spot_img
spot_img

PLOT TO KILL HASINA SON:ಸಂಚಿನಲ್ಲಿ ಶಿಕ್ಷೆಗೊಳಗಾಗಿದ್ದ ಪತ್ರಕರ್ತನ ಬಿಡುಗಡೆ

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

 

Dhaka (Bangladesh) News:

ಢಾಕಾದ 4ನೇ ಹೆಚ್ಚುವರಿ ಮೆಟ್ರೋಪಾಲಿಟನ್ ಸೆಷನ್ಸ್ ನ್ಯಾಯಾಧೀಶ ತಾರಿಕ್ ಅಜೀಜ್ ಅವರು ಈ ತೀರ್ಪು ನೀಡಿದ್ದು, ಈ ಪ್ರಕರಣದಲ್ಲಿ ತನ್ನ ಶಿಕ್ಷೆಯನ್ನು ರದ್ದುಗೊಳಿಸಬೇಕೆಂದು ಕೋರಿ ಮಹಮುದುರ್ ರೆಹಮಾನ್ ಸಲ್ಲಿಸಿದ್ದ ಮೇಲ್ಮನವಿಯನ್ನು ಅವರು ಅಂಗೀಕರಿಸಿದ್ದಾರೆ ಎಂದು ಡೈಲಿ ಸ್ಟಾರ್ ಪತ್ರಿಕೆ ವರದಿ ಮಾಡಿದೆ.: ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರ ಪುತ್ರ ಸಜೀಬ್ ವಾಝೆದ್ ಜಾಯ್ ಅವರನ್ನು ಅಪಹರಿಸಿ ಹತ್ಯೆಗೈಯಲು ವಿಫಲ ಸಂಚು ರೂಪಿಸಿದ್ದ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿದ್ದ ದೇಶದ ಪ್ರಮುಖ ಪತ್ರಿಕಾ ಸಂಪಾದಕರೊಬ್ಬರನ್ನು ಬಾಂಗ್ಲಾದೇಶದ ನ್ಯಾಯಾಲಯವೊಂದು ಸೋಮವಾರ ಖುಲಾಸೆಗೊಳಿಸಿದೆ. 2015ರಲ್ಲಿ ಅಮೆರಿಕದಲ್ಲಿ ಸಜೀಬ್ ಅವರನ್ನು KILLವ ಯತ್ನ ಮಾಡಲಾಗಿತ್ತು.

ಶೇಖ್ ಹಸೀನಾ ಪುತ್ರನ ಹತ್ಯೆ ಸಂಚಿನಲ್ಲಿ ಶಿಕ್ಷೆಗೊಳಗಾಗಿದ್ದ ಪತ್ರಕರ್ತನನ್ನು ನಿರಪರಾಧಿ ಎಂದು ಕೋರ್ಟ್ ಆದೇಶಿಸಿದೆ.ತೀರ್ಪಿನ ನಂತರ ಮಾತನಾಡಿದ, ಅಮರ್ ದೇಶ್ ದಿನಪತ್ರಿಕೆಯ ಸಂಪಾದಕ ಮಹಮದೂರ್, ಅಂತಿಮವಾಗಿ ನ್ಯಾಯಾಲಯದಿಂದ ನ್ಯಾಯ ಸಿಕ್ಕಿದ್ದು, ಫ್ಯಾಸಿಸಂ ವಿರುದ್ಧದ ಹೋರಾಟವನ್ನು ಮುಂದುವರಿಸುವುದಾಗಿ ಸುದ್ದಿಗಾರರಿಗೆ ತಿಳಿಸಿದರು. ಕಳೆದ ವರ್ಷ ಆಗಸ್ಟ್ 17 ರಂದು ಢಾಕಾ ನ್ಯಾಯಾಲಯವು ಅವರ ಅನುಪಸ್ಥಿತಿಯಲ್ಲಿ ಅವರಿಗೆ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು.

