spot_img
spot_img

PRABHAS : ಕಣ್ಣಪ್ಪ ಚಿತ್ರದಲ್ಲಿ ‘ರುದ್ರ’ನಾಗಿ ಸೂಪರ್ ಸ್ಟಾರ್ ಪ್ರಭಾಸ್

spot_img
spot_img

Share post:

Prabhas News :

ಬಹುನಿರೀಕ್ಷಿತ ಕಣ್ಣಪ್ಪ ಚಿತ್ರದಿಂದ ರೆಬೆಲ್​ ಸ್ಟಾರ್​ PRABHAS ​ ಅವರ ಮೊದಲ ನೋಟ ಅನಾವರಣಗೊಂಡಿದೆ.’ಕಣ್ಣಪ್ಪ’, ಭಾರತೀಯ ಚಿತ್ರರಂಗದ ಒಂದು ಮಹತ್ವಾಕಾಂಕ್ಷೆಯ ಚಿತ್ರವಾಗಿದ್ದು, ದಕ್ಷಿಣ ಚಿತ್ರರಂಗದ ಖ್ಯಾತ ನಟ ವಿಷ್ಣು ಮಂಚು ಮುಖ್ಯಭೂಮಿಕೆಯಲ್ಲಿ ಅಭಿನಯಿಸುತ್ತಿದ್ದಾರೆ.

ಬಹು ದೊಡ್ಡ ತಾರಾಗಣದೊಂದಿಗೆ ನಿರ್ಮಾಣಗೊಳ್ಳುತ್ತಿರುವ ಈ ಚಿತ್ರದಲ್ಲಿ ಪ್ಯಾನ್​​ ಇಂಡಿಯಾ ಸ್ಟಾರ್ PRABHAS ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರತಂಡ ಅವರ ಪಾತ್ರವನ್ನು ಪರಿಚಯಿಸುವ ಪೋಸ್ಟರ್ ಹಂಚಿಕೊಂಡಿದೆ.

ರೆಬೆಲ್​ ಸ್ಟಾರ್​ PRABHAS ​ ಅವರನ್ನು ಇಂದು ‘ರುದ್ರ’ನಾಗಿ ಅನಾವರಣಗೊಳಿಸಲಾಗುತ್ತಿದೆ. ಕಣ್ಣಪ್ಪ ಚಿತ್ರದಲ್ಲಿ ದೈವಿಕ ಶಕ್ತಿ, ಬುದ್ಧಿವಂತಿಕೆ ಮತ್ತು ರಕ್ಷಕನ ಶಕ್ತಿಯಾಗಿ ರುದ್ರ ಕಾಣಿಸಿಕೊಳ್ಳಲಿದ್ದಾನೆ. ಭಕ್ತಿ, ತ್ಯಾಗ ಮತ್ತು ಅಚಲ ಪ್ರೀತಿಯ ಅಸಾಧಾರಣ ಪ್ರಯಾಣದ ಪ್ರಾರಂಭ.

ಈ ಏಪ್ರಿಲ್​ನಲ್ಲಿ ಬಿಗ್​ ಸ್ಕ್ರೀನ್​ ಮೇಲೆ ಈ ಮಹಾಕಾವ್ಯ ವೀಕ್ಷಿಸಿ! ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಕಣ್ಣಪ್ಪ ಏಪ್ರಿಲ್​​ಗೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ ಎಂದು ತಿಳಿಸಿದ್ದಾರೆ. ಹೌದು, ಸಲಾರ್​ ಸ್ಟಾರ್​​ PRABHAS ರುದ್ರನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿತ್ತು. ಅದರಂತೆ, ಇಂದು ಅನಾವರಣಗೊಂಡಿರುವ ಪೋಸ್ಟರ್​ ರೆಬೆಲ್​ ಸ್ಟಾರ್​​ನನ್ನು ರುದ್ರನಾಗೇ ಪರಿಚಯಿಸಿದೆ.

