spot_img
spot_img

ನೀಟ್​ ಯುಜಿಯಲ್ಲಿ ಕೇವಲ 135 ಅಂಕ : MBBS​ ಸೀಟ್

spot_img
spot_img

Share post:

ರಾಜಸ್ಥಾನ: ನೀಟ್​ ಯುಜಿ ಪರೀಕ್ಷೆಯಲ್ಲಿ ಕೇವಲ ಶೇ 19ರಷ್ಟು ಅಂಕ ಪಡೆದ ಅಭ್ಯರ್ಥಿ ಇದೀಗ ಎಂಬಿಬಿಎಸ್​ ದಾಖಲಾತಿ ಸಿಕ್ಕಿದೆ.
ವೈದ್ಯಕೀಯ ಪ್ರವೇಶ ಪರೀಕ್ಷೆಯ ನೀಟ್​ ಯುಜಿ ಫಲಿತಾಂಶದ ಆಧಾರದ ಮೇಲೆ ವೈದ್ಯಕೀಯ ಕೌನ್ಸೆಲಿಂಗ್​ ಮುಗಿದಿದ್ದು, ಎಂಬಿಬಿಎಸ್​ಗೆ ಅಭ್ಯರ್ಥಿಗಳ ಪ್ರವೇಶ ಪ್ರಕ್ರಿಯೆಯೂ ಮುಗಿದಿದೆ. ಸೀಟು ಹಂಚಿಕೆಯಲ್ಲಿ, ಸಾಮಾನ್ಯ ವರ್ಗದಲ್ಲಿ 720 ಅಂಕಗಳಿಗೆ 652 ಅಂಕಗಳನ್ನು ಗಳಿಸಿದ ಅಭ್ಯರ್ಥಿಯು ಸರ್ಕಾರಿ ವೈದ್ಯಕೀಯ ಸೀಟಿಗೆ ಪ್ರವೇಶ ಪಡೆದಿದ್ದರೆ, ಮೀಸಲಾತಿ ವರ್ಗದ ಅಭ್ಯರ್ಥಿಯು 529 ಅಂಕಗಳೊಂದಿಗೆ ಪ್ರವೇಶ ಪಡೆದಿದ್ದಾರೆ.
ಅಚ್ಚರಿಯೆಂದರೆ ಖಾಸಗಿ ಸೀಟಿನಲ್ಲಿ ಕೇವಲ 135 ಅಂಕ ಗಳಿಸಿದ ಅಭ್ಯರ್ಥಿಯೂ ಪ್ರವೇಶ ಪಡೆದಿರುವುದು. ನೀಟ್​ ಯುಜಿ ಪರೀಕ್ಷೆಯಲ್ಲಿ ಕೇವಲ ಶೇ 19ರಷ್ಟು ಅಂಕ ಪಡೆದ ಅಭ್ಯರ್ಥಿ ಇದೀಗ ಎಂಬಿಬಿಎಸ್​ ದಾಖಲಾತಿ ಪಡೆದುಕೊಂಡಿದ್ದಾರೆ.
ಕೋಟಾದ ಖಾಸಗಿ ಕೋಚಿಂಗ್ ಇನ್‌ಸ್ಟಿಟ್ಯೂಟ್‌ ಕೌನ್ಸೆಲಿಂಗ್​ ತಜ್ಞ ಪರಿಜತ್​ ಮಿಶ್ರಾ ಮಾತನಾಡಿ, ಆಲ್​ ಇಂಡಿಯಾ ಕೋಟಾ ಅಡಿಯಲ್ಲಿ ಒಬಿಸಿ ವರ್ಗದಲ್ಲಿ 25,212 ರ‍್ಯಾಂಕ್​ ಪಡೆದವರಿಗೆ ಸರ್ಕಾರಿ ಎಂಬಿಬಿಎಸ್​ ಸೀಟು ನೀಡಲಾಗಿದೆ. ಇದಕ್ಕೆ 652 ಅಂಕಗಳನ್ನು ನಿಗದಿ ಮಾಡಲಾಗಿದೆ.
