Bangalore News:
POLICE RECRUITMENT RESERVATION ಪ್ರಕ್ರಿಯೆಯಲ್ಲಿ ಕಾನ್ಸ್ಟೇಬಲ್ನಿಂದ ಡಿವೈಎಸ್ಪಿವರೆಗೆ ಕ್ರೀಡಾಪಟುಗಳಿಗೆ ಇರುವ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಲು ಸಂಪುಟ ಸಭೆ ಒಪ್ಪಿದೆ. ಈಗ ಈ ಮೀಸಲಾತಿಯು ಪ್ರಮಾಣ ಶೇ.2ರಷ್ಟಿದ್ದು ಇದನ್ನು ಶೇ.3ಕ್ಕೆ ಹೆಚ್ಚಿಸಲು ತೀರ್ಮಾನಿಸಲಾಗಿದೆ. ಡಿವೈಎಸ್ಪಿ ಹುದ್ದೆಯ ವಯೋಮಿತಿ ಕಾಲಂನಲ್ಲಿ ಎಸ್‌ಸಿ/ಎಸ್‌ಟಿ ಹಾಗೂ ಕೆಟಗರಿ-1ರ ಅಭ್ಯರ್ಥಿಗಳ ಗರಿಷ್ಠ ವಯೋಮಿತಿಯನ್ನು 45 ವರ್ಷಗಳಿಗೆ ಹೆಚ್ಚಿಸಲು ನಿಯಮಗಳಿಗೆ ತಿದ್ದುಪಡಿ ತರಲಾಗಿದೆ.
ಕರ್ನಾಟಕ ರಾಜ್ಯ ಪೊಲೀಸ್ ಸೇವೆಗಳು (ಪೊಲೀಸ್ ಕಾನ್ಸ್ಟೇಬಲ್, ಪೊಲೀಸ್ ಸಬ್-ಇನ್ಸ್ಪೆಕ್ಟರ್ ಮತ್ತು POLICE RECRUITMENT RESERVATION ಉಪಾಧೀಕ್ಷಕರ ಹುದ್ದೆಗೆ ಪ್ರತಿಭಾವಂತ ಕ್ರೀಡಾಪಡುಗಳ ನೇರ ನೇಮಕಾತಿ) (ವಿಶೇಷ) (ತಿದ್ದುಪಡಿ) ನಿಯಮಗಳು 2025ರ ಕರಡು ನಿಯಮಗಳನ್ನು ರಾಜ್ಯ ಸರ್ಕಾರ ಪ್ರಕಟಿಸಿತ್ತು.
ಪೊಲೀಸ್ ಇಲಾಖೆಯ ನೇರ ನೇಮಕಾತಿಯಲ್ಲಿ ಕಾನ್ಸ್ಟೇಬಲ್ನಿಂದ ಡಿವೈಎಸ್ಪಿವರೆಗೆ ಕ್ರೀಡಾಪಟುಗಳ POLICE RECRUITMENT RESERVATION ಪ್ರಮಾಣವನ್ನು ಶೇ.2ರಿಂದ ಶೇ.3ಕ್ಕೆ ಹೆಚ್ಚಿಸಲು ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದೆ.
What is the other important conclusion of the volume?:
ಅತೀಕ್ ಎಲ್.ಕೆ. ಅವರನ್ನು ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿಯನ್ನಾಗಿ 01.02.2025ರಿಂದ ಅನ್ವಯಿಸುವಂತೆ ಹಾಗೂ ಮುಂದಿನ ಆದೇಶದವರೆಗೆ ಅವರ ವಯೋನಿವೃತ್ತಿ ನಂತರ ಕರ್ನಾಟಕ ನಾಗರಿಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು, 1977ರ ನಿಯಮ 15(1) (ಎ) ರನ್ವಯ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿ, 20.01.2025ರಂದು ಹೊರಡಿಸಿರುವ ಅಧಿಸೂಚನೆಗೆ (ಅನುಬಂಧ) ಘಟನೋತ್ತರ ಅನುಮೋದನೆ ದೊರೆತಿದೆ.
ವಿ.ಎಸ್.ಉಗ್ರಪ್ಪ ಅವರ ಅಧ್ಯಕ್ಷತೆಯ ಮಹಿಳಾ ಮತ್ತು ಮಕ್ಕಳ ಮೇಲಿನ ಶೋಷಣೆ, ದೌರ್ಜನ್ಯ, ಅತ್ಯಾಚಾರ ಇತ್ಯಾದಿಗಳನ್ನು ನಿಯಂತ್ರಿಸುವ ಬಗ್ಗೆ ತಜ್ಞರ ಸಮಿತಿಯು ನೀಡಿರುವ ಅಂತಿಮ ವರದಿಯಲ್ಲಿನ ಶಿಫಾರಸುಗಳನ್ನು ಅನುಷ್ಠಾನಗೊಳಿಸುವ ಬಗ್ಗೆ ಚರ್ಚೆ ನಡೆಯಿತು.
