spot_img
spot_img

POD TRANSPORT : ಹೂಡಿಕೆದಾರರ ಸಮಾವೇಶದಲ್ಲಿ ಗಮನ ಸೆಳೆದ ಪಾಡ್ ತಂತ್ರಜ್ಞಾನ

spot_img
spot_img

Share post:

Bangalore News:

ವಿದ್ಯುತ್ ಚಾಲಿತ POD TRANSPORT ವ್ಯವಸ್ಥೆ ಕಡಿಮೆ ದೂರ ಕ್ರಮಿಸಲು ಸಹಕಾರಿಯಾಗಲಿದೆ. ಜೊತೆಗೆ ಇದು ಪರಿಸರ ಸ್ನೇಹಿಯಾಗಿದೆ. ಏರ್ ಟ್ಯಾಕ್ಸಿ ಬಳಿಕ ಹೂಡಿಕೆದಾರರ ಸಮಾವೇಶದ ಪ್ರದರ್ಶನ ಮಳಿಗೆಗಳಲ್ಲಿ ಎಲ್ಲರ ಗಮನ ಸೆಳೆಯುತ್ತಿರುವುದು ‘ನ್ಯೋ ಪಾಡ್’. ಈ ನ್ಯೋ POD TRANSPORTತಂತ್ರಜ್ಞಾನ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ವಿದ್ಯುತ್ ಚಾಲಿತ ಪಾಡ್ ಸಾರಿಗೆ ಅಲ್ಪ ಅಂತರವನ್ನು ಕ್ರಮಿಸುವ ಪರಿಸರ ಸ್ನೇಹಿ ಸಾರಿಗೆ ವ್ಯವಸ್ಥೆಯಾಗಿದೆ.

ನಗರ ಪ್ರದೇಶಗಳಲ್ಲಿ 1-10 ಕಿ.ಮೀ. ದೂರವನ್ನು ಕ್ರಮಿಸಲು ಅನುಕೂಲಕರವಾಗುವ ಈ ಇವಿ POD TRANSPORTಯನ್ನು ನ್ಯೋ ಕಮ್ಯುಟ್ ಸಂಸ್ಥೆ ಅಭಿವೃದ್ಧಿ ಪಡಿಸಿದೆ.  ಪಾಡ್ ಆಧಾರಿತ ಸ್ವಾಯತ್ತ ಸಾರಿಗೆ ವ್ಯವಸ್ಥೆ ಮೂಲಕ ಸಾರ್ವಜನಿಕ ಸಾರಿಗೆ ಕೇಂದ್ರ ಹಾಗೂ ಗಮ್ಯ ಸ್ಥಾನದ ಮಧ್ಯದ ಅಂತರಕ್ಕೆ ಸೇತುವೆಯಾಗಿ ಕಾರ್ಯನಿರ್ವಹಿಸುತ್ತದೆ. ಅಂದರೆ ಬೆಂಗಳೂರಿನ ರೈಲ್ವೇ ನಿಲ್ದಾಣದಿಂದ ಬಸ್ ನಿಲ್ದಾಣಕ್ಕೆ, ಮೆಟ್ರೋ ನಿಲ್ದಾಣದಿಂದ ಬಸ್ ನಿಲ್ದಾಣದ ವರೆಗೆ, ದೊಡ್ಡ ಕ್ಯಾಂಪಸ್ ನೊಳಗಿನ ಸಂಪರ್ಕ ಅಗತ್ಯತೆ ಪೂರೈಸಲು POD TRANSPORT ಅನುಕೂಲವಾಗಲಿದೆ.

ಬೆಂಗಳೂರಲ್ಲಿ ಜನನಿಬಿಡ ನಿಲ್ದಾಣಗಳಲ್ಲಿ ಅಲ್ಪ ಅಂತರದ ದೂರವನ್ನು ಕ್ರಮಿಸಲು ಇದು ಸಹಕಾರಿಯಾಗಲಿದೆ. ಅಲ್ಪ ದೂರ ಕ್ರಮಿಸುವ ವಿದ್ಯುತ್ ಚಾಲಿತ ಪಾಡ್ ಸಾರಿಗೆ ಇನ್ವೆಸ್ಟ್ ಕರ್ನಾಟಕ ಪ್ರದರ್ಶನ ಮಳಿಗೆಯಲ್ಲಿ ಗಮನ ಸೆಳೆಯುತ್ತಿದೆ. ಏನಿದು ‘ನ್ಯೋ ಪಾಡ್ ‘ (NWO POD) ಸಾರಿಗೆ ತಂತ್ರಜ್ಞಾನ ಎಂಬ ವರದಿ ಇಲ್ಲಿದೆ.