2024ರಲ್ಲಿ ನಡೆದ ನೀಟ್​ಯುಜಿ ಪರೀಕ್ಷೆಯಲ್ಲಿ 23,33,162 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು, ಇದರಲ್ಲಿ 13,15,853 ಅಭ್ಯರ್ಥಿಗಳು ಅರ್ಹತೆ ಪಡೆದಿದ್ದರು. 17 ಅಭ್ಯರ್ಥಿಗಳು 720ಕ್ಕೆ 720 ಅಂಕ ಪಡೆದು ದಾಖಲೆಯನ್ನೂ ನಿರ್ಮಿಸಿದ್ದರು. ಈ ನಡುವೆ ಕೇವಲ 135 ಪಡೆದ ಅಭ್ಯರ್ಥಿ ಕೂಡ ಎಂಬಿಬಿಎಸ್​ ಸೀಟು ಪಡೆದಿರುವುದು ಅಚ್ಚರಿಗೆ ಕಾರಣವಾಗಿದೆ.
ಇನ್ನು ಇಡಬ್ಲ್ಯೂಎಸ್​ ವರ್ಗದಲ್ಲಿ 27,899 ಅಭ್ಯರ್ಥಿ ಸೀಟ್​ ಪಡೆದಿದ್ದು, ಇದಕ್ಕೆ ಸ್ಕೋರ್​ 648 ಮಾರ್ಕ್​ ನಿಗದಿ ಪಡಿಸಲಾಗಿದೆ. ಇನ್ನು ಪರಿಶಿಷ್ಟ ಜಾತಿಗೆ 1,39,193 ಸೀಟ್​ ನೀಡಲಾಗಿದ್ದು, ಇದಕ್ಕೆ 549 ಕಟ್​ ಆಫ್​ ಅಂಕ, ಇನ್ನು ಎಸ್​ಟಿ ವರ್ಗಕ್ಕೆ 526 ಮಾರ್ಕ್ಸ್​ ನಿಗದಿ ಪಡಿಸಲಾಗಿದೆ. ಈ ವರ್ಗದಲ್ಲಿ 1,68,888 ಅಭ್ಯರ್ಥಿಗಳು ಸೀಟ್​ ಪಡೆದಿದ್ದಾರೆ.
ನೀಟ್​ ಯುಜಿ ಕೌನ್ಸೆಲಿಂಗ್​​ನಲ್ಲಿ ಮೊದಲ ಸುತ್ತಿನಲ್ಲಿ ಫ್ರೀ ಎಕ್ಸಿಟ್ ಸೌಲಭ್ಯ ನೀಡಲಾಗಿದೆ. ಆದರೆ, ಈ ಸೌಲಭ್ಯವನ್ನು ಎರಡನೇ ಸುತ್ತಿನಲ್ಲಿ ರದ್ದು ಮಾಡಲಾಗಿದೆ. ಮೂರನೇ ಸುತ್ತಿನಲ್ಲಿ 2 ಲಕ್ಷ ಸೆಕ್ಯೂರಿಟಿ ಹಣ ನೀಡಬೇಕು. ಹಾಗೇ ಮುಂದಿನ ಸುತ್ತಿಗೆ ಅರ್ಹತೆ ಕೂಡ ರದ್ದಾಗುತ್ತದೆ. ಇದರಿಂದ ಕಟ್​ ಆಫ್​ 13,32,034ಕ್ಕೆ ಬಂದಿದೆ. ನಾಲ್ಜನೇ ಸುತ್ತಿನಲ್ಲಿ ಈ ಕಟ್​ ಆಫ್​ ಮತ್ತಷ್ಟು ಕಡಿಮೆಯಾಗಿ 5,60,021 ಇಳಿದಿದ್ದು, ವಿಶೇಷ ವೆಕೆನ್ಸಿ ಸುತ್ತಿನಲ್ಲಿ 4,38,863 ಇದೆ. ​
ಖಾಸಗಿ ಡೀಮ್ಡ್​ ವೈದ್ಯಕೀಯ ಕಾಲೇಜ್​ಗಳಲ್ಲಿ ಕೇವಲ 135 ಅಂಕ ಪಡೆದ 13,32,034 ಅಭ್ಯರ್ಥಿಗಳಿಗೆ ಪ್ರವೇಶ ಕಲ್ಪಿಸಲಾಗಿದೆ. ಎನ್​ಆರ್​ಐ ಕೋಟಾದ ಅಡಿ ಈ ಅಂಕಗಳಿಗೆ ಪ್ರವೇಶಾತಿ ನೀಡಲಾಗಿದೆ ಎಂದು ಪರಿಜತ್​ ಮಿಶ್ರಾ ತಿಳಿಸಿದರು.

Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

MOTOROLA EDGE 60 FUSION – ಅದ್ಭುತವಾದ ಕ್ಯಾಮೆರಾ ಸೆಟಪ್, ವಾಟರ್ ಪ್ರೊಟೆಕ್ಷನ್ – ಮೊಟೊರೊಲಾದ ಹೊಸ ಫೋನ್ನ ಬೆಲೆ ಕೇವಲ ಇಷ್ಟೇ!

Motorola Edge 60 Fusion: ಬಹುನಿರೀಕ್ಷಿತ ' MOTOROLA EDGE 60 FUSION' ಕೊನೆಗೂ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಕಂಪನಿಯು ಇದನ್ನು ' MOTOROLA EDGE...

RASHMIKA MANDANNA – ‘ನಾನು ಹೈದರಾಬಾದ್ನವಳು’: ರಶ್ಮಿಕಾ ಮಂದಣ್ಣ ಹೇಳಿಕೆ ವಿಚಾರ; ಮುಂದುವರಿದ ಪರ – ವಿರೋಧ ಚರ್ಚೆ

'ನ್ಯಾಷನಲ್ ಕ್ರಶ್' ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುವ ಜನಪ್ರಿಯ ನಟಿ RASHMIKA MANDANNA, ಭಾರತೀಯ ಚಿತ್ರರಂಗದಲ್ಲಿ ಮೋಡಿ ಮಾಡಿದ್ದಾರೆ. ತಮ್ಮ ನಟನಾ ಕೌಶಲ್ಯದಿಂದ ದೇಶಾದ್ಯಂತ ಅಭಿಮಾನಿಗಳ...

IPL SUBSCRIPTION PLANS – ಕೆಲವೇ ದಿನಗಳಲ್ಲಿ IPL ಹವಾ ಶುರು: ಈ ಕಂಪನಿಗಳ ಗ್ರಾಹಕರಿಗೆ ಅಗ್ಗದಲ್ಲಿ ಲಭ್ಯ!

JioHotstar Subscription: ಚಾಂಪಿಯನ್ಸ್​ ಟ್ರೋಫಿ ಕ್ರಿಕೆಟ್‌ ಟೂರ್ನಿ ಮುಗೀತು. ಮುಂದಿನ ಕೆಲವೇ ದಿನಗಳಲ್ಲಿ ಐಪಿಎಲ್​ ಜಾತ್ರೆ ಆರಂಭವಾಗಲಿದೆ. ಇದಕ್ಕಾಗಿ ಎಲ್ಲಾ ಟೆಲಿಕಾಂ ಕಂಪನಿಗಳು ತಮ್ಮ ತಮ್ಮ...

IPHONE 17 SERIES – ಐಫೋನ್ 17 ಸೀರಿಸ್ ಡಿಟೆಲ್ಸ್ ಲೀಕ್ – ಇದರ ಸ್ಪೆಷಾಲಿಟಿ ಏನ್ ಗೊತ್ತಾ?

iPhone 17 Series: ಟೆಕ್ ದೈತ್ಯ ಆಪಲ್ ತನ್ನ ಹೊಸ ಐಫೋನ್ ಸೀರಿಸ್​ ಅನ್ನು ಪ್ರತಿ ವರ್ಷ ಮಾರುಕಟ್ಟೆಗೆ ಪರಿಚಯಿಸುತ್ತದೆ. ಈ ಕ್ರಮದಲ್ಲಿ ಈ ವರ್ಷವೂ...