spot_img
spot_img

PM MODI TO ATTEND CHRISTMAS – ಪ್ರಧಾನಿ ಮೋದಿ ನಾಳೆ ಕ್ರಿಸ್ಮಸ್ ಆಚರಣೆಯಲ್ಲಿ ಭಾಗಿ

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

New Delhi News:

ಸೋಮವಾರದಂದು ಪ್ರಧಾನಿ ನರೇಂದ್ರ ಮೋದಿ ಕ್ರಿಸ್​ಮಸ್ ಆಚರಣೆ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ. ಕ್ಯಾಥೊಲಿಕ್ ಬಿಷಪ್ಸ್ ಕಾನ್ಫರೆನ್ಸ್ ಆಫ್ ಇಂಡಿಯಾ (ಸಿಬಿಸಿಐ) ಸೋಮವಾರ ಸಂಜೆ 6.30 ಕ್ಕೆ ನವದೆಹಲಿಯ ಸಿಬಿಸಿಐ ಕೇಂದ್ರದಲ್ಲಿ ಆಯೋಜಿಸಿರುವ ಕ್ರಿಸ್ ಮಸ್ ಆಚರಣೆಯಲ್ಲಿ ಪ್ರಧಾನಿ ಭಾಗವಹಿಸಲಿದ್ದಾರೆ. ದೇಶದ ಕ್ಯಾಥೊಲಿಕ್ ಚರ್ಚ್​ಗಳ ಪ್ರಧಾನ ಕಚೇರಿಯಲ್ಲಿ ನಡೆಯಲಿರುವ ಕ್ರಿಸ್​ಮಸ್ ಹಬ್ಬದ ಕಾರ್ಯಕ್ರಮದಲ್ಲಿ ಪ್ರಧಾನಿಯೊಬ್ಬರು ಭಾಗವಹಿಸುತ್ತಿರುವುದು ಇದೇ ಮೊದಲು.

ಪ್ರಧಾನಿ ಮೋದಿ ಕ್ರಿಸ್​ಮಸ್ ಆಚರಣೆಯಲ್ಲಿ ಭಾಗಿಯಾಗಲಿದ್ದಾರೆ.ಈ ಸಂದರ್ಭದಲ್ಲಿ ಪಿಎಂ ಮೋದಿ ಕಾರ್ಡಿನಲ್​ಗಳು, ಬಿಷಪ್​ಗಳು ಮತ್ತು ಪ್ರಮುಖ ವ್ಯಕ್ತಿಗಳು ಸೇರಿದಂತೆ ಕ್ರಿಶ್ಚಿಯನ್ ಸಮುದಾಯದ ಪ್ರಮುಖ ನಾಯಕರೊಂದಿಗೆ ಸಂವಹನ ನಡೆಸುವ ನಿರೀಕ್ಷೆಯಿದೆ.

ಪ್ರಧಾನಿಯವರ ಉಪಸ್ಥಿತಿಯು ಅಂತರ್ಗತ ಸಾಂಸ್ಕೃತಿಕ ಸಂವಾದವನ್ನು ಉತ್ತೇಜಿಸುವ ಮತ್ತು ಕ್ರಿಶ್ಚಿಯನ್ ಸಮುದಾಯದೊಂದಿಗಿನ ಸಂಬಂಧಗಳನ್ನು ಬಲಪಡಿಸುವ ಸರ್ಕಾರದ ಬದ್ಧತೆಯನ್ನು ಎತ್ತಿ ತೋರಿಸುತ್ತದೆ ಎಂದು ಪಿಎಂಒ ಹೇಳಿಕೆ ತಿಳಿಸಿದೆ. ಈ ವಾರದ ಆರಂಭದಲ್ಲಿ, ಡಿಸೆಂಬರ್ 19 ರಂದು ಪ್ರಧಾನಿ ಮೋದಿ ಕೇಂದ್ರ ಸಚಿವ ಜಾರ್ಜ್ ಕುರಿಯನ್ ಅವರ ನಿವಾಸದಲ್ಲಿ ನಡೆದ ಕ್ರಿಸ್ ಮಸ್ ಆಚರಣೆಯಲ್ಲಿ ಭಾಗವಹಿಸಿದ್ದರು.

ಸಮಾರಂಭದಲ್ಲಿ ಕ್ರಿಶ್ಚಿಯನ್ ಸಮುದಾಯದ ಪ್ರಮುಖ ಸದಸ್ಯರೊಂದಿಗೆ ಸಂವಾದ ನಡೆಸಿದ ಅವರು ಒಳಗೊಳ್ಳುವಿಕೆ ಮತ್ತು ಆಚರಣೆಯ ಮನೋಭಾವವನ್ನು ಒತ್ತಿಹೇಳಿದರು.1944 ರಲ್ಲಿ ಸ್ಥಾಪನೆಯಾದ ಕ್ಯಾಥೊಲಿಕ್ ಬಿಷಪ್ಸ್ ಕಾನ್ಫರೆನ್ಸ್ ಆಫ್ ಇಂಡಿಯಾ, ಭಾರತದಾದ್ಯಂತ ಕ್ಯಾಥೊಲಿಕರ ಹಿತಾಸಕ್ತಿಗಳನ್ನು ಪ್ರತಿನಿಧಿಸುವ ಮಹತ್ವದ ಸಂಸ್ಥೆಯಾಗಿದೆ.

