spot_img
spot_img

ONE WORLD ONE FAMILY CUP : ಚಿಕ್ಕಬಳ್ಳಾಪುರದಲ್ಲಿ ಈ ಸಲ ಭಾರತ-ಶ್ರೀಲಂಕಾ ಕ್ರಿಕೆಟ್ ದಿಗ್ಗಜರ ಸೆಣಸಾಟ

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

Bangalore News:

ಎರಡನೇ ಆವೃತ್ತಿಯ ‘ONE WORLD ONE FAMILY’ CUP​ನಲ್ಲಿ ಈ ಬಾರಿ ಭಾರತ ಹಾಗೂ ಶ್ರೀಲಂಕಾ ಮಾಜಿ ಕ್ರಿಕೆಟ್​ ದಿಗ್ಗಜರ ತಂಡಗಳು ಮುಖಾಮುಖಿಯಾಗಲಿವೆ.ಶ್ರೀ ಮಧುಸೂದನ್ ಸಾಯಿ ಗ್ಲೋಬಲ್ ಹ್ಯುಮ್ಯಾನಿಟೇರಿಯನ್ ಮಿಷನ್ ವತಿಯಿಂದ ಆಯೋಜಿಸಲ್ಪಡುವ ಟ್ರೋಫಿಯನ್ನು ಇಂದು ಬೆಂಗಳೂರಿನಲ್ಲಿ ಭಾರತದ ಮಾಜಿ ಕ್ರಿಕೆಟಿಗ ಜಿ.ಆರ್. ವಿಶ್ವನಾಥ್ ಹಾಗೂ ಮಧುಸೂದನ್ ಅನಾವರಣಗೊಳಿಸಿದರು.

ಮೊದಲ ಆವೃತ್ತಿಯ ಯಶಸ್ಸಿನ ಬಳಿಕ ಎರಡನೇ ಆವೃತ್ತಿಗೆ ಸಜ್ಜಾಗಿರುವ ‘ONE WORLD ONE FAMILY’ CUPನಲ್ಲಿ ಈ ಸಲ ಭಾರತ ಹಾಗೂ ಶ್ರೀಲಂಕಾ ತಂಡಗಳು ಸೆಣಸಾಡಲಿವೆ.ಫೆಬ್ರವರಿ 8, 2025ರಂದು ಮುದ್ದೇನಹಳ್ಳಿಯ ಸಾಯಿ ಕೃಷ್ಣನ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿರುವ ‘ONE WORLD ONE FAMILY CUP- 025’ನಲ್ಲಿ ಭಾರತ ಹಾಗೂ ಶ್ರೀಲಂಕಾದ ಮಾಜಿ ಅಂತಾರಾಷ್ಟ್ರೀಯ ದಿಗ್ಗಜ ಕ್ರಿಕೆಟಿಗರು ಕಣಕ್ಕಿಳಿಯಲಿದ್ದಾರೆ.

‘ONE WORLD ONE FAMILY CUP’ (OWOF)  ಅನ್ನು ಒಂದು ಮಾನವೀಯ ಉದ್ದೇಶದಿಂದ ಆಯೋಜಿಸಲಾಗುತ್ತಿದ್ದು, ಆ ಮೂಲಕ ನಿವೃತ್ತ ಕ್ರಿಕೆಟ್ ದಿಗ್ಗಜರು ಚಿಕ್ಕಬಳ್ಳಾಪುರ ಜಿಲ್ಲೆಯ ಕ್ರಿಕೆಟ್ ಮೈದಾನದಲ್ಲಿ ಮತ್ತೊಮ್ಮೆ ಒಗ್ಗೂಡಲಿದ್ದಾರೆ. ಜನವರಿ 2024ರಲ್ಲಿ ನಡೆದ ONE WORLD ONE FAMILY CUPನ ಮೊದಲ ಆವೃತ್ತಿಯ ಎರಡು ತಂಡಗಳನ್ನು ಕ್ರಿಕೆಟ್ ದಿಗ್ಗಜರಾದ ಸಚಿನ್ ತೆಂಡೂಲ್ಕರ್ ಮತ್ತು ಆಲ್‌ರೌಂಡರ್ ಯುವರಾಜ್ ಸಿಂಗ್ ಮುನ್ನಡೆಸಿದ್ದರು. ಈ ತಂಡದಲ್ಲಿ ಏಳು ರಾಷ್ಟ್ರಗಳ ವಿವಿಧ ಮಾಜಿ ಆಟಗಾರರು ಭಾಗಿಯಾಗಿದ್ದರು.

