Belgaum News:
ಮಹಾವೀರ ಭವನದಲ್ಲಿ ಮೂರು ದಿನಗಳ ಕಾಲ ಆಯೋಜಿಸಿದ್ದ POSTAGE STAMPS EXHIBITION ವನ್ನು ವಿದ್ಯಾರ್ಥಿಗಳು, ಅಂಚೆ ಚೀಟಿ ಪ್ರಿಯರು ಕಣ್ತುಂಬಿಕೊಂಡರು. ಅಂಚೆ ಇಲಾಖೆ, ಅಂಚೆ ಚೀಟಿ ಮತ್ತು ನಾಣ್ಯ ಸಂಗ್ರಹಗಳ ಗ್ರೂಪ್(ಬಿಪಿಎಎನ್‌ಜಿ) ಸಹಯೋಗದೊಂದಿಗೆ ಬೆಳಗಾವಿಯಲ್ಲಿ ಹಮ್ಮಿಕೊಂಡಿರುವ ‘ಇಕ್ಷುಪೆಕ್ಸ್–2025’ ಜಿಲ್ಲಾಮಟ್ಟದ POSTAGE STAMPS EXHIBITION ಎಲ್ಲರ ಗಮನ ಸೆಳೆಯಿತು.
ವಿವಿಧ ರಾಜ್ಯಗಳ ಅಂಚೆ ಚೀಟಿ ಸಂಗ್ರಹಕಾರರು ಸಂಗ್ರಹಿಸಿರುವ ದೇಶ – ವಿದೇಶದ ಅಪರೂಪದ ಅಂಚೆ ಚೀಟಿಗಳನ್ನು 180 ಫ್ರೇಮ್‌ಗಳಲ್ಲಿ ಪ್ರದರ್ಶಿಸಲಾಯಿತು. ಇತಿಹಾಸ, ಭೂಗೋಳಶಾಸ್ತ್ರ, ವಿಜ್ಞಾನ, ಅಂತತರಿಕ್ಷ ಯಾನಕ್ಕೆ ಸಂಬಂಧಿಸಿದ ಮಾಹಿತಿ ಒಳಗೊಂಡ ಅಂಚೆ ಚೀಟಿಗಳೂ ಇವೆ. ರಾಣಿ ಚನ್ನಮ್ಮ, ಮಹಾತ್ಮ ಗಾಂಧೀಜಿ, ಬಿ.ಆರ್.ಅಂಬೇಡ್ಕರ್ ಸೇರಿ ಹಲವು ಮಹಾನ್ ನಾಯಕರ ಅಂಚೆ ಚೀಟಿಗಳು ವಿಶೇಷವಾಗಿದ್ದವು.
ಮಾತನಾಡಿದ ವಿದ್ಯಾರ್ಥಿನಿ ಜೀಯಾ ಥರಪಟ್ಟಿ, “ಅಂಚೆಚೀಟಿಗಳನ್ನು ಸಂಗ್ರಹಿಸುವಂತೆ ನಮ್ಮ ಶಿಕ್ಷಕರೊಬ್ಬರು ಹೇಳಿದರು. ಇದರಲ್ಲಿ ನನಗೂ ಆಸಕ್ತಿ ಬಂತು. ಇದೇ ಮೊದಲ ಬಾರಿ ಪ್ರದರ್ಶನದಲ್ಲಿ ಭಾಗವಹಿಸಿದ್ದು, ತುಂಬಾ ಖುಷಿಯಾಗುತ್ತದೆ. ಸದ್ಯ ಯುನೆಸ್ಕೋ ಹೆರಿಟೇಜ್ ಆಫ್ ಸೈನ್ಸ್ ಇಂಡಿಯಾ ಚೀಟಿಗಳನ್ನು ಸಂಗ್ರಹಿಸಿದ್ದು, ಮುಂದೆ ಇನ್ನು ಹೆಚ್ಚು ಚೀಟಿಗಳನ್ನು ಸಂಗ್ರಹಿಸುವ ಗುರಿ ಹೊಂದಿದ್ದೇನೆ” ಎಂದರು.
