spot_img
spot_img

ONE RUPEE FEE CONVENT : ಮಕ್ಕಳಿಗೆ ಪುಸ್ತಕ, ಸಮವಸ್ತ್ರ, ಶೂ ಉಚಿತ!

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

Nagpur (Maharashtra) News:

ಶಿಕ್ಷಣದ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ಪಡೆಯುವ ಖಾಸಗಿ ಶಾಲೆಗಳ ಮಧ್ಯೆ, ಇಲ್ಲೊಂದು CONVENT ಸ್ಕೂಲ್​ ಬರೀ 1 ರೂಪಾಯಿಗೆ ದಾಖಲಾತಿ ನೀಡುತ್ತಿದೆ.ಶಿಕ್ಷಣ ಕ್ಷೇತ್ರ ಈಗ ಬಲು ದುಬಾರಿ. ಗುಣಮಟ್ಟದ ಹೆಸರಿನಲ್ಲಿ ಖಾಸಗಿ ಶಾಲೆಗಳು ಲಕ್ಷಗಟ್ಟಲೆ ಹಣವನ್ನು ಕಟ್ಟಿಸಿಕೊಳ್ಳುತ್ತವೆ. ಹೀಗಾಗಿ ಬಡ ಕುಟುಂಬಗಳು ತಮ್ಮ ಮಕ್ಕಳನ್ನು CONVENT​ಗಳಿಗೆ ಸೇರಿಸುವುದು ಕಷ್ಟ ಕಷ್ಟ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ.

ಇಂತಿಪ್ಪ, ಮಹಾರಾಷ್ಟ್ರದ ನಾಗ್ಪುರದಲ್ಲಿ ಕೇವಲ 1 ರೂಪಾಯಿಗೆ ಮಕ್ಕಳನ್ನು ಇಂಗ್ಲಿಷ್​ ಸ್ಕೂಲ್​ಗೆ ದಾಖಲಿಸಿಕೊಳ್ಳುವ ಖಾಸಗಿ ಶಾಲೆ ಇದೆ.ಜೊತೆಗೆ, ಪುಸ್ತಕ, ನೋಟ್​​ಬುಕ್​, ಶೂ, ಸಮವಸ್ತ್ರ ಎಲ್ಲವನ್ನು ಉಚಿತವಾಗಿ ನೀಡಲಾಗುತ್ತದೆ. ಇದೊಂದು ರೀತಿ ಬಡಮಕ್ಕಳ ಆಶಾಕಿರಣವಾಗಿದೆ.ನಂಬಲಸಾಧ್ಯವಾದರೂ ಇದು ನಿಜ. ಇಲ್ಲಿ ಸೇರುವ ಮಕ್ಕಳಿಂದ ಕೇವಲ 1 ರೂಪಾಯಿ ಮಾತ್ರ ಶುಲ್ಕ ಪಡೆಯಲಾಗುತ್ತದೆ.

Convent School in Tin Shed: ಇಲ್ಲಿನ ಬಡ ಮಕ್ಕಳು ಪ್ರಾಥಮಿಕ ಶಾಲಾ ಶಿಕ್ಷಣ ಪಡೆಯಲು ಸಾಧ್ಯವಾಗದೇ ಇರುವುದನ್ನು ಕಂಡು ಅವರು ಮರುಗಿದ್ದರು. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ ಅವರು 3 ಸಾವಿರ ರೂಪಾಯಿಗೆ ಶೆಡ್​​ವೊಂದನ್ನು ಬಾಡಿಗೆಗೆ ಪಡೆದು ಅದರಲ್ಲೇ ಶಾಲೆ ಶುರು ಮಾಡಿದ್ದಾರೆ.ನಾಗ್ಪುರದ ರಹೋಟ್​ ನಗರ ಟೋಲಿ ಕೊಳಗೇರಿಯಲ್ಲಿ ಖುಶಾಲ್ ಧಾಕ್ ರಹತೇ ಎಂಬವರು ಟಿನ್​ ಶೆಡ್​​ನಡಿ ಈ ಶಾಲೆಯನ್ನು ತೆರೆದಿದ್ದಾರೆ.

ಉದ್ಯೋಗಸ್ಥರಾಗಿರುವ ಖುಶಾಲ್ ಅವರು ತಮ್ಮ ಸಂಬಳದ 70 ಪ್ರತಿಶತವನ್ನು ಶಾಲೆಯಲ್ಲಿ ಓದುತ್ತಿರುವ ಬಡ ಮಕ್ಕಳಿಗಾಗಿತೇ ವ್ಯಯ ಮಾಡುತ್ತಿದ್ದಾರೆ. ಸಮಾಜಮುಖಿ ಕೆಲಸದಲ್ಲಿ ತೊಡಗಿಸಿಕೊಂಡಿರುವ ಅವರು ಕಳೆದ 19 ವರ್ಷಗಳಿಂದ ಈ ಕೊಳಗೇರಿಯಲ್ಲಿ ಸಾಕ್ಷರತೆ ಹೆಚ್ಚಿಸಲು ಶ್ರಮಿಸುತ್ತಿದ್ದಾರೆ.ಇದರಲ್ಲಿ ಕೊಳಗೇರಿಯ ಬಡ ಮತ್ತು ದಲಿತರ ಮಕ್ಕಳಿಗೆ 1 ರೂಪಾಯಿ ಶುಲ್ಕದಲ್ಲಿ ದಾಖಲಾತಿ ಮಾಡಿಕೊಳ್ಳಲಾಗಿದೆ. ಶಾಲೆಗೆ ಸೇರಿದ ನಂತರ ಮಕ್ಕಳಿಗೆ ಉಚಿತ ನೋಟ್ ಬುಕ್, ಪುಸ್ತಕ, ಸಮವಸ್ತ್ರ, ಶೂ ನೀಡಲಾಗುತ್ತಿದೆ.

