spot_img
spot_img

NDIANS ARE MISSING IN RUSSIA:ಅದರಲ್ಲಿ 16 ಮಂದಿ ನಾಪತ್ತೆ: ಕೇಂದ್ರ ಸರ್ಕಾರದಿಂದ ಸಂಸತ್ಗೆ ಮಾಹಿತಿ.

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

New Delhi News:

ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಕೀರ್ತಿ ವರ್ಧನ್​ ಸಿಂಗ್​​ ಸಂಸತ್ತಿನಲ್ಲಿ RUSSIAದ ಸೈನಪಡೆಯಲ್ಲಿ ಉಳಿದುಕೊಂಡಿರುವ ಹಾಗೂ ಕಾಣೆಯಾಗಿರುವ ಭಾರತೀಯರ ಬಗ್ಗೆ ಮಾಹಿತಿ ನೀಡಿದ್ದಾರೆ.ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಕೀರ್ತಿ ವರ್ಧನ್​ ಸಿಂಗ್​ ರಾಜ್ಯಸಭೆಯಲ್ಲಿ ಕೇಳಿದ ಪ್ರಶ್ನೆಗೆ ಲಿಖಿತ ಪ್ರತಿಕ್ರಿಯೆಯಲ್ಲಿ ಮಾಹಿತಿ ನೀಡಿದ್ದಾರೆ.

18 ಭಾರತೀಯ ಸೈನಿಕರಲ್ಲಿ ಒಂಬತ್ತು ಜನ ಉತ್ತರ ಪ್ರದೇಶದವರು, ತಲಾ ಇಬ್ಬರು ಪಂಜಾಬ್ ಮತ್ತು ಹರಿಯಾಣದವರು ಮತ್ತು ತಲಾ ಒಬ್ಬರು ಚಂಡೀಗಢ, ಮಹಾರಾಷ್ಟ್ರ, ಕೇರಳ ಮತ್ತು ಬಿಹಾರ, ಜಮ್ಮು ಮತ್ತು ಕಾಶ್ಮೀರದಿಂದ ಬಂದವರು ಎಂದು ತಿಳಿಸಿದ್ದಾರೆ.ನಮ್ಮ ರಾಯಭಾರಿ ಕಚೇರಿಗಳು ಮತ್ತು ಪೋಸ್ಟ್‌ಗಳು ವಿದೇಶಗಳಲ್ಲಿರುವ ಎಲ್ಲಾ ಭಾರತೀಯ ಪ್ರಜೆಗಳ ಸುರಕ್ಷತೆ, ಭದ್ರತೆ ಮತ್ತು ಯೋಗಕ್ಷೇಮಕ್ಕೆ ಹೆಚ್ಚಿನ ಆದ್ಯತೆ ನೀಡುತ್ತವೆ. ಮತ್ತು ಸಹಾಯಕ್ಕಾಗಿ ಯಾವುದೇ ಕರೆ ಬಂದಾಗ ಸೂಕ್ತ ಕ್ರಮವನ್ನು ತೆಗೆದುಕೊಳ್ಳುತ್ತವೆ ಎಂಬ ಭರವಸೆ ನೀಡಿದರು.

ಭಾರತೀಯರು RUSSIAದ ಸಶಸ್ತ್ರ ಪಡೆಗಳಲ್ಲಿ ಉಳಿದುಕೊಂಡಿದ್ದು, ಅವರಲ್ಲಿ 16 ಮಂದಿ ನಾಪತ್ತೆಯಾಗಿದ್ದಾರೆದಂದು RUSSIA ತಿಳಿಸಿದೆ ಎಂದು ಕೇಂದ್ರ ಸರ್ಕಾರ ಗುರುವಾರ ಸಂಸತ್ತಿಗೆ ಮಾಹಿತಿ ನೀಡಿದೆ.ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಸಿಂಗ್​​, RUSSIAದ ಸಶಸ್ತ್ರ ಪಡೆಗಳಲ್ಲಿ 12 ಭಾರತೀಯರು, ಪ್ರಸ್ತುತ ನಡೆಯುತ್ತಿರುವ ಸಂಘರ್ಷದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ ಎಂದು ಹೇಳಿದರು.ಈ ವೇಳೆ, ರಷ್ಯಾದಲ್ಲಿ ಇನ್ನೂ ಸಿಕ್ಕಿ ಹಾಕಿಕೊಂಡಿರುವ ಮತ್ತು ಅವರ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಭಾರತೀಯ ಯುವಕರ ಸಂಖ್ಯೆ ಮತ್ತು ಅವರನ್ನು ಭಾರತಕ್ಕೆ ಕರೆತರಲು MEA ಮತ್ತು RUSSIAದ ಭಾರತೀಯ ರಾಯಭಾರ ಕಚೇರಿ ಕೈಗೊಂಡ ಕ್ರಮಗಳ ವಿವರಗಳಿಗಾಗಿ ಸರ್ಕಾರವನ್ನು ಕೇಳಲಾಯಿತು.