ಸಮಿತಿ 135 ಶಿಫಾರಸು ನೀಡಿದ್ದು, ಅವುಗಳ ಬಗ್ಗೆ ಸಿಎಸ್ ಅಧ್ಯಕ್ಷತೆಯಲ್ಲಿ ಪರಿಶೀಲಿಸಿ 3 ತಿಂಗಳೊಳಗೆ ವರದಿ ನೀಡಲು ಸೂಚನೆ ನೀಡಲಾಯಿತು. ಬೆಂಗಳೂರು ನಗರ ಜಿಲ್ಲೆಯ ಯಲಹಂಕ ತಾಲೂಕಿನ ಒಟ್ಟು 5678-32 ಎಕರೆ-ಗುಂಟೆ (2298.18 ಹೆಕ್ಟೇರ್ ಪ್ರದೇಶಗಳನ್ನು ವನ್ಯಜೀವಿ (ಸಂರಕ್ಷಣಾ) ಅಧಿನಿಯಮ, 1972ರ ಕಲಂ 36(ಎ) ರನ್ವಯ “ಗ್ರೇಟರ್ ಹೆಸರಘಟ್ಟ ಹುಲ್ಲುಗಾವಲು ಸಂರಕ್ಷಣಾ ಮೀಸಲು ಪ್ರದೇಶ” ಎಂದು ಘೋಷಿಸಲು ಅನುಮೋದನೆ ನೀಡಲಾಗಿದೆ.
POLICE RECRUITMENT RESERVATION ಈಗಾಗಲೇ ಜಯಮಹಲ್ ಅಂಡರ್ ಪಾಸ್ಗಾಗಿ ಉಪಯೋಗಿಸಿಕೊಂಡಿರುವ 1217.41 ಚ.ಮೀಟರ್ ವಿಸ್ತೀರ್ಣದ ಜಮೀನನ್ನು ಹಿಂದಿರುಗಿಸಲು ಸಾಧ್ಯವಾಗದೇ ಇರುವುದರಿಂದ, ಬೆಂಗಳೂರು ಅರಮನೆ ಮೈದಾನದ (ಬಳಕೆ ಮತ್ತು ನಿಯಂತ್ರಣ) ಅಧ್ಯಾದೇಶ 2025 ಕಲಂ 4 ಮತ್ತು 5ರ ಅನ್ವಯ ಕ್ರಮ ಕೈಗೊಳ್ಳಲು, ಹಾಗೂ ಸರ್ವೋಚ್ಛ ನ್ಯಾಯಾಲಯದ 10.12.2024ರ ಆದೇಶದಂತೆ ಸದರಿ ಪ್ರಕರಣದ ವೆಚ್ಚವನ್ನು ರೂ.1 ಲಕ್ಷದಂತೆ ದೂರುದಾರರಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವತಿಯಿಂದ ಪಾವತಿಸಲು ಸಂಪುಟ ಅಸ್ತು ಎಂದಿದೆ.
ಸರ್ಕಾರದಿಂದ ನೇರವಾಗಿ/ಪರೋಕ್ಷವಾಗಿ ನೇಮಕಗೊಂಡಿರುವ ವಿವಿಧ ಉದ್ಯೋಗಿಗಳಿಗೆ ಸಾಮಾಜಿಕ ಭದ್ರತಾ ವ್ಯವಸ್ಥೆಯನ್ನು ಜಾರಿಗೆ ತರುವ ಅಥವಾ ವಿಸ್ತರಿಸಲು ಅಸ್ತು ನೀಡಲಾಗಿದೆ. POLICE RECRUITMENT RESERVATION ರಾಜ್ಯ ಸರ್ಕಾರಿ ಸ್ವಾಮ್ಯದ ಸಾರ್ವಜನಿಕ ವಲಯದ ಉದ್ಯಮಗಳ ಕಾರ್ಯಕ್ಷಮತೆಯ ಬಲವರ್ಧನೆ ಮತ್ತು ರಾಜ್ಯದಲ್ಲಿ ನಿಷ್ಕ್ರಿಯವಾಗಿರುವ ಕೆಲವು ಸಾರ್ವಜನಿಕ ವಲಯ ಉದ್ಯಮಗಳ ಸಮಾಪನೆ/ಸಂಯೋಜನೆ ಅಥವಾ ವಿಲೀನ ಸಂಬಂಧ ತಜ್ಞರ ಸಮಿತಿ ಮೂಲಕ ಅಧ್ಯಯನ ಮಾಡಲು ಸಂಪುಟ ಒಪ್ಪಿಗೆ ನೀಡಿದೆ.
