spot_img
spot_img

ವಿದ್ಯಾಗಿರಿಯಲ್ಲಿ ಅನಾವರಣಗೊಂಡ ಸರ್ವಜನಾಂಗದ ಶಾಂತಿಯ ತೋಟ

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

ಮೂಡುಬಿದಿರೆ ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನ ವತಿಯಿಂದ ವಿದ್ಯಾಗಿರಿಯ ಆಳ್ವಾಸ್‌ ಕ್ಯಾಂಪಸ್‌ನಲ್ಲಿ ಆಳ್ವಾಸ್‌ ವಿರಾಸತ್‌ 2024 ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ಆರಂಭಗೊಂಡು ಈಗಾಗಲೇ 3 ದಿನಗಳು ಕಳೆದಿದ್ದು, ಇನ್ನೂ ಮೂರು ದಿನ ಸಾರ್ವಜನಿಕರಿಗೆ ಆಸ್ವಾದನೆಗೆ ಲಭ್ಯವಿದೆ.

ಆಹಾರಪ್ರಿಯರಿಗೆ ಖಾದ್ಯ, ಫ್ಯಾನ್ಸಿ ಪ್ರಿಯರಿಗೆ ಫ್ಯಾನ್ಸಿ ಐಟಂ, ಉಡುಗೆ, ತೊಡುಗೆ, ಪಾದರಕ್ಷೆಯಿಂದ ಹಿಡಿದು ಪ್ರತಿಯೊಂದು ವೈವಿಧ್ಯಮಯ ವಸ್ತುಗಳು ಇಲ್ಲಿವೆ. ಸಾಂಪ್ರದಾಯಿಕ ಕೈಮಗ್ಗದ ಸೀರೆಗಳ ಮಳಿಗೆಗಳು ಸಾಲು ಸಾಲಾಗಿವೆ. ಹಿರಿ ಕಿರಿಯರೆಂಬ ಭೇದವಿಲ್ಲದೆ ಇಲ್ಲಿಬಂದವರಿಗೆ ಭರಪೂರ ರಸದೌತಣವಿದೆ.

ಸಾಂಪ್ರದಾಯಿಕದಿಂದ ಮೊದಲ್ಗೊಂಡು ಆಧುನಿಕ ಫಾಸ್ಟ್‌ಫುಡ್‌ ವರೆಗೆ ಇರುವ ಆಹಾರ ಮಳಿಗೆಯಲ್ಲಿಹುಬ್ಬಳ್ಳಿಯ ಆಹಾರ ಮಳಿಗೆ ಗಮನ ಸೆಳೆಯುತ್ತಿದೆ. ಅಪ್ಪಟ ಉತ್ತರ ಕರ್ನಾಟಕ ಶೈಲಿಯ ಆಹಾರಗಳು ಇಲ್ಲಿಲಭ್ಯವಿದೆ. ಜೋಳದ ರೊಟ್ಟಿ ಜತೆ ಎಣ್ಣೆಗಾಯಿ, ಗಿರ್ಮಿಟ್‌ ಮಿರ್ಚಿ ಮಳಿಗೆ ಉತ್ತರ ಕರ್ನಾಟಕ ಮಾತ್ರವಲ್ಲದೆ ಸ್ಥಳೀಯರಿಗೂ ಆಕರ್ಷಣೀಯವಾಗಿದೆ.

ಉತ್ತರ ಕರ್ನಾಟಕದ ಮಂದಿ ತಮ್ಮ ಆಹಾರ ಎಂಬ ದೃಷ್ಟಿಯಿಂದ ಆಕರ್ಷಿತರಾದರೆ, ಸ್ಥಳೀಯರು ಹೊಸ ರುಚಿ ಸವಿಲು ದಾಂಗುಡಿಯಿಡುತ್ತಿದ್ದಾರೆ ಎನ್ನುತ್ತಾರೆ ಕಳೆದ ಆರು ವರ್ಷದಿಂದ ಪ್ರತಿ ವರ್ಷವೂ ಆಗಮಿಸುವ ಹುಬ್ಬಳ್ಳಿಯ ಚೆನ್ನಬಸಪ್ಪ ಕೋಟಿ. ಸಂಬಂಧಿಕರ ಸಹಿತ ಕೆಲಸಕ್ಕಾಗಿ ಒಟ್ಟು 14 ಮಂದಿಯ ತಂಡ ಕಟ್ಟಿಕೊಂಡು ಬಂದಿರುವ ಅವರು, ಸ್ಥಳದಲ್ಲೇ ಜೋಳದ ರೊಟ್ಟಿ ಲಟ್ಟಿಸಿ, ಕಾಯಿಸಿ ಮಾರಾಟ ಮಾಡುತ್ತಿದ್ದಾರೆ.

