ರಾಜಸ್ಥಾನ: ನೀಟ್ ಯುಜಿ ಪರೀಕ್ಷೆಯಲ್ಲಿ ಕೇವಲ ಶೇ 19ರಷ್ಟು ಅಂಕ ಪಡೆದ ಅಭ್ಯರ್ಥಿ ಇದೀಗ ಎಂಬಿಬಿಎಸ್ ದಾಖಲಾತಿ ಸಿಕ್ಕಿದೆ.
ವೈದ್ಯಕೀಯ ಪ್ರವೇಶ ಪರೀಕ್ಷೆಯ ನೀಟ್ ಯುಜಿ ಫಲಿತಾಂಶದ ಆಧಾರದ ಮೇಲೆ ವೈದ್ಯಕೀಯ ಕೌನ್ಸೆಲಿಂಗ್ ಮುಗಿದಿದ್ದು, ಎಂಬಿಬಿಎಸ್ಗೆ ಅಭ್ಯರ್ಥಿಗಳ ಪ್ರವೇಶ ಪ್ರಕ್ರಿಯೆಯೂ ಮುಗಿದಿದೆ. ಸೀಟು ಹಂಚಿಕೆಯಲ್ಲಿ, ಸಾಮಾನ್ಯ ವರ್ಗದಲ್ಲಿ 720 ಅಂಕಗಳಿಗೆ 652 ಅಂಕಗಳನ್ನು ಗಳಿಸಿದ ಅಭ್ಯರ್ಥಿಯು ಸರ್ಕಾರಿ ವೈದ್ಯಕೀಯ ಸೀಟಿಗೆ ಪ್ರವೇಶ ಪಡೆದಿದ್ದರೆ, ಮೀಸಲಾತಿ ವರ್ಗದ ಅಭ್ಯರ್ಥಿಯು 529 ಅಂಕಗಳೊಂದಿಗೆ ಪ್ರವೇಶ ಪಡೆದಿದ್ದಾರೆ.
ಅಚ್ಚರಿಯೆಂದರೆ ಖಾಸಗಿ ಸೀಟಿನಲ್ಲಿ ಕೇವಲ 135 ಅಂಕ ಗಳಿಸಿದ ಅಭ್ಯರ್ಥಿಯೂ ಪ್ರವೇಶ ಪಡೆದಿರುವುದು. ನೀಟ್ ಯುಜಿ ಪರೀಕ್ಷೆಯಲ್ಲಿ ಕೇವಲ ಶೇ 19ರಷ್ಟು ಅಂಕ ಪಡೆದ ಅಭ್ಯರ್ಥಿ ಇದೀಗ ಎಂಬಿಬಿಎಸ್ ದಾಖಲಾತಿ ಪಡೆದುಕೊಂಡಿದ್ದಾರೆ.
ಕೋಟಾದ ಖಾಸಗಿ ಕೋಚಿಂಗ್ ಇನ್‌ಸ್ಟಿಟ್ಯೂಟ್ ಕೌನ್ಸೆಲಿಂಗ್ ತಜ್ಞ ಪರಿಜತ್ ಮಿಶ್ರಾ ಮಾತನಾಡಿ, ಆಲ್ ಇಂಡಿಯಾ ಕೋಟಾ ಅಡಿಯಲ್ಲಿ ಒಬಿಸಿ ವರ್ಗದಲ್ಲಿ 25,212 ರ‍್ಯಾಂಕ್ ಪಡೆದವರಿಗೆ ಸರ್ಕಾರಿ ಎಂಬಿಬಿಎಸ್ ಸೀಟು ನೀಡಲಾಗಿದೆ. ಇದಕ್ಕೆ 652 ಅಂಕಗಳನ್ನು ನಿಗದಿ ಮಾಡಲಾಗಿದೆ.
