<?= $pageTitle ?>
Logo
ಮುಖಪುಟ ಓದುವುದು ಕೇಳು
Politics

ಕಾಂಗ್ರೆಸ್ ಮುಸ್ಲಿಂ ನಾಯಕರು ಜನರ ಧ್ವನಿಯಾಗಬೇಕು: ರಾಹುಲ್ ಗಾಂಧಿ

ಕಾಂಗ್ರೆಸ್ ಮುಸ್ಲಿಂ ನಾಯಕರು ಜನರ ಧ್ವನಿಯಾಗಬೇಕು: ರಾಹುಲ್ ಗಾಂಧಿ
Summary: Rahul Gandhi has called on the Congress party's Muslim leaders to be the voice of the people by effectively raising the issues of the community. He has advised them to play an active role in social justice and people's issues.

BELAGAVI NEWS :

ನವದೆಹಲಿ: ಕಾಂಗ್ರೆಸ್ ಪಕ್ಷದ ಮುಸ್ಲಿಂ ನಾಯಕರು ತಮ್ಮ ಸಮುದಾಯದ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಎತ್ತಿ ಹಿಡಿಯಬೇಕು ಹಾಗೂ ಅವರ ಪಾತ್ರಿನಿಧ್ಯವನ್ನು ಹೆಚ್ಚಿಸುವತ್ತ ಹೆಚ್ಚು ಗಮನಹರಿಸಬೇಕು ಎಂದು ಕಾಂಗ್ರೆಸ್ ನಾಯಕರ ರಾಹುಲ್ ಗಾಂಧಿ ಕರೆ ನೀಡಿದ್ದಾರೆ.

ಶನಿವಾರ ನಡೆದ ಕಾಂಗ್ರೆಸ್ ಅಲ್ಪ ಸಂಖ್ಯಾತ ವಿಭಾಗದ ಸಲಹಾ ಮಂಡಳಿ ಸಭೆಯಲ್ಲಿ ಮಾತನಾಡಿದವರು, ಸಮುದಾಯದ ಪ್ರಶ್ನೆಗಳ ಕುರಿತು ಸ್ಪಷ್ಟ ಮತ್ತು ಪರಿಣಾಮಕಾರಿ ಧ್ವನಿಯಾಗುವ ಅಗತ್ಯವಿದೆ ಎಂದು ತಿಳಿಸಿದರು.

ಮುಸ್ಲಿಮರ ವಿರುದ್ಧ ಅನ್ಯಾಯ ನಡೆದಾಗ ಕೇವಲ 'ಅಲ್ಪಸಂಖ್ಯಾತ' ಎಂಬ ಸಾಮಾನ್ಯ ಗುರುತಿನಡಿ ಅಲ್ಲದೆ, ನಿರ್ದಿಷ್ಟವಾಗಿ 'ಮುಸ್ಲಿಂ ಸಮುದಾಯ' ದ ಮೇಲಿನ ಅನ್ಯಾಯವೆಂದು ಗುರುತಿಸಿ ಧ್ವನಿ ಎತ್ತಬೇಕು ಎಂದು ರಾಹುಲ್ ಗಾಂಧಿ ಸಲಹೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅದೇ ರೀತಿಯಲ್ಲಿ ದಲಿತರು, ಇತರೆ ಹಿಂದುಳಿದ ವರ್ಗಗಳು (ಒಬಿಸಿ) ಅಥವಾ ಸಾಮಾನ್ಯ ವರ್ಗದವರ ವಿರುದ್ಧ ದಾಳಿಗಳು ನಡೆದಾಗಲೂ, ಅ ಸಮುದಾಯವನ್ನು ಸ್ಪಷ್ಟವಾಗಿ ಗುರುತಿಸಿ ಸಮಸ್ಯೆಗಳನ್ನು ಪ್ರಸ್ತಾಪಿಸಬೇಕು ಎಂದು ಅವರು ಒತ್ತಿ ಹೇಳಿದ್ದಾರೆ.

ಸಾಮಾಜಿಕ ನ್ಯಾಯ, ಸಮಾನತೆ ಹಾಗೂ ವಿವಿಧ ಸಮುದಾಯಗಳ ಹಕ್ಕುಗಳ ರಕ್ಷಣೆಯಲ್ಲಿ ಕಾಂಗ್ರೆಸ್ ಪಕ್ಷ ಸಕ್ರಿಯವಾಗಿ ಕೆಲಸ ಮಾಡಬೇಕೆಂಬ ಸಂದೇಶವನ್ನು ರಾಹುಲ್ ಗಾಂಧಿ ಸಭೆಯಲ್ಲಿ ನೀಡಿದ್ದಾರೆ.

ಕಾಂಗ್ರೆಸ್ ಪಕ್ಷ ' ಮುಸ್ಲಿಂ' ಪದವನ್ನು ಬಳಸುವುದರಿಂದ ದೂರು ಸರಿಯಬಾರದು ಎಂದು ರಾಹುಲ್ ಗಾಂಧಿ ನೇರ ಸಂದೇಶ ರವಾನಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ' ಮುಸ್ಲಿಂ' ಎಂದು ಸ್ಪಷ್ಟವಾಗಿ ಹೇಳುವುದರ ಬದಲು, ಜನರು ' ಅಲ್ಪಸಂಖ್ಯಾತ 'ಎಂಬ ಪದ ಬಳಸುತ್ತಿದ್ದಾರೆ ಎಂದು ಸಭೆಯಲ್ಲಿ ಹಾಜರಿದ್ದ ನಾಯಕರೊಬ್ಬರು ತಿಳಿಸಿದ್ದರು.