ನಂಬಿಕೆ ಆಧಾರಿತ ಕಾರ್ಯಕ್ರಮಗಳನ್ನು ಆಯೋಜಿಸುವಲ್ಲಿ ಮತ್ತು ಸಮುದಾಯದ ಮೇಲೆ ಪರಿಣಾಮ ಬೀರುವ ಸಾಮಾಜಿಕ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಇದು ನಿರ್ಣಾಯಕ ಪಾತ್ರ ವಹಿಸುತ್ತದೆ. ಕ್ರಿಸ್ ಮಸ್ ಕ್ರೈಸ್ತರಿಗೆ ಬಹುದೊಡ್ಡ ಧಾರ್ಮಿಕ ಮತ್ತು ಸಾಂಸ್ಕೃತಿಕ ಆಚರಣೆಯಾಗಿದೆ. ಇದು ಪ್ರೀತಿ, ತ್ಯಾಗ ಮತ್ತು ಸಹಾನುಭೂತಿಯ ಬೋಧನೆಗಳಿಗೆ ಪೂಜ್ಯನೀಯವಾದ ಯೇಸು ಕ್ರಿಸ್ತನ ಜನನದ ದಿನವಾಗಿದೆ.

ಈ ಸಂದರ್ಭದಲ್ಲಿ ಧಾರ್ಮಿಕ ಸೇವೆ, ಪ್ರಾರ್ಥನೆಗಳನ್ನು ಮಾಡಿ ಕ್ಯಾರಲ್ ಗಾಯನ ಹಾಡಲಾಗುತ್ತದೆ. ಕೇರಳ ಮೂಲದ ಕುರಿಯನ್ ಅವರನ್ನು ಜೂನ್ 9 ರಂದು ಕೇಂದ್ರ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಲಾಯಿತು. ಕ್ರಿಶ್ಚಿಯನ್ ಸಮುದಾಯವನ್ನು ಒಲಿಸಿಕೊಳ್ಳಲು ಇವರಿಗೆ ಸಚಿವ ಸ್ಥಾನ ನೀಡಲಾಗಿದೆ ಎನ್ನಲಾಗಿದೆ. ದೀರ್ಘಕಾಲದ ಬಿಜೆಪಿ ನಾಯಕರಾಗಿರುವ ಕುರಿಯನ್ ಅವರು ತಮ್ಮ ಶಾಂತ ಸ್ವಭಾವಕ್ಕೆ ಹೆಸರಾಗಿದ್ದು, ಪಕ್ಷದೊಳಗೆ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದಾರೆ.

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

WOMAN DONATES 35 YEARS OF SAVINGS:35 ವರ್ಷದ ಉಳಿತಾಯದ ಹಣವನ್ನು ಶಿಕ್ಷಣ ಸಂಸ್ಥೆಗೆ ದಾನ ಮಾಡಿದ ಮಹಿಳೆ.

Tirupati (Andhra Pradesh) News: ರೇಣಿಗುಂಟದ ಸಿ.ಮೋಹನ ದಾನ ಮಾಡಿದ WOMAN. ಇವರು ವಿಶ್ವಸಂಸ್ಥೆಯ ಅಭಿವೃದ್ಧಿ ಮತ್ತು ನಿರ್ವಹಣೆ ವಲಯದಲ್ಲಿ ಕೊಸೊವೊ, ಅಲ್ಬೇನಿಯಾ, ಯೆಮೆನ್, ಸೌದಿ...

BOMB THREAT CALLS TO AIRLINES : 2024ರಲ್ಲಿ ವಿಮಾನಗಳಿಗೆ ಬಂದಿದ್ದು ಬರೋಬ್ಬರಿ 728 ಹುಸಿ ಬಾಂಬ್ ಕರೆ, ಇಂಡಿಗೋಗೆ ಅತಿ ಹೆಚ್ಚು

New Delhi News: 2024ರಲ್ಲಿ ಒಟ್ಟು 728 ಹುಸಿ ಬಾಂಬ್​ ಕರೆಗಳು ವಿವಿಧ ವಿಮಾನಯಾನ ಸಂಸ್ಥೆಗಳಿಗೆ ಬಂದಿವೆ. ಅದರಲ್ಲಿ 714 ದೇಶಿಯ ವಿಮಾನ ಸಂಸ್ಥೆಗಳಿಗೆ ಬಂದಿವೆ....

HOUSE BURGLAR ARREST : ಪ್ರೊಪೆಷನಲ್ ಬಾಕ್ಸರ್ನಿಂದ 150ಕ್ಕೂ ಹೆಚ್ಚು ಮನೆಗಳ್ಳತನ

Bangalore News: HOUSE BURGLAR ARREST  ಬಾಕ್ಸಿಂಗ್ ಬಿಟ್ಟು ಕಳ್ಳತನಕ್ಕಿಳಿದು, 150ಕ್ಕೂ ಹೆಚ್ಚು ಮನೆಗೆ ಕನ್ನ ಹಾಕಿದ್ದ ಕುಖ್ಯಾತ ಅಂತಾರಾಜ್ಯ ಖದೀಮನನ್ನು ಪೊಲೀಸರು ಬಂಧಿಸಿದ್ದಾರೆ.ಸೋಲ್ಹಾಪುರದ ಮಂಗಳವಾರ್...

IRAN SATELLITES : ದೇಶೀಯವಾಗಿ ತಯಾರಿಸಿದ 3 ಉಪಗ್ರಹಗಳನ್ನು ಅನಾವರಣಗೊಳಿಸಿದ ಇರಾನ್

Tehran News: IRAN SATELLITES ತಾನು ದೇಶೀಯವಾಗಿ ತಯಾರಿಸಿದ ಮೂರು ಉಪಗ್ರಹಗಳನ್ನು ಅನಾವರಣಗೊಳಿಸಿದೆ. ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್, ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಸಚಿವ...