POEM-4 Completes 1000 Orbits:
ಬಾಹ್ಯಾಕಾಶ ಡಾಕಿಂಗ್ ಪ್ರಾಯೋಗಿಕ ಕಾರ್ಯಾಚರಣೆಗಾಗಿ ಬಳಸಲಾದ PSLV ವಾಹನದ ಮರು ಬಳಕೆ ಮಾಡಲಾದ ಸ್ಪೆಂಟ್ ಅಪ್ಪರ್ ಸ್ಟೇಜ್ PSLV ಆರ್ಬಿಟಲ್ ಪ್ಲಾಟ್ಫಾರ್ಮ್ ಎಕ್ಸ್ಪರಿಮೆಂಟ್ ಮಾಡ್ಯೂಲ್ (POEM-4) ನ ನಾಲ್ಕನೇ ಆವೃತ್ತಿಯು POEM 4 COMPLETES 1000 ORBITS ಮಾರ್ಚ್ 4 ರಂದು ಸಾವಿರ ಕಕ್ಷೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ ಎಂದು ಇಸ್ರೋ ಶುಕ್ರವಾರ ಘೋಷಿಸಿದೆ.
PSLV-C60 ಮಿಷನ್ ಡಿಸೆಂಬರ್ 30, 2024 ರಂದು ಉಡಾವಣೆ ಮಾಡಲಾಯಿತು ಮತ್ತು SPADEX ಬಾಹ್ಯಾಕಾಶ ನೌಕೆಯ ಯಶಸ್ವಿ ಆಲಿಂಗನ ಅಥವಾ ಡಾಕಿಂಗ್ ನಂತರ POEM-4 ತನ್ನ ಕಾರ್ಯಾಚರಣೆ ಪ್ರಾರಂಭಿಸಿತು ಎಂದು ಇಸ್ರೋ ಹೇಳಿದೆ.
POEM-4 ಅನ್ನು 24 ಉಪಕರಣಗಳನ್ನು ಹೊತ್ತ ಮೂರು – ಅಕ್ಷಗಳ ಸ್ಥಿರ ವೇದಿಕೆಯಾಗಿ ವಿನ್ಯಾಸಗೊಳಿಸಲಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಹೇಳಿಕೆಯಲ್ಲಿ ತಿಳಿಸಿದೆ. ಇದರಲ್ಲಿ ಸರ್ಕಾರೇತರ ಸಂಸ್ಥೆಗಳಿಂದ (NGEs) 10 ಉಪಕರಣಗಳು ಮತ್ತು ಇಸ್ರೋದಿಂದ 14 ಉಪಕರಣಗಳು ಸೇರಿವೆ. NGE ಸೇರಿದಂತೆ ಎಲ್ಲ ಉಪಕರಣಗಳು ಕಕ್ಷೆಯಲ್ಲಿ ತಮ್ಮ ಉದ್ದೇಶಿತ ಪ್ರಯೋಗಗಳನ್ನು ಪೂರ್ಣಗೊಳಿಸಿವೆ.
POEM-4 ಇಲ್ಲಿಯವರೆಗಿನ ಎಲ್ಲ POEM ಕಾರ್ಯಾಚರಣೆಗಳಲ್ಲಿ ಅತಿ ಹೆಚ್ಚು ಸಂಖ್ಯೆಯ ಉಪಕರಣಗಳನ್ನು ಹೊತ್ತೊಯ್ದಿದ್ದು, ವಿವಿಧ ರೀತಿಯ ಉಪಕರಣಗಳಿಗೆ ಕೈಗೆಟುಕುವ ಪ್ರಾಯೋಗಿಕ ವೇದಿಕೆಯಾಗಿ ಅದರ ಸಾಮರ್ಥ್ಯ ದೃಢಪಡಿಸುತ್ತದೆ ಎಂದು ಇಸ್ರೋ ತಿಳಿಸಿದೆ.
ಇದನ್ನು ಓದಿ : India, EU To Hold Next Round Of FTA Talks From Monday Amid Trump Tariff Threats