spot_img
spot_img

Olaದಿಂದ ಎರಡು ಹೊಸ ಇ-ಸ್ಕೂಟರ್​ ಲಾಂಚ್

spot_img
spot_img

Share post:

Ola: ಓಲಾ ಎಲೆಕ್ಟ್ರಿಕ್ ಕಂಪೆನಿ ಎರಡು ಹೊಸ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ಎರಡು ಹೊಸ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಓಲಾ ಕಂಪೆನಿ ಮಂಗಳವಾರ ಬಿಡುಗಡೆ ಮಾಡಿತು. ಈ ಸ್ಕೂಟರ್‌ಗಳು ಪೋರ್ಟಬಲ್ ಬ್ಯಾಟರಿ ಪ್ಯಾಕ್‌ನೊಂದಿಗೆ ಬರುತ್ತಿವೆ.

ಇದು ಓಲಾ ಪವರ್‌ಪಾಡ್ ಬಳಸಿಕೊಂಡು ಹೋಮ್ ಇನ್ವರ್ಟರ್ ಆಗಿ ಕಾರ್ಯನಿರ್ವಹಿಸುತ್ತದೆ. Ola S1 Z ಮತ್ತು Ola Gig ಹೆಸರಿನಲ್ಲಿ ಇವುಗಳನ್ನು ಬಿಡುಗಡೆಗೊಳಿಸಲಾಗಿದೆ. ಬೈಕ್‌ಗಳ ಆರಂಭಿಕ ಬೆಲೆ 39,999 ರೂ. ಆಗಿದೆ.

ಕಂಪೆನಿಯ ಸಿಇಒ ಭವಿಶ್ ಅಗರ್ವಾಲ್ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ‘ಎಕ್ಸ್‌’ನಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ಈಗಾಗಲೇ ಸ್ಕೂಟರ್‌ಗಳ ಬುಕಿಂಗ್ ಪ್ರಾರಂಭವಾಗಿದೆ. ಮುಂದಿನ ವರ್ಷ ಏಪ್ರಿಲ್‌ನಿಂದ ವಿತರಣೆ ನಡೆಯುತ್ತದೆ ಎಂದು ಪೋಸ್ಟ್​ ಮೂಲಕ ತಿಳಿಸಿದ್ದಾರೆ.

ಎರಡೂ ಸ್ಕೂಟರ್‌ಗಳು ಬದಲಾಯಿಸಬಹುದಾದ ಬ್ಯಾಟರಿಗಳನ್ನು ಹೊಂದಿವೆ. ಸ್ಕೂಟರ್‌ಗಳಲ್ಲಿ ನಾಲ್ಕು ರೂಪಾಂತರಗಳಿವೆ. ಅವುಗಳಲ್ಲಿ ಮೂರು ಸ್ಕೂಟರ್‌ಗಳಲ್ಲಿ ಎರಡು 1.5 kWh ಬ್ಯಾಟರಿ ಪ್ಯಾಕ್‌ಗಳನ್ನು ಬಳಸಬಹುದು. ಸಿಟಿ ರೈಡಿಂಗ್‌ಗೆ ಅನುಗುಣವಾಗಿ ಇವುಗಳನ್ನು ವಿನ್ಯಾಸಗೊಳಿಸಲಾಗಿದೆ.

Ola Gig: 39,999 ರೂ.
Ola Gig+: 49,999 ರೂ.
Ola S1 Z: 59,999 ರೂ.
Ola S1 Z+: 64,999 ರೂ.