What is EV POD Transport?:

ಈ POD TRANSPORT ಸಂಪೂರ್ಣ ವಿದ್ಯುತ್ ಚಾಲಿತ ವ್ಯವಸ್ಥೆಯಾಗಿದೆ. ಇದರ ಕಾರ್ಯಾಚರಣೆ ವೆಚ್ಚ ಕಿ.ಮೀ.ಗೆ 1₹ ಗಿಂತ ಕಡಿಮೆ ಇದೆ. ಮೂರು ಕಂಬಿಗಳ ಟ್ರಾಕ್ ಮೇಲೆ ಈ ಪಾಡ್ ಸಂಚರಿಸುತ್ತದೆ. ಸ್ವಯಂ ಚಾಲಿತ ವ್ಯವಸ್ಥೆ ಇದಾಗಿದೆ. ಟ್ರಾಕ್ ಅಳವಡಿಸಲು ಸುಮಾರು 1.5 ಮೀಟರ್ ಸ್ಥಳಾವಕಾಶ ಬೇಕು. 1.5 ಕಿ.ಮೀ ದೂರ, 3 PODಗಳಿಗೆ ಅಂದಾಜು ಸುಮಾರು 3-5 ಕೋಟಿ ರೂ. ವೆಚ್ಚವಾಗುತ್ತದೆ.

ಇದು ಲಿಫ್ಟ್ ಮಾದರಿ ಕಾರ್ಯನಿರ್ವಹಿಸುತ್ತದೆ. ಆದರೆ ಇದು ಸಮತಲ ಎಲಿವೇಟರ್ ಆಗಿ ಕಾರ್ಯಾಚರಿಸುತ್ತದೆ. ಕಡಿಮೆ ದೂರದ ಸಂಚಾರಕ್ಕಾಗಿ ಪ್ರತ್ಯೇಕ ಪಾತ್ ವೇ ಮೇಲೆ ಓಡಾಡುವ ವಿದ್ಯುತ್ ಚಾಲಿತ ಪಾಡ್ ಸಾರಿಗೆ ವ್ಯವಸ್ಥೆ ಇದಾಗಿದೆ. ಒಂದು ಪಾಡ್ ಸುಮಾರು 8 ಪ್ರಯಾಣಿಕರನ್ನು ಕೊಂಡೊಯ್ಯಬಹುದಾಗಿದೆ‌.

ಈ ಇವಿ ಪಾಡ್ ವ್ಯವಸ್ಥೆ ಪಾಯಿಂಟ್ ಟು ಪಾಯಿಂಟ್ ಸಂಚಾರಕ್ಕೆ ಅನುಕೂಲಕರ ಸಾರಿಗೆ ಮಾದರಿಯಾಗಿದೆ. ಪ್ರಯಾಣಿಕರು ಪಾಡ್ ಒಳಗೆ ಬಂದು, ಹೋಗಬೇಕಾದ ಸ್ಥಳವನ್ನು ಆಯ್ಕೆ ಮಾಡಿದರೆ ಸಾಕು. ಸ್ವಯಂ ಚಾಲಿತವಾಗಿ ಪಾಡ್ ಕಾರ್ಯನಿರ್ವಹಿಸುತ್ತದೆ.

What is the specialty of POD transport?:

ಎರಡು ನಿಮಿಷಗಳ ಅಂತರದಲ್ಲಿ ಒಂದರ ಹಿಂದೆ ಒಂದರಂತೆ ಪಾಡ್​​ಗಳು ಸಂಚರಿಸಬಹುದಾಗಿದೆ. ಹೀಗಾಗಿ ಪ್ರಯಾಣಿಕರ ಕಾಯುವಿಕೆ ಸಮಯ ಅತ್ಯಲ್ಪವಾಗಿದೆ. ಅಗತ್ಯಕ್ಕೆ ಬೇಕಾದಷ್ಟು ಪಾಡ್​​ಗಳ ಸಂಖ್ಯೆಯನ್ನು ಸುಲಭವಾಗಿ ಹೆಚ್ಚಿಸಬಹುದು, ಕಡಿಮೆಗೊಳಿಸಬಹುದಾಗಿದೆ.

