ಕೇಂದ್ರ ಸರ್ಕಾರದ (Government of India) ಮಹತ್ವಾಕಾಂಕ್ಷಿ ಯೋಜನೆ ಪಿಎಂ ಇಂಟರ್ನ್ ಶಿಪ್‌ಗೆ (PM Internship scheme) ಅಧಿಕೃತ ಚಾಲನೆ ಸಿಕ್ಕಿದೆ. ವಿದ್ಯಾರ್ಥಿಗಳಿಗೆ ವೃತ್ತಿ ಕೌಶಲವನ್ನು ಹೆಚ್ಚಿಸಿಕೊಳ್ಳಲು ಹಾಗೂ ಉದ್ಯೋಗ ಕ್ಷಮತೆಯನ್ನು ವೃದ್ಧಿಸಿಕೊಳ್ಳುವುದರ ಜೊತೆಗೆ ಆರ್ಥಿಕ ನೆರವನ್ನೂ ನೀಡುವ ಈ ಯೋಜನೆಗೆ ನೋಂದಾಯಿಸಿಕೊಳ್ಳಲು ಸರ್ಕಾರ ಅಧಿಕೃತ ಜಾಲತಾಣದ ಲಿಂಕ್ ಬಿಡುಗಡೆ ಮಾಡಿದೆ.
ಸದರಿ ಯೋಜನೆಯು ಯುವ ವೃತ್ತಿಪರರಿಗೆ ಪ್ರಾಯೋಗಿಕ ಅನುಭವವನ್ನು ನೀಡಲು ಮತ್ತು ಉನ್ನತ ಭಾರತೀಯ ಕಂಪನಿಗಳೊಂದಿಗೆ ಇಂಟರ್ನ್ ಶಿಪ್‌ಗಳ ಮೂಲಕ ಉದ್ಯೋಗಾವಕಾಶವನ್ನು ಹೆಚ್ಚಿಸಲು ಅವಕಾಶವನ್ನು ನೀಡುತ್ತಿದೆ. ಅಕ್ಟೋಬರ್ 3ರಿಂದ ವಿವಿಧ ಕಂಪನಿಗಳು ತಮ್ಮಲ್ಲಿರುವ ಅವಕಾಶಗಳ ಬಗ್ಗೆ ವೆಬ್‌ಸೈಟ್‌ನಲ್ಲಿ ಮಾಹಿತಿ ಪ್ರಕಟಿಸಿವೆ.
ಪಿಎಂ ಇಂಟರ್ನ್ ಶಿಪ್ ಯೋಜನೆಗೆ ಆಯ್ಕೆಯಾದ ಅಭ್ಯರ್ಥಿಗಳು ದೇಶದ ಟಾಪ್ ಕಂಪನಿಗಳಾದ ಟಾಟಾ, ರಿಲಯನ್ಸ್, ಬಿರ್ಲಾ, ಅದಾನಿ, ಇನ್ಫೋಸಿಸ್, ಮೈಕ್ರೋಸಾಫ್ಟ್, ಐಬಿಎಂ ಮೊದಲಾದ 500 ಕಂಪನಿಗಳೊಂದಿಗೆ ಇಂಟರ್ನ್ ಶಿಪ್ ಮಾಡಬಹುದಾಗಿದೆ.
ಆಯ್ಕೆಯಾದವರಿಗೆ ಪ್ರತಿ ತಿಂಗಳಿಗೆ 5,000 ರೂ. ಹಾಗೂ ಒಂದು ಬಾರಿಯ ನೆರವಾಗಿ 6,000 ರೂ.ಗಳನ್ನು ಪಡೆಯಲಿದ್ದಾರೆ. ಜತೆಗೆ ಕಂಪನಿಗಳು ಸಿಎಸ್‌ಆರ್ ನಿಧಿಯನ್ವಯ ತರಬೇತಿ ವೆಚ್ಚ ಹಾಗೂ ಇಂಟರ್ನ್ ಶಿಪ್‌ನ ಶೇ.10 ವೆಚ್ಚ ಭರಿಸಲಿವೆ.
21-24 ವಯಸ್ಸಿನ ಪೂರ್ಣ ಪ್ರಮಾಣದ ವ್ಯಾಸಂಗ ಅಥವಾ ಉದ್ಯೋಗದಲ್ಲಿ ತೊಡಗದೆ ಇರುವ ಅಭ್ಯರ್ಥಿಗಳು ಈ ಯೋಜನೆಗೆ ಅರ್ಹರಾಗಿದ್ದಾರೆ. ಆರಂಭದಲ್ಲಿ ಎರಡು ವರ್ಷಗಳ ಯೋಜನೆ ಇದಾಗಿದ್ದು, ಎರಡನೇ ಹಂತದಲ್ಲಿ 3 ವರ್ಷಗಳ ಅವಧಿಗೆ ವಿಸ್ತರಣೆ ಮಾಡಲಾಗುತ್ತದೆ.