ಪಂದ್ಯದ ಮೂಲಕ ಸಂಗ್ರಹವಾಗುವ ಹಣವನ್ನು ಸಾಮಾಜಿಕ ಪರಿಣಾಮಕ್ಕಾಗಿ ನಿರ್ದಿಷ್ಟ ಯೋಜನೆಗಳಿಗೆ ಬಳಸಲಾಗುತ್ತದೆ.ಈ ಸಲ ಇರ್ಫಾನ್ ಪಠಾಣ್, ಯೂಸುಫ್ ಪಠಾಣ್, ವೆಂಕಟೇಶ್ ಪ್ರಸಾದ್, ಸುನಿಲ್ ಜೋಶಿ ಮತ್ತು ಮುತ್ತಯ್ಯ ಮುರಳೀಧರನ್, ಅಜಂತಾ ಮೆಂಡಿಸ್, ಚಮಿಂಡಾ ವಾಸ್ ಅವರಂತಹ ದಿಗ್ಗಜರು ಈ ಬಾರಿ ಭಾರತ ಮತ್ತು ಶ್ರೀಲಂಕಾದ ನಿವೃತ್ತ ದಿಗ್ಗಜರು ಮಾನವೀಯ ಕಾರಣಕ್ಕಾಗಿ ಮತ್ತೆ ಮೈದಾನಕ್ಕಿಳಿಯುತ್ತಿದ್ದಾರೆ. ನಾವು ಗಡಿಗಳನ್ನು ಮಸುಕುಗೊಳಿಸಿ ಮಾನವೀಯತೆಯ ಸಮುದ್ರದಲ್ಲಿ ವಿಲೀನಗೊಳ್ಳುವ ಸಮಯ ಇದಾಗಿದೆ” ಎಂದು ONE WORLD ONE FAMILY CUPನ ಸಂಸ್ಥಾಪಕ ಮಧುಸೂದನ್ ಸಾಯಿ ತಿಳಿಸಿದರು.

”2025ರ ONE WORLD ONE FAMILY CUPನಲ್ಲಿ ಭಾರತ ಮತ್ತು ಶ್ರೀಲಂಕಾದ ಪ್ರಸಿದ್ಧ ಕ್ರಿಕೆಟಿಗರು ಅವರ ದೇಶಗಳಿಗಾಗಿ ಅಲ್ಲದೆ ಇಡೀ ಮಾನವೀಯತೆಗಾಗಿ ಕಣಕ್ಕಿಳಿಯಲಿದ್ದಾರೆ. ಈ ಸಲದ ಕ್ರಿಕೆಟ್ ಆಟವು ಗಡಿಗಳನ್ನು ಮೀರಿ ಏಕತೆ, ಕರುಣೆ, ಕಾಳಜಿ, ಸಾಮೂಹಿಕ ಜವಾಬ್ದಾರಿ ಮತ್ತು ಸೌಹಾರ್ದತೆಯ ಸಂದೇಶವನ್ನು ಸಾರಲಿದೆ. ಇಲ್ಲಿ ಮಾನವೀಯತೆಯ ಹೆಮ್ಮೆಗಾಗಿ ಆಡುತ್ತೇವೆ. ONE WORLD ONE FAMILY CUP ಒಂದು ಸಾಮೂಹಿಕ ಗೆಲುವಾಗಿದೆ.

