Belagavi News:
ಶ್ರೀನಗರ, ಜಮ್ಮು-ಕಾಶ್ಮೀರ: ಜಮ್ಮು-ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ಸೋಮವಾರ ಮುಂಜಾನೆ 3.6 ತೀವ್ರತೆಯ ಲಘು ಭೂಕಂಪ ಸಂಭವಿಸಿದೆ. ರಾಷ್ಟ್ರೀಯ ಭೂಕಂಪ ಶಾಸ್ತ್ರ ಕೇಂದ್ರ (NCS) ನೀಡಿರುವ ಮಾಹಿತಿಯ ಪ್ರಕಾರ, ಈ ಭೂಕಂಪವು ಬೆಳಗಿನ ಜಾವ 2:00 ಗಂಟೆಗೆ ದಾಖಲಾಗಿದ್ದು, ಭೂಮಿಯ 10ಕಿಲೋಮಿಟರ್ ಆಳದಲ್ಲಿ ಇದರ ಕೇಂದ್ರ ಬಿಂದು ಇತ್ತು.
ಎನ್‌ಸಿಎಸ್ ತನ್ನ ಅಧಿಕೃತ ಎಕ್ಸ(X) ಖಾತೆಯಲ್ಲಿ ಭೂಕಂಪದ ಮಾಹಿತಿಯನ್ನು ಪ್ರಕಟಿಸಿದೆ. ಭೂಕಂಪದ ತೀವ್ರತೆ 3.6 ರಿಕ್ಟರ್ ಮಾಪಕದಲ್ಲಿ ದಾಖಲಾಗಿದ್ದು. ಇದು ಲಘು ಪ್ರಮಾಣದ ಕಂಪನವಾಗಿದೆ.
ಸದ್ಯಕ್ಕೆ ಈ ಭೂಕಂಪದಿಂದ ಯಾವುದೇ ಪ್ರಾಣ ಹಾನಿ ಅಥವಾ ಆಸ್ತಿ ಹಾನಿ ಸಂಭವಿಸಿರುವ ಕುರಿತು ವರದಿಯಾಗಿಲ್ಲ. ಸ್ಥಳೀಯ ಆಡಳಿತ ಪರಿಸ್ಥಿತಿಯನ್ನು ನಿಗಾ ವಹಿಸಿದ್ದು. ಜನರು ಆತಂಕ ಪಡುವ ಅಗತ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಮ್ಮು-ಕಾಶ್ಮೀರ ಪ್ರದೇಶವು ಭೂಕಂಪದ ದೃಷ್ಟಿಯಿಂದ ಸೂಕ್ಷ್ಮ ವಲಯದಲ್ಲಿರುವುದರಿಂದ, ಈ ಭಾಗದಲ್ಲಿ ಕಾಲಕಾಲಕ್ಕೆ ಸಣ್ಣ ಹಾಗೂ ಮಧ್ಯಮ ಪ್ರಮಾಣದ ಭೂಕಂಪಗಳು ಸಂಭವಿಸುತ್ತಿರುತ್ತವೆ. ಆದ್ದರಿಂದ ಇಂತಹ ಸಂದರ್ಭಗಳಲ್ಲಿ ಅಧಿಕೃತ ಮಾಹಿತಿಯನ್ನು ಮಾತ್ರ ನಂಬುವುದು ಮತ್ತು ಸುರಕ್ಷತಾ ಕ್ರಮಗಳನ್ನು ಪಾಲಿಸುವುದು ಅಗತ್ಯವಾಗಿದೆ.
ರಾಷ್ಟ್ರೀಯ ಭೂಕಂಪ ಶಾಸ್ತ್ರ ಕೇಂದ್ರವು ತನ್ನ ಅಧಿಕೃತ ಎಕ್ಸ್ (X) ಖಾತೆಯಲ್ಲಿ ಭೂಕಂಪದ ವಿವರಗಳನ್ನು ಹಂಚಿಕೊಂಡಿದೆ. ಸದ್ಯಕ್ಕೆ ಈ ಭೂಕಂಪದಿಂದ ಯಾವುದೇ ಪ್ರಾಣ ಹಾನಿ ಅಥವಾ ಆಸ್ತಿ ಹಾನಿ ಸಂಭವಿಸಿರುವ ಕುರಿತು ವರದಿಯಾಗಿಲ್ಲ. ಸ್ಥಳೀಯ ಆಡಳಿತ ಪರಿಸ್ಥಿತಿಯನ್ನು ನಿಕಟವಾಗಿ ಗಮನಿಸುತ್ತಿದೆ.
