spot_img
spot_img

95 ರೂಪಾಯಿಗೆ ಮಾತ್ರ OTT ಸೇವೆ! ಗ್ರಾಹಕರ ಮನಗೆದ್ದ ಅಗ್ಗದ ಬೆಲೆಯ ಬೆಸ್ಟ್ ಪ್ಲಾನ್ಗಳಿವು…!

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

ಟೆಲಿಕಾಂ ಕಂಪನಿಗಳು ತಮ್ಮ ಪ್ರಿಪೇಯ್ಡ್​​ ಬಳಕೆದಾರರಿಗೆ ರಿಚಾರ್ಜ್​ ಯೋಜನೆಗಳನ್ನು ಪರಿಚಯಿಸುವುದರ ಜೊತೆಗೆ ಕಾಂಪ್ಲಿಮೆಂಟರಿಯಾಗಿ ಓಟಿಟಿ ಚಂದಾದಾರಿಕೆಯನ್ನು ನೀಡುತ್ತಿವೆ. ಅದರಲ್ಲೂ ಏರ್​ಟೆಲ್ (Airtel)​, ವೊಡಾಫೋನ್​​ ಐಡಿಯಾ (Vodafone Idea), ಜಿಯೋ (Jio) ತನ್ನ ಗ್ರಾಹಕರಿಗಾಗಿ ಈ ಸೇವೆಯ ಪ್ರಯೋಜನವನ್ನು ಒದಗಿಸುತ್ತಾ ಬಂದಿದೆ. ಬಹುತೇಕರು ದುಬಾರಿ ಯೋಜನೆಗಳ ಮೂಲಕ ಓಟಿಟಿ ಸೇವೆಯನ್ನು ಆನಂದಿಸುತ್ತಾರೆ.

ಆದರೆ ಅದಕ್ಕಿಂತಲೂ ಕಡಿಮೆ ಬೆಲೆಗೆ ಉಚಿತ ಓಟಿಟಿ ಪ್ರಯೋಜನವನ್ನು ಪಡೆಯಬಹುದಾಗಿದೆ. 95 ರೂಪಾಯಿ ಮೂಲಕ ಈ ಸೇವೆಯನ್ನು ಪಡೆಯಬಹುದಾಗಿದೆ. ಅಂದಹಾಗೆಯೇ ಕಡಿಮೆ ಬೆಲೆಗೆ ಸಿಗುವ ವಿವಿಧ ಕಂಪನಿಗಳ ಓಟಿಟಿ ಯೋಜನೆಗಳ ಬಗ್ಗೆ ಮಾಹಿತಿ ಇಲ್ಲಿದೆ.

ಏರ್​ಟೆಲ್​

ಜನಪ್ರಿಯ ಏರ್​​ಟೆಲ್​​ 149 ರೂಪಾಯಿ ಯೋಜನೆಯನ್ನು ಅಳವಡಿಸುವ ಮೂಲಕ ಓಟಿಟಿ ಪ್ರಯೋಜನವನ್ನು ನೀಡುತ್ತಿದೆ. ಇದರ ಮೂಲಕ ತಿಂಗಳಿಗೆ 22ಕ್ಕೂ ಹೆಚ್ಚು ಓಟಿಟಿ ಸೇವೆ ಪಡೆಯಬಹುದಾಗಿದೆ.

ಅಂದ ಹಾಗೆಯೇ ಈ ಪ್ಲಾನ್​ ಅಳವಡಿಸಿಕೊಂಡರೆ 1GB ಹೆಚ್ಚುವರಿ ಡೇಟಾ ಸಿಗುತ್ತದೆ. ಆದರೆ ಇದರಲ್ಲಿ ಯಾವುದೇ ಕರೆ ಅಥವಾ ಎಸ್​​ಎಮ್​ಎಸ್​​ ಪ್ರಯೋಜನಗಳಿರುವುದಿಲ್ಲ. ಇದಲ್ಲದೆ, ಎಕ್ಸ್​​​ಸ್ಟ್ರೀಮ್​​ ಪ್ಲೇ ಪ್ರೀಮಿಯಂ ಚಂದಾದಾರಿಕೆಯನ್ನು 30 ದಿನಗಳವರೆಗೆ ನೀಡುತ್ತದೆ.

ಜಿಯೋ

ರಿಲಯನ್ಸ್​ ಜಿಯೋದ 175 ರೂಪಾಯಿ ಯೋಜನೆಯನ್ನ ಅಳವಡಿಸಿಕೊಂಡರೆ 10 ಓಟಿಟಿ ಸೇವೆಯನ್ನು ಪಡೆಯಬಹುದಾಗಿದೆ. ಆದರೆ ಈ ಯೋಜನೆ 28 ದಿನಗಳ ಮಾನ್ಯತೆ ಪಡೆದಿದೆ. 10GB ಡೇಟಾ ಒದಗಿಸುತ್ತದೆ. ಇದಲ್ಲದೆ, ಜಿಯೋ ಸಿನಿಮಾ ಪ್ರೀಮಿಯಂ, ಜಿಯೋ ಟಿವಿ ಅಪ್ಲಿಕೇಶನ್​ ಮೂಲಕ ಓಟಿಟಿ ಸೇವೆ ವೀಕ್ಷಿಸುವ ಅವಕಾಶವಿದೆ.