ವೀರಪ್ಪನ್ ಕಾರ್ಯಾಚರಣೆಯ ಎಸ್.ಟಿ.ಎಫ್ ಕಾರ್ಯಪಡೆಯಲ್ಲಿ ಕರ್ತವ್ಯ ನಿರ್ವಹಿಸಿದ ಪೊಲೀಸ್ ಸಿಬ್ಬಂದಿಗೆ ನೀಡಿದ ನಿವೇಶನ ಮಂಜೂರಾತಿ ಸೌಲಭ್ಯವನ್ನು ಅದೇ ಕಾರ್ಯಪಡೆಯಲ್ಲಿ ಕರ್ತವ್ಯ ನಿರ್ವಹಿಸಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಒಬ್ಬರು ನಿವೃತ್ತ ವೈದ್ಯಕೀಯ ಅಧಿಕಾರಿ ಮತ್ತು ಇಬ್ಬರು ನಿವೃತ್ತ ಶುಶ್ರೂಷಕರಿಗೂ ವಿಸ್ತರಿಸಿ ಚಾಮರಾಜನಗರ-ರಾಮಸಮುದ್ರ ನಗರಾಭಿವೃದ್ಧಿ ಪ್ರಾಧಿಕಾರದ ಬಡಾವಣೆಯಲ್ಲಿ ನಿವೇಶನ ಮಂಜೂರು ಮಾಡಲು 30.10.2024ರಂದು ಹೊರಡಿಸಲಾದ ಆದೇಶವನ್ನು ರದ್ದುಪಡಿಸಿ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಲಭ್ಯವಿರುವ ಹಂಚ್ಯಾ-ಸಾತಗಳ್ಳಿ ‘ಎ’ ವಲಯದಲ್ಲಿ ನಿವೇಶನಗಳನ್ನು ಮಂಜೂರು ಮಾಡಲು ಒಪ್ಪಿಗೆ ನೀಡಿದೆ.
ಪ್ರೀಮಿಯಂ ಎಫ್.ಎ.ಆರ್. ಸಂಬಂಧ ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆಯ 1961ರ ಕಲಂ 18-ಬಿಗೆ ತಿದುಪಡಿ ತರುವ ಸಲುವಾಗಿ ಉಭಯ ಸದನಗಳಲ್ಲಿ ಅಂಗೀಕರಿಸಲಾಗಿದ್ದ ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನೆ (ತಿದ್ದುಪಡಿ) ವಿಧೇಯಕ, 2024 ಹಿಂಪಡೆಯಲು ತೆಗೆದುಕೊಂಡ ಕ್ರಮಕ್ಕೆ ಘಟನೋತ್ತರ ಅನುಮೋದನೆ ಸಿಕ್ಕಿದೆ.
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ 8.21 ಕಿ.ಮೀ. ಉದ್ದದ ಕರಾವಳಿ ಪ್ರದೇಶ, ಸಮುದ್ರದ ಕಡೆಗೆ 6 ಕಿ.ಮೀ.ವರೆಗಿನ ಪ್ರದೇಶ ಹಾಗೂ 835.02 ಹೆಕ್ಟೇರ್ ಅರಣ್ಯ ಪ್ರದೇಶವನ್ನು ಒಳಗೊಂಡಂತೆ, ಒಟ್ಟು 5,959 ಹೆಕ್ಟೇರ್ ಪ್ರದೇಶವನ್ನು ‘ಅಪ್ಸರಕೊಂಡ-ಮುಗಲಿ ಕಡಲ ವನ್ಯಜೀವಿಧಾಮ’ ಎಂದು ಘೋಷಣೆಗೆ ಒಪ್ಪಿಗೆ ಸಿಕ್ಕಿದೆ.
POLICE RECRUITMENT RESERVATION ರಾಜ್ಯದ ಎಲ್ಲಾ ಏತ ನೀರಾವರಿ ಕೆರೆಗಳ ವಿಲೇವಾರಿಗೆ ಸಂಬಂಧಿಸಿದಂತೆ ಸರ್ಕಾರಿ ಸವಾಲುಗಳನ್ನು (Base Price) ಹಾಲಿ ಇರುವ 300 ರೂ.ಗಳಿಂದ (ಉಪಯುಕ್ತತಾ ಜಲವಿಸ್ತೀರ್ಣಕ್ಕೆ) 1,500 ರೂ.ಗಳಿಗೆ (ಪ್ರತಿ ಹೆಕ್ಟೇರ್‌ಗೆ) ಹೆಚ್ಚಿಸಲು ಹಾಗೂ ಸದರಿ ಕೆರೆಗಳನ್ನು ಇ-ಟೆಂಡರ್ ಮೂಲಕ ವಿಲೇವಾರಿ ಮಾಡಲು ಅನುಮತಿ ನೀಡಲಾಯಿತು.
