spot_img
spot_img

ಏರ್​​ಪೋರ್ಟ್​ನ ಅವ್ಯವಸ್ಥೆ ಬಗ್ಗೆ ಪ್ರಯಾಣಿಕನ ಅಕ್ರೋಶ

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

ದೇವನಹಳ್ಳಿ (ಬೆಂಗಳೂರು ಗ್ರಾಮಾಂತರ): ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟ್ಸಾಕ್ಸಿಗಾಗಿ ಗಂಟೆಗಟ್ಟಲೆ ಕಾದು ಸುಸ್ತಾದ ಪ್ರಯಾಣಿಕರೊಬ್ಬರು ತಮ್ಮ ಅಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ವೃತ್ತಿಯಲ್ಲಿ ಚಾರ್ಟರ್ಡ್​ ಅಕೌಂಟೆಂಟ್ ಆಗಿರುವ ಅವರು ಸೋಮವಾರ ರಾತ್ರಿ ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಟರ್ಮಿನಲ್ 1 ರಲ್ಲಿ ಲ್ಯಾಂಡ್ ಆಗಿದ್ದರು. ಬೆಂಗಳೂರು ಸಿಟಿಗೆ ಪ್ರಯಾಣಿಸಬೇಕಿದ್ದ ಅವರು ಟ್ಯಾಕ್ಸಿಯನ್ನು ಅವಲಂಬಿಸಿದ್ದರು.

ಟ್ಯಾಕ್ಸಿಗಾಗಿ ಬಂದಾಗ ಸ್ಥಳದಲ್ಲಿ ಉದ್ದನೆಯ ಸಾಲು ಇದ್ದು, ಈ ಸಾಲಲ್ಲಿ ನಿಂತು ಒಂದು ತಾಸಿಗೂ ಹೆಚ್ಚು ಕಾಲ ತಮ್ಮ ಟ್ಯಾಕ್ಸಿಗಾಗಿ ಕಾದಿರುವುದಾಗಿ ತಿಳಿಸಿದ್ದಾರೆ.

ಕೊನೆಗೂ ತಮ್ಮ ಸರದಿಯ ಉಬರ್ ಕ್ಯಾಬ್ ಬಂದಿದೆ. ಆದರೆ ಉಬರ್ ಕ್ಯಾಬ್ ಚಾಲಕ “ನಾನು ಯಲಹಂಕ ಮಾತ್ರ ಹೋಗುವುದು, ಯಲಹಂಕಕ್ಕೆ ಹೋಗುವವರು ಬಂದು ಕಾರಿನಲ್ಲಿ ಕುಳಿತುಕೊಳ್ಳಿ” ಎಂದಿದ್ದಾನೆ ಎಂದು ತಮಗಾದ ಕೆಟ್ಟ ಅನುಭವವನ್ನು ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಚಾರ್ಟರ್ಡ್​​ ಅಕೌಂಟೆಂಟ್ ಅಭಿಪ್ರಾಯಕ್ಕೆ ಎಕ್ಸ್​ನಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದೊಂದು ಟ್ಯಾಕ್ಸಿ ಮಾಫಿಯಾ, ಅವಶ್ಯಕತೆಯನ್ನು ಸೃಸ್ಟಿಸಿ ಹೆಚ್ಚು ಸುಲಿಗೆ ಮಾಡುವ ಕಾರಣಕ್ಕೆ ಈ ತಂತ್ರವನ್ನು ಬಳಸಲಾಗುತ್ತಿದೆ ಎಂದು ಕೆಲವರು ಅಭಿಪ್ರಾಯ ಹಂಚಿಕೊಂಡಿದ್ದಾರೆ. ಮತ್ತೆ ಕೆಲವರು ಬಿಎಂಟಿಸಿ ಸಂಸ್ಥೆಯ ವಾಯುವಜ್ರ ನಗರದ ಎಲ್ಲಾ ಭಾಗಗಳಿಗೂ ಸಂಪರ್ಕಿಸುತ್ತಿವೆ. ಟ್ಯಾಕ್ಸಿಗಿಂತ ವಾಯುವಜ್ರ ಉತ್ತಮವಾಗಿದೆ ಎಂದು ಸಲಹೆ ನೀಡಿದ್ದಾರೆ.

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

ಮೀನುಗಾರಿಕೆಗೆ ಕೇಂದ್ರದಿಂದ ₹4,969 ಕೋಟಿ ಅನುದಾನ

ನವದೆಹಲಿ: 4,969.62 ಕೋಟಿ ರೂ.ಗಳ ಪ್ರಸ್ತಾವನೆಗಳಿಗೆ ಕೇಂದ್ರದ ಮೀನುಗಾರಿಕೆ ಇಲಾಖೆ ಅನುಮೋದನೆ ನೀಡಿದೆ. ಸಣ್ಣ ಮೀನುಗಾರ ಸಮುದಾಯಗಳು ಹಾಗೂ ಸಾಂಪ್ರದಾಯಿಕ ಮೀನುಗಾರರ ಅಭಿವೃದ್ಧಿಗಾಗಿ ಮತ್ತು ಅವರ...

ಚಂದ್ರಶೇಖರ ಸ್ವಾಮೀಜಿ ವಿರುದ್ಧ ಎಫ್.ಐ.ಆರ್. : ಸಿದ್ದರಾಮಯ್ಯ

ಬೆಂಗಳೂರು : ಚಂದ್ರಶೇಖರ ಸ್ವಾಮೀಜಿ ಅವರ ಪ್ರಕರಣದಲ್ಲಿ ಪೊಲೀಸರು ಕಾನೂನಿನ ದೃಷ್ಟಿಯಲ್ಲಿ ಏನು ಮಾಡಬೇಕೋ ಅದನ್ನು ಮಾಡುತ್ತಾರೆ. ಕಾನೂನಿನ ಚೌಕಟ್ಟಿನೊಳಗೆ ಬಂದರೆ ಕ್ರಮ ತೆಗೆದುಕೊಳ್ಳಲಾಗುತ್ತದೆ. ಇಲ್ಲವಾದರೆ...

ಶಾಂತಿ, ಸೌಹಾರ್ದತೆ ಕಾಪಾಡಬೇಕು : ಸಂಭಲ್ ಜಾಮಾ ಮಸೀದಿ

ಹೊಸದಿಲ್ಲಿ: ಸಂಭಲ್ ಜಾಮಾ ಮಸೀದಿಯ ಆವರಣದಲ್ಲಿನ ಸಮೀಕ್ಷೆಗೆ ಸುಪ್ರೀಂಕೋರ್ಟ್ ತಡೆ ನೀಡಿದ್ದು, ಶಾಂತಿ ಮತ್ತು ಸೌಹಾರ್ದತೆ ಕಾಪಾಡುವಂತೆ ಹೇಳಿದೆ. ವಿಚಾರಣಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ಅಲಹಾಬಾದ್...

99.17 crore released to Karnataka

The central government has taken steps to globally develop major tourist destinations that are not so popular in...