ಗೋಕಾಕ : ವಿದ್ಯುತ್ ವಿತರಣಾ ಕೇಂದ್ರಗಳಲ್ಲಿ ಮೂರನೇ ತ್ರೈಮಾಸಿಕ ಅವಧಿಯ ನಿರ್ವಹಣೆ ಕಾರ್ಯ ಕೈಗೊಂಡಿರುವುದರಿಂದ ನ. ೨೪ ರಂದು ೧೧೦ ಕೆವ್ಹಿ ಮಮದಾಪುರ ಮತ್ತು ೧೧೦ ಕೆವ್ಹಿ ಗೋಸಬಾಳ ಅಲ್ಲಿ ಬೆಳಿಗ್ಗೆ ೧೦ ರಿಂದ ಸಂಜೆ ೫ ಗಂಟೆಯವರಿಗೆ ‘ಗೋಕಾಕ ನಗರ ಸಹಿತ’ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಹೆಸ್ಕಾಂ ಅಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
೧೧೦ ಕೆವ್ಹಿ ಮಮದಾಪುರ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜು ಆಗುವ ೧೧ ಕೆವ್ಹಿ, ಎಫ್ -೧೧ ಮಮದಾಪುರ ಏನ್ ಜೆ ವಾಯ್, ೧೧೦ ಕೆವ್ಹಿ, ಗೋಸಬಾಳ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜು ಆಗುವ ಎಫ್ -೧ ತಪಸಿ ಏನ್ ಜೆ ವಾಯ್, ಎಫ್ -೫ ಸ್ಟೋನ್ ಕ್ರೂಷರ್ ಇಂಡಸ್ಟ್ರಿಯಲ್ ವಿದ್ಯುತ್ ಮಾರ್ಗ ಮತ್ತು ಎಲ್ಲ ನೀರಾವರಿ ಪಂಪಸೆಟ್ ವಿದ್ಯುತ್ ಮಾರ್ಗಗಳಲ್ಲಿ ಬೆಳಿಗ್ಗೆ ೧೦ ರಿಂದ ಸಾಯಂಕಾಲ ೬ ಗಂಟೆಯವರೆಗೆ ವಿದ್ಯುತ ವ್ಯತ್ಯಯವಾಗಲಿದೆ.
ಹಾಗೂ ೧೧೦ ಕೆವಿ ವಿದ್ಯುತ್ ವಿತರಣಾ ಕೇಂದ್ರ ಗೋಕಾಕದಲ್ಲಿ ೧೧೦/೧೧ ಕೇವ್ಹಿ ಮತ್ತು ೧೧೦/೩೩ ಕೇವ್ಹಿ ೨೦ ಎಂ.ವ್ಹಿ.ಎ ಶಕ್ತಿಪರಿವರ್ತಕಗಳ ನಿರ್ವಹಣೆ ಕಾರ್ಯ ಕೈಗೊಂಡಿರುವುದರಿಂದ, ಎಫ್ -೮ ಮೆಳವಂಕಿ ಏನ್ ಜೆ ವಾಯ್, ಎಫ್ -೯ ಶುಗರ್ ಫ್ಯಾಕ್ಟರಿ ಎನ್. ಜೆ. ವಾಯ್, ಎಫ್ -೧೦ ಮಾಲದಿನ್ನಿ ಏನ್ ಜೆ ವಾಯ್ ೩೩ ಕೇವ್ಹಿ ರಿದ್ಧಿ ಸಿದ್ದಿ, ೩೩ ಕೆವ್ಹಿ ಗೋಕಾಕ ಶುಗರ್ಸ್ ೩೩ ಕೇವ್ಹಿ ಕಲ್ಮಾಡಿ ಇಟಾ ನೀರಾವರಿ ವಿದ್ಯುತ್ ಮಾರ್ಗಗಲ್ಲಿ ಬೆಳಿಗ್ಗೆ ೧೦ ರಿಂದ ಮಧ್ಯಾಹ್ನ ೨ ಗಂಟೆಯವರಿಗೆ ಗೋಕಾಕ ನಗರ ಸಹಿತ ವಿದ್ಯುತ ವ್ಯತ್ಯಯವಾಗಲಿದೆ.
ಕಾರಣ ಹೆಸ್ಕಾಂ ಗ್ರಾಹಕರು ಸಹಕಾರಬೇಕೆಂದು ಹೆಸ್ಕಾಂ ಅಧಿಕಾರಿಗಳು ಹಾಗೂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು (ವಿ) ಕಾರ್ಯ ಮತ್ತು ಪಾಲನೆ ಉಪ ವಿಭಾಗ ಗೋಕಾಕ ಹು. ವಿ. ಸ. ಕಂ. ನಿಗಮದ ಅಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.