Request to Russian authorities:ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮತ್ತು ಮಾಸ್ಕೋದಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಈ ವಿಷಯಗಳ ಕುರಿತು ವಿವಿಧ ಹಂತಗಳಲ್ಲಿ ಸಂಬಂಧಿತ RUSSIAದ ಅಧಿಕಾರಿಗಳೊಂದಿಗೆ ತೊಡಗಿಸಿಕೊಂಡಿದೆ.

RUSSIAದ ಸಶಸ್ತ್ರ ಪಡೆಗಳಲ್ಲಿ ತಮ್ಮ ಸೇವೆಯನ್ನು ಸ್ಥಗಿತಗೊಳಿಸಿದ ನಂತರ, RUSSIAದಲ್ಲಿರುವ ಭಾರತೀಯ ರಾಯಭಾರಿ ಕಚೇರಿಗಳು ಈ ಹಿಂದೆ ಭಾರತೀಯ ಪ್ರಜೆಗಳಿಗೆ ಭಾರತಕ್ಕೆ ಮರಳಲು ಪ್ರಯಾಣ ದಾಖಲೆಗಳನ್ನು ಸುಗಮಗೊಳಿಸುವುದು ಮತ್ತು ಅಗತ್ಯ ಇರುವಲ್ಲೆಲ್ಲಾ ವಿಮಾನ ಟಿಕೆಟ್‌ಗಳನ್ನು ಒದಗಿಸುವುದು ಸೇರಿದಂತೆ ಎಲ್ಲಾ ಅಗತ್ಯಗಳನ್ನು ನೀಡಿದೆ ಎಂದು ಕೇಂದ್ರ ಸಚಿವರು ಸಮರ್ಥಿಸಿಕೊಂಡರು.

ಲಭ್ಯವಿರುವ ಮಾಹಿತಿಯ ಪ್ರಕಾರ, 18 ಭಾರತೀಯ ಪ್ರಜೆಗಳು RUSSIAದ ಸಶಸ್ತ್ರ ಪಡೆಗಳಲ್ಲಿ ಉಳಿದಿದ್ದಾರೆ. ಅವರಲ್ಲಿ 16 ವ್ಯಕ್ತಿಗಳು ಕಾಣೆಯಾಗಿದ್ದಾರೆ ಎಂದು ವರದಿಯಾಗಿದೆ. RUSSIAದ ಸಶಸ್ತ್ರ ಪಡೆಗಳಲ್ಲಿ ಉಳಿದಿರುವ ಭಾರತೀಯರ ಬಗ್ಗೆ ಮಾಹಿತಿ ಒದಗಿಸಲು ಮತ್ತು ಅವರ ಸುರಕ್ಷತೆ, ಯೋಗಕ್ಷೇಮ ಮತ್ತು ಆರಂಭಿಕ ಬಿಡುಗಡೆಯನ್ನು ಖಚಿತಪಡಿಸಿಕೊಳ್ಳಲು RUSSIA:ದ ಅಧಿಕಾರಿಗಳಿಗೆ ವಿನಂತಿಸಲಾಗಿದೆ ಎಂದು ಕೀರ್ತಿ ವರ್ಧನ್​​ ಸಿಂಗ್​ ​ತಿಳಿಸಿದರು.

