Nueva Pen Chess 2025 News:
ಡಿಜಿಟಲ್ ಫೀಚರ್ನಿಂದ ತುಂಬಿರುವ NUWA PEN ಈಗ ಎಲ್ಲರ ಗಮನ ಸೆಳೆಯುತ್ತಿದೆ. ಇದರಿಂದ ಬರೆದ ಒಂದೊಂದು ಅಕ್ಷರವೂ ಸಹ ಸೇವ್ ಆಗುವುದರ ಜೊತೆಗೆ ನಿಮಗೆ ಡಿಜಿಟಲ್ ರೂಪದಲ್ಲಿ ಸಿಗುತ್ತದೆ.ಅಷ್ಟೇ ಅಲ್ಲ, ನಮಗೆ ಅವಶ್ಯಕತೆಯಿದ್ದಾಗ ಈ ಫುಟೇಜ್ ಒದಗಿಸಲು ವಿಶೇಷ ಅಪ್ಲಿಕೇಶನ್ ಇದೆ. ಸೂಪರ್ ಫೀಚರ್ಗಳಿಂದಲೇ ತುಂಬಿರುವ ಈ ಸ್ಮಾರ್ಟ್ ಪೆನ್ ಅನ್ನು ನೆದರ್ಲ್ಯಾಂಡ್ಸ್ ಮೂಲದ ನ್ಯೂವಾ ಕಂಪನಿ ತಯಾರಿಸಿದೆ.
ಇತ್ತೀಚೆಗೆ ಅಮೆರಿಕದ ಲಾಸ್ ವೇಗಾಸ್‌ನಲ್ಲಿ ನಡೆದ ಕನ್ಸೂಮರ್ ಎಲೆಕ್ಟ್ರಾನಿಕ್ಸ್ ಶೋನಲ್ಲಿ (CES) ಇದು ವಿಶೇಷ ಆಕರ್ಷಣೆಯಾಗಿತ್ತು.ಈಗ ನಾವು ಜಗತ್ತಿನ ಸ್ಮಾರ್ಟ್ ಪೆನ್ ಬಗ್ಗೆ ತಿಳಿದುಕೊಳ್ಳೋಣ. ಇದರಲ್ಲಿ ಮೂರು ಸಣ್ಣ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಈ ಸ್ಮಾರ್ಟ್ ಪೆನ್ ಮೂಲಕ ನಾವು ಬರೆಯುವ ಒಂದೊಂದು ಅಕ್ಷರವನ್ನೂ ಕ್ಯಾಪ್ಚರ್ ಮಾಡುವ ಮೂಲಕ ಸಂಗ್ರಹಿಸುತ್ತದೆ.
Anyone interested in writing this smart : ಈ ಟೆಕ್ನಾಲಜಿಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುವ ಸ್ಥಾನದಲ್ಲಿ ನ್ಯೂವಾ ಸ್ಮಾರ್ಟ್ ಪೆನ್ಗಳಲ್ಲಿ ಫೀಚರ್ಗಳಿವೆ ಎಂದು ಸ್ವತಃ ಈ ಪೆನ್ ಪರೀಕ್ಷಿಸಿದ ಟೆಕ್ ತಜ್ಞರೊಬ್ಬರು ಹೇಳಿದರು. ಅವರು NUWA PEN ನಲ್ಲಿ ಗಮನಿಸಿದ ಕೆಲವು ವಿಶಿಷ್ಟ ವೈಶಿಷ್ಟ್ಯಗಳನ್ನು ಚೆನ್ನಾಗಿ ವಿವರಿಸಿದರು.
ಬರೆಯಲು ಆಸಕ್ತಿ ಹೊಂದಿರುವ ಯಾರಾದರೂ ಈ ಸ್ಮಾರ್ಟ್ ಪೆನ್ನಿನ ಪರ್ಫಾರ್ಮೆನ್ಸ್ ಬಗ್ಗೆ ಖಂಡಿತವಾಗಿಯೂ ತಿಳಿದಿರಬೇಕು. ಅಮೆಜಾನ್ ಇತ್ತೀಚೆಗೆ ಪರಿಚಯಿಸಿದ ಕಿಂಡಲ್ ಸ್ಕ್ರೈಬ್ ಮೂಲಕ ನಾವು ಪುಸ್ತಕವನ್ನು ಓದುವಾಗ ಪ್ರತೀ ಪುಟದ ಅಂಚಿನಲ್ಲಿ ನೋಟ್ಸ್ ಬರೆದಿಟ್ಟುಕೊಳ್ಳಬಹುದು.
