ಬೆಂಗಳೂರು: ಅರಣ್ಯ ಪ್ರದೇಶಗಳಲ್ಲಿ ಕಳ್ಳಬೇಟೆ ಕಡಿಮೆಯಾಗಿ ಮಾನವ-ಪ್ರಾಣಿ ಸಂಘರ್ಷ ಹೆಚ್ಚಾಗಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಅವರು ಹೇಳಿದ್ದಾರೆ.
ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನಡೆಸಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಶರಾವತಿಯಂತಹ ಸರ್ಕಾರಿ ಯೋಜನೆಗಳಿಗಾಗಿ ಭೂಮಿ ಕಳೆದುಕೊಂಡ ನಿರಾಶ್ರಿತರಿಗೆ ಪುನರ್ವಸತಿ ಕಲ್ಪಿಸಲು ಹೋರಾಟ ಮುಂದುವರೆದಿದ್ದು, ಈ ನಡುವಲ್ಲೇ ಗಣಿಗಾರಿಕೆಗೆ ಪರಿಹಾರವಾಗಿ ಭೂಮಿ ನೀಡುತ್ತಿರುವುದು ವಿಪರ್ಯಾಸದ ಸಂಗತಿ ಎಂದು ಹೇಳಿದರು.
ಎಫ್‌ಆರ್‌ಎ ಜಾರಿಗೊಳಿಸುವ ಮುನ್ನ ಅರಣ್ಯವಾಸಿಗಳಿಗೆ ಪುನರ್ವಸತಿ ಕಲ್ಪಿಸಬೇಕು ಅಥವಾ ಅವರಿಗೆ ಜಮೀನು ನೀಡಬೇಕಿತ್ತು, ಅದನ್ನು ಮಾಡಿರಲಿಲ್ಲ. 2006 ರಲ್ಲಿ, ಸರ್ಕಾರವು ಅರಣ್ಯದೊಳಗೆ ವಾಸಿಸುವವರಿಂದ ಅರ್ಜಿಗಳನ್ನು ಆಹ್ವಾನಿಸಿತು.
ನಿಯಮಗಳ ಪ್ರಕಾರ, 1980 ರ ದಶಕದ ಮೊದಲು ಯಾರಾದರೂ ಅರಣ್ಯ ಪ್ರದೇಶಗಳಿಗೆ ಸ್ಥಳಾಂತರಗೊಂಡಿದ್ದರೆ ಮತ್ತು ಭೂಮಿಯನ್ನು ಡಿನೋಟಿಫೈ ಮಾಡಿದ್ದರೆ, ಅದನ್ನು ಯಾರಿಗಾದರೂ ಹಂಚಬಹುದಾಗಿದೆ. ಸುಪ್ರೀಂಕೋರ್ಟ್ ಹಾಗೂ ಹೈಕೋರ್ಟ್ ನಲ್ಲಿ ಆದೇಶ ಕಾನೂನು ಪ್ರಕಾರವಿಲ್ಲ ಎಂದು ರದ್ದುಪಡಿಸಲಾಯಿತು. ಇದೀಗ ಪುನರ್ವಸತಿಗೆ ಭೂಮಿ ಮಂಜೂರು ಮಾಡಬೇಕಾದರೆ ಸುಪ್ರೀಂಕೋರ್ಟ್ ಮತ್ತು ಕೇಂದ್ರ ಸರ್ಕಾರದ ಅನುಮತಿ ಅಗತ್ಯವಿದೆ. ಈಗಲೂ ಈ ವಿಚಾರ ಸುಪ್ರೀಂಕೋರ್ಟ್ ಅಂಗಳದಲ್ಲಿದೆ.
ತಮ್ಮ ಭೂಮಿಯನ್ನು ಮಾರಾಟ ಮಾಡಲು, ಕೃಷಿ ಸಾಲ ಪಡೆಯಲು ಅಥವಾ ಸರ್ಕಾರದ ಯೋಜನೆಗಳಿಂದ ಯಾವುದೇ ಪ್ರಯೋಜನವನ್ನು ಪಡೆಯಲು ಸಾಧ್ಯವಾಗದ ಸಾವಿರಾರು ಜನರಿದ್ದಾರೆ.
ಕಂದಾಯ ಮತ್ತು ನೀರಾವರಿ ಸಚಿವರ ಜತೆ ಮಾತನಾಡಿದ್ದೇನೆ. ಕಂದಾಯ ಮತ್ತು ನೀರಾವರಿ ಇಲಾಖೆಗಳ ಸಾಮೂಹಿಕ ಜವಾಬ್ದಾರಿಯಾಗಿರುವುದರಿಂದ ಒಟ್ಟಾಗಿ ಕುಳಿತು ನೀತಿ ರೂಪಿಸಬೇಕು. ವರ್ಷಗಟ್ಟಲೆ ಅಲ್ಲಿಯೇ ಇದ್ದ ಜನರನ್ನು ಹೊರಹಾಕಲಾಗಿದೆ. ಅರಣ್ಯ ಮಂಜೂರಾತಿ ಸಿಗುವವರೆಗೆ ಭೂಮಿ ನೀಡುವಂತಿಲ್ಲ. ರಾಜ್ಯ/ಕೇಂದ್ರ ಸರ್ಕಾರಗಳು ಅಥವಾ ಇತರರು ಸೇರಿದಂತೆ ಏಜೆನ್ಸಿಗಳು ಪರಿವೇಶ್ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬೇಕು ಮತ್ತು ಇದಕ್ಕೆ ನಿಯಮಗಳಿವೆ.
ಒಂದು ಪ್ಯಾಕೇಜ್ ಇದೆ, ಕುಟುಂಬ ಸ್ಥಳಾಂತರಗೊಂಡರೆ 15 ಲಕ್ಷ ರೂ. ನೀಡಲಾಗುತ್ತದೆ. ಸುಮಾರು 736 ಕುಟುಂಬಗಳು ಸ್ಥಳಾಂತರಗೊಂಡಿರುವ ಭದ್ರಾ ಹುಲಿ ಸಂರಕ್ಷಿತ ಪ್ರದೇಶದಂತೆ ಇದನ್ನು ಮಾಡಲಾಗಿದೆ. ಇದು ಭಾರತದ ಯಶೋಗಾಥೆ. ಪುನರ್ವಸತಿ ಅಗತ್ಯವಿದೆ.
ಮೊದಲನೆಯದಾಗಿ ಹೇಳುವುದಾದರೆ ಬಿಜೆಪಿ ಮೀಸಲಾತಿಯ ವಿರುದ್ಧವಾಗಿದೆ. ಅವರಿಗೆ ಅಷ್ಟೊಂದು ಕಾಳಜಿ ಇದ್ದರೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲಿ. ಹಲವು ಬಿಜೆಪಿ ನಾಯಕರು ಒಳಮೀಸಲಾತಿಯನ್ನು ಬಹಿರಂಗವಾಗಿ ವಿರೋಧಿಸಿದ್ದಾರೆ. ಆದರೆ, ಇದನ್ನು ರಾಜ್ಯ ಸರ್ಕಾರಗಳು ಜಾರಿಗೊಳಿಸಬೇಕು ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ನಮ್ಮ ಪ್ರಣಾಳಿಕೆಯಲ್ಲಿ ಭರವಸೆ ನೀಡಲಾಗಿದ್ದು, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕ್ರಮ ಕೈಗೊಳ್ಳುತ್ತೇವೆಂದು ಹೇಳಿದರು.