ವೊಡಾಫೋನ್​​ ಐಡಿಯಾ

ವೊಡಾಫೋನ್​​ ಐಡಿಯಾ 95 ರೂಪಾಯಿಯ ಪ್ಲಾನ್​ ರಿಚಾರ್ಜ್​ ಮಾಡಿದರೆ 4GB ಡೇಟಾ ಸಿಗುತ್ತದೆ. 14 ದಿನಗಳ ಮಾನ್ಯತೆ ಹೊಂದಿದೆ. ಗ್ರಾಹಕರು 28 ದಿನಗಳವರೆಗೆ ಸೋನಿಲೈವ್​ ಚಂದಾದಾರಿಕೆಯನ್ನು ಪಡೆಯಬಹುದಾಗಿದೆ. ಅಂದಹಾಗೆಯೇ ಈ ಪ್ರೀಮಿಯಂ ಪ್ಯಾಕ್​ನಲ್ಲಿ ಯಾವುದೇ ಕರೆ ಅಥವಾ SMS​​ ಪ್ರಯೋಜನ ಸಿಗುವುದಿಲ್ಲ.

 

WhatsApp Group Join Now
Telegram Group Join Now
Instagram Account Follow Now
spot_img

Related articles

ಬಿಗ್ ಬಾಸ್ ಮನೆಯಲ್ಲಿ ಒಂದೇ ಟಾಸ್ಕ್​ನಲ್ಲೇ ವೀಕ್ಷಕರ ಹೃದಯ ಗೆದ್ದ ಶೋಭಾ ಶೆಟ್ಟಿ

ಕನ್ನಡದ ಬಿಗ್​ಬಾಸ್​ ಸೀಸನ್​ 11ರ ಆಟದ ಕಿಚ್ಚು ಜೋರಾಗಿ ಹೊತ್ತಿ ಉರಿಯುತ್ತಿದೆ. ಕನ್ನಡ ಬಿಗ್​ಬಾಸ್​ನಲ್ಲಿ​ ಇತಿಹಾಸದಲ್ಲೇ ಬಂದ ಮೊದಲ ದಿನನೇ ಯಾವ ವೈಲ್ಡ್​ ಕಾರ್ಡ್...

ಸಾರ್ವಜನಿಕ ಆಸ್ಪತ್ರೆಗಳಲ್ಲಿ ಶೇ. 20ರಷ್ಟು ಸೇವಾ ಶುಲ್ಕ ಹೆಚ್ಚಳ

ಮಂಗಳೂರು : ಶುಲ್ಕ ಹೆಚ್ಚಳ ಮಾಡುವ ಮೂಲಕ ಗ್ಯಾರಂಟಿಗಳಿಗೆ ಹಣ ಹೊಂದಿಸಬೇಕಾದ ಪರಿಸ್ಥಿತಿ ಸರ್ಕಾರಕ್ಕೆ ಎದುರಾಗಿಲ್ಲ. ಆಸ್ಪತ್ರೆಗಳಲ್ಲಿ ಸಂಗ್ರಹವಾಗುವ ಸೇವಾ ಶುಲ್ಕವನ್ನ ಸರ್ಕಾರ ತೆಗೆದುಕೊಳ್ಳುವುದಿಲ್ಲ...

20 ಬೋಗಿಗಳ ಹೊಸ ವಂದೇ ಭಾರತ್‌ ರೈಲು; ಕರ್ನಾಟಕದ ಈ ಮಾರ್ಗದಲ್ಲಿ ಸಂಚಾರ

ಬೆಂಗಳೂರು: ಬೇಡಿಕೆ ಹಿನ್ನೆಲೆ ತಿರುವನಂತಪುರ - ಮಂಗಳೂರು - ತಿರುವನಂತಪುರ ಮಾರ್ಗದಲ್ಲಿ 20 ಬೋಗಿಯ ವಂದೇ ಭಾರತ್‌ ರೈಲು ಓಡಿಸಲು ನಿರ್ಧರಿಸಲಾಗಿದೆ. ಮಂಗಳೂರು-ತಿರುವನಂತಪುರ ವಂದೇ ಭಾರತ್‌...

ರೈತ ಬೆಳೆದ ರೈತ ಫುಲ್‌ ಖುಷ್‌! ಕಲಬುರಗಿಯಲ್ಲಿ ಹೆಚ್ಚಿನ ಖರೀದಿ ಕೇಂದ್ರ ತೆರೆಯಲು ರೈತರ ಆಗ್ರಹ

ಕಲಬುರಗಿ: ಕಲಬುರಗಿ ಜಿಲ್ಲೆಯಲ್ಲಿ 12 ಹತ್ತಿ ಖರೀದಿ ಕೇಂದ್ರ ತೆರೆಯಲಾಗಿದೆ. ನ. 8 ರಿಂದ ಹತ್ತಿ ಖರೀದಿ ಆರಂಭ ಮಾಡಲಾಗಿದ್ದು, ನವೆಂಬರ್ 19 ರ...