ಈ ಗೆಲುವು ಕೇವಲ ಒಂದು ತಂಡ, ಒಂದು ದೇಶ ಅಥವಾ ಒಂದು ಖಂಡಕ್ಕೆ ಸೇರಿದ್ದಲ್ಲ, ಆದರೆ ಅದು ಇಡೀ ಮಾನವೀಯತೆಗೆ ಸೇರಿದ್ದು” ಎಂದರು.ಭಾರತದ ಮಾಜಿ ಕ್ರಿಕೆಟಿಗ ಜಿ.ಆರ್. ವಿಶ್ವನಾಥ್ ಮಾತನಾಡಿ, ”ನಿಜವಾದ ಶ್ರೇಷ್ಠತೆ ನಾವು ಗಳಿಸುವ ರನ್‌ಗಳಲ್ಲಿ ಅಲ್ಲ, ನಾವು ಜೀವಿಸುವ ಜೀವನದಲ್ಲಿ ಅಡಗಿದೆ ಎಂದು ನನಗೆ ಕ್ರಿಕೆಟ್ ಕಲಿಸಿದೆ. ನನ್ನ ಕ್ರೀಡಾ ದಿನಗಳಲ್ಲಿ, ನಾವು ನಮ್ಮ ರಾಷ್ಟ್ರದ ಹೆಮ್ಮೆಗಾಗಿ ಆಡಿದ್ದೇವೆ.‌ಕ್ಯಾಂಪಸ್‌ನಲ್ಲಿರುವ ಬಾಲಕರಿಗಾಗಿ ಇರುವ ವಸತಿ ಕ್ರಿಕೆಟ್ ಅಕಾಡೆಮಿಗೆ ಜಿ.ಆರ್. ವಿಶ್ವನಾಥ್ ಹೆಸರು ನಾಮಕರಣ ಮಾಡಲಾಗುವುದು ಎಂದು ಇದೇ ಸಂದರ್ಭದಲ್ಲಿ ತಿಳಿಸಲಾಯಿತು.

About Madhusudan Sai Global Humanitarian Mission: ಕಳೆದ 12 ವರ್ಷಗಳಲ್ಲಿ ಮಧುಸೂದನ್ ಸಾಯಿ ಗ್ಲೋಬಲ್ ಹ್ಯುಮ್ಯಾನಿಟೇರಿಯನ್ ಮಿಷನ್ ಮೂಲಕ‌ 80 ದೇಶಗಳಲ್ಲಿ ಮಕ್ಕಳ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಅಗತ್ಯಗಳನ್ನು ಪೂರೈಸಿದೆ. ಸಂಪೂರ್ಣವಾಗಿ ಉಚಿತವಾದ ಕಾರ್ಯಕ್ರಮಗಳು ಮತ್ತು ಉತ್ತಮ ಗುಣಮಟ್ಟದ ಸೇವೆಗಳನ್ನು ನೀಡುವ ಮೂಲಕ ಅನೇಕ ಜಾಗತಿಕ ನಾಯಕರ ಗಮನ ಸೆಳೆದಿದೆ.

Team India: ಸುಜಿತ್ ಸೋಮಸುಂದರ್, ಅಭಿಮನ್ಯು ಮಿಥುನ್, ಅಶೋಕ್ ದಿಂಡಾ, ವೆಂಕಟೇಶ್ ಪ್ರಸಾದ್, ಸುನಿಲ್ ಜೋಶಿ, ಪಾರ್ಥಿವ್ ಪಟೇಲ್, ಮನೋಜ್ ತಿವಾರಿಇರ್ಫಾನ್ ಪಠಾಣ್, ಯೂಸುಫ್ ಪಠಾಣ್, ಸುಬ್ರಹ್ಮಣ್ಯಂ ಬದ್ರಿನಾಥ್, ನಮನ್ ಓಜಾ, ಪ್ರಗ್ಯಾನ್ ಓಜಾ,

Sri Lanka Team: ಅರವಿಂದ ಡಿ ಸಿಲ್ವಾ, ಅರ್ಜುನ್ ರಣತುಂಗ, ತಿಲಕರತ್ನೆ ದಿಲ್ಶಾನ, ಉಪುಲ್ ತರಂಗ, ತಿಸಾರ ಪರೇರಾ, ತರಂಗ ಪರಣವಿತನ, ನುವಾನ್ ಜೋಯ್ಸಾ, ಮುತ್ತಯ್ಯ ಮುರಳೀಧರನ್, ಅಜಂತಾ ಮೆಂಡಿಸ್, ಚಮಿಂದಾ ವಾಸ್, ರವೀಂದ್ರ ಪುಷ್ಪಕುಮಾರ, ಅಸೆಲಾ ಗುಣರತ್ನೆ, ಮಿಲಿಂದ ಸಿರಿವರ್ಧನ, ತಿಲಾನ್ ತುಷಾರ, ರೊಮೇಶ್ ಕಲುವಿತರಣ