“ನಮ್ಮ ಮಗಳು ಜೀಯಾ ಗೂಗಲ್ನಲ್ಲಿ ಮಾಹಿತಿ ಪಡೆದು ಬರೆದಿದ್ದಾಳೆ. ಮಗಳ ಈ ಪ್ರಯತ್ನ ಮತ್ತು ಹವ್ಯಾಸ ನಮಗೆ ತುಂಬಾ ಖುಷಿ ತಂದಿದೆ. ಇಲ್ಲಿ ನಾನಾ ರೀತಿಯ ಅಂಚೆ ಚೀಟಿಗಳನ್ನು ನೋಡಿದೆವು” ಎನ್ನುತ್ತಾರೆ ನಿರ್ಮಲಾ ಥರಪಟ್ಟಿ.
Collection of postage stamps of more than 50 countries:
ಅಂಚೆ ಇಲಾಖೆ ಸಹಾಯಕ ಸೂಪರಿಂಟೆಂಡೆಂಟ್ ಈರಣ್ಣ ಮುತ್ನಾಳೆ ಮಾತನಾಡಿ, POSTAGE STAMPS EXHIBITION ದ ಸ್ಪರ್ಧೆ ಕೂಡ ನಡೆಸುತ್ತಿದ್ದೇವೆ. ಯಾರು ಚನ್ನಾಗಿ ಸಂಗ್ರಹಿಸಿರುತ್ತಾರೆಯೋ ಅವರಿಗೆ ಬಹುಮಾನ ನೀಡಲಿದ್ದೇವೆ. ದೇಶ, ವಿದೇಶಗಳ ಮತ್ತು ಬಂಗಾರ, ಬೆಳ್ಳಿ ಅಂಚೆ ಚೀಟಿಗಳು ಇಲ್ಲಿವೆ. ವಿದ್ಯಾರ್ಥಿಗಳು ಪ್ರತಿಯೊಂದು ಚೀಟಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.
ಅಲ್ಲದೇ ನಾವೂ ಈ ರೀತಿ ಸಂಗ್ರಹಿಸಬೇಕು ಅಂದುಕೊಂಡು ತೆರಳುತ್ತಿದ್ದಾರೆ. ಅಂಚೆ ಸಂಗ್ರಹಕಾರರನ್ನು ಉತ್ತೇಜಿಸಬೇಕು ಎಂಬ ನಮ್ಮ ಉದ್ದೇಶ ಈಡೇರಿದೆ” ಎಂದು ಹರ್ಷ ವ್ಯಕ್ತಪಡಿಸಿದರು. ನ್ಯಾಯವಾದಿಯೂ ಆಗಿರುವ ಸಂಗ್ರಹಕಾರ ವಿನಾಯಕ ಲೇಂಡಿ ಮಾತನಾಡಿ, “ಅಲ್ಫಾಬೆಟ್ ಎ ಟು ವೈವರೆಗೆ ಸುಮಾರು 50ಕ್ಕೂ ಅಧಿಕ ದೇಶಗಳ ಅಂಚೆ ಚೀಟಿಗಳನ್ನು ಸಂಗ್ರಹಿಸಿದ್ದೇನೆ. ಇವುಗಳನ್ನು ನೋಡಿದ ವಿದ್ಯಾರ್ಥಿಗಳು ತುಂಬಾ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಅಂಚೆ ಇಲಾಖೆ ನನಗೆ ಗುರುತಿಸಿಕೊಳ್ಳಲು ಒಂದು ಒಳ್ಳೆಯ ವೇದಿಕೆ ಕೊಟ್ಟಿದೆ” ಎಂದರು.
ಇದನ್ನು ಓದಿರಿ : GAURI LANKESH MURDER CASE : ಬಂಧಿತ ಎಲ್ಲ ಆರೋಪಿಗಳಿಗೂ ಜಾಮೀನು ಮಂಜೂರು