Bangalore News:
ಹೊಸ ವರ್ಷಾಚರಣೆ ನಿಮಿತ್ತ ಗೃಹ ಕಚೇರಿಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಏರ್ಪಡಿಸಲಾಗಿದ್ದ ಉಪಹಾರಕೂಟದ ಬಳಿಕ ಮಾತನಾಡಿದ ಗೃಹ ಸಚಿವ ಡಾ. ಜಿ.ಪರಮೇಶ್ವರ್, ಹೊಸ ವರ್ಷಾಚರಣೆ ವೇಳೆ ಒಂದೇ ಒಂದು ಅಹಿತಕರ ಘಟನೆ ಆಗಿಲ್ಲ ಎಂದರು.ದಯಾನಂದ್, ಎಡಿಜಿಪಿಗಳಾದ ಆರ್. ಹಿತೇಂದ್ರ, ಹೇಮಂತ್ ನಿಂಬಾಳ್ಕರ್, ಅಲೋಕ್ ಕುಮಾರ್, ಸೀಮಂತ್ ಕುಮಾರ್ ಸಿಂಗ್, ಉಮೇಶ್, ಶರತ್‌ಚಂದ್ರ ಮುಂತಾದವರು ಇದ್ದರು.ರಾಜ್ಯ ಪೊಲೀಸ್ ಮಹಾನಿರ್ದೇಶಕರಾದ ಅಲೋಕ್ ಮೋಹನ್, ಡಿಜಿಪಿ ಎಂ.ಎ. ಸಲೀಂ, ಮಾಲಿನಿ ಕೃಷ್ಣಮೂರ್ತಿ, ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.
ಹೊಸ ವರ್ಷದ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಅವರನ್ನು ಸದಾಶಿವನಗರದ ಗೃಹ ಕಚೇರಿಯಲ್ಲಿ ಭೇಟಿ ಮಾಡಿ ಶುಭಾಶಯ ಕೋರಿದರು. ಬಳಿಕ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಫೋಟೋ ಶೂಟ್ ಮಾಡಲಾಯಿತು.ಡಿಜಿಪಿ ಅಲೋಕ್ ಮೋಹನ್, ಪೊಲೀಸ್ ಆಯುಕ್ತ ದಯಾನಂದ್, ಹಿರಿಯ ಅಧಿಕಾರಿಗಳಾದ ಹೇಮಂತ್ ನಿಂಬಾಳ್ಕರ್, ಹರಿಶೇಖರನ್, ಪ್ರಣವ್ ಮೊಹಂತಿ, ಅನುಚೇತ್, ದೇವರಾಜ್, ಅಲೋಕ್ ಕುಮಾರ್, ಮಾಲಿನಿ ಕೃಷ್ಣಮೂರ್ತಿ ಸೇರಿದಂತೆ ಹಲವರ ಜತೆ ಗ್ರೂಪ್ ಫೊಟೋ ತೆಗೆಸಿಕೊಂಡರು.ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಪರಮೇಶ್ವರ್ ಅವರು, ಹೊಸ ವರ್ಷಾಚರಣೆ ವೇಳೆ ಒಂದೇ ಒಂದು ಅಹಿತಕರ ಘಟನೆ ಆಗಿಲ್ಲ.
ಪೊಲೀಸರು ಉತ್ತಮವಾಗಿ ಭದ್ರತೆ ಒದಗಿಸಿದ್ದರು ಎಂದು ಅವರ ಕಾರ್ಯಕ್ಕೆ ಶ್ಲಾಘಿಸಿದರು. ಮಹಜರ್ ಬಗ್ಗೆ ಸಿಐಡಿ ಪೊಲೀಸರೇ ತೀರ್ಮಾನ ಮಾಡ್ತಾರೆ. ಯಾವ ರೀತಿಯ ಮಹಜರ್ ಅಂತ ಅವರೇ ನಿರ್ಧರಿಸುತ್ತಾರೆ. ಅವರದ್ದೇ ಆದ ಮೆಥಡಾಲಜಿ ಬಳಸಿ ಮಹಜರ್ ಮಾಡ್ತಾರೆ.
