spot_img
spot_img

PATALKOT NEWS – ಬೆಳಗ್ಗೆ 11ಕ್ಕೆ ಸೂರ್ಯೋದಯ, ಮಧ್ಯಾಹ್ನ 3ಕ್ಕೆ ಕತ್ತಲು

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

PATALKOT :

ಈ ಊರಿನಲ್ಲಿ ದಿನದಲ್ಲಿ ಕೇವಲ 5 ಗಂಟೆಗಳ ಕಾಲ ಮಾತ್ರ ಹಗಲು ಇರುತ್ತದೆ. ಇಲ್ಲಿನ ಆದಿವಾಸಿಗಳಿಗೆ ಅರಣ್ಯವೇ ಜೀವನಾಧಾರವಾಗಿದೆ.ಈ ಊರಿನಲ್ಲಿ ಬೆಳಗ್ಗೆ 11 ನಂತರವೇ ಸೂರ್ಯೋದಯ ಆಗುತ್ತದೆ. ಹಾಗೆ ಮಧ್ಯಾಹ್ನ 3ಕ್ಕೇ ಕತ್ತಲಾಗುತ್ತದೆ. ಈ ದೃಶ್ಯವನ್ನು ಸಿನಿಮಾವೊಂದರಲ್ಲಿ ನೋಡಿದ್ದೇವೆ. ಇದೇ ರೀತಿಯ ವಿಚಿತ್ರ ಊರಿನಲ್ಲಿ ಯಾರಿಗೂ ತಿಳಿಯದ ರಹಸ್ಯವೊಂದು ಅಡಗಿರುತ್ತದೆ. ಇದೆಲ್ಲವು ಸಿನಿಮಾದಲ್ಲಿನ ಕಾಲ್ಪನಿಕ ಕಥೆ. ಆದರೆ, ಅಂತಹ ಪ್ರದೇಶವು ನಿಜವಾಗಿಯೂ ಅಸ್ತಿತ್ವದಲ್ಲಿದೆ ಎಂದು ನಿಮಗೆ ನಂಬಲು ಸಾಧ್ಯವೇ? ಹೌದು, ನಮ್ಮ ದೇಶದಲ್ಲಿ ಅಂತಹ ವಿಚಿತ್ರ ಪ್ರದೇಶವೊಂದಿದೆ.

ಈ ಸ್ಥಳದ ವಿಚಿತ್ರವೆಂದರೆ ಬೆಳಗ್ಗೆ 11 ಗಂಟೆಯಾದರೂ ಸೂರ್ಯನ ಸುಳಿವೇ ಇರುವುದಿಲ್ಲ. ಮಧ್ಯಾಹ್ನ 3 ಗಂಟೆಯ ಹೊತ್ತಿಗೆ ಈ ಪ್ರದೇಶದಲ್ಲಿ ದಟ್ಟ ಕತ್ತಲೆ ಆವರಿಸುತ್ತದೆ. ಇಲ್ಲಿರುವ ಜನರಿಗೆ ಹೊರ ಜಗತ್ತಿನ ಸಂಪರ್ಕವೇ ಇಲ್ಲ. ಈ ಪ್ರದೇಶಕ್ಕೆ ಇಲ್ಲಿರುವ ಜನರೇ ಮಾಲೀಕರು. ಈ ಪ್ರದೇಶದ ಸೌಂದರ್ಯಕ್ಕೆ ಎಲ್ಲರೂ ಮಾರುಹೋಗುತ್ತಾರೆ. ಇದು ಮಧ್ಯ ಪ್ರದೇಶ ರಾಜ್ಯದಲ್ಲಿರುವ ಪಾತಾಳಕೋಟ್ ಎಂಬ ಗ್ರಾಮದ ವಿಸ್ಮಯದ ಕಥೆ. ಈ ಊರಿನ ವ್ಯಾಪ್ತಿಯಲ್ಲಿ ಜಡ್ಮದಲ್, ಹರ್ರಾ ಕಚಾರ್, ಸೆಹ್ರಾ ಪಚ್ಗೋಲ್ ಸೇರಿದಂತೆ ಒಟ್ಟು 12 ಗ್ರಾಮಗಳು ಇವೆ. ಈ ಗ್ರಾಮಗಳು ಸುಮಾರು 3,000 ಅಡಿ ಎತ್ತರದಲ್ಲಿ ದಟ್ಟವಾದ ಪರ್ವತಗಳಿಂದ ಆವೃತವಾಗಿವೆ. ಹಾಗಾಗಿ ಸೂರ್ಯನ ಕಿರಣಗಳು ಗ್ರಾಮಗಳ ಮೇಲೆ ಹೆಚ್ಚಾಗಿ ಬೀಳುವುದಿಲ್ಲ. ಅದರ ಪರಿಣಾಮವಾಗಿ, ಒಂದು ದಿನದಲ್ಲಿ ಸೂರ್ಯನ ಬೆಳಕು ಕೇವಲ 5 ಗಂಟೆಗಳ ಕಾಲ ಮಾತ್ರ ಇರುತ್ತದೆ. ಇಲ್ಲಿ ಉಳಿದ ಸಮಯದಲ್ಲಿ ಕತ್ತಲೆ ಆವರಿಸುತ್ತದೆ.

