Dhaka/New Delhi News:
ಬಾಂಗ್ಲಾದೇಶದ ಭದ್ರತಾ ಪಡೆ ಹೊಸದಾಗಿ ” OPERATION DEVIL HUNT ” ಎಂಬ ಹೆಸರಿನಡಿ 1,308 ಜನರನ್ನು ಬಂಧಿಸಿವೆ. ರಾಷ್ಟ್ರದಲ್ಲಿನ ತೀವ್ರ ವಿಧ್ವಂಸಕತೆಯ ಮಧ್ಯೆ ರಾತ್ರೋರಾತ್ರಿ ಈ ಆಪರೇಷನ್ನ್ನು ಕಾರ್ಯಗತಗೊಳಿಸಲಾಗಿದೆ. ಕಳೆದ ನಾಲ್ಕು ದಿನಗಳಿಂದ ಬಾಂಗ್ಲಾ ಅಶಾಂತಿಯಿಂದ ಕೂಡಿದೆ.
ಮಧ್ಯಂತರ ಸರ್ಕಾರವು ‘ಎಲ್ಲಾ ದೆವ್ವಗಳನ್ನು’ ಬೇರು ಸಹಿತ ಕಿತ್ತೊಗೆಯುವವರೆಗೂ ಈ ಆಪರೇಷನ್ನ್ನು ಮುಂದುವರೆಸುವುದಾಗಿ ಪ್ರತಿಜ್ಞೆ ಮಾಡಿದೆ. ರಾಷ್ಟ್ರವ್ಯಾಪ್ತಿ ವಿಧ್ವಂಸಕತೆ ಹೊಡೆದೋಡಿಸಲು ಬಾಂಗ್ಲಾದೇಶದ ಮಧ್ಯಂತರ ಸರ್ಕಾರ ಹೊಸ ಆಪರೇಷನ್ ಕೈಗೊಂಡಿದೆ.
What is Devil Hunt:
ಢಾಕಾದ ಹೊರವಲಯದಲ್ಲಿರುವ ಅವಾಮಿ ಲೀಗ್ ನಾಯಕನ ಮನೆಯಲ್ಲಿ ನಡೆದ ಕೆಲ ವಿಧ್ವಂಸಕ ಕೃತ್ಯಗಳ ಸಂದರ್ಭದಲ್ಲಿ ವಿದ್ಯಾರ್ಥಿ ಕಾರ್ಯಕರ್ತರು ಗಾಯಗೊಂಡಿದ್ದರು. ಇದಾದ ನಂತರ ಮುಖ್ಯ ಸಲಹೆಗಾರ ಮುಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರ ಶನಿವಾರ ಈ ” OPERATION DEVIL HUNT ” ಗೆ ಆದೇಶ ನೀಡಿದೆ.
ಸೇನಾ ಪಡೆಗಳು, ಪೊಲೀಸರು ಮತ್ತು ಅವರ ವಿಶೇಷ ಘಟಕಗಳನ್ನು ಒಳಗೊಂಡ ಜಂಟಿ ಪಡೆಗಳು ಕಾರ್ಯಾಚರಣೆ ಪ್ರಾರಂಭಿಸಿದ 24 ಗಂಟೆಗಳಲ್ಲಿ ದೇಶದ ವಿವಿಧ ಭಾಗಗಳಲ್ಲಿ ಪ್ರಮುಖವಾಗಿ 274 ಜನರನ್ನು ಬಂಧಿಸಿವೆ ಎಂದು ಅಲ್ಲಿನ ಪ್ರಮುಖ ಮಾಧ್ಯಮಗಳು ಭಾನುವಾರ ತಿಳಿಸಿವೆ.
ಕಾರ್ಯಾಚರಣೆಯ ಗುರಿಗಳ ಬಗ್ಗೆ ಗೃಹ ವ್ಯವಹಾರಗಳ ಸಲಹೆಗಾರ ಎಂಡಿ ಜಹಾಂಗೀರ್ ಆಲಂ ಚೌಧರಿ ಹೇಳಿದ್ದು ಹೀಗೆ. “ದೆವ್ವ’ ಎಂದರೆ ಏನು? ಅದು ದುಷ್ಟ ಶಕ್ತಿಗಳನ್ನು ಸೂಚಿಸುತ್ತದೆ. ಈ ಕಾರ್ಯಾಚರಣೆಯು ದೇಶವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುವ, ಕಾನೂನು ಮುರಿಯಲು, ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ಮತ್ತು ಭಯೋತ್ಪಾದನಾ ಕೃತ್ಯಗಳನ್ನು ಎಸಗುವವರನ್ನು ಗುರಿಯಾಗಿರಿಸಿಕೊಂಡಿದೆ” ಎಂದು ಅವರು ವಿವರಿಸಿದ್ದಾರೆ.
ಮೀಸಲಾತಿ ವಿಚಾರವಾಗಿ ಭುಗಿಲೆದ್ದ ಆಕ್ರೋಶ, ವಿದ್ಯಾರ್ಥಿಗಳ ಚಳವಳಿ ಶೇಖ್ ಹಸೀನಾ ಸರ್ಕಾರವನ್ನು ಕಿತ್ತೊಗೆದು, ಅವರನ್ನು ದೇಶದಿಂದ ಹೊರಹೋಗುವಂತೆ ಮಾಡಿದೆ. ಆಗ ಆರಂಭವಾದ ಹಿಂಸಾಚಾರ ಹೊಸ ಮಧ್ಯಂತರ ಸರ್ಕಾರ ಬಂದ ಮೇಲೂ ಮುಂದುವರೆದಿದೆ.
ಬಾಂಗ್ಲಾದೇಶದಲ್ಲಿ ಅಲ್ಲಿನ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ನಿರಂತರ ದಾಳಿ ಮುಂದುವರೆದಿದೆ. ಈ ನಡುವೆ ಮೊನ್ನೆ ಮೊನ್ನೆ ಬಾಂಗ್ಲಾ ದೇಶದ ಮೊದಲ ಪ್ರಧಾನಿ ನಿವಾಸದ ಮೇಲೆ ದಾಳಿ ನಡೆಸಿ ಬೆಂಕಿ ಹಚ್ಚಲಾಗಿದೆ. ಇನ್ನು ಮಾಧ್ಯಮ ವರದಿಗಳ ಪ್ರಕಾರ, ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರ ಅವಾಮಿ ಲೀಗ್‌ನ 81 ಕಾರ್ಯಕರ್ತರನ್ನು ಢಾಕಾದ ಹೊರವಲಯದಲ್ಲಿರುವ ಗಾಜಿಪುರದಿಂದ ಬಂಧಿಸಲಾಗಿದೆ.
ಈ ವೇಳೆ ಅಲ್ಲಿ ಘರ್ಷಣೆ ಕಂಡಿದ್ದು ಕೂಡಲೇ OPERATION DEVIL HUNT ಗೆ ಆದೇಶ ನೀಡಲು ಅಧಿಕಾರಿಗಳನ್ನು ಪ್ರೇರೇಪಿಸಿತು ಎಂದು ಹೇಳಲಾಗಿದೆ.
ಇದನ್ನು ಓದಿರಿ : ESI contribution rate reduced from 1.75% to 1% for employees