spot_img
spot_img

PAKISTAN TTP : ಟಿಟಿಪಿ ಉಗ್ರರಿಂದ ಪರಮಾಣು ಆಯೋಗದ 16 ಕಾರ್ಮಿಕರ ಅಪಹರಣ,

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

Islamabad News:

PAKISTAN ದಲ್ಲಿ ಟಿಟಿಪಿ ಉಗ್ರರ ಅಟ್ಟಹಾಸ ಮುಂದುವರೆದಿದ್ದು, 16 ಕಾರ್ಮಿಕರನ್ನು ಅಪಹರಿಸಲಾಗಿದೆ.ಅಪಹರಣದ ಮಾಹಿತಿ ತಿಳಿಯುತ್ತಿದ್ದಂತೆಯೇ ಶೋಧ ಕಾರ್ಯಾಚರಣೆ ಆರಂಭಿಸಿದ ಪೊಲೀಸರು ಎಂಟು ಒತ್ತೆಯಾಳುಗಳನ್ನು ಯಶಸ್ವಿಯಾಗಿ ರಕ್ಷಿಸಿದ್ದಾರೆ. ನಿರಂತರ ಉಗ್ರಗಾಮಿ ಚಟುವಟಿಕೆಗಳಿಂದ ಬಾಧಿತವಾಗಿರುವ ಲಕ್ಕಿ ಮಾರ್ವತ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.

PAKISTAN ದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ತೆಹ್ರೀಕ್-ಇ-ತಾಲಿಬಾನ್ PAKISTAN (ಟಿಟಿಪಿ) ಬಂಡುಕೋರರು ಪಾಕಿಸ್ತಾನ ಪರಮಾಣು ಶಕ್ತಿ ಆಯೋಗದ (ಪಿಎಇಸಿ) 16 ಉದ್ಯೋಗಿಗಳನ್ನು ಅಪಹರಿಸಿದ್ದಾರೆ ಎಂದು ವರದಿಯಾಗಿದೆ. ಖಬುಲ್ ಖೇಲ್ ಅಣುಶಕ್ತಿ ಗಣಿಗಾರಿಕೆ ಯೋಜನಾ ಸ್ಥಳದ ಕಡೆಗೆ ಪ್ರಯಾಣಿಸುತ್ತಿದ್ದ ಉದ್ಯೋಗಿಗಳನ್ನು ಭಾರಿ ಶಸ್ತ್ರಸಜ್ಜಿತ ಉಗ್ರರು ರಸ್ತೆ ಮಧ್ಯದಲ್ಲಿ ತಡೆದು ದಾಳಿ ನಡೆಸಿದ್ದಾರೆ.

ನಂತರ ಅವರೆಲ್ಲರನ್ನು ಅಪಹರಿಸಿ ಅವರು ಪ್ರಯಾಣಿಸುತ್ತಿದ್ದ ವಾಹನಕ್ಕೆ ಬೆಂಕಿ ಇಟ್ಟು ಸ್ಥಳದಿಂದ ಪರಾರಿಯಾಗಿದ್ದಾರೆ.ಘಟನೆಯ ಮಾಹಿತಿ ಪಡೆದ ಸ್ಥಳೀಯ ಪೊಲೀಸರು ತಕ್ಷಣ ಕಾರ್ಯಾಚರಣೆ ನಡೆಸಿ ಎಂಟು ಜನರನ್ನು ರಕ್ಷಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆಯ ವೇಳೆ ಮೂವರು ಗಾಯಗೊಂಡಿದ್ದು, ಅದರಲ್ಲಿ ಓರ್ವನ ಸ್ಥಿತಿ ಗಂಭೀರವಾಗಿದೆ.

