Ratlam (Rajasthan) News:
ಮಧ್ಯಪ್ರದೇಶ ಮತ್ತು ರಾಜಸ್ಥಾನದ ಭಕ್ತರು ತಮ್ಮ ಆಸೆ ಈಡೇರಿದ ನಂತರ ಸನ್ವಾಲಿಯಾ ಸೇಠ್ ದೇವಸ್ಥಾನಕ್ಕೆ ಅರ್ಪಿಸಿದ ಅಫೀಮನ್ನು ಕೇಂದ್ರ ಮಾದಕ ದ್ರವ್ಯ ಇಲಾಖೆ ವಶಪಡಿಸಿಕೊಂಡಿದೆ. ದೇವಸ್ಥಾನದ ಕಾಣಿಕೆ ಡಬ್ಬಿಯಲ್ಲಿ ಅಫೀಮು ಕಾಣಿಕೆಯಾ ಎಂದು ನೀವು ಆಶ್ಚರ್ಯಪಡಬಹುದು, ಆದರೆ ಇದು ನಿಜ! ದೇವಸ್ಥಾನದ ಹುಂಡಿಯಲ್ಲಿ ಇಷ್ಟೊಂದು ಅಫೀಮು ಹೇಗೆ ಬಂತು? ಹಾಕಿದವರು ಯಾರು? ಇದರ ಹಿಂದಿನ ಕಥೆಯನ್ನು ನಾವು ಹೇಳುತ್ತೇವೆ. OPIUM IN TEMPLE HUNDI ಹರಕೆಯಾಗಿ ಸಂಗ್ರಹವಾದ 58 ಕೆ.ಜಿ. ಅಫೀಮನ್ನು ಮಾದಕ ದ್ರವ್ಯ ಇಲಾಖೆ ಗುರುವಾರ ವಶಪಡಿಸಿಕೊಂಡಿದೆ. ಹೌದು, ರಾಜಸ್ಥಾನದ ಚಿತ್ತೋರಗಢದ ಸನ್ವಾಲಿಯಾ ಸೇಠ್ ದೇವಾಲಯದ ಕಾಣಿಕೆ ಡಬ್ಬಿಯಲ್ಲಿ 58.7 ಕೆ.ಜಿ ಅಫೀಮು ಪತ್ತೆಯಾಗಿದೆ. OPIUM IN TEMPLE HUNDI ದೇವಸ್ಥಾನದ ಆಡಳಿತ ಮಂಡಳಿ ಮಾಹಿತಿ ನೀಡಿದ ಬಳಿಕ ನಾರ್ಕೋಟಿಕ್ಸ್ ಇಲಾಖೆಯವರು ಆಗಮಿಸಿ, ಅವುಗಳನ್ನು ವಶಪಡಿಸಿಕೊಂಡಿದ್ದಾರೆ.
A typical dilemma:
OPIUM IN TEMPLE HUNDI ಚಿನ್ನ, ಬೆಳ್ಳಿ, ನೋಟುಗಳ ಜೊತೆಗೆ ಅಫೀಮು ಕೂಡ ತುಂಬುತ್ತದೆ. ಹೀಗೆ ಹುಂಡಿ ತುಂಬಿದಾಗ ಮಾದಕ ದ್ರವ್ಯ ಇಲಾಖೆ ಇಲ್ಲಿಗೆ ಬಂದು ಅವುಗಳನ್ನು ವಶಪಡಿಸಿಕೊಂಡು ಹೋಗುತ್ತಾರೆ. ಮಧ್ಯಪ್ರದೇಶ ಮತ್ತು ರಾಜಸ್ಥಾನದ ಕೆಲವು ಗ್ರಾಮಗಳಲ್ಲಿ ರೈತರು ಅಫೀಮು ಬೆಳೆಯುತ್ತಾರೆ. ಉತ್ತಮವಾಗಿ ಅಫೀಮು ಉತ್ಪಾದನೆಯಾದಾಗ, ತಮ್ಮ ಕೋರಿಕೆ ಈಡೇರಿದ ಹಿನ್ನೆಲೆ ಹರಕೆಯಾಗಿ ಅಫೀಮನ್ನು ಸನ್ವಾಲಿಯಾ ಸೇಠ್ ದೇವಾಲಯದ ದೇವರಿಗೆ ಅರ್ಪಿಸುತ್ತಾರೆ. OPIUM IN TEMPLE HUNDI ಕಳೆದ ಹಲವು ವರ್ಷಗಳಿಂದ ಈ ರೀತಿಯ ಆಚರಣೆಯೊಂದು ಇಲ್ಲಿ ನಡೆದುಕೊಂಡು ಬರುತ್ತಿದೆ. ಸಾಮಾನ್ಯವಾಗಿ ಸನ್ವಾಲಿಯಾ ಸೇಠ್ ದೇವಸ್ಥಾನದಲ್ಲಿ ನಗದು ಚಿನ್ನ, ಬೆಳ್ಳಿ, ಮಾದಕ ವಸ್ತು ಅಫೀಮನ್ನು ಕಾಣಿಕೆಯಾಗಿ ನೀಡಲಾಗುತ್ತದೆ. ಆರಂಭದಲ್ಲಿ ಈ ಅಫೀಮನ್ನು ಪ್ರಸಾದವಾಗಿ ವಿತರಿಸಲಾಗುತ್ತಿತ್ತು. ಆದರೆ, ಮಾದಕ ದ್ರವ್ಯ ಇಲಾಖೆಯ ಹೊಸ ನಿಯಮಗಳಿಂದಾಗಿ ಕಳೆದ ಕೆಲವು ವರ್ಷಗಳಿಂದ ಅಫೀಮು ವಿತರಣೆಯನ್ನು ನಿಷೇಧಿಸಲಾಗಿದೆ. ಹೀಗಾಗಿ ದೇವಾಲಯದಲ್ಲಿ ಅಫೀಮು ರಾಶಿ ಸಂಗ್ರಹವಾಗಿದೆ.
The temple administration itself provides the information:
ಸನ್ವಾಲಿಯ ಸೇಠ್ ದೇವಾಲಯದ ಆಡಳಿತ ಮಂಡಳಿಯ ಪ್ರಕಾರ, ಇಲ್ಲಿ ವ್ಯಾಪಾರ ಮಾಡುವ ಅನೇಕ ಜನರು ತಮ್ಮ ಆಸೆ ಈಡೇರಿದ ನಂತರ ವಿಶೇಷ ವಸ್ತುವನ್ನು ಅರ್ಪಿಸುತ್ತಾರೆ. ಅದೇ ರೀತಿ ಅಫೀಮು ಬೆಳೆಯುವ ರೈತರು ಉತ್ತಮ ಲಾಭ ಸಿಕ್ಕಾಗ ದೇವರಿಗೆ ಅಫೀಮು ಹರಕೆಯಾಗಿ ನೀಡುತ್ತಾರೆ. ಇ ಅಫೀಮು ಕಾಣಿಕೆಗಳು ಕಾಣಿಕೆಗ ಹುಂಡಿಯಲ್ಲಿ ರಹಸ್ಯವಾಗಿಯೇ ಬೀಳುತ್ತವೆ. ಈ ರೀತಿ ಕಾಣಿಕೆ ಡಬ್ಬಿಯಲ್ಲಿ ಬಿದ್ದ ಅಫೀಮನ್ನು ಆಡಳಿತ ಮಂಡಳಿ ನೆಲಮಾಳಿಯಲ್ಲಿ ದೀರ್ಘಕಾಲದಿಂದ ಸಂಗ್ರಹಿಸಿಕೊಂಡು ಬರುತ್ತಿದೆ. ಹಾಗೆ ಸಂಗ್ರಹವಾದ ಅಫೀಮಿನ ಪ್ರಮಾಣ 58 ಕೆಜಿಗೆ ಏರಿದ್ದು, ಚಿಂತಿತರಾದ ಆಡಳಿತ ಮಂಡಳಿ ಮಾದಕ ದ್ರವ್ಯ ಇಲಾಖೆಗೆ ಪತ್ರ ಬರೆದಿದೆ. ಅಪಾರ ಪ್ರಮಾಣದ ಅಫೀಮು ಸಂಗ್ರಹವಾಗುತ್ತಿದ್ದಂತೆ ದೇವಾಲಯದ ಆಡಳಿತ ಮಂಡಳಿ ನಾರ್ಕೋಟಿಕ್ಸ್ಗೆ ಮಾಹಿತಿ ನೀಡುತ್ತದೆ. ಅದರಂತೆ ದೇವಾಲಯಕ್ಕೆ ಆಗಮಿಸಿದ ಚಿತ್ತೋರ್ಗಢ ಮತ್ತು ನೀಮಚ್ ಕೇಂದ್ರ ಮಾದಕ ದ್ರವ್ಯ ತಂಡ ಕ್ರಮ ಕೈಗೊಂಡು 58.7 ಕೆ.ಜಿ.ಅಫೀಮನ್ನು ವಶಪಡಿಸಿಕೊಂಡಿತು. ವಶಪಡಿಸಿಕೊಂಡ ಅಫೀಮನ್ನು ಪರೀಕ್ಷೆಯ ನಂತರ ನೀಮಚ್ನಲ್ಲಿರುವ ಅಫೀಮು ಕಾರ್ಖಾನೆಯಲ್ಲಿ ಠೇವಣಿ ಇಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನು ಓದಿರಿ : Jaishankar Meets Ukrainian Counterpart On Sidelines Of Munich Security Conference