What does Nueva Pen do?: NUWA PEN ನಿಂದ ಪೇಪರ್ ಮೇಲೆ ಬರೆದರು, ಕರವಸ್ತ್ರದ ಮೇಲೆ ಬರೆದರು, ಕ್ಯಾಮೆರಾಗಳು ಎಲ್ಲಾ ಪದಗಳನ್ನು ಸೆರೆಹಿಡಿಯುತ್ತವೆ. NUWA PEN ಖರೀದಿಸುವವರು ಆ ಪೆನ್‌ಗೆ ಸಂಬಂಧಿಸಿದ ವಿಶೇಷ ಮೊಬೈಲ್ ಆಪ್ ಸಬ್ಸ್ಕ್ರಿಪ್ಷನ್ ಸಹ ಲಭ್ಯವಿದೆ. ಈ ಪೆನ್‌ನಲ್ಲಿ ಮೂರು ಸಣ್ಣ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.
ಇನ್ನು ಸ್ಮಾರ್ಟ್ ಪೆನ್ ಸೆರೆಹಿಡಿದ ದೃಶ್ಯಗಳು ಸೇವ್ ಮಾಡಿಕೊಂಡು ಆಟೋಮೆಟಿಕ್ ಆಗಿ ಮೊಬೈಲ್ ಆ್ಯಪ್ಗೆ ಕಳುಹಿಸುತ್ತದೆ. ಇಂಟರ್ನೆಟ್ ಕನೆಕ್ಟಿವಿಟಿ ಹೇಗಿದೆ?, ನಾವು ಬರೆದ ವಾಕ್ಯಗಳು ಎಷ್ಟು ಉದ್ದವಾಗಿವೆ?, ಮೊಬೈಲ್ ಅಪ್ಲಿಕೇಶನ್‌ನಲ್ಲಿ ನಾವು ಬರೆದ ನೋಟ್ಸ್ ಸೇವ್ ಮಾಡಿಕೊಳ್ಳಲು ತೆಗೆದುಕೊಳ್ಳುವ ಸಮಯವು ಈ ಮೇಲಿನ ಅಂಶಗಳನ್ನು ಆಧರಿಸಿ ಏರಿಳಿತಗೊಳ್ಳುತ್ತಿರುತ್ತವೆ.
Notes digital copy ready: ನಾವು ನ್ಯೂವಾ ಅಪ್ಲಿಕೇಶನ್ ಓಪನ್ ಮಾಡಿ ನಾವು ಬರೆದ ಪದಗಳನ್ನು ನೋಡಬಹುದು. ಇದರರ್ಥ ಪೇಪರ್ ಮೇಲೆ ಬರೆದ ಪದಗಳು ನೇರವಾಗಿ ಡಿಜಿಟಲ್ ರೂಪಕ್ಕೆ ಬದಲಾಗಿರುತ್ತವೆ. ಅಗತ್ಯವಿದ್ದರೆ, ಡಿಜಿಟಲ್ ರೂಪದಲ್ಲಿರುವ ಈ ಪದಗಳನ್ನು ನಾವು ನೇರವಾಗಿ ಪ್ರಿಂಟ್ ಸಹ ತೆಗೆದುಕೊಳ್ಳಬಹುದಾಗಿದೆ.
