Peshawar (Pakistan):
ಇಲ್ಲಿನ ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ನೌಶೆರ್ ಜಿಲ್ಲೆಯ ಮದರಸಾವೊಂದರಲ್ಲಿ ಶುಕ್ರವಾರದ ಪ್ರಾರ್ಥನೆಯ ವೇಳೆ ಆತ್ಮಾಹುತಿ ಬಾಂಬ್ ಸ್ಫೋಟಗೊಂಡಿದ್ದು, ಐದು ಮಂದಿ ಸಾವನ್ನಪ್ಪಿದ್ದು, 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಖೈಬರ್ ಪುಖ್ತುಂಖ್ವಾ ಮುಖ್ಯ ಕಾರ್ಯದರ್ಶಿ ಶಹಬ್ ಆಲಿ ಶಾ ಘಟನೆಯ ಕುರಿತು ಪ್ರತಿಕ್ರಿಯಿಸಿ, “ಬಾಂಬ್ ಸ್ಫೋಟದಲ್ಲಿ ಮದರಸಾ ಮೇಲ್ವಿಚಾರಕರು ಹಾಗೂ ಜಮಿಯರ್ ಉಲೇಮಾ ಇಸ್ಲಾಂ ಹಮಿದುಲ್ ಹಕ್ಹಕ್ಕಾನಿ ಸಾವನ್ನಪ್ಪಿದ್ದಾರೆ” ಎಂದು ದೃಢಪಡಿಸಿದ್ದಾರೆ.
ಖೈಬರ್ ಪುಖ್ತುಂಖ್ವಾ ಐಜಿಪಿ ಝುಲಫಿಕರ್ ಹಮೀದ್ ಮಾತನಾಡಿ, “ಇದು ಆತ್ಮಾಹುತಿ ಬಾಂಬ್ ದಾಳಿ. ಹಮಿದುಲ್ ಹಕ್ ಅವರನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ. ಹಮಿದುಲ್ ಹಕ್ ಅವರಿಗೆ ಭದ್ರತೆಯಾಗಿ ಆರು ಜನ ಸಿಬ್ಬಂದಿಯನ್ನು ನೀಡಲಾಗಿತ್ತು” ಎಂದರು.
ನೌಶೇರಾ ಜಿಲ್ಲೇಯ ಡಿಪಿಒ ಅಬ್ದುರ್ ರಶೀದ್ ಪ್ರತಿಕ್ರಿಯಿಸಿ, “ಶುಕ್ರವಾರದ ಜುಮ್ಮ ಪ್ರಾರ್ಥನೆ ವೇಳೆ ಬಾಂಬ್ ಸ್ಪೋಟಗೊಂಡಿದೆ. ರಕ್ಷಣಾ ತಂಡಗಳು ಕಾರ್ಯಾಚರಣೆ ನಡೆಸುತ್ತಿವೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ” ಎಂದು ಹೇಳಿದರು.