ಪೋಸ್ಟರ್​ಗೆ, ಪರಾಕ್ರಮಿ ‘ರುದ್ರ’. ಬಹುನಿರೀಕ್ಷಿತ ಸಿನಿಮಾ ಬಿಗ್​ ಬಜೆಟ್​​, ಅತ್ಯಾಧುನಿಕ ತಂತ್ರಜ್ಞಾನದ ಸಹಾಯದೊಂದಿಗೆ ನಿರ್ಮಾಣಗೊಳ್ಳುತ್ತಿದೆ. ಈ ಪ್ರಾಜೆಕ್ಟ್​​ ಘೋಷಣೆಯಾದ ಸಂದರ್ಭ, ಪ್ರಭಾಸ್ ಮತ್ತು ನಯನತಾರಾ ಶಿವ ಪಾರ್ವತಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾತು ಕೇಳಿಬಂದಿತ್ತು. ಆದ್ರೆ, ಕಾಜಲ್ ಪಾರ್ವತಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಚಿತ್ರತಂಡ ಅಧಿಕೃತವಾಗಿ ಘೋಷಿಸಿತು.

ಉಳಿದಂತೆ ಮೋಹನ್ ಲಾಲ್, ಶಿವರಾಜ್​ಕುಮಾರ್, ಆರ್.ಶರತ್ ಕುಮಾರ್, ಬ್ರಹ್ಮಾನಂದಂ ಸೇರಿದಂತೆ ಹಲವರು ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಸ್ಟೀಫನ್ ದೇವಸ್ಸೆ ಮತ್ತು ಮಣಿ ಶರ್ಮಾ ಸಂಗೀತ ಸಂಯೋಜಿಸುತ್ತಿದ್ದಾರೆ. ಕೆಲ ದಿನಗಳ ಹಿಂದೆ, ಕಣ್ಣಪ್ಪ ತಂಡ ಪ್ರಭಾಸ್ ಅವರ ಕಣ್ಣುಗಳನ್ನು ತೋರಿಸುವ ಮೂಲಕ ಕ್ರೇಜ್​ ಕ್ರಿಯೇಟ್​ ಮಾಡಿತ್ತು.

ನೆಟ್ಟಿಗರು, ಸಿನಿಪ್ರಿಯರು, ಅಭಿಮಾನಿಗಳು ಅಪ್ಡೇಟ್​​ಗಾಗಿ ಬಹಳ ಸಮಯದಿಂದ ಕಾದಿದ್ದರು. ಇಂದು ಅನಾವರಣಗೊಂಡಿರುವ ಫಸ್ಟ್ ಲುಕ್​ಗೆ ಬಹುತೇಕ ಅದ್ಭುತ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಪೋಸ್ಟರ್ ಮುಖೇಶ್ ಕುಮಾರ್ ಸಿಂಗ್ ನಿರ್ದೇಶನದ ಸಿನಿಮಾ ಮೇಲಿನ ಕುತೂಹಲವನ್ನು ದುಪ್ಪಟ್ಟುಗೊಳಿಸಿದೆ.ಕಣ್ಣಪ್ಪ ಚಿತ್ರದ ಬಹುಪಾಲು ಚಿತ್ರೀಕರಣ ನ್ಯೂಜಿಲೆಂಡ್‌ನಲ್ಲಿಯೇ ನಡೆದಿದೆ.

ಚೆನ್ನೈನಲ್ಲಿ ನಡೆದ ಮಾಧ್ಯಮಗೋಷ್ಟಿಯಲ್ಲಿ ಚಿತ್ರತಂಡ ವಿದೇಶದಲ್ಲಿ ಶೂಟಿಂಗ್​ ನಡೆಸಿದ್ದರ ಹಿಂದಿನ ಕಾರಣವನ್ನು ಬಹಿರಂಗಪಡಿಸಿತು. ಈ ಚಿತ್ರದ ಕಥೆ ಬಹಳ ಹಿಂದಿನದ್ದು. ಆ ಕಾಲದ ನೈಸರ್ಗಿಕ ಸೌಂದರ್ಯವನ್ನು ಚಿತ್ರದಲ್ಲಿ ತೋರಿಸಬೇಕಾಗಿರುವುದರಿಂದ ಚಿತ್ರವನ್ನು ನ್ಯೂಜಿಲೆಂಡ್‌ನಲ್ಲಿ ಚಿತ್ರೀಕರಿಸಲಾಗಿದೆ ಎಂದು ತಂಡ ಸ್ಪಷ್ಟಪಡಿಸಿತು. ಹೆಚ್ಚಾಗಿ ಸೋಮವಾರ, ಚಿತ್ರದ ಅಪ್ಡೇಟ್ಸ್ ಹೊರಬೀಳುತ್ತದೆ. PRABHAS ಅವರ ಲುಕ್ ಇಂದು ಬಹಿರಂಗಗೊಂಡಿದೆ.