All for poor children: ಇಲ್ಲಿನ ಕೊಳಗೇರಿಯ ಮಕ್ಕಳಿಗೆ ಶಿಕ್ಷಣ ನೀಡುವುದು ಗುರುತರ ಉದ್ದೇಶ. ಆರಂಭದಲ್ಲಿ ಇಲ್ಲಿಗೆ ಬಂದು ಬೋಧಿಸಲು ಶಿಕ್ಷಕರು ಹಿಂದೇಟು ಹಾಕಿದರು. ಕ್ರಮೇಣ ಇದು ಬದಲಾಗಿ, ಎಲ್ಲೆಡೆಯಿಂದಲೂ ಶಿಕ್ಷಕರು ಬರಲು ಆರಂಭಿಸಿದರು ಎಂದು ಹೇಳಿದ್ದಾರೆ.ಒಳ್ಳೆಯ ಮನಸ್ಸಿನಿಂದ ಮಾಡುತ್ತಿರುವ ಪ್ರಯತ್ನಗಳು ಫಲ ನೀಡುತ್ತಿವೆ.

ಮಕ್ಕಳು ಶಿಕ್ಷಣದಲ್ಲಿ ಆಸಕ್ತಿ ಬೆಳೆಸಿಕೊಳ್ಳಲು ಪ್ರಾರಂಭಿಸಿದ್ದಾರೆ. ಇಲ್ಲಿ ಅಭ್ಯಾಸ ಮಾಡುತ್ತಿರುವ ಮಕ್ಕಳು ಮರಾಠಿ ಜೊತೆಗೆ ಇಂಗ್ಲಿಷ್​​ನಲ್ಲೂ ಮಾತನಾಡಲು ಮತ್ತು ಓದಲು ಕಲಿತಿದ್ದಾರೆ. ಇದು ಖುಷಿಯ ಸಂಗತಿಯಾಗಿದೆ ಎಂದಿದ್ದಾರೆ.

ಇದನ್ನು ಓದಿರಿ : A SCHOOL IN A GRAVEYARD : ಬಡ ವಿದ್ಯಾರ್ಥಿಗಳಿಗಾಗಿ ಬಿಹಾರ ಯುವಕನ ಮಾದರಿ ಕಾರ್ಯ

 

 

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

YEDIYURAPPA POCSO CASE : ವಿಚಾರಣೆ ಮುಂದೂಡಿದ ಹೈಕೋರ್ಟ್

Bangalore News: YEDIYURAPPA POCSO CASE ರದ್ದು ಕೋರಿ ಮಾಜಿ ಸಿಎಂ ಯಡಿಯೂರಪ್ಪ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಜ.15ಕ್ಕೆ ಮುಂದೂಡಿದೆ.  ಯಡಿಯೂರಪ್ಪ ಪರ ವಕೀಲರು...

POSTAGE STAMPS EXHIBITION : ಬೆಳಗಾವಿಯಲ್ಲಿ ಗಮನ ಸೆಳೆದ ಅಂಚೆ ಚೀಟಿಗಳ ಪ್ರದರ್ಶನ

Belgaum News: ಮಹಾವೀರ ಭವನದಲ್ಲಿ ಮೂರು ದಿನಗಳ ಕಾಲ ಆಯೋಜಿಸಿದ್ದ POSTAGE STAMPS EXHIBITION ವನ್ನು ವಿದ್ಯಾರ್ಥಿಗಳು, ಅಂಚೆ ಚೀಟಿ ಪ್ರಿಯರು ಕಣ್ತುಂಬಿಕೊಂಡರು.  ಅಂಚೆ ಇಲಾಖೆ,...

GAURI LANKESH MURDER CASE : ಬಂಧಿತ ಎಲ್ಲ ಆರೋಪಿಗಳಿಗೂ ಜಾಮೀನು ಮಂಜೂರು

Bangalore News: GAURI LANKESH MURDER CASE ದಲ್ಲಿ ಇಂದು ಒಬ್ಬ ಆರೋಪಿಗೆ ಜಾಮೀನು ಸಿಕ್ಕಿದೆ. ಈ ಮೂಲಕ ಬಂಧಿತ ಎಲ್ಲ ಆರೋಪಿಗಳಿಗೂ ಜಾಮೀನು ಮಂಜೂರಾದಂತಾಗಿದೆ....

LEOPARD SPOTTED IN INFOSYS CAMPUS : ಚಿರತೆ ಹಾವಳಿ: ಮೈಸೂರು ಇನ್ಫೋಸಿಸ್ ಟ್ರೈನಿ

Mysore News: ಇನ್ಫೋಸಿಸ್ ಕ್ಯಾಂಪಸ್​ನಲ್ಲಿ ಕಾಣಿಸಿಕೊಂಡ LEOPARD ಇನ್ನೂ ಸೆರೆಯಾಗದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಅಲ್ಲಿನ ಟ್ರೈನಿ ಉದ್ಯೋಗಿಗಳಿಗೆ ಜ.26ರವರೆಗೆ ರಜೆ ನೀಡಲಾಗಿದೆ.ಇಲ್ಲಿನ ಇನ್ಫೋಸಿಸ್ ಕ್ಯಾಂಪಸ್​ನಲ್ಲಿ...