ಈ ಪಾಡ್​​ಗಳನ್ನು ವಿಮಾನ ನಿಲ್ದಾಣ, ಬಂದರು, ರೆಸಾರ್ಟ್, ಥೀಮ್ ಪಾರ್ಕ್​, ಬೃಹತ್ ಟೌನ್ ಶಿಫ್​, ಕ್ಯಾಂಪಸ್​​ಗಳಲ್ಲಿ ಸಂಚರಿಸಲು ಬಳಸಬಹುದಾಗಿದೆ. ಇದು ಶೇ.100ರಷ್ಟು ಸ್ವಯಂ ಚಾಲಿತ ಸಾರಿಗೆ ವ್ಯವಸ್ಥೆಯಾಗಿದೆ.

ಅತಿ ವೇಗದಲ್ಲಿ ಸಂಚರಿಸಬಹುದಾದ ಈ POD ಸಾರಿಗೆ ಎಲ್ಲಾ ವಾತಾವರಣ ಹಾಗೂ ಭೂ ಪ್ರದೇಶದ ಸ್ಥಿತಿಯಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದೆ. PODಯನ್ನು ಕನಿಷ್ಠ ಕಾರ್ಯಾಚರಣೆ ವೆಚ್ಚಕ್ಕಾಗಿ ವಿನ್ಯಾಸಗೊಳಿಸಲಾಗಿದೆ.

ಇದನ್ನು ಓದಿರಿ : 260 foreigners rescued from virtual slavery in Myanmar

Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

MOTOROLA EDGE 60 FUSION – ಅದ್ಭುತವಾದ ಕ್ಯಾಮೆರಾ ಸೆಟಪ್, ವಾಟರ್ ಪ್ರೊಟೆಕ್ಷನ್ – ಮೊಟೊರೊಲಾದ ಹೊಸ ಫೋನ್ನ ಬೆಲೆ ಕೇವಲ ಇಷ್ಟೇ!

Motorola Edge 60 Fusion: ಬಹುನಿರೀಕ್ಷಿತ ' MOTOROLA EDGE 60 FUSION' ಕೊನೆಗೂ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಕಂಪನಿಯು ಇದನ್ನು ' MOTOROLA EDGE...

RASHMIKA MANDANNA – ‘ನಾನು ಹೈದರಾಬಾದ್ನವಳು’: ರಶ್ಮಿಕಾ ಮಂದಣ್ಣ ಹೇಳಿಕೆ ವಿಚಾರ; ಮುಂದುವರಿದ ಪರ – ವಿರೋಧ ಚರ್ಚೆ

'ನ್ಯಾಷನಲ್ ಕ್ರಶ್' ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುವ ಜನಪ್ರಿಯ ನಟಿ RASHMIKA MANDANNA, ಭಾರತೀಯ ಚಿತ್ರರಂಗದಲ್ಲಿ ಮೋಡಿ ಮಾಡಿದ್ದಾರೆ. ತಮ್ಮ ನಟನಾ ಕೌಶಲ್ಯದಿಂದ ದೇಶಾದ್ಯಂತ ಅಭಿಮಾನಿಗಳ...

IPL SUBSCRIPTION PLANS – ಕೆಲವೇ ದಿನಗಳಲ್ಲಿ IPL ಹವಾ ಶುರು: ಈ ಕಂಪನಿಗಳ ಗ್ರಾಹಕರಿಗೆ ಅಗ್ಗದಲ್ಲಿ ಲಭ್ಯ!

JioHotstar Subscription: ಚಾಂಪಿಯನ್ಸ್​ ಟ್ರೋಫಿ ಕ್ರಿಕೆಟ್‌ ಟೂರ್ನಿ ಮುಗೀತು. ಮುಂದಿನ ಕೆಲವೇ ದಿನಗಳಲ್ಲಿ ಐಪಿಎಲ್​ ಜಾತ್ರೆ ಆರಂಭವಾಗಲಿದೆ. ಇದಕ್ಕಾಗಿ ಎಲ್ಲಾ ಟೆಲಿಕಾಂ ಕಂಪನಿಗಳು ತಮ್ಮ ತಮ್ಮ...

IPHONE 17 SERIES – ಐಫೋನ್ 17 ಸೀರಿಸ್ ಡಿಟೆಲ್ಸ್ ಲೀಕ್ – ಇದರ ಸ್ಪೆಷಾಲಿಟಿ ಏನ್ ಗೊತ್ತಾ?

iPhone 17 Series: ಟೆಕ್ ದೈತ್ಯ ಆಪಲ್ ತನ್ನ ಹೊಸ ಐಫೋನ್ ಸೀರಿಸ್​ ಅನ್ನು ಪ್ರತಿ ವರ್ಷ ಮಾರುಕಟ್ಟೆಗೆ ಪರಿಚಯಿಸುತ್ತದೆ. ಈ ಕ್ರಮದಲ್ಲಿ ಈ ವರ್ಷವೂ...