ಸೌತ್ ಆಫ್ರಿಕಾ ವಿರುದ್ಧದ 4 ಪಂದ್ಯಗಳ ಟಿ20 ಸರಣಿಯನ್ನು ಟೀಮ್ ಇಂಡಿಯಾ 3-1 ಅಂತರದಿಂದ ಗೆದ್ದು ಬೀಗಿದೆ. ಇದೇ ತಿಂಗಳು 22ನೇ ತಾರೀಕಿನಿಂದ ಆಸ್ಟ್ರೇಲಿಯಾ ವಿರುದ್ಧ ಟೀಮ್ ಇಂಡಿಯಾ 5 ಪಂದ್ಯಗಳ ಟೆಸ್ಟ್ ಸರಣಿ ಆಡಲಿದೆ.
ಈ ಮಹತ್ವದ ಸರಣಿಗೆ ಟೀಮ್ ಇಂಡಿಯಾ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದೆ.
ಇತ್ತೀಚೆಗಷ್ಟೇ ಸುಮಾರು 24 ವರ್ಷಗಳ ಬಳಿಕ ಮಹತ್ವದ ಟೆಸ್ಟ್ ಸರಣಿಯಲ್ಲಿ ತವರಿನಲ್ಲೇ ಭಾರತ ತಂಡವನ್ನು ನ್ಯೂಜಿಲೆಂಡ್ 3-0 ಅಂತರದಿಂದ ಸೋಲಿಸಿ ದಾಖಲೆ ನಿರ್ಮಿಸಿದೆ.
3 ಪಂದ್ಯಗಳಲ್ಲೂ ಹೀನಾಯವಾಗಿ ಸೋತ ಭಾರತ ಮೊದಲ ಬಾರಿಗೆ ವೈಟ್ವಾಶ್ ಆಗಿದೆ. 1969ರ ನಂತರ ಟೀಮ್ ಇಂಡಿಯಾ ತವರಿನಲ್ಲಿ ಒಂದೇ ವರ್ಷದಲ್ಲಿ ಅತಿ ಹೆಚ್ಚು ಟೆಸ್ಟ್ ಪಂದ್ಯಗಳು ಸೋತಿರುವುದು ಇದೇ ಮೊದಲು.
ಹೀನಾಯ ಸೋಲಿನ ಬೆನ್ನಲ್ಲೇ ಬಿಸಿಸಿಐ ಸೆಲೆಕ್ಷನ್ ಕಮಿಟಿ ಅಧ್ಯಕ್ಷ ಅಜಿತ್ ಅಗರ್ಕರ್, ಕ್ಯಾಪ್ಟನ್ ರೋಹಿತ್ ಶರ್ಮಾ, ಮುಖ್ಯ ಕೋಚ್ ಗೌತಮ್ ಗಂಭೀರ್ ಸಭೆ ನಡೆಸಿ ಸುದೀರ್ಘ ಚರ್ಚೆ ಮಾಡಿದ್ರು. ಹೇಗಾದ್ರೂ ಮಾಡಿ ವಿಶ್ವಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಟೀಂ ಇಂಡಿಯಾ ಅರ್ಹತೆ ಪಡೆಯಬೇಕು ಎಂದು ಚರ್ಚಿಸಿದ್ರು.
ಟೀಮ್ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ 5 ಟೆಸ್ಟ್ ಪಂದ್ಯಗಳ ಸರಣಿ ಗೆಲ್ಲಲೇಬೇಕು. ಅದರಲ್ಲೂ 4 ಪಂದ್ಯ ಗೆದ್ರೆ ಮಾತ್ರ ವಿಶ್ವಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಪ್ರವೇಶ ಸಿಗಲಿದೆ. ಇದರ
ಮಧ್ಯೆ ಗುಡ್ನ್ಯೂಸ್ ಒಂದಿದೆ.
ಕಳೆದ ಎರಡು ಆಸ್ಟ್ರೇಲಿಯಾ ಪ್ರವಾಸಗಳಲ್ಲಿ ಭಾರತ ಗೆಲ್ಲಲು ಪ್ರಮುಖ ಕಾರಣ ಟೆಸ್ಟ್ ಸ್ಪೆಷಲಿಸ್ಟ್ ಬ್ಯಾಟರ್ ಚೇತೇಶ್ವರ ಪೂಜಾರ.
ಆಸ್ಟ್ರೇಲಿಯಾದ ಬೌಲರ್ಗಳ ವಿರುದ್ಧ ತಡೆಗೋಡೆಯಂತೆ ನಿಂತಿದ್ದ ಟೀಮ್ ಇಂಡಿಯಾ ಬ್ಯಾಟರ್ ಇವರು. ಆದರೆ, ಈ ಬಾರಿ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಗೆ ಚೇತೇಶ್ವರ ಪೂಜಾರ ಆಯ್ಕೆಯಾಗಿಲ್ಲ. ಆದ್ರೂ ಚೇತೇಶ್ವರ ಪೂಜಾರ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಚೇತೇಶ್ವರ್ ಪೂಜಾರ ಹೊಸ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಕ್ರಿಕೆಟ್ ವಿವರಣೆಗಾರನಾಗಿ ಚೇತೇಶ್ವರ ಪೂಜಾರ ಎಲ್ಲರ ಗಮನ ಸೆಳೆಯಲು ಸಿದ್ಧರಾಗಿದ್ದಾರೆ. ಕೊಹ್ಲಿ ಟೆಸ್ಟ್ ಕ್ಯಾಪ್ಟನ್ ಆಗಿದ್ದಾಗ ಇವರಿಗೆ ಮನ್ನಣೆ ನೀಡಲಾಗುತ್ತಿತ್ತು. ಇವರು ಕೊಹ್ಲಿಗೆ ಆಪ್ತರಾಗಿದ್ದು, ಆಗ ಪ್ರತೀ ಟೆಸ್ಟ್ ಸರಣಿಗೂ ಟೀಮ್ ಇಂಡಿಯಾಗೆ ಆಯ್ಕೆಯಾಗುತ್ತಿದ್ದರು.
2018-19ರ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಚೇತೇಶ್ವರ ಪೂಜಾರ ಭರ್ಜರಿ ಪ್ರದರ್ಶನ ನೀಡಿದ್ರು. ಇವರು ಆಡಿರೋ 7 ಇನ್ನಿಂಗ್ಸ್‌ಗಳಲ್ಲಿ 74.42 ಸರಾಸರಿಯಲ್ಲಿ 521 ರನ್ ಗಳಿಸಿದ್ದರು.
ಇದರಲ್ಲಿ 3 ಶತಕ ಮತ್ತು 1 ಅರ್ಧಶತಕಗಳು ಸೇರಿವೆ. ಈ ಅದ್ಭುತ ಪ್ರದರ್ಶನಕ್ಕಾಗಿ ಅವರು ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಪಡೆದಿದ್ದಾರೆ.