ಅಭ್ಯರ್ಥಿಗಳು ಹೈಸ್ಕೂಲ್, ಹೈಯರ್ ಸೆಕೆಂಡರಿ ಹಂತದ ವ್ಯಾಸಂಗವನ್ನು ಪೂರ್ಣಗೊಳಿಸಿರಬೇಕು, ಐಟಿಐನಿಂದ ಪ್ರಮಾಣಪತ್ರಗಳನ್ನು ಹೊಂದಿರಬೇಕು, ಪಾಲಿಟೆಕ್ನಿಕ್ ಸಂಸ್ಥೆಗಳಿಂದ ಡಿಪ್ಲೊಮಾಗಳನ್ನು ಹೊಂದಿರಬೇಕು ಅಥವಾ ಬಿಎ, ಬಿಕಾಮ್, ಬಿಸಿಎ, ಬಿಬಿಎ, ಅಥವಾ ಬಿ.ಫಾರ್ಮ್ ಇತ್ಯಾದಿ ವಿದ್ಯಾರ್ಹತೆಯನ್ನು ಪೂರ್ಣಗೊಳಿಸಿರಬೇಕು.
ಅಭ್ಯರ್ಥಿಯ ಆಧಾರ್ ಕಾರ್ಡ್, ಶೈಕ್ಷಣಿಕ ಪ್ರಮಾಣಪತ್ರಗಳು (ಪೂರ್ಣಗೊಳಿಸಿರುವ ಅಥವಾ ಅಂತಿಮ ಪರೀಕ್ಷೆಯ ಪ್ರಮಾಣಪತ್ರಗಳು), ಇತ್ತೀಚಿನ ಪಾಸ್‌ಪೋರ್ಟ್ ಗಾತ್ರದ ಭಾವಚಿತ್ರ (ಐಚ್ಛಿಕ), ಇತರ ಅವಶ್ಯಕತೆಗಳಿಗೆ ಸ್ವಯಂ ಘೋಷಣೆ ಸಾಕು; ಯಾವುದೇ ಹೆಚ್ಚುವರಿ ದಾಖಲೆಗಳ ಅಗತ್ಯವಿಲ್ಲ.
ಮೊದಲಿಗೆ ನಾವು ಕೆಳಗೆ ನೀಡಿರುವ ಲಿಂಕ್ ಬಳಸಿಕೊಂಡು ಪಿಎಂ ಇಂಟರ್ನ್ ಶಿಪ್ ಯೋಜನೆಯ ವೆಬ್‌ಸೈಟ್‌ಗೆ ಭೇಟಿ ನೀಡಿ. ಅದರಲ್ಲಿ ಬಲತುದಿಯಲ್ಲಿರುವ Youth Registration ಲಿಂಕ್ ಕ್ಲಿಕ್ ಮಾಡಿದರೆ ಹೊಸ ಪುಟ ತೆರೆಯುತ್ತದೆ.
ಅಭ್ಯರ್ಥಿಗಳು ನೀಡಿದ ಮಾಹಿತಿಯ ಆಧಾರಿಸಿ ರೆಸ್ಯೂಮ್ ರಚಿಸಲಾಗುತ್ತದೆ. ಆದ್ಯತೆಗಳ ಆಧಾರದ ಮೇಲೆ ಸ್ಥಳ, ವಲಯ ಮತ್ತು ಅರ್ಹತೆಗಳು ನಮೂದಿಸಿ, ದಾಖಲೆಗಳನ್ನು ಸಲ್ಲಿಸಿದ ನಂತರ, ಸಬ್ಸಿಟ್ ಬಟನ್ ಒತ್ತಿ. ನಂತರ ದೃಢೀಕರಣ ಪುಟವನ್ನು ಡೌನ್‌ಲೋಡ್ ಮಾಡಿಕೊಂಡು ಮುಂದಿನ ಅಗತ್ಯಕ್ಕಾಗಿ ಮುದ್ರಿತ ಪ್ರತಿಯನ್ನು ತೆಗೆದಿಟ್ಟುಕೊಳ್ಳಬಹುದು.
WhatsApp Group
Join Now
Telegram Group
Join Now
Instagram Account
Follow Now
Facebook Page
Follow Now