ಕರಕುಶಲ ಮಳಿಗೆಯಲ್ಲಿ ಈ ಬಾರಿ ಪ್ರಥಮವಾಗಿ ಆಳ್ವಾಸ್‌ ವಿರಾಸತ್‌ಗೆ ಆಗಮಿಸಿದ ದಂಪತಿ ತಮ್ಮ ರಾಜ್ಯದ ಸಾಂಪ್ರದಾಯಿಕ ಕಲೆಯನ್ನು ದಕ್ಷಿಣ ಕನ್ನಡ ಜಿಲ್ಲೆಯ ಜನತೆಗೆ ಪರಿಚಯಿಸುತ್ತಿದ್ದಾರೆ. ರಾಜಸ್ಥಾನದಲ್ಲಿ ಪ್ರಖ್ಯಾತವಾಗಿರುವ ಪಿಚ್ವಾಯಿ ಕಲೆಯನ್ನು ಪರಿಚಯಿಸುವ ಜತೆಗೆ ಮಾರಾಟಕ್ಕಾಗಿ ಒಂದಷ್ಟು ಚಿತ್ರಗಳನ್ನು ಮಳಿಗೆಯಲ್ಲಿ ಇಟ್ಟುಕೊಂಡಿದ್ದಾರೆ.

ಪಿಚ್ವಾಯಿ ಹಾಗೂ ಮಿನಿಯೇಚರ್‌ ಆರ್ಟ್‌ನಲ್ಲಿ ಪರಿಣತಿ ಗಳಿಸಿರುವ ರಾಜಸ್ಥಾನ ಜೈಪುರ್‌ ಬಗರೂ ಪ್ರದೇಶದ ರಾಮ್‌ ನಿವಾಸ್‌ ಕುಂಬಾವರ್‌ ಮತ್ತು ಪತ್ನಿ ಪಾರ್ವತೀ ದೇವಿ ನಗುಮುಖದೊಂದಿಗೆ ಗ್ರಾಹಕರನ್ನು ಸ್ವಾಗತಿಸುತ್ತಿದ್ದಾರೆ.

ದಂಪತಿಯ ಪುತ್ರಿ ಪ್ರಿಯಾಂಕ ಕೂಡ ಪಿಚ್ವಾಯಿ ಕಲೆಯಲ್ಲಿ ಪರಿಣತಿ ಸಾಧಿಸಿದ್ದು, ಕುಲಾ ಆಸ್ಮಾನ್‌ ಅಂತಾರಾಷ್ಟ್ರೀಯ ಪೈಂಟಿಂಗ್‌ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದಿದ್ದಾರೆ ಎಂದು ಹೆಮ್ಮೆಯಿಂದ ಹೇಳುತ್ತಾರೆ ರಾಮ್‌ನಿವಾಸ್‌. ಕಳೆದ 34 ವರ್ಷದಿಂದ ದಂಪತಿ ಸಾಂಪ್ರದಾಯಿಕ ಪಿಚ್ವಾಯಿ ಕಲೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ದೊಡ್ಡ ಗಾತ್ರದ ಬಟ್ಟೆಯಲ್ಲಿ ಪುರಾಣದ ಕತೆಗಳನ್ನು ಬಿಂಬಿಸುವ ಚಿತ್ರವನ್ನು ಸಣ್ಣ ಸಣ್ಣ ಗಾತ್ರದಲ್ಲಿ ರಚಿಸಲಾಗಿದ್ದು, ಇದನ್ನು ಪಿಚ್ವಾಯಿ ಚಿತ್ರಕಲೆ ಎನ್ನುತ್ತಾರೆ. ಅದೇ ದೊಡ್ಡ ಗಾತ್ರದ ಚಿತ್ರಗಳನ್ನು ಬರುವ ದೇವರನ್ನು ಸಣ್ಣ ಗಾತ್ರದ ಬಟ್ಟೆಯಲ್ಲಿ ಬಿಡಿಸುವುದನ್ನು ಮಿನಿಯೇಚರ್‌ ಆರ್ಟ್‌ ಎನ್ನುತ್ತಾರೆ.

