Mumbai, Maharashtra News:
PM MODI MAHARASHTRA VISIT ಇಂಡೋ-ಪೆಸಿಫಿಕ್ ಪ್ರದೇಶವು ಯಾವಾಗಲೂ ಮುಕ್ತ, ಸುರಕ್ಷಿತ, ಅಂತರ್ಗತ ಮತ್ತು ಸಮೃದ್ಧವಾಗಿರಬೇಕೆಂದು ಭಾರತ ಬಯಸುತ್ತದೆ ಎಂದು ಮೋದಿ ಹೇಳಿದರು. ವಿಧ್ವಂಸಕ ನೌಕೆ, ಯುದ್ಧನೌಕೆ ಮತ್ತು ಜಲಾಂತರ್ಗಾಮಿ ನೌಕೆಗಳನ್ನು ಬುಧವಾರ ಮೊದಲ ಬಾರಿಗೆ ಒಟ್ಟಿಗೆ ನಿಯೋಜಿಸಿದ ನಂತರ ಮಾತನಾಡಿದ ಅವರು, ಈ ಮೂರೂ ಯುದ್ಧ ನೌಕೆಗಳು ‘ಮೇಡ್ ಇನ್ ಇಂಡಿಯಾ’ ಆಗಿವೆ ಎಂದು ಹೇಳಿದರು.
ಜಾಗತಿಕ ಭದ್ರತೆ, ಆರ್ಥಿಕತೆ ಮತ್ತು ಭೌಗೋಳಿಕ ರಾಜಕೀಯ ಚಲನಶೀಲತೆಯ ದಿಕ್ಕು ನಿರ್ಧರಿಸುವಲ್ಲಿ ಭಾರತವು ಪ್ರಮುಖ ಪಾತ್ರ ವಹಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಬುಧವಾರ ಇಲ್ಲಿ ಮೂರು ನೌಕಾ ಯುದ್ಧನೌಕೆಗಳನ್ನು ರಾಷ್ಟ್ರಕ್ಕೆ ಸಮರ್ಪಿಸಿ ಅವರು ಮಾತನಾಡಿದರು.’ಆತ್ಮನಿರ್ಭರ ಭಾರತ್’ ಉಪಕ್ರಮವು ದೇಶವನ್ನು ಬಲಪಡಿಸಿದೆ ಮತ್ತು ಸ್ವಾವಲಂಬಿಯನ್ನಾಗಿ ಮಾಡಿದೆ.
PM MODI MAHARASHTRA VISIT ಭಾರತವು ಪ್ರಮುಖ ಕಡಲ ಶಕ್ತಿಯಾಗುತ್ತಿದೆ ಮತ್ತು ವಿಶ್ವದ ವಿಶ್ವಾಸಾರ್ಹ ಮತ್ತು ಜವಾಬ್ದಾರಿಯುತ ಪಾಲುದಾರನಾಗಿ ಗುರುತಿಸಲ್ಪಟ್ಟಿದೆ ಎಂದು ಅವರು ನುಡಿದರು. “ಹಿಂದೂ ಮಹಾಸಾಗರ ಪ್ರದೇಶದಲ್ಲಿ ಎದುರಾಗುವ ಯಾವುದೇ ಆಪತ್ತು ಅಥವಾ ಬಿಕ್ಕಟ್ಟಿಗೆ ಭಾರತವೇ ಮೊದಲ ಪ್ರತಿಕ್ರಿಯೆ ನೀಡುವ ಶಕ್ತಿಯಾಗಿ ಹೊರಹೊಮ್ಮಿದೆ. ಜಾಗತಿಕ ಭದ್ರತೆ, ಆರ್ಥಿಕತೆ ಮತ್ತು ಭೌಗೋಳಿಕ ರಾಜಕೀಯಕ್ಕೆ ನಿರ್ದೇಶನ ನೀಡುವಲ್ಲಿ ಭಾರತ ಪ್ರಮುಖ ಪಾತ್ರ ವಹಿಸಲಿದೆ” ಎಂದು ಮೋದಿ ಹೇಳಿದರು.
