spot_img
spot_img

ಗರೀಬಿ ಹಠಾವೋ ದೇಶದ ಅತಿದೊಡ್ಡ ಜುಮ್ಲಾ: ಪ್ರಧಾನಿ ಮೋದಿ

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

ನವದೆಹಲಿ: ಲೋಕಸಭೆಯಲ್ಲಿ ಎರಡು ದಿನಗಳಿಂದ ನಡೆದ ಸಂವಿಧಾನದ ಮೇಲಿನ ಚರ್ಚೆಗೆ ಉತ್ತರದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು, ಕಾಂಗ್ರೆಸ್​ ವಿರುದ್ಧ ಟೀಕಾ ಪ್ರಹಾರ ನಡೆಸಿದರು.

ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರು ಹೊರಡಿಸಿದ ಘೋಷಣೆಯಾದ ‘ಗರೀಬಿ ಹಠಾವೋ’ ದೇಶದ ಇತಿಹಾಸದಲ್ಲಿಯೇ ಅತಿದೊಡ್ಡ ಜುಮ್ಲಾ (ಸುಳ್ಳು) ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಹೇಳಿದರು.

ಗರೀಬಿ ಹಠಾವೋ ದೇಶ್ ಬಚಾವೋ (ಬಡತನ ತೊಡೆದುಹಾಕಿ, ದೇಶವನ್ನು ಉಳಿಸಿ) ಅನ್ನೋದ ಇಂದಿರಾ ಗಾಂಧಿ ಅವರು 1971 ರ ಚುನಾವಣಾ ಪ್ರಚಾರದಲ್ಲಿ ನೀಡಿದ ಘೋಷಣೆಯಾಗಿತ್ತು. ಆದರೆ ಈ ದೇಶಕ್ಕೆ ತಿಳಿದಿದೆ. ಕಾಂಗ್ರೆಸ್​​ ನಾಲ್ಕು ತಲೆಮಾರುಗಳಿಂದ ಬಳಸುತ್ತಿರುವ ಭಾರತದ ಅತಿದೊಡ್ಡ ಸುಳ್ಳು ಎಂದರೆ ಅದು, ಗರೀಬಿ ಹಠಾವೋ ಎಂದು ಮೋದಿ ಟೀಕಿಸಿದರು.

ಸಂವಿಧಾನದ 75ನೇ ವಾರ್ಷಿಕೋತ್ಸವದ ಕುರಿತು ಲೋಕಸಭೆಯಲ್ಲಿ ಎರಡು ದಿನಗಳು ನಡೆದ ಚರ್ಚೆಗೆ ಉತ್ತರಿಸಿದ ಪ್ರಧಾನಿ ಮೋದಿ ಅವರು, ಕೆಲವು ವಿರೋಧ ಪಕ್ಷಗಳಿಗೆ ಅದಾನಿ ಬಿಟ್ಟು ಬೇರೆ ವಿಷಯವೇ ಇಲ್ಲ. ಕಾಂಗ್ರೆಸ್​ಗೆ ಹೊಂದಿಕೊಳ್ಳುವ ಮತ್ತು ಅದಕ್ಕೆ ಅತ್ಯಂತ ನೆಚ್ಚಿನ ಪದ ಒಂದಿದೆ. ಅದು ಜುಮ್ಲಾ. ಇದು ಇಲ್ಲದೆ ಆ ಪಕ್ಷದ ನಾಯಕರು ಬದುಕಲು ಸಾಧ್ಯವಿಲ್ಲ ಎಂದು ಛೇಡಿಸಿದರು.

ಗರೀಬಿ ಹಠಾವೋ ಕಾಂಗ್ರೆಸ್​ಗೆ ರಾಜಕೀಯವಾಗಿ ಸಹಾಯ ಮಾಡಿದೆ. ಆದರೆ, ಬಡವರಿಗೆ ಏನೊಂದೂ ಮಾಡಲಿಲ್ಲ.

ಯುಪಿಎ ಸರ್ಕಾರ ಜನರಿಗೆ ಕನಿಷ್ಠ ಶೌಚಾಲಯ ನಿರ್ಮಿಸಿಕೊಟ್ಟಿರಲಿಲ್ಲ. ಆದರೆ, ಎನ್​ಡಿಎ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಶೌಚಾಲಯಗಳನ್ನು ನಿರ್ಮಿಸುವ ಆಂದೋಲನವನ್ನು ಪ್ರಾರಂಭಿಸಿದೆ” ಎಂದು ಮೋದಿ ತಮ್ಮ ಸರ್ಕಾರವನ್ನು ಸಮರ್ಥಿಸಿಕೊಂಡರು.

ಹಿಂದಿನ ಕಾಂಗ್ರೆಸ್ ಸರ್ಕಾರ ದೇಶದ ವೈವಿಧ್ಯತೆಯಲ್ಲಿ ವಿಷ ಬೀಜ ಬಿತ್ತಿದೆ. ಸಂವಿಧಾನಕ್ಕೆ ಹಿನ್ನಡೆ ಉಂಟು ಮಾಡಲು ಆ ಪಕ್ಷವು ಯಾವುದೇ ಅವಕಾಶವನ್ನು ತಪ್ಪಿಸಲ್ಲ ಎಂದು ಆರೋಪಿಸಿದರು.

ನೆಹರೂ ಕುಟುಂಬವು ಪ್ರತಿ ಹಂತದಲ್ಲೂ ಸಂವಿಧಾನಕ್ಕೆ ಸವಾಲು ಹಾಕಿದೆ ಎಂದು ಮೋದಿ ದೂರಿದರು.

ಕಾಂಗ್ರೆಸ್​ ಸಂವಿಧಾನವನ್ನು ಗಾಯಗೊಳಿಸಿದೆ. ರಕ್ತದ ರುಚಿಯನ್ನು ಕಂಡಿರುವ ಪಕ್ಷವು ಪದೆ ಪದೇ ಸಂವಿಧಾನವನ್ನು ಗಾಯಗೊಳಿಸಲು ಪ್ರಯತ್ನಿಸುತ್ತಿದೆ. ಆದರೆ, ಬಿಜೆಪಿ ನೇತೃತ್ವದ ಎನ್​ಡಿಎ 2014 ರಲ್ಲಿ ಅಧಿಕಾರಕ್ಕೆ ಬಂದ ನಂತರ ಸರ್ಕಾರದ ನೀತಿಗಳು ಮತ್ತು ನಿರ್ಧಾರಗಳು ಭಾರತದ ಶಕ್ತಿ ಮತ್ತು ಏಕತೆಯನ್ನು ಹೆಚ್ಚಿಸುವ ಕೆಲಸ ಮಾಡಿದೆ ಎಂದು ಮೋದಿ ಪ್ರತಿಪಾದಿಸಿದರು.

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

VEGETABLE FARMERS PROBLEMS – ಮಾಯಕೊಂಡದಲ್ಲಿ ಕುಸಿದ ಬೆಳೆ-ಬೆಲೆ

Davangere News: ಜಿಲ್ಲೆಯ ಮಾಯಕೊಂಡ ಒಂದು ಕಾಲದಲ್ಲಿ ತರಕಾರಿ ಬೆಳೆಗೆ ರಾಷ್ಟ್ರಮಟ್ಟದಲ್ಲಿ ಪ್ರಸಿದ್ಧಿ ಗಳಿಸಿತ್ತು. ಆದರೆ ಈಗ ಬೆಳೆ-ಬೆಲೆ ಎರಡೂ ಇಲ್ಲ. ಹಾಗಾಗಿ, ರೈತರು ರೋಸಿ...

Palace Flower Show : ಅರಮನೆ ಫಲಪುಷ್ಪ ಪ್ರದರ್ಶನಕ್ಕೆ ಸಚಿವ ಡಾ. ಹೆಚ್‌ ಸಿ ಮಹದೇವಪ್ಪ ಚಾಲನೆ

Mysore News: ಮೈಸೂರು ಅರಮನೆ ಮಂಡಳಿ ವತಿಯಿಂದ ಅರಮನೆ ಆವರಣದಲ್ಲಿ ಆಯೋಜಿಸಲಾಗಿದ್ದ “ಅರಮನೆ ಫಲಪುಷ್ಪ ಪ್ರದರ್ಶನ-2024” ಕಾರ್ಯಕ್ರಮ, ಛಾಯಾಚಿತ್ರ ಪ್ರದರ್ಶನ, ಬೊಂಬೆ ಮನೆ ಹಾಗೂ ಕುಸ್ತಿ...

INDIA FOREST INCREASED – ಭಾರತದಲ್ಲಿ 1,445 ಚದರ ಕಿ.ಮೀ ಅರಣ್ಯ ಹೆಚ್ಚಳ

INDIA FOREST NEWS : ಭಾರತದ ಅರಣ್ಯ ಸ್ಥಿತಿಗತಿ ವರದಿ ಪ್ರಕಾರ ದೇಶದಲ್ಲಿ ಅರಣ್ಯ ಸಂಪತ್ತು ವೃದ್ಧಿಸಿರುವುದು ಸಕಾರಾತ್ಮಕ ಬೆಳವಣಿಗೆಯಾದರೆ, ಪರಿಸರ ಸೂಕ್ಷ್ಮ ಪ್ರದೇಶ ಪಶ್ಚಿಮ...

Coconut price News : ಕೊಬ್ಬರಿ ಬೆಂಬಲ ಬೆಲೆ 422 ರೂ. ಹೆಚ್ಚಳ

New Delhi News : ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ, 2025ನೇ ಋತುವಿಗೆ ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆಯನ್ನು (ಎಂಎಸ್‌ಪಿ) ಹೆಚ್ಚಿಸಲು ಶುಕ್ರವಾರ ನಡೆದ ಕೇಂದ್ರ...