ಇನ್ನುಳಿದ ಒತ್ತೆಯಾಳುಗಳನ್ನು ರಕ್ಷಿಸಲು ಕಾರ್ಯಾಚರಣೆ ಮುಂದುವರೆದಿದೆ.ಪಾಕಿಸ್ತಾನದ ಜೈಲುಗಳಲ್ಲಿರುವ ಟಿಟಿಪಿ ಕೈದಿಗಳನ್ನು ಬಿಡುಗಡೆ ಮಾಡುವುದು ಸೇರಿದಂತೆ ಸಂಘಟನೆಯ ಇತರ ಬೇಡಿಕೆಗಳನ್ನು ಈಡೇರಿಸುವ ಮೂಲಕ ತಮ್ಮನ್ನು ಬಿಡುಗಡೆ ಮಾಡಿಸಿಕೊಳ್ಳಬೇಕೆಂದು ಒತ್ತೆಯಾಳುಗಳು ವೀಡಿಯೊದಲ್ಲಿ ಮನವಿ ಮಾಡಿರುವುದು ಕಾಣಿಸುತ್ತದೆ.

ವೀಡಿಯೊ ಅಥವಾ ಉಗ್ರಗಾಮಿಗಳ ಹೇಳಿಕೆಗಳ ಸಾಚಾತನದ ಬಗ್ಗೆ ಇನ್ನಷ್ಟೇ ಪರಿಶೀಲನೆ ನಡೆಯಬೇಕಿದೆ.ಅಪಹರಣದ ಜವಾಬ್ದಾರಿ ಹೊತ್ತುಕೊಂಡಿರುವ ಟಿಟಿಪಿ, ಅಪಹರಣಕ್ಕೊಳಗಾದ ಉದ್ಯೋಗಿಗಳನ್ನು ತೋರಿಸುವ ವೀಡಿಯೊವನ್ನು ಬಿಡುಗಡೆ ಮಾಡಿದೆ.ಸರ್ಕಾರಿ ಮತ್ತು ಖಾಸಗಿ ಉದ್ಯೋಗಿಗಳಿಗೆ ಈ ಪ್ರದೇಶದಲ್ಲಿ ಆಗಾಗ ಭದ್ರತಾ ಅಪಾಯ ಎದುರಾಗುತ್ತಿರುವುದನ್ನು ಈ ಘಟನೆಯು ಎತ್ತಿ ತೋರಿಸಿದೆ.

ಅಪಹರಣಕ್ಕೊಳಗಾದ ಉದ್ಯೋಗಿಗಳು ಇಂಧನ, ಕೃಷಿ ಮತ್ತು ಔಷಧದಂತಹ ಕ್ಷೇತ್ರಗಳಲ್ಲಿ ಶಾಂತಿಯುತ ಪರಮಾಣು ಬಳಕೆಯನ್ನು ಅಭಿವೃದ್ಧಿಪಡಿಸುವ ಉದ್ದೇಶದ ಪಿಎಇಸಿ ಅಡಿಯಲ್ಲಿನ ಗಣಿಗಾರಿಕೆ ಯೋಜನೆಗಳಲ್ಲಿ ಕೆಲಸ ಮಾಡುವವರಾಗಿದ್ದಾರೆ.ಇತ್ತೀಚಿನ ತಿಂಗಳುಗಳಲ್ಲಿ PAKISTAN ದಲ್ಲಿ ಉಗ್ರಗಾಮಿ ಚಟುವಟಿಕೆಗಳು ವ್ಯಾಪಕವಾಗುತ್ತಿವೆ. ಈ ಅಪಹರಣ ಘಟನೆಯ ಒಂದು ದಿನ ಮೊದಲು, ಬಲೂಚ್ ಲಿಬರೇಶನ್ ಆರ್ಮಿ (ಬಿಎಲ್ಎ) ಯ ಪ್ರತ್ಯೇಕತಾವಾದಿ ಉಗ್ರಗಾಮಿಗಳು ಬಲೂಚಿಸ್ತಾನದಲ್ಲಿ ಸರ್ಕಾರಿ ಕಚೇರಿಗಳು ಮತ್ತು ದುರ್ಗಮ ಪ್ರದೇಶದ ಜಿಲ್ಲೆಗಳಲ್ಲಿನ ಬ್ಯಾಂಕ್ ಮೇಲೆ ದಾಳಿ ಮಾಡಿದ್ದರು.