ಸಂಸ್ಕೃತದಲ್ಲಿ’ಪಿಚ್‌’ ಅಂದರೆ ಹಿಂಬದಿ, ‘ವಾಯ್‌’ ಅಂದರೆ ನೇತಾಡುವ ಒಟ್ಟಾಗಿ ಪಿಚ್ವಾಯಿ ಅಂದರೆ ಹಿಂಬದಿ ನೇತಾಡುವ ಎಂಬ ಅರ್ಥ ಕೊಡುತ್ತದೆ. ರಾಜಸ್ಥಾನದಲ್ಲಿ ದೇವರ ಮೂರ್ತಿಯ ಹಿಂಬದಿ ಬಟ್ಟೆಯಲ್ಲಿ ಅಲಂಕಾರಿಕವಾಗಿ ಚಿತ್ರಗಳನ್ನು ಬರೆದು ಸ್ಕ್ರೀನ್‌ ತರಹ ನೇತಾಡಿಸುತ್ತಾರೆ, ಈ ಕಲೆಯನ್ನೇ ಪಿಚ್ವಾಯಿ ಆರ್ಟ್‌ ಎನ್ನುತ್ತಾರೆ. ಇದೇ ಚಿತ್ರಕಲೆಯನ್ನು ಬಟ್ಟೆಯಲ್ಲಿ ಬರೆದು ಮನೆಯ ಗೋಡೆಗಳಲ್ಲಿಯೂ ವಾಲ್‌ ಪಿಕ್ಚರ್‌ ಆಗಿ ಅಲಂಕಾರಿಕವಾಗಿ ಬಳಸುತ್ತಾರೆ.

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

SPIDER MAN SUITS:ರಿಸರ್ಚ್ ಟೀಂನಿಂದ ರೆಡಿಯಾಗ್ತಿದೆ ಸೂಪರ್ ಮ್ಯಾನ್ ಶೈಲಿಯ ಸೂಟ್!

Spider-Man Suits News: ಇವರು ಧರಿಸಿಕೊಂಡಿರುವ SUITS ಫುಲ್​ ಸ್ಟ್ರಾಂಗ್​ ಆಗಿರುತ್ತದೆ. ಬುಲೆಟ್​ ಸೇರಿದಂತೆ ಅನೇಕ ಆಯುಧಗಳಿಂದ ದಾಳಿ ಮಾಡಿದ್ರೂ ಸಹ ಆ SUITS​ನಿಂದ ಅವರು...

HUSBAND KILLS WIFE:ಅಮ್ಮನ ಮೃತದೇಹದ ಬಳಿ ಕಂದಮ್ಮನ ಆಕ್ರಂದನ

Belgaum News: ಮೀರಾಬಾಯಿ (25) ಎಂಬವರೇ KILLSಯಾದ ಮಹಿಳೆ. ಬಾಲಾಜಿ ಕಬಲಿ (35) ತನ್ನ ಪತ್ನಿಯನ್ನು ಕೊಲೆ ಮಾಡಿದ ಆರೋಪಿಯಾಗಿದ್ದಾನೆ. ಮಹಾರಾಷ್ಟ್ರ ಮೂಲದ ದಂಪತಿ ಕಬ್ಬು...

EARTHQUAKE IN AFGHANISTAN:ರಿಕ್ಟರ್ ಮಾಪಕದಲ್ಲಿ 4.3 ರಷ್ಟು ತೀವ್ರತೆ ದಾಖಲು

Kabul, Afghanistan News: ಜನವರಿ 30 ರಂದು ಅಫ್ಘಾನಿಸ್ತಾನದಲ್ಲಿ ಭೂಮಿ ಕಂಪಿಸಿತ್ತು. ಸೋಮವಾರ ತಡರಾತ್ರಿ ಮತ್ತೆ ಭೂಮಿ ಕಂಪಿಸಿದೆ. ಇದರಿಂದ ಅಲ್ಲಿನ ಜನ ಭಯಭೀತಗೊಂಡಿದ್ದಾರೆ.ಈ ರೀತಿಯ...

205 INDIANS DEPORTED BY US:ಅಕ್ರಮವಾಗಿ ಅಮೆರಿಕದಲ್ಲಿದ್ದ ಭಾರತೀಯರ ಗಡಿಪಾರು

Amritsar News: ಅಕ್ರಮ ವಲಸಿಗರ ವಿರುದ್ದ ಅಮೆರಿಕ ಅಧ್ಯಕ್ಷ ಡೋನಾಲ್ಡ್​ ಟ್ರಂಪ್​ ಕಠಿಣಕ್ರಮ ಕೈಗೊಂಡಿದ್ದಾರೆ. ಅದರಂತೆ ದಾಖಲೆ ರಹಿತವಾಗಿ ಅಮೆರಿಕದಲ್ಲಿ ನೆಲೆನಿಂತಿದ್ದ INDIANSನ್ನು ಮರಳಿ ತವರಿಗೆ...