Venue of Match: ಸತ್ಯ ಸಾಯಿ ಗ್ರಾಮ, ಮುದ್ದೇನಹಳ್ಳಿ, ಚಿಕ್ಕಬಳ್ಳಾಪುರ ಜಿಲ್ಲೆ

Date : 8 ಫೆಬ್ರವರಿ 2025

ಇದನ್ನು ಓದಿರಿ : STATUES IN VIDHANA SOUDHA PREMISES : ರಾಜ್ಯದ ಶಕ್ತಿಸೌಧ, ಭವ್ಯ ವಿಧಾನಸೌಧದ ಆವರಣದಲ್ಲಿ ಮಹನೀಯರ ಪ್ರತಿಮೆಗಳು

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

ISRO 100TH MISSION:ಬೆಳ್ಳಂಬೆಳಗ್ಗೆ ನಭಕ್ಕೆ ಜಿಗಿಯಲು ಸಿದ್ಧವಾಗಿದೆ ರಾಕೆಟ್.

ISROS 100th Mission News: ಇಸ್ರೋದ 100ನೇ MISSION ಸಿದ್ಧವಾಗಿದೆ. ಬುಧವಾರ ಬೆಳ್ಳಂಬೆಳಗ್ಗೆ ನಭಕ್ಕೆ ಹಾರಲು ರಾಕೆಟ್​ ತಯಾರಿಗೊಂಡಿದೆ. ಇದರ ಲೈವ್​ ಸ್ಟ್ರೀಮಿಂಗ್​, ಸಮಯ ಸೇರಿದಂತೆ...

HOW MUCH SALT INTAKE DAILY:ಪ್ರತಿನಿತ್ಯ ಯಾವ ವಯಸ್ಸಿನವರು ಎಷ್ಟು ಉಪ್ಪು ಸೇವಿಸಬೇಕು ನಿಮಗೆ ಗೊತ್ತೇ? ತಜ್ಞರ ಸಲಹೆ ಹೀಗಿದೆ.

How Much Salt You Should Consume in That Day's News : ನಿಮ್ಮ ದೈನಂದಿನ ಆಹಾರದಲ್ಲಿ ನಿಯಮಿತವಾಗಿ SALTನ್ನು ಸೇವಿಸಿದರೆ ಆರೋಗ್ಯದ ಅಪಾಯಗಳನ್ನು...

HEALTH BENEFITS OF APPLE:ಅನಿಮಿಯಾ ಸಮಸ್ಯೆ ಹೋಗಲಾಡಿಸಲು ಇದೊಂದು ಹಣ್ಣು ಸೇವಿಸಲು ತಜ್ಞರ ಸಲಹೆ .

Health Benefits That Apple News: ದೇಹದಲ್ಲಿ ಹಿಮೋಗ್ಲೋಬಿನ್ ಪ್ರಮಾಣ ಕಡಿಮೆಯಾದರೆ, ರಕ್ತಹೀನತೆಯ (ಅನಿಮಿಯಾ) ಅಪಾಯ ಹೆಚ್ಚಾಗುತ್ತದೆ. ಈ ಹಣ್ಣನ್ನು ನಿಯಮಿತವಾಗಿ ಸೇವಿಸಿದರೆ, ಅನಿಮಿಯಾ ಸಮಸ್ಯೆ...

38TH NATIONAL GAMES:ಎಲ್ಲಾ ರಾಜ್ಯಗಳ ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ ಕರ್ನಾಟಕ!

38th National Games News: ಉತ್ತರಾಖಂಡದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಕರ್ನಾಟಕ ಹೆಚ್ಚಿನ ಪದಕ ಗೆದ್ದು ನಂಬರ್​ ಒನ್​ ಸ್ಥಾನಕ್ಕೇರಿದೆ.ಕ್ರೀಡಾಕೂಟದ ಎರಡನೇ ದಿನವಾದ ಬುಧವಾರ ಸಂಜೆ...