಸೂಚನೆಗಳಿಗೆ ಕಾರಣವಾಗಬಹುದು ಎಂದು ರಾಷ್ಟ್ರೀಯ ಏರೋನಾಟಿಕ್ಸ್ ಮತ್ತು ಬಾಹ್ಯಾಕಾಶ ಆಡಳಿತವು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ನಾಸಾ ಪ್ರಕಾರ, ಪಂಚ್ ಮೂರು ವೈಡ್ ಫೀಲ್ಡ್ ಇಮೇಜರ್ (ಡಬ್ಲ್ಯೂಎಫ್ಐ) ಮತ್ತು ಒಂದು ನ್ಯಾರೋ ಫೀಲ್ಡ್ ಇಮೇಜರ್ ಅನ್ನು ಆನ್‌ಬೋರ್ಡ್‌ನಲ್ಲಿ ಹೊಂದಿರುತ್ತದೆ. ಪ್ರತಿ ನಾಲ್ಕು ನಿಮಿಷಗಳಿಗೊಮ್ಮೆ, ನಾಲ್ಕು ಕ್ಯಾಮೆರಾಗಳಲ್ಲಿ ಪ್ರತಿಯೊಂದೂ ವಿಭಿನ್ನ ಪೊಲೊರೈಸಿಂಗ್ ಫಿಲ್ಟರ್‌ಗಳನ್ನು ಬಳಸಿಕೊಂಡು ಮೂರು ಕಚ್ಚಾ ಚಿತ್ರಗಳನ್ನು ಸೆರೆಹಿಡಿಯುತ್ತದೆ. ಇದಲ್ಲದೆ ಪ್ರತಿ ಕ್ಯಾಮೆರಾ ಪ್ರತಿ ಎಂಟು ನಿಮಿಷಗಳಿಗೊಮ್ಮೆ ಪೊಲೊರೈಸಿಂಗ್ ಅಲ್ಲದ ಚಿತ್ರವನ್ನು ಸೆರೆಹಿಡಿಯುತ್ತದೆ.
CMEಗಳು ಮತ್ತು ಸೌರ ಮಾರುತಗಳು ಎಲ್ಲಿ ರೂಪುಗೊಳ್ಳುತ್ತವೆ, ಅವು ಹೇಗೆ ವಿಕಸನಗೊಳ್ಳುತ್ತವೆ ಮತ್ತು ವೇಗಗೊಳ್ಳುತ್ತವೆ ಎಂಬುದನ್ನು ನಾವು ನೋಡಲು ಸಾಧ್ಯವಾಗುತ್ತದೆ. ಅವು ವೇಗವನ್ನು ಪಡೆಯಲು ಸಹಾಯ ಮಾಡುವ ಶಕ್ತಿಗಳನ್ನು ಮತ್ತು ಅಂತಿಮವಾಗಿ ಅವು ಅಂತರಗ್ರಹ ಜಾಗದಲ್ಲಿ ಹೇಗೆ ವಿಕಸನಗೊಳ್ಳುತ್ತವೆ ಎಂಬುದನ್ನು ನಾವು ನೋಡಲು ಸಾಧ್ಯವಾಗುತ್ತದೆ. ಬಾಹ್ಯಾಕಾಶ ಹವಾಮಾನದ ಸಕಾಲಿಕ ಮುನ್ಸೂಚನೆಗೆ ಇದೆಲ್ಲವೂ ಮುಖ್ಯವಾಗಿದೆ ಎಂದು ಕೋಲ್ಕತ್ತಾದ ಭಾರತೀಯ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯ ಸೌರ ಭೌತಶಾಸ್ತ್ರಜ್ಞ ದಿಬ್ಯೇಂಡು ನಂದಿ ಹೇಳಿದರು.
Launching on February 28th: ಕರೋನಾ ಮತ್ತು ಹೆಲಿಯೋಸ್ಪಿಯರ್ ಅನ್ನು ಏಕೀಕರಿಸುವ ಧ್ರುವೀಯತೆ (Polarimetry to Unify the Corona and Heliosphere- PUNCH) ಕಾರ್ಯಾಚರಣೆಯನ್ನು ಫೆಬ್ರವರಿ 28ರಂದು ಸ್ಪೇಸ್‌ಎಕ್ಸ್ ಉಡಾವಣೆ ಮಾಡಲಿದೆ. ಪಂಚ್ ನಾಲ್ಕು ಸೂಟ್‌ಕೇಸ್ ಗಾತ್ರದ ಉಪಗ್ರಹಗಳ ಸಮೂಹವಾಗಿದ್ದು, ಪ್ರತಿಯೊಂದೂ ಸುಮಾರು 64 ಕೆ.ಜಿ ತೂಕವಿರುತ್ತದೆ. ಇವುಗಳನ್ನು ಕಡಿಮೆ ಭೂಮಿಯ ಕಕ್ಷೆಗೆ (ಲೋ ಅರ್ಥ್ ಆರ್ಬಿಟ್ (LEO)) ಕಳುಹಿಸಲಾಗುತ್ತದೆ. ನಿರೀಕ್ಷಿತ ಮಿಷನ್ ಜೀವಿತಾವಧಿ ಎರಡು ವರ್ಷಗಳು ಎಂಬುದು ಗಮನಾರ್ಹ.
ಕರೋನಾ ಮತ್ತು ಸೌರ ಮಾರುತವನ್ನು ಅಳೆಯಲು ಬೆಳಕಿನ ಧ್ರುವೀಕರಣವನ್ನು ಬಳಸಿಕೊಳ್ಳಲು ಸೌರ ಕಾರ್ಯಾಚರಣೆಯನ್ನು ನಿರ್ದಿಷ್ಟವಾಗಿ ವಿನ್ಯಾಸಗೊಳಿಸಲಾಗಿದೆ. ಅದೂ ಸಹ 3D ಯಲ್ಲಿ.
ಇದನ್ನೂ ಓದಿ: Meta Is Hiring For Engineering And AI Roles In India, Posts 41 Jobs For New Bengaluru Office