ಎನ್‌ಹೆಚ್‌ಪಿಸಿ ಲಿಮಿಟೆಡ್ ಟ್ರೈನಿ ಆಫೀಸರ್ ಮತ್ತು ಸೀನಿಯರ್ ಮೆಡಿಕಲ್ ಆಫೀಸರ್ ನೇಮಕಾತಿಗೆ ನೋಟಿಫಿಕೇಶನ್ ಬಿಡುಗಡೆ ಮಾಡಿದೆ. ಈ ಹುದ್ದೆಗಳಲ್ಲಿ ಆಸಕ್ತಿ ಇರುವವರು, ಅರ್ಹತೆಗಳ ವಿವರ ತಿಳಿದು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ನ್ಯಾಷನಲ್ ಹೈಡ್ರೋಇಲೆಕ್ಟ್ರಿಕ್ ಪವರ್ ಕಾರ್ಪೋರೇಷನ್ ಲಿಮಿಟೆಡ್- ಎನ್‌ಹೆಚ್‌ಪಿಸಿ ವಿವಿಧ ಹುದ್ದೆಗಳ ಭರ್ತಿಗೆ ನೇಮಕ ಪ್ರಕಟಣೆ ಬಿಡುಗಡೆ ಮಾಡಿದೆ.
ಟ್ರೈನಿ ಹುದ್ದೆಗಳನ್ನು ಹೆಚ್‌ಆರ್, ಪಿಆರ್ ಮತ್ತು ಕಾನೂನು ವಿಭಾಗದಲ್ಲಿ ನೇಮಕ ಮಾಡಲಾಗುತ್ತದೆ. ಹಾಗೂ ಸೀನಿಯರ್ ಮೆಡಿಕಲ್ ಆಫೀಸರ್ ಹುದ್ದೆಗಳನ್ನು ಯುಜಿಸಿ ಎನ್‌ಇಟಿ 2023 ಫಲಿತಾಂಶ ಮತ್ತು ಜೂನ್ 2024 ಫಲಿತಾಂಶ / ಸಿಎಲ್‌ಎಟಿ 2024 ಮತ್ತು ಎಂಬಿಬಿಎಸ್ ಸ್ಕೋರ್ ಆಧಾರದ ಮೇಲೆ ನೇಮಕ ಮಾಡಲಾಗುತ್ತದೆ. ಈ ಹುದ್ದೆಗಳಲ್ಲಿ ಆಸಕ್ತಿ ಇರುವವರು ಇನ್ನಷ್ಟು ಮಾಹಿತಿಗಳನ್ನು ಕೆಳಗಿನಂತೆ ತಿಳಿದು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದ್ದಾರೆ.
ಟ್ರೈನಿ ಆಫೀಸರ್ – ಮಾನವ ಸಂಪನ್ಮೂಲ: ಪಿಜಿ ಡಿಗ್ರಿ, ಪಿಜಿ ಡಿಪ್ಲೊಮವನ್ನು ಹುದ್ದೆಗೆ ಸಂಬಂಧಿಸಿದ ವಿಷಯಗಳಲ್ಲಿ ಪಾಸ್ ಮಾಡಿರಬೇಕು.
ಟ್ರೈನಿ ಆಫೀಸರ್ – ಸಾರ್ವಜನಿಕ ಸಂಪರ್ಕ: ಸಂವಹನ, ಪತ್ರಿಕೋದ್ಯಮ, ಸಾರ್ವಜನಿಕ ಸಂಪರ್ಕ ವಿಷಯಗಳಲ್ಲಿ ಪಿಜಿ ಡಿಗ್ರಿ, ಡಿಪ್ಲೊಮ ಪಾಸ್ ಮಾಡಿರಬೇಕು. ಟ್ರೈನಿ ಆಫೀಸರ್ – ಕಾನೂನು : ಕಾನೂನು ಪದವಿ, ಸ್ನಾತಕೋತ್ತರ ಪದವಿ ಪಾಸ್. ಸೀನಿಯರ್ ಮೆಡಿಕಲ್ ಆಫೀಸರ್ : ಎಂಬಿಬಿಎಸ್ ಪಾಸ್ ಮಾಡಿರಬೇಕು.