Ola Gig+ ಕುರಿತು ಹೇಳುವುದಾದರೆ, ಇದು 1.5 kWh ಬ್ಯಾಟರಿ ಸಾಮರ್ಥ್ಯದೊಂದಿಗೆ ಎರಡು 1.5 kWh ಬ್ಯಾಟರಿಗಳನ್ನು ಹೊಂದಿಸುವ ಆಯ್ಕೆ ಹೊಂದಿದೆ. ಆದರೆ, Ola Gig ಕೇವಲ ಒಂದು ಬ್ಯಾಟರಿ ಪ್ಯಾಕ್ ಹೊಂದಿದೆ. Ola Gig+ 81 ಕಿ.ಮೀ ನಿಂದ 157 ಕಿ.ಮೀ ವರೆಗೆ ಪ್ರಮಾಣೀಕೃತ ವ್ಯಾಪ್ತಿ ಹೊಂದಿದರೆ, ಸಿಂಗಲ್-ಬ್ಯಾಟರಿ Ola Gig ಒಂದೇ ಚಾರ್ಜ್‌ನಲ್ಲಿ 112 ಕಿ.ಮೀ ವರೆಗೆ ಚಲಿಸಬಹುದು.

ಈ ಎರಡೂ ರೂಪಾಂತರಗಳ ಗರಿಷ್ಠ ವೇಗವು ಕ್ರಮವಾಗಿ 45 km/hr ಮತ್ತು 25 km/hr ಆಗಿದೆ. Ola Gig+ ಅನ್ನು ಪವರ್ ಮಾಡಲು 1.5 kWh ಮೋಟಾರ್ ಅನ್ನು ಬಳಸಲಾಗಿದೆ ಮತ್ತು Gig ಗೆ 250 W ಮೋಟಾರ್ ಅನ್ನು ಬಳಸಲಾಗಿದೆ. ಓಲಾ ಗಿಗ್ ಶ್ರೇಣಿಯು ಅಪ್ಲಿಕೇಶನ್-ಆಧರಿತ ಪ್ರವೇಶ ನೀಡುತ್ತದೆ. ಅಲ್ಲಿ ಸವಾರರು ಅನ್‌ಲಾಕ್ ಮಾಡಲು ಮತ್ತು ಸವಾರಿ ಮಾಡಲು ಸ್ಕ್ಯಾನ್ ಮಾಡಬಹುದಾದ ಆಪ್ಷನ್​ ಹೊಂದುತ್ತಾರೆ.

Ola S1 Z+ ಮತ್ತು Ola S1 Z ಎರಡೂ ಉತ್ತಮ ಕಾರ್ಯಕ್ಷಮತೆಗಾಗಿ ಎರಡು 1.5 kWh ಪೋರ್ಟಬಲ್ ಬ್ಯಾಟರಿ ಪ್ಯಾಕ್‌ಗಳನ್ನು ಹೊಂದಿಸುವ ಆಯ್ಕೆ ಹೊಂದಿವೆ. ಈ ಎಲೆಕ್ಟ್ರಿಕ್ ಸ್ಕೂಟರ್‌ಗಳು ಬಳಕೆಯ ಆಧಾರದ ಮೇಲೆ 75 ರಿಂದ 146 ಕಿಮೀಗಳ ಪ್ರಮಾಣೀಕೃತ ರೇಂಜ್​ ನೀಡುತ್ತವೆ. ಗರಿಷ್ಠ ವೇಗವು 70 ಕಿಮೀ ಆಗಿದೆ. ಈ ಸ್ಕೂಟರ್‌ಗಳು 3 kW ಮೋಟಾರ್‌ನಿಂದ ಚಾಲಿತವಾಗಿದ್ದು, ಇದು ಸುಗಮ ಮತ್ತು ಪರಿಣಾಮಕಾರಿ ಸವಾರಿಯನ್ನು ಒದಗಿಸುತ್ತದೆ.

Ola S1 Z+ ಸ್ಕೂಟರ್ ಒಂದು ಬ್ಯಾಟರಿಯೊಂದಿಗೆ 4.7 ಸೆಕೆಂಡುಗಳಲ್ಲಿ 0-40 km/h ವೇಗವನ್ನು ಪಡೆಯಬಹುದು. ಇದಲ್ಲದೇ S1 Z+ ನಲ್ಲಿ 14 ಇಂಚಿನ ಟೈರ್‌ಗಳನ್ನು ಅಳವಡಿಸಲಾಗಿದೆ. ಕಂಪನಿಯು ಮುಂಭಾಗ ಮತ್ತು ಹಿಂಭಾಗದಲ್ಲಿ ಲೋಡ್ ಅನ್ನು ಸಾಗಿಸಲು ಕ್ಯಾರಿಯರ್‌ಗಳನ್ನು ಸ್ಥಾಪಿಸುವ ಆಯ್ಕೆಯನ್ನು ಸಹ ನೀಡಿದೆ. ಆದ್ರೆ ಈ ಲೋಡ್ ಸಾಗಿಸುವ ಸಾಮರ್ಥ್ಯದ ಬಗ್ಗೆ ಯಾವುದೇ ಮಾಹಿತಿ ನೀಡಲಾಗಿಲ್ಲ.

Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

MOTOROLA EDGE 60 FUSION – ಅದ್ಭುತವಾದ ಕ್ಯಾಮೆರಾ ಸೆಟಪ್, ವಾಟರ್ ಪ್ರೊಟೆಕ್ಷನ್ – ಮೊಟೊರೊಲಾದ ಹೊಸ ಫೋನ್ನ ಬೆಲೆ ಕೇವಲ ಇಷ್ಟೇ!

Motorola Edge 60 Fusion: ಬಹುನಿರೀಕ್ಷಿತ ' MOTOROLA EDGE 60 FUSION' ಕೊನೆಗೂ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಕಂಪನಿಯು ಇದನ್ನು ' MOTOROLA EDGE...

RASHMIKA MANDANNA – ‘ನಾನು ಹೈದರಾಬಾದ್ನವಳು’: ರಶ್ಮಿಕಾ ಮಂದಣ್ಣ ಹೇಳಿಕೆ ವಿಚಾರ; ಮುಂದುವರಿದ ಪರ – ವಿರೋಧ ಚರ್ಚೆ

'ನ್ಯಾಷನಲ್ ಕ್ರಶ್' ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುವ ಜನಪ್ರಿಯ ನಟಿ RASHMIKA MANDANNA, ಭಾರತೀಯ ಚಿತ್ರರಂಗದಲ್ಲಿ ಮೋಡಿ ಮಾಡಿದ್ದಾರೆ. ತಮ್ಮ ನಟನಾ ಕೌಶಲ್ಯದಿಂದ ದೇಶಾದ್ಯಂತ ಅಭಿಮಾನಿಗಳ...

IPL SUBSCRIPTION PLANS – ಕೆಲವೇ ದಿನಗಳಲ್ಲಿ IPL ಹವಾ ಶುರು: ಈ ಕಂಪನಿಗಳ ಗ್ರಾಹಕರಿಗೆ ಅಗ್ಗದಲ್ಲಿ ಲಭ್ಯ!

JioHotstar Subscription: ಚಾಂಪಿಯನ್ಸ್​ ಟ್ರೋಫಿ ಕ್ರಿಕೆಟ್‌ ಟೂರ್ನಿ ಮುಗೀತು. ಮುಂದಿನ ಕೆಲವೇ ದಿನಗಳಲ್ಲಿ ಐಪಿಎಲ್​ ಜಾತ್ರೆ ಆರಂಭವಾಗಲಿದೆ. ಇದಕ್ಕಾಗಿ ಎಲ್ಲಾ ಟೆಲಿಕಾಂ ಕಂಪನಿಗಳು ತಮ್ಮ ತಮ್ಮ...

IPHONE 17 SERIES – ಐಫೋನ್ 17 ಸೀರಿಸ್ ಡಿಟೆಲ್ಸ್ ಲೀಕ್ – ಇದರ ಸ್ಪೆಷಾಲಿಟಿ ಏನ್ ಗೊತ್ತಾ?

iPhone 17 Series: ಟೆಕ್ ದೈತ್ಯ ಆಪಲ್ ತನ್ನ ಹೊಸ ಐಫೋನ್ ಸೀರಿಸ್​ ಅನ್ನು ಪ್ರತಿ ವರ್ಷ ಮಾರುಕಟ್ಟೆಗೆ ಪರಿಚಯಿಸುತ್ತದೆ. ಈ ಕ್ರಮದಲ್ಲಿ ಈ ವರ್ಷವೂ...