ಮೇಲ್ಮನವಿದಾರರ ವಿರುದ್ಧ ಹೊರಿಸಲಾದ ಆರೋಪಗಳು ಸುಳ್ಳು ಮತ್ತು ಕಪೋಲಕಲ್ಪಿತವಾಗಿವೆ ಎಂದು ಕಂಡುಬಂದಿದೆ ಎಂದು ನ್ಯಾಯಾಧೀಶರು ಹೇಳಿದರು. ಹೀಗಾಗಿ ವಿಚಾರಣಾ ನ್ಯಾಯಾಲಯವು ಅವರಿಗೆ ವಿಧಿಸಿದ ಶಿಕ್ಷೆಯನ್ನು ರದ್ದುಗೊಳಿಸಲಾಗುತ್ತಿದ್ದು, ಮೇಲ್ಮನವಿದಾರನನ್ನು ಬಿಡುಗಡೆ ಮಾಡಲು ಆದೇಶಿಸಲಾಗಿದೆ ಎಂದು ನ್ಯಾಯಾಧೀಶರು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.ಐದೂವರೆ ವರ್ಷಗಳ ಕಾಲ ದೇಶಭ್ರಷ್ಟರಾಗಿದ್ದ ಮಹಮುದೂರ್ ಕಳೆದ ವರ್ಷ ಸೆಪ್ಟೆಂಬರ್ 27ರಂದು ಬಾಂಗ್ಲಾದೇಶಕ್ಕೆ ಮರಳಿದ್ದರು. ಎರಡು ದಿನಗಳ ನಂತರ, ಅವರು ಢಾಕಾದ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಶರಣಾಗಿದ್ದರು ಮತ್ತು ಅವರನ್ನು ಜೈಲಿಗೆ ಕಳುಹಿಸಲಾಗಿತ್ತು.

2015ರ ಆಗಸ್ಟ್ 3ರಂದು ದಾಖಲಾದ ಪ್ರಕರಣದಲ್ಲಿ ಮಹಮುದೂರ್ ಮತ್ತು ಶಫೀಕ್ ರೆಹಮಾನ್ ಅವರನ್ನು ಬಂಧಿಸಲಾಗಿತ್ತು.ಹಿರಿಯ ಪತ್ರಕರ್ತ ಶಫೀಕ್ ರೆಹಮಾನ್, ಜತಿಯಾತಾಬಾದಿ ಸಾಮಾಜಿಕ ಸಾಂಸ್ಕೃತಿಕ ಸಂಘಟನೆಯ ಉಪಾಧ್ಯಕ್ಷ ಮುಹಮ್ಮದ್ ಉಲ್ಲಾ ಮಾಮುನ್, ಅವರ ಪುತ್ರ ರಿಜ್ವಿ ಅಹ್ಮದ್ ಸೀಸರ್ ಮತ್ತು ಅಮೆರಿಕ ಮೂಲದ ಉದ್ಯಮಿ ಮಿಜಾನುರ್ ರಹಮಾನ್ ಭುಯಿಯಾನ್ ಅವರಿಗೂ ಇದೇ ಪ್ರಕರಣದಲ್ಲಿ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.

ದೂರಿನ ಪ್ರಕಾರ, ಮಾಮುನ್ ಮತ್ತು ಮಾಜಿ ಪ್ರಧಾನಿ ಖಲೀದಾ ಜಿಯಾ ಅವರ ಬಾಂಗ್ಲಾದೇಶ್ ನ್ಯಾಷನಲಿಸ್ಟ್ ಪಾರ್ಟಿಯ ಹಿರಿಯ ನಾಯಕರು ಯುಕೆ, ಯುಎಸ್ ಮತ್ತು ಬಾಂಗ್ಲಾದೇಶದ ವಿವಿಧ ಸ್ಥಳಗಳಲ್ಲಿ ಸಂಚು ರೂಪಿಸಿ ಶೇಖ್ ಹಸೀನಾ ಅವರ ಸಲಹೆಗಾರರಾಗಿದ್ದ ಜಾಯ್ ಅವರನ್ನು ಅಪಹರಿಸಿ ಕೊಲ್ಲಲು ಸಂಚು ರೂಪಿಸಿದ್ದರು ಎಂದು ಪತ್ರಿಕೆ ತಿಳಿಸಿದೆ.