There was no trace of covid here:

ಕೋವಿಡ್​-19 ಸಮಯದಲ್ಲಿ ಇಡೀ ವಿಶ್ವವೇ ಅಲ್ಲೋಲಕಲ್ಲೋಲವಾಗಿತ್ತು. ಭಾರತ ಸೇರಿದಂತೆ ಜಗತ್ತಿನ ಬಹುತೇಕ ದೇಶಗಳಲ್ಲಿ ಲಾಕ್‌ಡೌನ್‌ ವಿಧಿಸಲಾಗಿತ್ತು. ಆದರೆ, ಈ ಅವಧಿಯಲ್ಲಿ ಪಾತಾಳಕೋಟ್ ಮಾತ್ರ ಶಾಂತವಾಗಿತ್ತು. ಇಲ್ಲಿ ಕೋವಿಡ್​-19ರ ಯಾವುದೇ ಕುರುಹು ಕಂಡುಬಂದಿರಲಿಲ್ಲ. ಇಲ್ಲಿನ ಜನರಿಗೆ ಹೊರ ಜಗತ್ತಿನ ಸಂಪರ್ಕವೇ ಇಲ್ಲ. ಹಾಗಾಗಿ, ಈ ಪ್ರದೇಶದಲ್ಲಿ ಒಂದೇ ಒಂದು ಕೋವಿಡ್ ಪ್ರಕರಣ ದಾಖಲಾಗಿರಲಿಲ್ಲ.

What is the livelihood of the people?

ಪಾತಾಳಕೋಟ್‌ನಲ್ಲಿ ವಾಸಿಸುವ ಆದಿವಾಸಿಗಳಿಗೆ ಅರಣ್ಯವೇ ಏಕೈಕ ಜೀವನಾಧಾರವಾಗಿದೆ. ಅಂದ್ರೆ, ಅರಣ್ಯದ ಉತ್ಪನ್ನಗಳು, ಜೇನುತುಪ್ಪ ಮತ್ತು ಧಾನ್ಯಗಳು ಇವುಗಳೇ ಇವರಿಗೆ ಮುಖ್ಯ ಆಧಾರವಾಗಿವೆ. ಈಗ ಒಂದೋ ಎರಡೋ ಹಳ್ಳಿಗಳಲ್ಲಿ ಕೊಡೋ ರಾಗಿ ಸೇರಿದಂತೆ ಎರಡ್ಮೂರು ತರಹದ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಇದಲ್ಲದೆ ಇಲ್ಲಿ ಲಭ್ಯವಿರುವ ಗಿಡಮೂಲಿಕೆಗಳು ಪ್ರಪಂಚದಾದ್ಯಂತ ಪ್ರಸಿದ್ಧವಾಗಿವೆ.

Tourist Destination:

ಶಿವರಾಜ್ ಸಿಂಗ್ ಅವರು ಸಿಎಂ ಆಗಿದ್ದ ಅವಧಿಯಲ್ಲಿ ಸ್ಥಳೀಯ ಭರಿಯಾ ಬುಡಕಟ್ಟು ಜನಾಂಗದವರು ಪಾತಾಳಕೋಟ್ ಪ್ರದೇಶದ ವಸತಿ ಹಕ್ಕುಗಳ ಅಡಿಯಲ್ಲಿ ಅಲ್ಲಿರುವ ಜನರನ್ನು ಮಾಲೀಕರಾಗಿ ಘೋಷಣೆ ಮಾಡಲಾಗಿತ್ತು.ಪಾತಾಳಕೋಟ್​ನಲ್ಲಿನ ಅಮೂಲ್ಯವಾದ ಗಿಡಮೂಲಿಕೆಗಳ ಉಪಸ್ಥಿತಿಯಿಂದಾಗಿ ಸರ್ಕಾರವು ಇದನ್ನು ಜೀವವೈವಿಧ್ಯ ಪ್ರದೇಶವೆಂದು ಘೋಷಿಸಿದೆ. ಈ ಕ್ಷೇತ್ರವನ್ನು ಎಲ್ಲ ರೀತಿಯಿಂದಲೂ ಅಭಿವೃದ್ಧಿಪಡಿಸಲು ಸರ್ಕಾರ ಶ್ರಮಿಸುತ್ತಿದೆ.