ಫೆಬ್ರುವರಿಯಲ್ಲೂ ಸಂಭವಿಸಿತ್ತು ಭೂಕಂಪ:
ಈ ವರ್ಷದ ಫೆಬ್ರವರಿಯಲ್ಲಿಯೂ ಬಾರಾಮುಲ್ಲಾ ಜಿಲ್ಲೆಯಲ್ಲಿ 4.6 ತೀವ್ರತೆಯ ಭೂಕಂಪ ದಾಖಲಾಗಿತ್ತು. ಆ ವೇಳೆ ಪಟ್ಟಣ ಪ್ರದೇಶವು ಭೂಕಂಪದ ಕೇಂದ್ರ ಬಿಂದುವಾಗಿದ್ದು, ಜಿಲ್ಲೆಯ ಹಲವು ಭಾಗಗಳಲ್ಲಿ ಕಂಪನದ ಅನುಭವವಾಗಿತ್ತು.
ಕಳೆದ ತಿಂಗಳೂ ನಡುಗಿದ್ದ ಜಮ್ಮು -ಕಾಶ್ಮೀರ:
ಕಳೆದ ತಿಂಗಳಲ್ಲಿಯೂ ಜಮ್ಮು ಮತ್ತು ಕಾಶ್ಮೀರದಲ್ಲಿ ಭೂಕಂಪದ ಕಂಪನ ಅನುಭವಿಸಲಾಗಿತ್ತು. ಆದರೆ ಆ ಭೂಕಂಪದ ಕೇಂದ್ರಬಿಂದು ಅಫ್ಘಾನಿಸ್ತಾನದಲ್ಲಿದ್ದು. ಅದರ ತೀವ್ರತೆ ರಿಕ್ಟರ್ ಮಾಪಕದಲ್ಲಿ 6.2 ಆಗಿತ್ತು. ಆದರ ಪರಿಣಾಮವಾಗಿ ಜಮ್ಮು-ಕಾಶ್ಮೀರದ ಜೊತೆಗೆ ದೆಹಲಿ-ಎನ್ ಸಿ ಆರ್ ನ ಹಲವು ಪ್ರದೇಶಗಳಲ್ಲೂ ಭಮಿ ಕಂಪಿಸಿತ್ತು.
ಭೂಕಂಪದ ದೃಷ್ಟಿಯಿಂದ ಸೂಕ್ಷ್ಮ ಪ್ರದೇಶ:
ಜಮ್ಮು ಮತ್ತು ಕಾಶ್ಮೀರವು ಭೂಕಂಪದ ಅಪಾಯ ಹೆಚ್ಚಿರುವ ಭೂಕಂಪ ವಲಯಗಳಲ್ಲಿ ಒಂದಾಗಿದೆ. ಹಿಮಾಲಯದ ಟೆಕ್ಟೋನಿಕ್ ಫಲಕಗಳ ಚಲನೆಯಿಂದ ಈ ಪ್ರದೇಶದಲ್ಲಿ ಆಗಾಗ ಸಣ್ಣ ಮತ್ತು ಮಧ್ಯಮ ಪ್ರಮಾಣದ ಭೂಕಂಪಗಳು ಸಂಭವಿಸುತ್ತಿರುತ್ತವೆ. ಆದ್ದರಿಂದ ಭೂಕಂಪದ ಸಂದರ್ಭದಲ್ಲಿ ಅಧಿಕೃತ ಸೂಚನೆಗಳನ್ನು ನಾಮ ಹಲವು ಪಾಲಿಸುವುದು ಮತ್ತು ಸುರಕ್ಷತಾ ಕ್ರಮಗಳನ್ನು ಅನುಸರಿಸುವುದು ಅಗತ್ಯವಾಗಿದೆ.