 

ಇದನ್ನು ಓದಿರಿ :AERO INDIA 2025:ಸೂರ್ಯ ಕಿರಣ್ ಏರೋಬ್ಯಾಟಿಕ್ ತಂಡದಲ್ಲಿ ಕನ್ನಡಿಗ .

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

TALKS WITH FARMERS:ಸೌಹಾರ್ದಯುತವಾಗಿ ಕೊನೆಗೊಂಡ ಕೇಂದ್ರ ಸರ್ಕಾರ, ರೈತ ಸಂಘಟನೆಗಳ ಮಾತುಕತೆ

Chandigarh News: ಸಭೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಚೌಹಾಣ್, "ಮುಂದಿನ ಸಭೆ ಮಾರ್ಚ್ 19ರಂದು ನಡೆಯಲಿದೆ" ಎಂದು ಹೇಳಿದರು. ಚೌಹಾಣ್ ಸೇರಿದಂತೆ ಕೇಂದ್ರ ವಾಣಿಜ್ಯ ಮತ್ತು...

MANN KI BAAT:ಅಂದು ಮಹಿಳೆಯರೇ ನಿರ್ವಹಿಸಲಿದ್ದಾರೆ ಪ್ರಧಾನಿಯ ಸೋಶಿಯಲ್ ಮೀಡಿಯಾ

New Delhi News: "ಮಹಿಳೆಯರ ಅದಮ್ಯ ಮನೋಭಾವವನ್ನು ನಾವು ಸಂಭ್ರಮಿಸೋಣ ಮತ್ತು ಗೌರವಿಸೋಣ" ಎಂದ ಅವರು ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರ ಹೆಚ್ಚುತ್ತಿರುವ ಭಾಗವಹಿಸುವಿಕೆಯನ್ನು ಶ್ಲಾಘಿಸಿದರು.ಮಾರ್ಚ್ 8...

INDIAN NATIONAL ANTHEM IN PAKISTAN:ಭಾರತ ತಂಡ ದುಬೈನಲ್ಲಿದ್ದರೂ ಪಾಕ್ ಮೈದಾನದಲ್ಲಿ ಮೊಳಗಿದ ರಾಷ್ಟ್ರಗೀತೆ!

Indian National Anthem in Pakistan News : ಈ ಪಂದ್ಯದಲ್ಲಿ ಇಂಗ್ಲೆಂಡ್​ ಮತ್ತು ಆಸ್ಟ್ರೇಲಿಯಾ ತಂಡಗಳು ಮುಖಾಮುಖಿ ಆಗಿದ್ದು, PAKISTANದ ಗಡಾಫಿ ಮೈದಾನ ಆತಿಥ್ಯ...

MOHAMMED SHAMI DIET:90 ಕೆ.ಜಿ ಇದ್ರಂತೆ ಬೌಲರ್ ಮೊಹಮ್ಮದ್ ಶಮಿ, ತೂಕ ಇಳಿಸಿದ್ದು ಹೇಗೆ?

Dubai News: ತಾವು 34ರ ಪ್ರಾಯದಲ್ಲೂ ಫಿಟ್‌ ಆಗಿರುವುದು ಹೇಗೆ ಎಂಬುದನ್ನು ಅವರು ವಿವರಿಸಿದರು. ಮಾಜಿ ಕ್ರಿಕೆಟಿಗ ಮತ್ತು ಕಾಮೆಂಟೇಟರ್ ನವಜೋತ್ ಸಿಂಗ್ ಸಿಧು ಅವರೊಂದಿಗೆ...