ಭಾರತ ಇಲಾಖೆಯ ಸರ್ಕಾರದ ಆರ್ಥಿಕ ವ್ಯವಹಾರಗಳ ಇಲಾಖೆಯ ಅನುಮೋದನೆ ಮತ್ತು ವಿಶ್ವಬ್ಯಾಂಕ್‌ನೊಂದಿಗೆ ಸಾಲ ಒಪ್ಪಂದಕ್ಕೆ ಸಹಿ ಹಾಕುವುದನ್ನು ಬಾಕಿ ಇರಿಸಿ, ಕರ್ನಾಟಕ ಜಲ ಭದ್ರತೆ ಮತ್ತು ವಿಪತ್ತು ನಿರೋಧಕ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು ಅಸ್ತು ಎನ್ನಲಾಗಿದೆ. 2025-2031ರಿಂದ ಐದು ವರ್ಷಗಳಲ್ಲಿ ಒಟ್ಟು 5,000 ಕೋಟಿ ರೂ. (ವಿಶ್ವ ಬ್ಯಾಂಕ್ ಸಾಲ 3,500 ರೂ. ಕೋಟಿ ಮತ್ತು ರಾಜ್ಯ ಸರ್ಕಾರದ ಕೊಡುಗೆ 1,500 ಕೋಟಿ ರೂ.) ವೆಚ್ಚದಲ್ಲಿ ವಿಶ್ವಬ್ಯಾಂಕ್ ನೆರವಿನ ಕರ್ನಾಟಕ ಜಲ ಭದ್ರತೆ ಮತ್ತು ವಿಪತ್ತು ನಿರೋಧಕ ಕಾರ್ಯಕ್ರಮವನ್ನು (KWSDRP) ಅನುಷ್ಠಾನಗೊಳಿಸಲು ಕಂದಾಯ ಇಲಾಖೆಗೆ (ವಿಪತ್ತು ನಿರ್ವಹಣೆ) ಅಧಿಕಾರ ನೀಡಲಾಗಿದೆ.
ರಾಜ್ಯದ ಚಿಕ್ಕ ಬಂದರುಗಳಲ್ಲಿ ವಿಧಿಸಲಾಗುತ್ತಿರುವ ಬಂದರು ಶುಲ್ಕ, ಪೈಲಟೇಜ್ ಮತ್ತು ಟಗ್ ಬಾಡಿಗೆ ಶುಲ್ಕಗಳ ಪರಿಷ್ಕರಣೆ ಹಾಗೂ ಹಾರ್ಬರ್ ಕ್ರಾಪ್ಟ್ ಸರ್ವೆ ಮತ್ತು ನೋಂದಣಿ ಶುಲ್ಕ ಹಾಗೂ ಇನ್‌ಲ್ಯಾಂಡ್ ವೆಸೆಲ್ಸ್ ನಾವೆಗಳ ಸರ್ವೆ ಮತ್ತು ನೋಂದಣಿ ಶುಲ್ಕಗಳ ಪರಿಷ್ಕರಣೆಗೆ ಅನುಮೋದನೆ ನೀಡಲಾಗಿದೆ. ಈ ಪರಿಷ್ಕರಣೆಯಿಂದ ವಾರ್ಷಿಕ 3.50 ಕೋಟಿ ರೂ.ಗಳಿಂದ 4 ಕೋಟಿ ರೂ. ಹೆಚ್ಚುವರಿ ಆದಾಯ ಬರಲಿದೆ.
”ಹೊಂಬೆಳಕು” ಯೋಜನೆಯಡಿ 50 ಗ್ರಾಮ ಪಂಚಾಯತಿಗಳಲ್ಲಿ ಸೋಲಾರ್ ಬೀದಿ ದೀಪಗಳನ್ನು 25 ಕೋಟಿ ರೂ.ಗಳ ವೆಚ್ಚದಲ್ಲಿ ಅಳವಡಿಸುವ ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆ ಲಭಿಸಿದೆ.
ಇದನ್ನು ಓದಿರಿ : LOKAYUKTA RAID : ಬೆಂಗಳೂರು, ಬಾಗಲಕೋಟೆ, ರಾಯಚೂರು, ಬೆಳಗಾವಿ ಸೇರಿ ರಾಜ್ಯದ ವಿವಿಧೆಡೆ ಲೋಕಾಯುಕ್ತ ದಾಳಿ