ಈ ಘಟನೆಗಳಲ್ಲಿ ಯಾವುದೇ ಸಾವುನೋವುಗಳು ವರದಿಯಾಗಿಲ್ಲವಾದರೂ, ಈ ದಾಳಿಯು ದೇಶಾದ್ಯಂತ ಭಯೋತ್ಪಾದಕ ಕೃತ್ಯಗಳ ತೀವ್ರತೆಯನ್ನು ಪ್ರತಿಬಿಂಬಿಸುತ್ತದೆ. ಟಿಟಿಪಿ ಮತ್ತು ಬಲೂಚ್ ದಂಗೆಕೋರರು ಅಫ್ಘಾನಿಸ್ತಾನದ ಬೆಟ್ಟಗುಡ್ಡಗಳಲ್ಲಿ ಅವಿತುಕೊಂಡು ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದುPAKISTAN ಅಧಿಕಾರಿಗಳು ಆರೋಪಿಸಿದ್ದಾರೆ.

ಇದನ್ನು ಓದಿರಿ : HOMELESS PEOPLE DIED : ದೆಹಲಿಯಲ್ಲಿ 474 ನಿರಾಶ್ರಿತರು ಸಾವು,

 

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

KARAN NAIR : ದೇಶಿ ಕ್ರಿಕೆಟ್ನಲ್ಲಿ ಇತಿಹಾಸ ಸೃಷ್ಟಿಸಿದ ಕನ್ನಡಿಗ;

Karun Nair News: ದೇಶಿ ಕ್ರಿಕೆಟ್​ನಲ್ಲಿ ಬ್ಯಾಕ್​ ಟು ಬ್ಯಾಕ್ ಅಜೇಯ​ ಶತಕ ಸಿಡಿಸಿ ಕನ್ನಡಿಗ ನಾಯರ್ ದಾಖಲೆಯನ್ನು ಬರೆದಿದ್ದಾರೆ. ​ವೀರೇಂದ್ರ ಸೆಹ್ವಾಗ್​ ಬಳಿಕ ಟೆಸ್ಟ್​ನಲ್ಲಿ...

NUWA PEN CES 2025 : ಟೆಕ್ ಲೋಕದಲ್ಲಿ ಮತ್ತೊಂದು ಅದ್ಭುತ:

Nueva Pen Chess 2025 News: ಡಿಜಿಟಲ್​ ಫೀಚರ್​ನಿಂದ ತುಂಬಿರುವ NUWA PEN ​ ಈಗ ಎಲ್ಲರ ಗಮನ ಸೆಳೆಯುತ್ತಿದೆ. ಇದರಿಂದ ಬರೆದ ಒಂದೊಂದು ಅಕ್ಷರವೂ...

RAJATH KISHAN : ಉಸ್ತುವಾರಿಯಲ್ಲಿ ಎಡವಿದ ರಜತ್ ಬೆವರಿಳಿಸಿದ ಕಿಚ್ಚ ಸುದೀಪ್:

Bigg Boss News: ನನ್ನದು ನೇರನುಡಿ, ಮೋಸ ಮಾಡೋನಲ್ಲ, ಬಕೇಟ್​ ಹಿಡಿಯೋನಲ್ಲ ಅನ್ನೋ RAJATH KISHAN​​ ಅವರ ಉಸ್ತುವಾರಿ ಬಗ್ಗೆ ಹಲವು ಪ್ರಶ್ನೆಗಳೆದ್ದಿದ್ದವು. ಇದೀಗ ಕಿಚ್ಚನ...

EMERGENCY FILM SPECIAL SCREENING : ನಾಗ್ಪುರದಲ್ಲಿ ಕಂಗನಾ, ಅನುಪಮ್ ಖೇರ್ ಜೊತೆ ಕುಳಿತು

Nagpur News: ನಾಗ್ಪುರದಲ್ಲಿ ಸಚಿವ ನಿತಿನ್ ಗಡ್ಕರಿ 'ಎಮರ್ಜೆನ್ಸಿ' ಸಿನಿಮಾ ವೀಕ್ಷಿಸಿದರು.ಈ ಬಗ್ಗೆ ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್ ಮಾಡಿರುವ ಕಂಗನಾ, FILMದ ವಿಶೇಷ ಸ್ಕ್ರೀನಿಂಗ್​ನ ಕೆಲ FILMಗಳನ್ನು...