2024ರಲ್ಲಿ ನಡೆದ ನೀಟ್ಯುಜಿ ಪರೀಕ್ಷೆಯಲ್ಲಿ 23,33,162 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು, ಇದರಲ್ಲಿ 13,15,853 ಅಭ್ಯರ್ಥಿಗಳು ಅರ್ಹತೆ ಪಡೆದಿದ್ದರು. 17 ಅಭ್ಯರ್ಥಿಗಳು 720ಕ್ಕೆ 720 ಅಂಕ ಪಡೆದು ದಾಖಲೆಯನ್ನೂ ನಿರ್ಮಿಸಿದ್ದರು. ಈ ನಡುವೆ ಕೇವಲ 135 ಪಡೆದ ಅಭ್ಯರ್ಥಿ ಕೂಡ ಎಂಬಿಬಿಎಸ್ ಸೀಟು ಪಡೆದಿರುವುದು ಅಚ್ಚರಿಗೆ ಕಾರಣವಾಗಿದೆ.
ಇನ್ನು ಇಡಬ್ಲ್ಯೂಎಸ್ ವರ್ಗದಲ್ಲಿ 27,899 ಅಭ್ಯರ್ಥಿ ಸೀಟ್ ಪಡೆದಿದ್ದು, ಇದಕ್ಕೆ ಸ್ಕೋರ್ 648 ಮಾರ್ಕ್ ನಿಗದಿ ಪಡಿಸಲಾಗಿದೆ. ಇನ್ನು ಪರಿಶಿಷ್ಟ ಜಾತಿಗೆ 1,39,193 ಸೀಟ್ ನೀಡಲಾಗಿದ್ದು, ಇದಕ್ಕೆ 549 ಕಟ್ ಆಫ್ ಅಂಕ, ಇನ್ನು ಎಸ್ಟಿ ವರ್ಗಕ್ಕೆ 526 ಮಾರ್ಕ್ಸ್ ನಿಗದಿ ಪಡಿಸಲಾಗಿದೆ. ಈ ವರ್ಗದಲ್ಲಿ 1,68,888 ಅಭ್ಯರ್ಥಿಗಳು ಸೀಟ್ ಪಡೆದಿದ್ದಾರೆ.
ನೀಟ್ ಯುಜಿ ಕೌನ್ಸೆಲಿಂಗ್ನಲ್ಲಿ ಮೊದಲ ಸುತ್ತಿನಲ್ಲಿ ಫ್ರೀ ಎಕ್ಸಿಟ್ ಸೌಲಭ್ಯ ನೀಡಲಾಗಿದೆ. ಆದರೆ, ಈ ಸೌಲಭ್ಯವನ್ನು ಎರಡನೇ ಸುತ್ತಿನಲ್ಲಿ ರದ್ದು ಮಾಡಲಾಗಿದೆ. ಮೂರನೇ ಸುತ್ತಿನಲ್ಲಿ 2 ಲಕ್ಷ ಸೆಕ್ಯೂರಿಟಿ ಹಣ ನೀಡಬೇಕು. ಹಾಗೇ ಮುಂದಿನ ಸುತ್ತಿಗೆ ಅರ್ಹತೆ ಕೂಡ ರದ್ದಾಗುತ್ತದೆ. ಇದರಿಂದ ಕಟ್ ಆಫ್ 13,32,034ಕ್ಕೆ ಬಂದಿದೆ. ನಾಲ್ಜನೇ ಸುತ್ತಿನಲ್ಲಿ ಈ ಕಟ್ ಆಫ್ ಮತ್ತಷ್ಟು ಕಡಿಮೆಯಾಗಿ 5,60,021 ಇಳಿದಿದ್ದು, ವಿಶೇಷ ವೆಕೆನ್ಸಿ ಸುತ್ತಿನಲ್ಲಿ 4,38,863 ಇದೆ.
ಖಾಸಗಿ ಡೀಮ್ಡ್ ವೈದ್ಯಕೀಯ ಕಾಲೇಜ್ಗಳಲ್ಲಿ ಕೇವಲ 135 ಅಂಕ ಪಡೆದ 13,32,034 ಅಭ್ಯರ್ಥಿಗಳಿಗೆ ಪ್ರವೇಶ ಕಲ್ಪಿಸಲಾಗಿದೆ. ಎನ್ಆರ್ಐ ಕೋಟಾದ ಅಡಿ ಈ ಅಂಕಗಳಿಗೆ ಪ್ರವೇಶಾತಿ ನೀಡಲಾಗಿದೆ ಎಂದು ಪರಿಜತ್ ಮಿಶ್ರಾ ತಿಳಿಸಿದರು.
WhatsApp Group
Join Now
Telegram Group
Join Now
Instagram Account
Follow Now
Facebook Page
Follow Now