ಆನ್‌ಲೈನ್ ಅಪ್ಲಿಕೇಶನ್ ಸಲ್ಲಿಸಲು ಆರಂಭಿಕ ದಿನಾಂಕ ಡಿ . 09. 2024 ರಿಂದ ಆನ್‌ಲೈನ್ ಅಪ್ಲಿಕೇಶನ್ ಸಲ್ಲಿಸಲು ಕೊನೆ ದಿನಾಂಕ ಡಿ. 30. 2024 ರವರೆಗೆ ಸಂಜೆ 05 ಗಂಟೆ.
ಎಲ್ಲ ವಿಭಾಗದ ಟ್ರೈನಿ ಆಫೀಸರ್ ಹುದ್ದೆಗಳಿಗೆ ಗರಿಷ್ಠ 30 ವರ್ಷ ವಯಸ್ಸು ಮೀರಿರಬಾರದು. ಸೀನಿಯರ್ ಮೆಡಿಕಲ್ ಆಫೀಸರ್ ಹುದ್ದೆಗಳಿಗೆ 35 ವರ್ಷ ವಯಸ್ಸು ಮೀರಿರಬಾರದು. ವಯಸ್ಸಿನ ಸಡಿಲಿಕೆ ನಿಯಮಗಳು ವರ್ಗಾವಾರು ಮೀಸಲಿವೆ. ಒಬಿಸಿ ವರ್ಗದವರಿಗೆ 3 ವರ್ಷ, ಎಸ್‌ಸಿ / ಎಸ್‌ಟಿ ವರ್ಗದವರಿಗೆ 5 ವರ್ಷ ವಯಸ್ಸಿನ ಸಡಿಲಿಕೆ ಇದೆ.
ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳಿಗೆ ರೂ.708. ಎಸ್‌ಸಿ / ಎಸ್‌ಟಿ / ಪಿಡಬ್ಲ್ಯೂಡಿ / ಮಹಿಳಾ ಅಭ್ಯರ್ಥಿಗಳಿಗೆ / ಮಾಜಿ ಸೈನಿಕರಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ. ಅಪ್ಲಿಕೇಶನ್ ಶುಲ್ಕವನ್ನು ಆನ್‌ಲೈನ್ ಮೂಲಕವೇ ಪಾವತಿ ಮಾಡಬಹುದು.
ಇತರೆ ಹೆಚ್ಚಿನ ಮಾಹಿತಿಗಳು, ಅಧಿಸೂಚನೆಗಾಗಿ ನ್ಯಾಷನಲ್ ಹೈಡ್ರೋಇಲೆಕ್ಟ್ರಿಕ್ ಪವರ್ ಕಾರ್ಪೋರೇಷನ್ ಲಿಮಿಟೆಡ್ ಅಧಿಕೃತವಾಗಿ https://www.nhpcindia.com/ ವೆಬ್‌ಸೈಟ್ ವಿಳಾಸದ ಮುಖಾಂತರ ತಿಳಿಸಲಾಗಿದೆ.
ಎನ್‌ಹೆಚ್‌ಪಿಸಿ ಲಿಮಿಟೆಡ್‌ನ ಅರ್ಜಿ ವೆಬ್ ವಿಳಾಸ https://intranet.nhpc.in/RecruitApp/ ಕ್ಕೆ ತೆರೆದ ವೆಬ್‌ಪೇಜ್‌ನಲ್ಲಿ ‘Click Here For Online Application’ ಎಂದಿರುವಲ್ಲಿ ಕ್ಲಿಕ್ ಮಾಡಿ. ನಂತರ ಓಪನ್ ಆದ ಪೇಜ್‌ನಲ್ಲಿ ಅಗತ್ಯ ಮಾಹಿತಿಗಳನ್ನು ನೀಡಿ ಅರ್ಜಿ ಸಲ್ಲಿಸಬಹುದು.