Adventure Festival Planning:

ಹಾಟ್ ಏರ್ ಬಲೂನ್, ಪ್ಯಾರಾ ಗ್ಲೈಡಿಂಗ್ ಜೊತೆಗೆ ಹಲವು ರೋಚಕ ಸಾಹಸ ಕ್ರೀಡೆಗಳು ನಡೆಯಲಿವೆ. ಈ ಕುರಿತು ಜಿಲ್ಲಾಧಿಕಾರಿ ಶೈಲೇಂದ್ರ ಶರ್ಮಾ ಪ್ರತಿಕ್ರಿಯಿಸಿ, ಪಾತಾಳಕೋಟೆಯ ಸೊಬಗನ್ನು ಇಡೀ ವಿಶ್ವವೇ ಕಣ್ತುಂಬಿಕೊಳ್ಳಲಿ ಎಂಬ ಉದ್ದೇಶದಿಂದ ಶ್ರಮಿಸುತ್ತಿದ್ದೇವೆ ಎಂದು ತಿಳಿಸಿದರು.ಈಗ ಪ್ರದೇಶದ ಜನರ ಒಪ್ಪಿಗೆಯಿಲ್ಲದೆ ಯಾರೂ ನೀರು, ಭೂಮಿಯ ಮೇಲೆ ಹಕ್ಕು ಪಡೆಯಲು ಸಾಧ್ಯವಿಲ್ಲ. ಇದೇ ವೇಳೆ ಅಲ್ಲಿನ ಪ್ರವಾಸೋದ್ಯಮವನ್ನು ಉತ್ತೇಜಿಸಲು ಜಿಲ್ಲಾಡಳಿತ ಪ್ರಯತ್ನ ನಡೆಸುತ್ತಿದೆ. ಅದರ ಭಾಗವಾಗಿ ಡಿಸೆಂಬರ್ 28 ರಿಂದ ಜನವರಿ 2ರ ವರೆಗೆ ಪಾತಾಳಕೋಟ್ ಬಳಿ ಸಾಹಸೋತ್ಸವ ಆಯೋಜಿಸಲಾಗಿದೆ.

 

 

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

RAVI BASRUR : ‘ಪ್ರತಿಭೆಗಳನ್ನು ಪ್ರೋತ್ಸಾಹಿಸಿ, ನಿಮ್ಮ ಹೆಸರೇಳಿ ಬದುಕೊಳ್ತಾರೆ’

Bagalkote News: ಸಿದ್ದನಕೊಳ್ಳ ಜಾತ್ರಾ ಮಹೋತ್ಸವ ಅಂಗವಾಗಿ ಶ್ರೀ ಸಿದ್ದಶ್ರೀ ರಾಷ್ಟ್ರೀಯ ಉತ್ಸವ ಮತ್ತು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಸಮಾರಂಭ ಜರುಗಿತು. ಜ್ಯೋತಿ ಬೆಳಗಿಸುವ ಮೂಲಕ ಶಾಸಕ...

BUS FIRE INCIDENT : ಹೊತ್ತಿ ಉರಿದ ಬಸ್, ತೆಲಂಗಾಣದ ಓರ್ವ ಸಾವು

Mathura (Uttar Pradesh) News: ಉತ್ತರಪ್ರದೇಶದ ಮಥುರಾದಲ್ಲಿ ತೆಲಂಗಾಣದ 50ಕ್ಕೂ ಹೆಚ್ಚು ಜನರಿದ್ದ BUS​ವೊಂದು ಬೆಂಕಿಗಾಹುತಿಯಾಗಿದ್ದು, ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ.ತೆಲಂಗಾಣದ ಜನರಿಂದ ತುಂಬಿದ್ದ ಬಸ್​ವೊಂದು ಮಥುರಾದಲ್ಲಿ...

NEW PRESIDENT FOR KPCC : ಕೆಪಿಸಿಸಿಗೆ ಪೂರ್ಣ ಪ್ರಮಾಣದ ಹೊಸ ಅಧ್ಯಕ್ಷರನ್ನು ಆದಷ್ಟು ಬೇಗ ನೇಮಕ ಮಾಡಲಿ

Bangalore News: ಮಾಧ್ಯಮಗಳ ಜೊತೆ ಇಂದು ಮಾತನಾಡಿದ ಅವರು, ನನ್ನನ್ನು ನಾನು NEW PRESIDENT FOR KPCC ಎಂದು ಮಾಡಿ ಎಂದು ಹೇಳಿಲ್ಲ. ನಾವುಗಳೆಲ್ಲ ಸಚಿವರಾದ...

HOMEOWNERS NOTE TO THIEVES : ಸಂಕ್ರಾಂತಿಗೆ ಊರಿಗೆ ಹೋಗುವಾಗ ಜಾಣತನ ಮೆರೆದ ಮನೆ ಮಾಲೀಕ

Hyderabad News: ಈ ರೀತಿಯ ವಿಚಿತ್ರ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುವ ಜೊತೆಗೆ ಮನೆ ಮಾಲೀಕನ ಹಾಸ್ಯ ಮತ್ತು ಬುದ್ದಿವಂತಿಕೆಗೆ ಮೆಚ್ಚುಗೆ ಕೂಡ ವ್ಯಕ್ತವಾಗುತ್ತಿದೆ.ಇಂತಹುದೇ...