ಇನ್ನು ಸಭಾಪತಿಯವ್ರೇ ಮಹಜರ್ಗೆ ಒಪ್ಪಿಗೆ ಕೊಡಬೇಕೋ, ಬೇಡವೋ ಅಂತ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದರು.ಆರೋಪಿ ಐಶ್ವರ್ಯ ಹಣವನ್ನು ಶಾಸಕ ನರೇಂದ್ರಸ್ವಾಮಿ ಚುನಾವಣೆಗೆ ವೆಚ್ಚ ಮಾಡಿರೋದಾಗಿ ಜೆಡಿಎಸ್ನ ಅನ್ನದಾನಿ ಆರೋಪ ವಿಚಾರದ ಬಗ್ಗೆ ಕೇಳಿದಾಗ, ಇದರ ಬಗ್ಗೆ ನನಗೆ ಗೊತ್ತಿಲ್ಲ, ಇದು ನನ್ನ ಗಮನದಲ್ಲಿಲ್ಲ, ಡಿ.ಕೆ.ಸುರೇಶ್ ದೂರು ಕೊಟ್ಟಿದ್ದಾರೆ, ಪೊಲೀಸರು ಅದರ ಬಗ್ಗೆ ಕ್ರಮ ಕೈಗೊಳ್ಳುತ್ತಾರೆ, ಸರ್ಕಾರದ ವತಿಯಿಂದ ನಾವು ಠಾಣೆಗಳಲ್ಲಿ ದಾಖಲಾಗುವ ದೂರುಗಳ ವಿಚಾರದಲ್ಲಿ ತಲೆ ಹಾಕಲ್ಲ ಎಂದರು.ಸಿ.ಟಿ. ರವಿ ಅವರು ಡಿಜಿಪಿಗೆ ದೂರು ನೀಡಿ ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸೂಚನೆ ಮೇರೆಗೆ ಪೊಲೀಸರು ದೌರ್ಜನ್ಯ ಎಸಗಿದ್ರು ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಸಚಿವರು, ಡಿಜಿಪಿ ಅವರೇ ಅದಕ್ಕೆ ಉತ್ತರ ಕೊಡ್ತಾರೆ.
ನನಗೆ ಸಿ.ಟಿ. ರವಿ ದೂರು ಕೊಟ್ಟಿಲ್ಲ, ನನಗೆ ಕೊಟ್ಟಿದ್ರೆ ಉತ್ತರ ಕೊಡ್ತಿದ್ದೆ. ಎಲ್ಲವೂ ಕೂಡ ಸಿಎಂ, ಗೃಹ ಸಚಿವರ ಆದೇಶಗಳನ್ನೇ ಪೊಲೀಸರು ಪಾಲಿಸ್ತಾರೆ. ಬೇರೆಯವರು ಆದೇಶ ಕೊಟ್ರೆ ಪಾಲಿಸಲ್ಲ. ಈಗ ರವಿಯವರು ಆಪಾದನೆ ಮಾಡಿದ್ದಾರೆ, ಇದಕ್ಕೆ ಡಿಜಿಪಿಯವರೇ ಉತ್ತರ ಕೊಡ್ತಾರೆ ಎಂದು ಹೇಳಿದರು.ದೊಡ್ಡ ಜವಾಬ್ದಾರಿ ಈ ವರ್ಷ ಪರಮೇಶ್ವರ್ಗೆ ಸಿಗುತ್ತಾ ಎಂಬ ಪ್ರಶ್ನೆಗೆ, ನಮ್ಮ ಪಕ್ಷ ಯಾವುದೇ ಜವಾಬ್ದಾರಿ ಕೊಟ್ರೂ ಯಶಸ್ವಿಯಾಗಿ ಮಾಡಿಕೊಂಡು ಬಂದಿದ್ದೇನೆ.
1987ರಿಂದಲೂ ಪಕ್ಷ ಕೊಟ್ಟ ಎಲ್ಲ ಜವಾಬ್ದಾರಿ ನಿಭಾಯಿಸಿಕೊಂಡು ಬಂದಿದ್ದೇನೆ ಎಂದು ಹೇಳಿದರು.ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರೇ ತಮ್ಮ ಪಾತ್ರ ಇಲ್ಲ ಅಂದಿದ್ದಾರೆ. ತನಿಖೆ ನಡೆಯುತ್ತಿದೆ. ವರದಿ ಏನು ಬರುತ್ತದೆ ನೋಡೋಣ. ತನಿಖಾ ವರದಿ ಏನು ಬರುತ್ತದೋ ಅದರಂತೆ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.