ನವದೆಹಲಿ: ಆಧುನಿಕ ಎಂಜಿನಿಯರಿಂಗ್‌ನೊಂದಿಗೆ ಜನರು ಮತ್ತು ಸ್ಥಳಗಳಿಗೆ ಸಂಪರ್ಕ ಕಲ್ಪಿಸುವ ಪಂಬನ್ ಸೇತುವೆ ಪ್ರಗತಿಯ ಸಂಕೇತವಾಗಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಸರಣಿ ಪೋಸ್ಟ್ ಮಾಡಿರುವ ಅವರು, ದೇಶದ ಮುಖ್ಯ ಭೂಭಾಗವನ್ನು ರಾಮೇಶ್ವರಂ ದ್ವೀಪಕ್ಕೆ ಸಂಪರ್ಕಿಸುವ ಭಾರತದ ಮೊದಲ ವರ್ಟಿಕಲ್-ಲಿಫ್ಟ್ ಸೇತುವೆ ರೈಲ್ವೆಗೆ, ಯಾಂತ್ರಿಕ ವಿಶಿಷ್ಟತೆ ಮತ್ತು ಪ್ರಕ್ಷುಬ್ಧ ಸಮುದ್ರದ ಸವಾಲಿನ ಹೊರತಾಗಿಯೂ ಎಲ್ಲರ ಗಮನ ಸೆಳೆಯುವ ಕೇಂದ್ರ ಬಿಂದುವಾಗಿದೆ.
ನೂತರ ಪಂಬನ್ ಸೇತುವೆ ನವೀಕರಿಸಿದ ರಾಮೇಶ್ವರಂ ರೈಲ್ವೆ ನಿಲ್ದಾಣದೊಂದಿಗೆ (ನಿರ್ಮಾಣ ಹಂತದಲ್ಲಿದೆ) ಐತಿಹಾಸಿಕ ದ್ವೀಪಕ್ಕೆ ಪ್ರವಾಸೋದ್ಯಮ, ವ್ಯಾಪಾರವನ್ನು ಮತ್ತಷ್ಟು ವಿಸ್ತರಿಸುತ್ತದೆ ಮತ್ತು ಸಂಪರ್ಕ ಕಲ್ಪಿಸುತ್ತದೆ ಎಂದರು.
ನೂತನ ಪಂಬನ್ ಸೇತುವೆಯು ‘ಆಧುನಿಕ ಎಂಜಿನಿಯರಿಂಗ್ನ ಅದ್ಭುತ’ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಬಣ್ಣಿಸಿದ್ದಾರೆ.ನೂತನ ಪಂಬನ್ ಸೇತುವೆಯು ‘ಆಧುನಿಕ ಎಂಜಿನಿಯರಿಂಗ್ನ ಅದ್ಭುತ’ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಬಣ್ಣಿಸಿದ್ದಾರೆ.
ಆಧುನಿಕ ಎಂಜಿನಿಯರಿಂಗ್‌ನೊಂದಿಗೆ ಜನರು ಮತ್ತು ಸ್ಥಳಗಳಿಗೆ ಸಂಪರ್ಕ ಕಲ್ಪಿಸುವ ಪಂಬನ್ ಸೇತುವೆ ಪ್ರಗತಿಯ ಸಂಕೇತವಾಗಿದೆ. 1914 ರಿಂದ ಕಾರ್ಯನಿರ್ವಹಿಸುತ್ತಿದ್ದ ಹಳೆಯ ಪಂಬನ್ ರೈಲು ಸೇತುವೆಯು ಶಿಥಿಲಾವಸ್ಥೆ ತಲುಪಿದ ಕಾರಣ ಡಿಸೆಂಬರ್ 2022 ರಲ್ಲಿ ಸ್ಥಗಿತಗೊಂಡಿದೆ. ಹಳೆಯ ಪಂಬನ್ ರೈಲು ಸೇತುವೆಯು 105 ವರ್ಷಗಳ ಕಾಲ ದೇಶದ ಮುಖ್ಯ ಭೂಭಾಗವನ್ನು ರಾಮೇಶ್ವರಂಗೆ ಸಂಪರ್ಕ ಕಲ್ಪಿಸಿತ್ತು ಎಂದು ನೆನೆದರು. ಅತ್ಯುತ್ತಮ ಸಾಧನೆಗಾಗಿ ಶೌರ್ಯ ಪ್ರಶಸ್ತಿ
ರೈಲ್ವೆ ವಿಕಾಸ್ ನಿಗಮ್ ಲಿಮಿಟೆಡ್ 2.08 ಕಿ.ಮೀ ಉದ್ದದ ಹೊಸ ಪಂಪನ್ ಸೇತುವೆಯ ನಿರ್ಮಾಣ ಮಾಡುತ್ತಿದೆ. 72.5 ಮೀ ಉದ್ದ, 16 ಮೀ ಅಗಲ ಮತ್ತು 550 ಟನ್ ತೂಕದ ಲಿಫ್ಟ್ ಸ್ಪ್ಯಾನ್ ಅನ್ನು ಅಳವಡಿಸುವುದು ಸಂಸ್ಥೆಗೆ ದೊಡ್ಡ ಸವಾಲಾಗಿತ್ತು.
ರೈಲ್ವೆ ಸುರಕ್ಷತಾ ಆಯುಕ್ತರು, ಇತ್ತೀಚೆಗೆ ಸೇತುವೆ ಪರಿಶೀಲಿಸಿದರು ಮತ್ತು ಪ್ರಯಾಣಿಕರು ಹಾಗೂ ಸರಕು ಸಾಗಣೆ ರೈಲುಗಳ ಕಾರ್ಯಾಚರಣೆ ಪ್ರಾರಂಭಿಸುವುದಕ್ಕೂ ಮೊದಲು ಕೆಲವು ನ್ಯೂನತೆಗಳನ್ನು ಸರಿಪಡಿಸಲು ಸೂಚಿಸಿದರು.
“ನಾವು ಮಾರ್ಚ್ 10 ರಿಂದ ಈ ಲಿಫ್ಟ್ ಸ್ಪ್ಯಾನ್ ಅನ್ನು ಅಳವಡಿಸಲು ಪ್ರಾರಂಭಿಸಿದ್ದೇವೆ ಮತ್ತು ಇಲ್ಲಿಯವರೆಗೆ, ನಾವು 550 ಟನ್ ಲಿಫ್ಟ್ ಸ್ಪ್ಯಾನ್ ಅನ್ನು 80 ಮೀಟರ್ ಸೇತುವೆಯ ಮಧ್ಯಕ್ಕೆ ಸ್ಥಳಾಂತರಿಸಿದ್ದೇವೆ. ಸೇತುವೆಯ 2.65 ಡಿಗ್ರಿ ವಕ್ರ ಜೋಡಣೆಯು ದೊಡ್ಡ ಸವಾಲಾಗಿದೆ” ಎಂದು ಆರ್‌ವಿಎನ್‌ಎಲ್‌ನ ಹಿರಿಯ ಅಧಿಕಾರಿಯೊಬ್ಬರು ಈ ಹಿಂದೆ ಹೇಳಿದ್ದರು.