Davangere News :
ದಾವಣಗೆರೆಯಲ್ಲಿ ಸಾವಯವ ಬೆಲ್ಲದ ಪರಿಷೆ ಹಮ್ಮಿಕೊಳ್ಳಲಾಗಿದೆ. ಇಲ್ಲಿ ತರಹೇವಾರಿ ಬೆಲ್ಲವನ್ನ ಕಂಡು ಜನರು ಮುಗಿಬಿದ್ದು ಖರೀದಿ ಮಾಡುತ್ತಿದ್ದಾರೆ. ಇಲ್ಲಿ 30ಕ್ಕೂ ಹೆಚ್ಚು ತರಹೇವಾರಿ ಬೆಲ್ಲವನ್ನು ಅಲಂಕಾರ ಮಾಡಿ ಪ್ರದರ್ಶನಕ್ಕಿಡಲಾಗಿದೆ. ಫಲಪುಷ್ಪ ಪ್ರದರ್ಶನಕ್ಕಾಗಮಿಸುವ ಜನರನ್ನು ಸಾವಯವ ಬೆಲ್ಲ ಆಕರ್ಷಿಸುತ್ತಿದ್ದು, ಅಷ್ಟೇ ಮಾರಾಟ ಕೂಡ ಆಗ್ತಿದೆ ಎಂದು ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.
“ಬಲ್ಲವನೇ ಬಲ್ಲ ಬೆಲ್ಲದ ರುಚಿಯ” ಎಂಬ ಗಾದೆ ಮಾತಿದೆ. ರುಚಿಗೆ ಹೆಸರಾದ ‘ಬೆಲ್ಲ’ ಆಯುರ್ವೇದ ಔಷಧದ ಗುಣ ಹೊಂದಿರುವುದು ಬಹುತೇಕರಿಗೆ ತಿಳಿದಿಲ್ಲ. ಮಂಡ್ಯ ರೈತರು ಬೆಳೆದ ಕಬ್ಬಿನಲ್ಲಿ ಅವರದ್ದೇ ಆಲೆಮನೆಯಲ್ಲಿ ಸಿದ್ಧವಾಗಿರುವ ಸಾವಯವ ಬೆಲ್ಲವನ್ನು ಮುಂದಿಟ್ಟುಕೊಂಡು ದಾವಣಗೆರೆಯಲ್ಲಿ ಪರಿಷೆ ಮಾಡಲಾಗುತ್ತಿದೆ. ಗ್ಲಾಸ್ ಹೌಸ್ ಅಲ್ಲಿ “ಬೆಲ್ಲದ ಪರಿಷೆ” ಯನ್ನು ಹಮ್ಮಿಕೊಳ್ಳಲಾಗಿದೆ. ವಿವಿಧ ರೀತಿಯ ಬೆಲ್ಲವನ್ನು ಕಂಡು ಜನರು ಮುಗಿಬಿದ್ದು ಖರೀದಿ ಮಾಡ್ತಿದ್ದಾರೆ. ಬೆಲ್ಲದ ಅಲಂಕಾರಕ್ಕೆ ಜನರು ಮನಸೋತಿದ್ದಾರೆ.
30ಕ್ಕೂ ಹೆಚ್ಚು ವಿಧದ ಬೆಲ್ಲವನ್ನು ಇಲ್ಲಿ ಪ್ರದರ್ಶನಕ್ಕಿಡಲಾಗಿದೆ. ಪಿರಮಿಡ್, ಬಸವಣ್ಣ, ಸ್ವಸ್ತಿಕ್, ಯಜ್ಞ ಕುಂಡ, ನಂದಿ ಹೀಗೆ ಸಾಕಷ್ಟು ಆಕಾರಗಳನ್ನು ಬೆಲ್ಲದಲ್ಲೇ ಅರಳಿಸಲಾಗಿದೆ. ಇದು ಜನರ ಮನಸ್ಸಿಗೆ ಮುದ ನೀಡುವಂತಿದೆ. ಐದು ದಿನಗಳ ಕಾಲ ನಡೆಯುವ ಈ ಹಬ್ಬದಲ್ಲಿ ಬೆಲ್ಲದ ಪರಿಷೆ ಜನರನ್ನ ಆಕರ್ಷಿಸುತ್ತಿದೆ. ಇದರಿಂದ ಫಲಪುಷ್ಪ ಪ್ರದರ್ಶನಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಫಲ ಪುಷ್ಪ ಪ್ರದರ್ಶನದಲ್ಲಿ ಆಯೋಜನೆಗೊಂಡಿರುವ ‘ಬೆಲ್ಲದ ಪರಿಷೆ’ ಗೆ ಕೃಷಿ ಇಲಾಖೆ ಕೂಡ ಸಾಥ್ ನೀಡ್ತಿದೆ.
Is the secret of health in jaggery? :
ಸತು, ಕಬ್ಬಿಣ, ಕ್ಯಾಲ್ಸಿಯಂ ಅಂಶವು ಹೇರಳವಾಗಿರುತ್ತದೆ. NCBI (National Center for Biotechnology Information) ವೈಜ್ಞಾನಿಕ ಸಂಶೋಧನೆಯ ಪ್ರಕಾರ, ಬಿಸಿ ನೀರಿನೊಂದಿಗೆ ಬೆಲ್ಲ ಸೇವಿಸುವುದರಿಂದ ರಕ್ತದಲ್ಲಿನ ‘ಹಿಮೋಗ್ಲೋಬಿನ್’ ಪ್ರಮಾಣ ಹೆಚ್ಚಾಗುತ್ತದೆ.ಬೆಲ್ಲದಲ್ಲಿ ಆರೋಗ್ಯದ ಗುಟ್ಟಿದೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ‘ಬೆಲ್ಲ’ದಲ್ಲಿ ವಿಟಮಿನ್ ‘ಸಿ’ ವಿಟಮಿನ್ ‘ಬಿ’ ಮತ್ತು ಜೀವಸತ್ವ ಬಿ6 ಆಗರವಾಗಿದೆ.
ಪೊಟ್ಯಾಷಿಯಂ ಮತ್ತು ಸೋಡಿಯಂನಿಂದ ಸಮೃದ್ಧವಾಗಿರುವ ಬೆಲ್ಲವು ಕೀಲು ನೋವು ಮತ್ತು ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ಆ್ಯಂಟಿ ಟ್ಯಾಕ್ಸಿಕ್ ಸೂಕ್ಷ್ಮ ಪೋಷಕಾಂಶಗಳಿಂದ ಕೂಡಿರುವ ಬೆಲ್ಲವು ಯಕೃತ್ತಿನಲ್ಲಿರುವ ವಿಷಕಾರಕ ವಸ್ತುವನ್ನು ಪರಿಣಾಮಕಾರಿಯಾಗಿ ಹೊರಹಾಕುತ್ತದೆ.
As the deputy director of horticulture department said? :
ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕರಾದ ರಾಘವೇಂದ್ರ ಪ್ರಸಾದ್ ಅವರು ಈಟಿವಿ ಭಾರತದ ಜೊತೆ ಮಾತನಾಡಿ, “ಕೃಷಿ ಇಲಾಖೆ ವತಿಯಿಂದ ಬೆಲ್ಲದ ಪರಿಷೆ ಹಮ್ಮಿಕೊಳ್ಳಲಾಗಿದೆ. ಈ ಬೆಲ್ಲದ ಹಬ್ಬದಲ್ಲಿ ಮಂಡ್ಯದ ರೈತರು ಭಾಗಿಯಾಗಿದ್ದಾರೆ. ಇದರಲ್ಲಿ 30 ಬಗೆಯ ಬೆಲ್ಲದ ವಿಧಗಳಿವೆ.
ಯಾವುದೇ ರಾಸಾಯನಿಕ ಬಳಸದೆ ಈ ಬೆಲ್ಲ ಸಿದ್ಧಪಡಿಸಲಾಗುತ್ತದೆ. ಪರಿಷೆ ಮಾಡಿ ಬೆಲ್ಲವನ್ನು ಅಲಂಕರಿಸಲಾಗಿದ್ದು, ಮಾರಾಟ ಸಹ ಮಾಡುತ್ತಿದ್ದಾರೆ. ಒಂದನೇ ತಾರೀಖಿನವರೆಗೂ ಈ ಬೆಲ್ಲ ಮಾರಾಟ ಮಾಡಲಾಗುತ್ತದೆ. ಮೂವತ್ತು ಬಗೆಯ ಆರ್ಗ್ಯಾನಿಕ್ ಬೆಲ್ಲ, ಔಷಧೀಯ ಗುಣಗಳನ್ನು ಹೊಂದಿರುವ ಬೆಲ್ಲ ಇರಿಸಲಾಗಿದೆ. ಸ್ಟ್ರಚರ್ಗಳಂತೆ ಜೋಡಿಸಿ ಪ್ರದರ್ಶನಕ್ಕಿಡಲಾಗಿದೆ” ಎಂದು ತಿಳಿಸಿದರು.