ಇದನ್ನು ಓದಿರಿ : Indian Embassy in Congo asks Indian nationals to depart immediately to safer locations

Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

MOTOROLA EDGE 60 FUSION – ಅದ್ಭುತವಾದ ಕ್ಯಾಮೆರಾ ಸೆಟಪ್, ವಾಟರ್ ಪ್ರೊಟೆಕ್ಷನ್ – ಮೊಟೊರೊಲಾದ ಹೊಸ ಫೋನ್ನ ಬೆಲೆ ಕೇವಲ ಇಷ್ಟೇ!

Motorola Edge 60 Fusion: ಬಹುನಿರೀಕ್ಷಿತ ' MOTOROLA EDGE 60 FUSION' ಕೊನೆಗೂ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಕಂಪನಿಯು ಇದನ್ನು ' MOTOROLA EDGE...

RASHMIKA MANDANNA – ‘ನಾನು ಹೈದರಾಬಾದ್ನವಳು’: ರಶ್ಮಿಕಾ ಮಂದಣ್ಣ ಹೇಳಿಕೆ ವಿಚಾರ; ಮುಂದುವರಿದ ಪರ – ವಿರೋಧ ಚರ್ಚೆ

'ನ್ಯಾಷನಲ್ ಕ್ರಶ್' ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುವ ಜನಪ್ರಿಯ ನಟಿ RASHMIKA MANDANNA, ಭಾರತೀಯ ಚಿತ್ರರಂಗದಲ್ಲಿ ಮೋಡಿ ಮಾಡಿದ್ದಾರೆ. ತಮ್ಮ ನಟನಾ ಕೌಶಲ್ಯದಿಂದ ದೇಶಾದ್ಯಂತ ಅಭಿಮಾನಿಗಳ...

IPL SUBSCRIPTION PLANS – ಕೆಲವೇ ದಿನಗಳಲ್ಲಿ IPL ಹವಾ ಶುರು: ಈ ಕಂಪನಿಗಳ ಗ್ರಾಹಕರಿಗೆ ಅಗ್ಗದಲ್ಲಿ ಲಭ್ಯ!

JioHotstar Subscription: ಚಾಂಪಿಯನ್ಸ್​ ಟ್ರೋಫಿ ಕ್ರಿಕೆಟ್‌ ಟೂರ್ನಿ ಮುಗೀತು. ಮುಂದಿನ ಕೆಲವೇ ದಿನಗಳಲ್ಲಿ ಐಪಿಎಲ್​ ಜಾತ್ರೆ ಆರಂಭವಾಗಲಿದೆ. ಇದಕ್ಕಾಗಿ ಎಲ್ಲಾ ಟೆಲಿಕಾಂ ಕಂಪನಿಗಳು ತಮ್ಮ ತಮ್ಮ...

IPHONE 17 SERIES – ಐಫೋನ್ 17 ಸೀರಿಸ್ ಡಿಟೆಲ್ಸ್ ಲೀಕ್ – ಇದರ ಸ್ಪೆಷಾಲಿಟಿ ಏನ್ ಗೊತ್ತಾ?

iPhone 17 Series: ಟೆಕ್ ದೈತ್ಯ ಆಪಲ್ ತನ್ನ ಹೊಸ ಐಫೋನ್ ಸೀರಿಸ್​ ಅನ್ನು ಪ್ರತಿ ವರ್ಷ ಮಾರುಕಟ್ಟೆಗೆ ಪರಿಚಯಿಸುತ್ತದೆ. ಈ ಕ್ರಮದಲ್ಲಿ ಈ ವರ್ಷವೂ...