spot_img
spot_img

ಇನ್ಮುಂದೆ ಹೊರ ದೇಶಗಳಿಂದಲೂ ಯುಪಿಐ ಪೇಮೆಂಟ್​ ಮಾಡಬಹುದೆಂದ ಪೇಟಿಎಂ

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

Paytm Goes International UPI Payments: ಇನ್ಮುಂದೆ ಡಿಜಿಟಿಲ್ ಪಾವತಿ ಪ್ಲಾಟ್​ಫಾರ್ಮ್​ ಪೇಟಿಎಂನಿಂದ ನೀವು ವಿದೇಶದಿಂದ ಯುಪಿಐ ಪಾವತಿಗಳನ್ನು ಮಾಡಬಹುದು.

ಜನಪ್ರಿಯ ಡಿಜಿಟಲ್ ಪಾವತಿ ಪ್ಲಾಟ್‌ಫಾರ್ಮ್‌ಗಳಲ್ಲೊಂದಾದ ಪೇಟಿಎಂ ಬಳಕೆದಾರರು ಈಗ ಭಾರತದ ಹೊರಗಿನ ಆಯ್ದ ಸ್ಥಳಗಳಿಂದ ಯುಪಿಐ ಪಾವತಿಗಳನ್ನು ಮಾಡಬಹುದು ಎಂದು One97 ಕಮ್ಯುನಿಕೇಷನ್ಸ್ ಲಿಮಿಟೆಡ್ ಘೋಷಿಸಿದೆ.

ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ), ಸಿಂಗಾಪುರ್, ಫ್ರಾನ್ಸ್, ಮಾರಿಷಸ್, ಭೂತಾನ್ ಮತ್ತು ನೇಪಾಳಕ್ಕೆ ಹೋಗುವ ಭಾರತೀಯ ಪ್ರಯಾಣಿಕರು ಪೇಟಿಎಂ ಮೂಲಕ ಶಾಪಿಂಗ್, ಊಟ ಸೇರಿದಂತೆ ಇನ್ನಿತರ ಚಟುವಟಿಕೆಗಳಿಗೆ ಹಣ ಪಾವತಿಸಲು ಸಾಧ್ಯವಾಗುತ್ತದೆ ಎಂದು ಪೇಟಿಎಂ ಹೇಳಿದೆ.

ಈ ಕಾರ್ಯವನ್ನು ಸಕ್ರಿಯಗೊಳಿಸುವುದಕ್ಕೆ ಬಳಕೆದಾರರ ಬ್ಯಾಂಕ್ ಖಾತೆಯೊಂದಿಗೆ ಲಿಂಕ್ ಮಾಡಲು “ಒನ್​-ಟೈಂ ಆ್ಯಕ್ಟಿವೇಶನ್​” ಮಾಡುವ ಅಗತ್ಯವಿದೆ.

ನೀವು ಅಂತಾರಾಷ್ಟ್ರೀಯ ಯುಪಿಐ ಪಾವತಿಗಳನ್ನು ಸೆಟ್​ ಮಾಡಲು ಮರೆತಿದ್ದರೆ, ಈ ಫೀಚರ್​ ಅನ್ನು ಆ್ಯಕ್ಟಿವೇಶನ್​ ಮಾಡಲು ಆ್ಯಪ್​ ಆಟೋಮೆಟಿಕ್​ ಆಗಿ ಬಳಕೆದಾರರನ್ನು ಪ್ರೇರೇಪಿಸುತ್ತದೆ.

ಅಷ್ಟೇ ಅಲ್ಲ, ಈ ಫೀಚರ್​ ಅನ್ನು ಮ್ಯಾನುವಲ್​ ಆಗಿ ಆ್ಯಕ್ಟಿವೆಟ್​ ಮಾಡಲು ಇಚ್ಛಿಸಿದ್ರೆ, ಸರ್ಚ್​ ವಿಭಾಗಕ್ಕೆ ಹೋಗಿ ‘International UPI’ ಎಂದು ಟೈಪ್​ ಮಾಡಿ.

ಆಗ ಸರ್ವೀಸ್​ ಟ್ಯಾಬ್​ ಮೇಲೆ ಕ್ಲಿಕ್​ ಮಾಡಿ. ಕಾಣಿಸುವ ಸ್ಕ್ರೀನ್​ ಮೇಲೆ, ಭಾರತದ ಹೊರಗೆ ಪಾವತಿಗಳನ್ನು ಮಾಡಲು ನಿಮ್ಮ ಯಪಿಐ ಐಡಿಯನ್ನು ಕನೆಕ್ಟ್​ ಮಾಡಿ ಎಂದು ಪೇಟಿಎಂ ನಿಮಗೆ ಸೂಚಿಸುತ್ತದೆ.

ಈ ಪೇಟಿಎಂ ಪಾವತಿಗಳು ಪ್ರಯಾಣದ ಅವಧಿಯನ್ನು ಅವಲಂಬಿಸಿರುತ್ತದೆ. ಅಂದರೆ, ಪೇಟಿಎಂ ಬಳಕೆದಾರರು ಒಂದರಿಂದ 90 ದಿನಗಳವರೆಗೆ ಬಳಕೆಯ ಅವಧಿಯನ್ನು ಆಯ್ಕೆ ಮಾಡಲು ಸಾಧ್ಯವಾಗುತ್ತದೆ.