RUSSIA:ದ ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸುವುದನ್ನು ನಿಲ್ಲಿಸಿರುವ 97 ಭಾರತೀಯ ಪ್ರಜೆಗಳನ್ನು ಯಾವ ರಾಜ್ಯದಿಂದ ಬಂದವರು ಎಂಬುದರ ವಿವರಗಳನ್ನು ಸಹ ಅವರು ಹಂಚಿಕೊಂಡರು.

 

ಇದನ್ನು ಓದಿರಿ :Indian Embassy in Congo asks Indian nationals to depart immediately to safer locations

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

RASHMIKA MANDANNA – ‘ನಾನು ಹೈದರಾಬಾದ್ನವಳು’: ರಶ್ಮಿಕಾ ಮಂದಣ್ಣ ಹೇಳಿಕೆ ವಿಚಾರ; ಮುಂದುವರಿದ ಪರ – ವಿರೋಧ ಚರ್ಚೆ

'ನ್ಯಾಷನಲ್ ಕ್ರಶ್' ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುವ ಜನಪ್ರಿಯ ನಟಿ RASHMIKA MANDANNA, ಭಾರತೀಯ ಚಿತ್ರರಂಗದಲ್ಲಿ ಮೋಡಿ ಮಾಡಿದ್ದಾರೆ. ತಮ್ಮ ನಟನಾ ಕೌಶಲ್ಯದಿಂದ ದೇಶಾದ್ಯಂತ ಅಭಿಮಾನಿಗಳ...

IPL SUBSCRIPTION PLANS – ಕೆಲವೇ ದಿನಗಳಲ್ಲಿ IPL ಹವಾ ಶುರು: ಈ ಕಂಪನಿಗಳ ಗ್ರಾಹಕರಿಗೆ ಅಗ್ಗದಲ್ಲಿ ಲಭ್ಯ!

JioHotstar Subscription: ಚಾಂಪಿಯನ್ಸ್​ ಟ್ರೋಫಿ ಕ್ರಿಕೆಟ್‌ ಟೂರ್ನಿ ಮುಗೀತು. ಮುಂದಿನ ಕೆಲವೇ ದಿನಗಳಲ್ಲಿ ಐಪಿಎಲ್​ ಜಾತ್ರೆ ಆರಂಭವಾಗಲಿದೆ. ಇದಕ್ಕಾಗಿ ಎಲ್ಲಾ ಟೆಲಿಕಾಂ ಕಂಪನಿಗಳು ತಮ್ಮ ತಮ್ಮ...

IPHONE 17 SERIES – ಐಫೋನ್ 17 ಸೀರಿಸ್ ಡಿಟೆಲ್ಸ್ ಲೀಕ್ – ಇದರ ಸ್ಪೆಷಾಲಿಟಿ ಏನ್ ಗೊತ್ತಾ?

iPhone 17 Series: ಟೆಕ್ ದೈತ್ಯ ಆಪಲ್ ತನ್ನ ಹೊಸ ಐಫೋನ್ ಸೀರಿಸ್​ ಅನ್ನು ಪ್ರತಿ ವರ್ಷ ಮಾರುಕಟ್ಟೆಗೆ ಪರಿಚಯಿಸುತ್ತದೆ. ಈ ಕ್ರಮದಲ್ಲಿ ಈ ವರ್ಷವೂ...

BSNL HOLI OFFERS – ಗ್ರಾಹಕರಿಗೆ ಹೋಳಿ ಬಿಗ್ ಗಿಫ್ಟ್ ಕೊಟ್ಟ ಬಿಎಸ್ಎನ್ಎಲ್: 30 ದಿನಗಳ ಉಚಿತ ವ್ಯಾಲಿಡಿಟಿ, ಡೇಟಾ !!

BSNL Holi Prepaid Plans Offers: ಬಿಎಸ್​ಎನ್​ಎಲ್​ ಬಳಕೆದಾರರಿಗೆ ಸಿಹಿ ಸುದ್ದಿ. ಹೋಳಿ ಹಬ್ಬದ ಸಂದರ್ಭದಲ್ಲಿ ಕಂಪನಿಯು ಬಂಪರ್ ಆಫರ್ ನೀಡುತ್ತಿದೆ. ಇದು ತನ್ನ ರೀಚಾರ್ಜ್...