<?= $pageTitle ?>
Logo
ಮುಖಪುಟ ಓದುವುದು ಕೇಳು
Travel

ಅಂಬೋಲಿ ಫಾಲ್ಸ್ ನಲ್ಲಿ ಜಲಧಾರೆ ಅಬ್ಬರ: ಪ್ರವಾಸಿಗರಿಂದ ತುಂಬಿದ ವೀಕ್ಷಣಾ ತಾಣ

ಅಂಬೋಲಿ ಫಾಲ್ಸ್ ನಲ್ಲಿ ಜಲಧಾರೆ ಅಬ್ಬರ: ಪ್ರವಾಸಿಗರಿಂದ ತುಂಬಿದ ವೀಕ್ಷಣಾ ತಾಣ
Summary: Amboli Falls is overflowing with water due to continuous rains, and tourists are arriving in large numbers to witness the mesmerizing sight of the waterfall. There is complete information about the beauty of nature, the roar of the waterfall and the excitement of the tourists.

Belagavi News:

ಬೆಳಗಾವಿ: ಪಶ್ಚಿಮ ಘಟ್ಟ ಪ್ರದೇಶದಲ್ಲಿ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ, ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳ ಜಲಪಾತಗಳು ಮೈದುಂಬಿ ಹರಿಯುತ್ತಿವೆ. ಮಳೆಗಾಲದ ಈ ನೈಸರ್ಗಿಕ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ.

ಬೆಳಗಾವಿ ಜಿಲ್ಲೆಯ ಒಂಬತ್ತು ಜಲಪಾತಗಳಿಗೆ ಅರಣ್ಯ ಇಲಾಖೆ ಪ್ರವಾಸಿಗರ ಪ್ರವೇಶವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಿರುವ ಕಾರಣ, ಇದೀಗ ಅನೇಕ ಪ್ರವಾಸಿಗರು ಮಹಾರಾಷ್ಟ್ರದ ಪ್ರಸಿದ್ಧ " ಅಂಬೋಲಿ ಫಾಲ್ಸ್" ಕಡೆ ಮುಖ ಮಾಡಿದ್ದಾರೆ.

ಪಶ್ಚಿಮ ಘಟ್ಟದ ದಟ್ಟ ಕಾಡಿನ ನಡುವೆ ಸುಮಾರು "100 ಅಡಿಗೂ ಹೆಚ್ಚು ಎತ್ತರದಿಂದ ಧುಮ್ಮಿಕ್ಕುವ ಅಂಬೋಲಿ ಜಲಪಾತ" ಮಳೆಗಾಲದಲ್ಲಿ ಮತ್ತಷ್ಟು ವೈಭವದಿಂದ ಕಂಗೊಳಿಸುತ್ತಿದೆ. ಜಲಪಾತದ ರಮಣೀಯ ದೃಶ್ಯವನ್ನು ಕಣ್ತುಂಬಿಕೊಳ್ಳಲು ಹಾಗೂ ಪ್ರಕೃತಿಯ ಸೊಬಗನ್ನು ಆಸ್ವಾದಿಸಲು ಪ್ರವಾಸಿಗರ ದಂಡೇ ಹರಿದು ಬರುತ್ತಿದೆ.

ಮಳೆ ಮುಂದುವರಿದಿರುವುದರಿಂದ ಜಲಪಾತದ ನೀರಿನ ಹರಿವು ಹೆಚ್ಚಾಗಿದ್ದು, ಪ್ರವಾಸಿಗರು ಸುರಕ್ಷತಾ ಸೂಚನೆಗಳನ್ನು ಪಾಲಿಸಿ, ನಿಗದಿತ ಪ್ರದೇಶಗಳಿಂದಲೇ ಜಲಪಾತ ವೀಕ್ಷಣೆ ಮಾಡುವಂತೆ ಸ್ಥಳೀಯ ಆಡಳಿತ ಮನವಿ ಮಾಡಿದೆ.

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online