ಭದ್ರತಾ ಉದ್ದೇಶಗಳಿಗಾಗಿ ಈ ಸೇವೆಯನ್ನು ಬಂದ್​ ಮಾಡಲಾಗುತ್ತದೆ.

ನಿಗದಿತ ಸಮಯದ ನಂತರ ಆಟೋಮೆಟಿಕ್​ ಆಗಿ ಈ ಸೇವೆಯನ್ನು ಬಂದ್​ ಆಗುವುದರಿಂದ ನಿಮ್ಮ ವಹಿವಾಟುಗಳ ಸ್ಟಾಪ್​ ಆಗುತ್ತವೆ. ಇದರಿಂದ ಸ್ಕ್ಯಾಮ್​ ಮಾಡುವವರಿಂದ ತಮ್ಮ ಹಣವನ್ನು ತಡೆಯಬಹುದಾಗಿದೆ ಎಂದು ಕಂಪನಿ ಹೇಳುತ್ತದೆ.

ಇತ್ತೀಚೆಗೆ ಪೇಟಿಎಂ ಹೊಸ ಫೀಚರ್​ ರಿವೀಲ್​ ಮಾಡಿದೆ. ಅದು ಬಳಕೆದಾರರಿಗೆ ವಿವರವಾದ ವಹಿವಾಟು ದಾಖಲೆಗಳನ್ನು ಡೌನ್‌ಲೋಡ್ ಮಾಡಬಹುದಾಗಿದೆ.

ಅಷ್ಟೇ ಅಲ್ಲ, ಇದು ಬಳಕೆದಾರರು ತಮ್ಮ ಖರ್ಚುಗಳನ್ನು ಟ್ರ್ಯಾಕ್ ಮಾಡಲು ಮತ್ತು ಬಜೆಟ್‌ಗಳನ್ನು ನಿರ್ವಹಿಸಲು ಅನುವು ಮಾಡಿಕೊಡುತ್ತದೆ.

ಈ ವರ್ಷದ ಆರಂಭದಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಅನುಸರಣೆಯಿಲ್ಲದ ಕಾರಣದಿಂದ ತಾಜಾ ಠೇವಣಿಗಳನ್ನು ಸ್ವೀಕರಿಸುವುದನ್ನು ನಿಲ್ಲಿಸುವಂತೆ ಪೇಟಿಎಂನ ಬ್ಯಾಂಕಿಂಗ್ ವಿಭಾಗವನ್ನು ಆದೇಶಿಸಿದ್ದಾರೆ.

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

ಮೀನುಗಾರಿಕೆಗೆ ಕೇಂದ್ರದಿಂದ ₹4,969 ಕೋಟಿ ಅನುದಾನ

ನವದೆಹಲಿ: 4,969.62 ಕೋಟಿ ರೂ.ಗಳ ಪ್ರಸ್ತಾವನೆಗಳಿಗೆ ಕೇಂದ್ರದ ಮೀನುಗಾರಿಕೆ ಇಲಾಖೆ ಅನುಮೋದನೆ ನೀಡಿದೆ. ಸಣ್ಣ ಮೀನುಗಾರ ಸಮುದಾಯಗಳು ಹಾಗೂ ಸಾಂಪ್ರದಾಯಿಕ ಮೀನುಗಾರರ ಅಭಿವೃದ್ಧಿಗಾಗಿ ಮತ್ತು ಅವರ...

ಚಂದ್ರಶೇಖರ ಸ್ವಾಮೀಜಿ ವಿರುದ್ಧ ಎಫ್.ಐ.ಆರ್. : ಸಿದ್ದರಾಮಯ್ಯ

ಬೆಂಗಳೂರು : ಚಂದ್ರಶೇಖರ ಸ್ವಾಮೀಜಿ ಅವರ ಪ್ರಕರಣದಲ್ಲಿ ಪೊಲೀಸರು ಕಾನೂನಿನ ದೃಷ್ಟಿಯಲ್ಲಿ ಏನು ಮಾಡಬೇಕೋ ಅದನ್ನು ಮಾಡುತ್ತಾರೆ. ಕಾನೂನಿನ ಚೌಕಟ್ಟಿನೊಳಗೆ ಬಂದರೆ ಕ್ರಮ ತೆಗೆದುಕೊಳ್ಳಲಾಗುತ್ತದೆ. ಇಲ್ಲವಾದರೆ...

ಶಾಂತಿ, ಸೌಹಾರ್ದತೆ ಕಾಪಾಡಬೇಕು : ಸಂಭಲ್ ಜಾಮಾ ಮಸೀದಿ

ಹೊಸದಿಲ್ಲಿ: ಸಂಭಲ್ ಜಾಮಾ ಮಸೀದಿಯ ಆವರಣದಲ್ಲಿನ ಸಮೀಕ್ಷೆಗೆ ಸುಪ್ರೀಂಕೋರ್ಟ್ ತಡೆ ನೀಡಿದ್ದು, ಶಾಂತಿ ಮತ್ತು ಸೌಹಾರ್ದತೆ ಕಾಪಾಡುವಂತೆ ಹೇಳಿದೆ. ವಿಚಾರಣಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ಅಲಹಾಬಾದ್...

99.17 crore released to Karnataka

The central government has taken steps to globally develop major tourist destinations that are not so popular in...