ಪಕ್ಷದ ರಚನೆಯಲ್ಲಿ ಮುಸ್ಲಿಂ ಸಮುದಾಯ ಸಾಕಷ್ಟು ಪ್ರಮಾಣದಲ್ಲಿ ಪಾಲ್ಗೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ಕಾಂಗ್ರೆಸ್ ನ ಅಲ್ಪಸಂಖ್ಯಾತ ವಿಭಾಗ ಒಂದು ವೇದಿಕೆಯಲ್ಲಿ ರಚಿಸುವ ಅಗತ್ಯತೆಯನ್ನು ಗಾಂಧಿ ತಿಳಿಸಿರುವುದಾಗಿ ಮೂಲಗಳು ಮಾಹಿತಿ ನೀಡಿವೆ.

ಕಾಂಗ್ರೆಸ್ ನಾಯಕರ ರಾಹುಲ್ ಗಾಂಧಿ ಪಕ್ಷದ ಸಂಖ್ಯಾತ ವಿಭಾಗದ ಸಲಹಾ ಮಂಡಳಿ ಸಭೆಯಲ್ಲಿ ಹಲವು ರಾಜಕೀಯ ಹಾಗೂ ಆರ್ಥಿಕ ವಿಚಾರಗಳನ್ನು ಪ್ರಸ್ತಾಪಿಸಿದರು.

"ಮತ ಕಳ್ಳತನ" ವಿಚಾರವನ್ನು ಉಲ್ಲೇಖಿಸಿದ ಅವರು, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಈ ವಿಷಯದಲ್ಲಿ ಹಿಂದೆ ಕಾಂಗ್ರೆಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿರಲಿಲ್ಲ. ಆದರೆ ಈಗ ಅವರು ಇದೇ ವಿಚಾರದ ವಿರುದ್ಧ ಚಳುವಳಿಗೆ ಕರೆ ನೀಡುತ್ತಿದ್ದಾರೆ ಎಂದು ಹೇಳಿದರು.

ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ರಾಜ್ಯಗಳಲ್ಲಿ ಮುಕ್ತ ಹಾಗೂ ನ್ಯಾಯಯುತ ವಿಧಾನಸಭಾ ಚುನಾವಣೆಗಳು ನಡೆದಿಲ್ಲ ಎಂದು ರಾಹುಲ್ ಗಾಂಧಿ ಆರೂಪಿಸಿದರು. ಚುನಾವನ್ನ ಪ್ರಕ್ರಿಯೆಯ ಪಾರದರ್ಶಕತೆ ಕುರಿತು ಗಂಭೀರ ಪ್ರಶ್ನೆಗಳು ಉದ್ಬವಿಸುತ್ತಿವೆ ಎಂದು ಅವರು ಅಭಿಪ್ರಾಯಪಟ್ಟರು.

ದೇಶದ ಆರ್ಥಿಕ ಪರಿಸ್ಥಿತಿಯನ್ನು ಉಲ್ಲೇಖಿಸಿದ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ದೀರ್ಘಾವಧಿಯಲ್ಲಿ ಆರ್ಥಿಕ ಪರಿಸ್ಥಿತಿಯನ್ನು ಪರಿಣಾಮಕಾರಿಯಾಗಿ ನಿರ್ವಹಿಸುವ ಸಾಮರ್ಥ್ಯ ಹೊಂದಿಲ್ಲ ಎಂದು ಟೀಕಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇತ್ತೀಚೆಗೆ ಮಾತನಾಡಿದ ರಾಹುಲ್ ಗಾಂಧಿ, "ದೇಶಕ್ಕೆ ದೊಡ್ಡ ಆರ್ಥಿಕ ಆಘಾತ ಕಾದಿದೆ. ಅದರ ಪರಿಣಾಮ ಅದಾನಿ, ಅಂಬಾನಿ ಅಥವಾ ಮೋದಿಗೆ ತಟ್ಟುವುದಿಲ್ಲ. ಬದಲಾಗಿ ದೇಶದ ಯುವ ಜನತೆ, ಕಾರ್ಮಿಕರು ಹಾಗೂ ಸಣ್ಣ ವ್ಯಾಪಾರಿಗಳು ತೀವ್ರ ಸಂಕಷ್ಟ ಎದುರಿಸಬೇಕಾಗುತ್ತದೆ," ಎಂದು ಎಚ್ಚರಿಸಿದ್ದರು.

ಸಾಮಾಜಿಕ ನ್ಯಾಯ, ಚುನಾವಣಾ ಪಾರದರ್ಶಕತೆ ಹಾಗೂ ಆರ್ಥಿಕ ಸಮಾನತೆ ಕುರಿತಾಗಿ ಕಾಂಗ್ರೆಸ್ ಪಕ್ಷ ಹೆಚ್ಚು ಸಕ್ರಿಯವಾಗಿ ಹೋರಾಟ ನಡೆಸಬೇಕೆಂಬ ಸಂದೇಶವನ್ನು ರಾಹುಲ್ ಗಾಂಧಿ ಸಭೆಯಲ್ಲಿ ನೀಡಿದ್ದಾರೆ.

Also Read:

ಟಾಕ್ಸಿಕ್ ನಲ್ಲಿ ಬೋಲ್ಡ್ ಮಹಿಳಾ ಪಾತ್ರಗಳು : ಕೌತುಕ ಹೆಚ್ಚಿಸಿದ ಯಶ್

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online