ಬಾದಾಮಿ : ಇಲ್ಲಿನ ಕೋಣಮ್ಮ ದೇವಾಲಯದ ಬೆಟ್ಟದ ಸಮೀಪದ ಸಿಡಿಲು ಪಡಿಯಲ್ಲಿ ಹಳೇ ಶಿಲಾಯುಗದ ಶಿಲಾಯುಧಗಳು ಹೊಸದಾಗಿ ಪತ್ತೆಯಾಗಿವೆ ಎಂದು ಅಧೀಕ್ಷಕ ರಮೇಶ ಮೇಲಿನಮನಿ ಅವರು ತಿಳಿಸಿದರು.
ಮೇಣಬಸದಿ ಪಕ್ಕದ ಗುಡ್ಡದ ರಂಗನಾಥ ಬೆಟ್ಟ ಮತ್ತು ರೈಲ್ವೆ ಸ್ಟೇಶನ್ ರಸ್ತೆಯ ಕೋಣಮ್ಮ ದೇವಾಲಯದ ಬೆಟ್ಟದ ಸಮೀಪದಲ್ಲಿ ಸಿಡಿಲು ಪಡಿ ಇದ್ದು,
ಶಾಖೆಯಿಂದ ಪಂ. ದೀನದಯಾಳ್ ಉಪಾಧ್ಯಾಯ ಪುರಾತತ್ವ ಸಂಸ್ಥೆಯ 30ಕ್ಕೂ ಅಧಿಕ ಪಿಜಿ, ಡಿಜಿ ವಿದ್ಯಾರ್ಥಿಗಳು ಮಂಗಳವಾರ ಶೋಧನೆ ನಡೆಸಿದ್ದಾರೆ’ ಎಂದು ಅವರು ಹೇಳಿದರು.
ಕಲಬುರಗಿ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಅರ್ಜುನರಾವ್, ಕಾಲಿಕತ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಅವಿಕ್ ಬಿಸ್ವಾಸ್, ಮದ್ರಾಸ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಜಿನು ಕೋಶಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
ಬಾದಾಮಿ ರೈಲ್ವೆ ಸ್ಟೇಶನ್ ರಸ್ತೆಯ ಕೋಣಮ್ಮ ದೇವಾಲಯ ಸಮೀಪದ ಸಿಡಿಲು ಪಡಿ ಬೆಟ್ಟದಲ್ಲಿ ಶಿಲಾಯುಧಗಳ ಶೋಧ ಕಾರ್ಯ ನಡೆಯಿತು.