Don’t worry about writing down and forgetting: ನೀವು NUWA PEN ಅಪ್ಲಿಕೇಶನ್‌ನಲ್ಲಿ ಅನೇಕ ಫೈಲ್‌ಗಳನ್ನು ಸೇವ್ ಆಗಿದ್ದಾಗ ನಿಮಗೆ ಬೇಕಾದ ಫೈಲ್ ಹುಡುಕುವುದು ತುಂಬಾ ಸುಲಭ. ನೀವು ಬರೆದ ಒಂದು ಪದವನ್ನು ಸರ್ಚ್ ಬಾಕ್ಸ್ನಲ್ಲಿ ಎಂಟ್ರಿ ಮಾಡಿದ್ರೆ ಸಾಕು.
ಆ ಪದಕ್ಕೆ ಸಂಬಂಧಿಸಿದ ಫೈಲ್‌ಗಳು ನಿಮ್ಮ ಕಣ್ಮುಂದೆ ಇರುತ್ತವೆ. ಅಷ್ಟೇ ಅಲ್ಲ, ಈ ಫೈಲ್‌ಗಳು ನೀವು ಬರೆದ ದಿನಾಂಕಗಳನ್ನು ಒಳಗೊಂಡಿರುತ್ತವೆ.ನಮ್ಮ ಜೇಬಿನಲ್ಲಿದ್ದರೆ ನಾವು ಎಲ್ಲಾದ್ರೂ, ಏನಾದ್ರೂ ಬರೆದ್ರೂ ಮರೆತುಬಿಟ್ಟರು ಚಿಂತಿಸುವ ಅಗತ್ಯವಿಲ್ಲ.
ಏಕೆಂದರೆ ಇದರಲ್ಲಿರುವ ಕ್ಯಾಮೆರಾಗಳು ನಾವು ಬರೆಯುವ ಪ್ರತಿಯೊಂದು ಅಕ್ಷರವೂ ರೆಕಾರ್ಡ್ ಮಾಡಿಕೊಳ್ಳುತ್ತದೆ. ಒಂದು ವೇಳೆ ನೀವು ಈ ಪೆನ್ನಿನಿಂದ ನೀವು ಏನಾದ್ರೂ ಬರೆದದ್ದನ್ನು ಮರೆತರೆ ನ್ಯೂವಾ ಪೆನ್ ಅಪ್ಲಿಕೇಶನ್‌ಗೆ ಹೋಗಿ ಅದರಲ್ಲಿ ಸೇವ್ ಆದ ಡಿಜಿಟಲ್ ಫೈಲ್ ಅನ್ನು ಓಪನ್ ಮಾಡಿ ವೀಕ್ಷಿಸಬಹುದು.
Better than Apple!: ನ್ಯೂವಾ ಆ್ಯಪ್ನಲ್ಲಿ ಐಫೋನ್ ಕಂಪನಿಗೆ ಸೇರಿದ ನೋಟ್ಸ್ ಆ್ಯಪ್ಗಿಂತ ಹೆಚ್ಚಿನ ವೈಶಿಷ್ಟ್ಯಗಳಿವೆ. ಆದ್ರೂ ಸಹ ಈ ಪೆನ್ನಲ್ಲಿರುವ ಸಾಫ್ಟ್ವೇರ್ ಅನ್ನು ಇನ್ನಷ್ಟು ಸುಧಾರಿಸಬೇಕಾಗಿದೆ.
ಈ ಡಿಜಿಟಲ್ ಲೋಕದಲ್ಲಿ ಇಂತಹ ಅತ್ಯಾಧುನಿಕ ಪೆನ್ಗಳನ್ನು ಖರೀದಿಸುವ ಶ್ರೀಮಂತ ಗ್ರಾಹಕರೂ ಸಹ ಇರುತ್ತಾರೆ. ಈ ಸ್ಮಾರ್ಟ್ ಪೆನ್ ನನಗೂ ಸಹ ತುಂಬಾ ಇಷ್ಟವಾಗಿದೆ ಎಂದು ಟೆಕ್ ತಜ್ಞರೊಬ್ಬರು ಹೇಳಿದ್ದಾರೆ.
ಇದನ್ನು ಓದಿರಿ : RAJATH KISHAN : ಉಸ್ತುವಾರಿಯಲ್ಲಿ ಎಡವಿದ ರಜತ್ ಬೆವರಿಳಿಸಿದ ಕಿಚ್ಚ ಸುದೀಪ್: