New Delhi News:
ವಿವಿಧ ಪ್ಲಾರ್ಟ್ಫಾರ್ಮ್ಗಳಲ್ಲಿ ಪ್ರಸಾರವಾಗುವ ಕಂಟೆಂಟ್ಗಳಲ್ಲಿ ಅಶ್ಲೀಲತೆ ನಿಯಂತ್ರಿಸಲು ಎಲ್ಲ OTT ADVISORY ಮತ್ತು ಸಾಮಾಜಿಕ ಮಾಧ್ಯಮಗಳಿಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಒಟಿಟಿ ವೇದಿಕೆಗಳಲ್ಲಿ ಕಾನೂನಿನಡಿ ನಿಷೇಧಿತ ಮತ್ತು ಸಮಾಜದ ಮೇಲೆ ಋಣಾತ್ಮಕ ಪರಿಣಾಮ ಬೀರುವ ಕಾರ್ಯಕ್ರಮ, ಕಂಟೆಂಟ್ಗಳ ಪ್ರಸಾರ ಮಾಡುವುದರ ವಿರುದ್ಧ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಗರಂ ಆಗಿದೆ.
ಯೂಟ್ಯೂಬರ್ ಅಲಹಾಬಾದಿಯಾ ಆಕ್ಷೇಪಾರ್ಹ ಹಾಸ್ಯವು ಭಾರೀ ವಿವಾದಕ್ಕೆ ಕಾರಣವಾಗಿರುವ ನಡುವೆಯೇ, ಒಟಿಟಿಗಳಲ್ಲಿ ಪ್ರಸಾರವಾಗುವ ಅಶ್ಲೀಲ ಕಂಟೆಂಟ್ಗಳ ಮೇಲೆ ನಿಯಂತ್ರಣ ಹೇರಲು ಎಲ್ಲ ಸಾಮಾಜಿಕ ಮಾಧ್ಯಮಗಳಿಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ.
OTT ADVISORY ಯಾವುದೇ ಕಂಟೆಂಟ್ ಪ್ರಸಾರಕ್ಕೂ ಮುನ್ನ ವಯಸ್ಸಿನ ಆಧಾರದ ಮೇಲೆ ವರ್ಗೀಕರಣ ಸೇರಿದಂತೆ ಐಟಿ ನಿಯಮಗಳು 2021ರ ಅಡಿಯಲ್ಲಿ ಸೂಚಿಸಿದ ನೀತಿ ಸಂಹಿತೆಗೆ ಅನುಗುಣವಾಗಿರಬೇಕು ಎಂದು ಒಟಿಟಿ ಪ್ಲಾರ್ಟ್ಫಾರ್ಮ್ಗಳು ಮತ್ತು ಸ್ವಯಂ ನಿಯಂತ್ರಕ ಸಂಸ್ಥೆಗಳಿಗೆ ಮಾರ್ಗಸೂಚಿಯಲ್ಲಿ ಹೇಳಿದೆ.
ಹಾಗೊಂದು ವೇಳೆ ನಿಯಮ, ನೀತಿ ಸಂಹಿತೆಗಳನ್ನು ಉಲ್ಲಂಘಿಸಿ ಸದಭಿರುಚಿರಹಿತ ಕಂಟೆಂಟ್ಗಳನ್ನು ಪ್ರಸಾರ ಮಾಡಿದಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಒಟಿಟಿ ಪ್ಲಾರ್ಟ್ಫಾರ್ಮ್ಗಳ ನಿಯಂತ್ರಕ ಸಂಸ್ಥೆಗೆ ಸಲಹೆ ನೀಡಿದೆ.
Complaint against obscenity:
OTT ADVISORYಗಳಲ್ಲಿ ಪ್ರಸಾರವಾಗುವ ಕಂಟೆಂಟ್ಗಳಲ್ಲಿ ಅಶ್ಲೀಲತೆ ಇದ್ದಲ್ಲಿ, ಅದಕ್ಕೆ ‘ಎ’ ಸರ್ಟಿಫಿಕೇಟ್ ಕಾರ್ಯವಿಧಾನ ಅಳವಡಿಸಬೇಕು. ಸೂಕ್ತ ಎಚ್ಚರಿಕೆಯನ್ನೂ ನೀಡಬೇಕು. ಇಂತಹ ಕಂಟೆಂಟ್ಗಳು ಮಕ್ಕಳ ಗ್ರಹಣಕ್ಕೆ ಸಿಗಬಾರದು ಎಂದೂ ಸಲಹೆ ನೀಡಿದೆ.
ಆನ್‌ಲೈನ್ ಕ್ಯುರೇಟೆಡ್ ಕಂಟೆಂಟ್ (ಒಟಿಟಿ ವೇದಿಕೆಗಳು) ಮತ್ತು ಕೆಲವು ಸಾಮಾಜಿಕ ಮಾಧ್ಯಮಗಳು ಪ್ರಕಟಿಸಿದ ಅಶ್ಲೀಲ, ಅಸಹ್ಯಕರ ಮತ್ತು 18+ ಕಂಟೆಂಟ್ಗಳ ಕುರಿತಂತೆ ಸಂಸತ್ತಿನ ಸದಸ್ಯರು, ಶಾಸನಬದ್ಧ ಸಂಸ್ಥೆಗಳು ಮತ್ತು ಸಾರ್ವಜನಿಕರಿಂದ ದೂರುಗಳನ್ನು ಸ್ವೀಕರಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ.
ಹೀಗಾಗಿ, ಸಾಮಾಜಿಕ ಸ್ವಾಸ್ಥ್ಯಕ್ಕೆ ಮಾರಕವಾಗಿರುವ ಯಾವುದೇ ಕಂಟೆಂಟ್ಗಳನ್ನು ಪ್ರಸಾರ ಮಾಡುವ ಮುನ್ನ ಕಾನೂನಿನ ವಿವಿಧ ನಿಬಂಧನೆಗಳು ಮತ್ತು 2021 ರ ಐಟಿ ನಿಯಮಗಳಲ್ಲಿ ಸೂಚಿಸಲಾದ ನೀತಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. OTT ADVISORY ವಯಸ್ಸಿನ ಆಧಾರಿತ ವರ್ಗೀಕರಣವನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು ಎಂದು ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ.
ಇದನ್ನು ಓದಿರಿ : Unemployed Andhra Pradesh Youth Easy Prey For International Cyber Fraud Gangs