“ಕಡಲನ್ನು ಮಾದಕವಸ್ತುಗಳು, ಶಸ್ತ್ರಾಸ್ತ್ರಗಳು ಮತ್ತು ಭಯೋತ್ಪಾದನೆಯಿಂದ ಮುಕ್ತಗೊಳಿಸುವ ಪ್ರಯತ್ನಗಳಲ್ಲಿ ನಾವು ಜಾಗತಿಕ ಪಾಲುದಾರರಾಗಬೇಕಿದೆ. ಅಲ್ಲದೇ ಕಡಲನ್ನು ಸುರಕ್ಷಿತ ಮತ್ತು ಸಮೃದ್ಧವಾಗಿಸಬೇಕಿದೆ. ಭಾರತವು ಪ್ರಮುಖ ಕಡಲ ಶಕ್ತಿಯಾಗುತ್ತಿದೆ ಮತ್ತು ವಿಶ್ವಾಸಾರ್ಹ ಮತ್ತು ಜವಾಬ್ದಾರಿಯುತ ಪಾಲುದಾರನಾಗಿ ಗುರುತಿಸಲ್ಪಟ್ಟಿದೆ” ಎಂದು ಅವರು ಹೇಳಿದರು.
ಭಾರತದ ರಕ್ಷಣಾ ಉತ್ಪಾದನೆ 1.25 ಲಕ್ಷ ಕೋಟಿ ರೂ.ಗಳನ್ನು ದಾಟಿದೆ ಮತ್ತು ಭಾರತದಿಂದ 100 ಕ್ಕೂ ಹೆಚ್ಚು ದೇಶಗಳಿಗೆ ರಕ್ಷಣಾ ಉಪಕರಣಗಳನ್ನು ರಫ್ತು ಮಾಡಲಾಗಿದೆ ಎಂದು ಅವರು ತಿಳಿಸಿದರು. ಮೂರು ಪ್ರಮುಖ ನೌಕಾ ಯುದ್ಧ ವಿಮಾನಗಳನ್ನು ನಿಯೋಜಿಸುವುದು ರಕ್ಷಣಾ ಉತ್ಪಾದನೆ ಮತ್ತು ಕಡಲ ಭದ್ರತೆಯಲ್ಲಿ ಜಾಗತಿಕ ನಾಯಕನಾಗುವ ಭಾರತದ ದೃಷ್ಟಿಕೋನವನ್ನು ಸಾಕಾರಗೊಳಿಸುವಲ್ಲಿ ಮಹತ್ವದ ಮುನ್ನಡೆಯನ್ನು ಸೂಚಿಸುತ್ತದೆ.
“ಪ್ರಾದೇಶಿಕ ಜಲಪ್ರದೇಶ, ನೌಕಾಯಾನದ ಸ್ವಾತಂತ್ರ್ಯ ಮತ್ತು ವ್ಯಾಪಾರ ಸರಬರಾಜು ಮಾರ್ಗಗಳು ಮತ್ತು ಸಮುದ್ರ ಮಾರ್ಗಗಳನ್ನು ಭದ್ರಪಡಿಸುವುದು ಮುಖ್ಯ. ಭಾರತವು ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿದೆಯೇ ಹೊರತು ವಿಸ್ತರಣಾವಾದಕ್ಕಾಗಿ ಅಲ್ಲ. ಕಳೆದ 10 ವರ್ಷಗಳಲ್ಲಿ 33 ಹಡಗುಗಳು ಮತ್ತು ಏಳು ಜಲಾಂತರ್ಗಾಮಿ ನೌಕೆಗಳನ್ನು ನೌಕಾಪಡೆಗೆ ಸೇರಿಸಲಾಗಿದೆ” ಎಂದು ಅವರು ಹೇಳಿದರು.
ಇದನ್ನು ಓದಿರಿ : PROTEIN RICH VEGETARIAN FOOD : ನೀವು ಸಸ್ಯಾಹಾರಿಯಾಗಿದ್ದರೆ ಯಾವ ಆಹಾರ ಸೇವಿಸಬೇಕು ಗೊತ್ತೇ?