ಸಾಮಾನ್ಯವಾಗಿ ರೈಲ್ವೆ ಸ್ಟೇಷನ್ ಗೆ ತೆರೆಳಲು ಟ್ರೈನ್ ಟಿಕೆಟ್ ಇದ್ರೆ ಪ್ಲಾಟ್‌ಫಾರ್ಮ್ ಟಿಕೆಟ್ ಕೂಡ ಅವಶ್ಯಕತೆ ಇರಲಿಲ್ಲ
ಸಾಮಾನ್ಯವಾಗಿ ವಿದೇಶಕ್ಕೆ ಹೋಗುವಾಗ ಪಾಸ್‌ಪೋರ್ಟ್, ವೀಸಾ ಬೇಕು.
ಇತ್ತೀಚೆಗೆ ನಮ್ಮ ಇಂಡಿಯಾದ ಲಾಟರಿ ಅನ್ನೋ ಊರಿನಲ್ಲಿರುವ ಈ ಸ್ಟೇಷನ್‌ಗೆ ಹೋಗಲು ಪಾಸ್‌ಪೋರ್ಟ್ ಕಡ್ಡಾಯವಾಗಿದೆ. ಆ ಸ್ಟೇಷನ್ ಇಂಡಿಯಾ-ಪಾಕಿಸ್ತಾನ್ ಗಡಿಯಲ್ಲಿ ಇರುವ ಇಂಡಿಯಾ-ಪಾಕಿಸ್ತಾನ್ ರೈಲು ಮಾರ್ಗದಲ್ಲಿ ಇಂಡಿಯಾ ವ್ಯಾಪ್ತಿಗೆ ಬರುವ ಕೊನೆಯ ಸ್ಟೇಷನ್ ಆಗಿರುವುದರಿಂದ ಪಾಸ್ ಪೋರ್ಟ್ ಕಡ್ಡಾಯವಾಗಿದೆ.
ಪಂಜಾಬ ರಾಜ್ಯದ ಅಮೃತ್ ಸರ್ ಜಿಲ್ಲೆಯಲ್ಲಿರುವ ಅಟಾರಿಯು ಸಿಖ್ ಸಾಮ್ರಾಜ್ಯದಲ್ಲಿ ಜನರಲ್ ಆಗಿದ್ದ ಶ್ಯಾಮ್ ಸಿಂಗ್ ಅಟಾರಿವಾಲಾ ಹೆಸರಿನಲ್ಲಿ ಅವ್ರ್ ಚಿರ ನೆನಪಿಗೋಸ್ಕರ ಸ್ಟೇಷನ್ ಗೆ ಅಟಾರಿ ಶ್ಯಾಮ್ ಸಿಂಗ್ ರೈಲ್ವೆ ಸ್ಟೇಷನ್ ಮೇ 2015 ರಲ್ಲಿ ಪಂಜಾಬ್ ಸರ್ಕಾರ ಬದಲಾಯಿಸಿತು. ಆದ್ದರಿಂದ ಈ ಸ್ಟೇಷನ್ ಗೆ ತಲಪಲು ಭಾರತೀಯರಿಗೆ ಇಂಡಿಯನ್ ಪಾಸ್‌ಪೋರ್ಟ್ ಜೊತೆಗೆ ಪಾಕಿಸ್ತಾನ್ ವೀಸಾ ಕಡ್ಡಾಯ ಅಳವಡಿಸಲಾಗಿದೆ.
ಟೇಷನ್ ನಲ್ಲಿ ಸೇನಾ ಭದ್ರತೆ ಇರುವುದರಿಂದ ಪ್ರಯಾಣಿಕರ ಪಾಸ್‌ಪೋರ್ಟ್ ಮತ್ತು ವೀಸಾ ಪರಿಶೀಲಿಸಿ ಪ್ರವೇಶಿಸಲು ಅವಕಾಶ ದೊರಕಿಸಿ ಕೊಡುತ್ತಾರೆ. 1862 ರಲ್ಲಿ ಪ್ರಾರಂಭವಾದ ಈ ಸ್ಟೇಷನ್ ಗೆ ವಿದ್ಯುತ್ ರೈಲು ಮಾರ್ಗವೂ ಇದೆ.
ಪ್ರಸ್ತುತ ಅಟಾರಿ ಸ್ಟೇಷನ್‌ನಿಂದ ನಾಲ್ಕು ರೈಲುಗಳು ಮಾತ್ರ ಓಡಾಡುತ್ತಿವೆ. ಅದರಲ್ಲಿ ಒಂದು ಸಮ್‌ಝೌತಾ ಎಕ್ಸ್‌ಪ್ರೆಸ್. ಇದು ದೆಹಲಿಯಿಂದ ಅಟಾರಿಗೆ ವಾರಕ್ಕೆ ಎರಡು ದಿನ ಓಡಾಡುತ್ತದೆ. ಅಮೃತ್‌ಸರ್‌ನಿಂದ ಎರಡು ಪ್ಯಾಸೆಂಜರ್ ರೈಲುಗಳು, ಜಬಲ್‌ಪುರದಿಂದ ಒಂದು ವಿಶೇಷ ರೈಲು ಓಡಾಡುತ್ತದೆ. ಈ ಸ್ಟೇಷನ್‌ನಲ್ಲಿ ಮೂರು ಪ್ಲಾಟ್‌ಫಾರ್ಮ್‌ಗಳಿವೆ.
WhatsApp Group
Join Now
Telegram Group
Join Now
Instagram Account
Follow Now
Facebook Page
Follow Now