ಹುಬ್ಬಳ್ಳಿ: ಕರ್ನಾಟಕದ ಮಲೆನಾಡು ಭಾಗದಲ್ಲಿ ಭಾರಿ ಮಳೆಯಾಗುತ್ತಿದೆ. ಇದರಿಂದ ಲಿಂಗನಮಕ್ಕೆ ಜಲಾಶಯ (Linganmakki Dam) ತಂಬಿದ್ದು, ಭಾರಿ ಪ್ರಮಾಣದಲ್ಲಿ ನೀರನ್ನು ಶರಾವತಿ ನದಿಗೆ (Sharavati River) ಬಿಡಲಾಗುತ್ತಿದೆ. ಶರಾವತಿ ನದಿ ಮೈದುಂಬಿ ಹರಿಯುತ್ತಿರುವುದರಿಂದ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಕಾರ್ಗಲ್ ಬಳಿ ಇರುವ ಜೋಗ ಜಲಾಪತ (Jog Falls) ಭೋರ್ಗರೆಯುತ್ತ ಧುಮ್ಮುಕ್ಕುತ್ತಿದೆ. ಹಾಲಿನಂತೆ ಧುಮ್ಮುಕ್ಕುವ ರಾಜಾ, ರಾಣಿ, ರೋರಲ್ ಹಾಗೂ ರಾಜೇಟ್ ಜಲಾಪಾತಗಳನ್ನು ಕಣ್ತುಂಬಿಕೊಳ್ಳಲು ಪ್ರವಾಸಗರ ದಂಡೇ ಹರಿದು ಬರುತ್ತಿದೆ. ಪ್ರವಾಸಿಗರ ಅನುಕೂಲಕ್ಕಾಗಿ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC) ವಿಶೇಷ್ ಬಸ್ಗಳನ್ನು ಬಿಟ್ಟಿದೆ.
PSI ಪರಶುರಾಮ್ ಸಾವು ಪ್ರಕರಣ: ಸರ್ಕಾರ ತನಿಖೆಗೆ ವಹಿಸಿದ ಮರುದಿನವೇ ಯಾದಗಿರಿಗೆ ಸಿಐಡಿ ತಂಡ ಎಂಟ್ರಿ
ಹಾವೇರಿ ವಿಭಾಗದ ವಾಯುವ್ಯ ಕರ್ನಾಟಕ ಸಾರಿಗೆ ಬಸ್ ಬೆಳಗ್ಗೆ 8 ಗಂಟೆಗೆ ಹಾವೇರಿ ಬಸ್ ನಿಲ್ದಾಣದಿಂದ ಹೊರಡುತ್ತದೆ. ಈ ಬಸ್ನಲ್ಲಿ ಹೋಗಿ-ಬರಲು ಒಬ್ಬರಿಗೆ 340 ರೂ. ದರ ನಿಗದಿ ಮಾಡಲಾಗಿದೆ. ಇದೇ ವಿಭಾಗದ ರಾಣೇಬೆನ್ನೂರು ಬಸ್ ನಿಲ್ದಾಣದಿಂದ ಬೆಳಗ್ಗೆ 8 ಗಂಟೆಗೆ ಹೊರಡುವ ವಾಯುವ್ಯ ಕರ್ನಾಟಕ ಸಾರಿಗೆ ಬಸ್ನಲ್ಲಿ ಹೋಗಿ-ಬರಲು ಒಬ್ಬರಿಗೆ 320 ರೂ. ದರ ನಿಗದಿ ಮಾಡಲಾಗಿದೆ. ರಾಣೇಬೆನ್ನೂರಿನಿಂದ ಹೋಗುವ ರಾಜಹಂಸ ಬಸ್ ಬೆಳಗ್ಗೆ 8:30ಕ್ಕೆ ಹೊರಡಲಿದೆ. ಈ ಬಸ್ನಲ್ಲಿ ಹೋಗಿ-ಬರಲು ಒಬ್ಬರಿಗೆ 425 ರೂ. ದರ ನಿಗದಿ ಮಾಡಲಾಗಿದೆ.
ಗದಗ ವಿಭಾಗದ ವಾಯುವ್ಯ ಕರ್ನಾಟಕ ಸಾರಿಗೆ ಬಸ್ ಬೆಳಗ್ಗೆ 7 ಗಂಟೆಗೆ ಗದಗ ಬಸ್ ನಿಲ್ದಾಣದಿಂದ ಹೊರಡುತ್ತದೆ. ಈ ಬಸ್ನಲ್ಲಿ ಹೋಗಿ-ಬರಲು ಒಬ್ಬರಿಗೆ 500 ರೂ. ದರ ನಿಗದಿ ಮಾಡಲಾಗಿದೆ.