ಹೊಸದಿಲ್ಲಿ: ದೇಶದಲ್ಲಿ ಪೆಟ್ರೋಲ್ ಮಾರಾಟ ಅಕ್ಟೋಬರ್ ಮಾಸದಲ್ಲಿ ಶೇ. 7.3ರಷ್ಟು ಏರಿಕೆಯಾಗಿದ್ದು, ಇದೇ ವೇಳೆ ಡೀಸೆಲ್ ಬಳಕೆ ಶೇ 3.3ರಷ್ಟು ಕಡಿಮೆಯಾಗಿದೆ ಎಂದು ತೈಲ ಕಂಪನಿಗಳು ತಿಳಿಸಿವೆ.
ಹಿಂದಿನ ವರ್ಷದ ಇದೇ ತಿಂಗಳಲ್ಲಿ 28.7 ಲಕ್ಷ ಟನ್ ಮಾರಾಟವಾಗಿತ್ತು. ಡೀಸೆಲ್ ಮಾರಾಟವು ಶೇ. 3.3ರಷ್ಟು ಕಡಿಮೆಯಾಗಿದ್ದು, 67 ಲಕ್ಷ ಟನ್ ಮಾರಾಟವಾಗಿದೆ.
ನವೆಂಬರ್‌ನಲ್ಲಿ ದೀಪಾವಳಿ ಹಬ್ಬದ ಉತ್ಸವದಿಂದ ವಿವಿಧ ನಗರಗಳಲ್ಲಿ ಹಲವು ಉತ್ಪನ್ನಗಳ ಮಾರಾಟ ಮುಗಿಲು ಮುಟ್ಟಿದೆ. ಇದರಿಂದ ಸಾಗಣೆ ಕೂಡ ಹೆಚ್ಚಿದೆ. ಇದರಿಂದ ಪೆಟ್ರೋಲ್ ಮಾರಾಟ ದರ ಇನ್ನಷ್ಟು ಹೆಚ್ಚಾಗುವ ನಿರೀಕ್ಷೆ ಇದೆ ಎಂದು ಅರ್ಥ ತಜ್ಞರು ಅಂದಾಜು ಮಾಡಿದ್ದಾರೆ.
2023ರ ಅಕ್ಟೋಬರ್ ತಿಂಗಳಿನಲ್ಲಿ 13,944 ಕೋಟಿ ಯೂನಿಟ್ ವಿದ್ಯುತ್ ಬಳಕೆಯಾಗಿತ್ತು.
2022ರ ಇದೇ ಅವಧಿಯಲ್ಲಿ 11,394 ಯೂನಿಟ್ ವಿದ್ಯುತ್ ಬಳಕೆಯಾಗಿತ್ತು ಎಂದು ಕೇಂದ್ರ ಸರಕಾರ ಶುಕ್ರವಾರ ತಿಳಿಸಿದೆ.
ಉತ್ತರ ಭಾರತದಲ್ಲಿ ತಾಪಮಾನ ಹೆಚ್ಚಳದಿಂದಾಗಿ ಹವಾ ನಿಯಂತ್ರಕ, ಏರ್‌ಕೂಲರ್ಸ್ ಬಳಕೆಯಲ್ಲಿ ಏರಿಕೆಯಾಗಿದೆ. ಇದರಿಂದ ವಿದ್ಯುತ್ ಬಳಕೆ ಪ್ರಮಾಣದಲ್ಲಿ ಹೆಚ್ಚಳವಾಗಿದೆ ಎಂದು ಕೇಂದ್ರ ತಿಳಿಸಿದೆ.
ಮುಂಬರುವ ದಿನಗಳಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಚಟುವಟಿಕೆಗಳು ಹೆಚ್ಚಳವಾಗಲಿವೆ. ಹಾಗಾಗಿ, ವಿದ್ಯುತ್ ಬೇಡಿಕೆ ಮತ್ತು ಬಳಕೆ ಪ್ರಮಾಣವೂ ಏರಿಕೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಎಲ್‌ಪಿಜಿ ಸಿಲಿಂಡರ್ ಮಾರಾಟ ಶೇ. 7.3ರಷ್ಟು ಏರಿಕೆ ಕಂಡಿದ್ದರೆ, ವಿಮಾನ ಇಂಧನ ಮಾರಾಟ ಶೇ. 2.5ರಷ್ಟು ಏರಿಕೆ ಕಂಡಿದೆ.
ಮುಂಬರುವ ದಿನಗಳಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಚಟುವಟಿಕೆಗಳು ಹೆಚ್ಚಳವಾಗಲಿವೆ. ಹಾಗಾಗಿ, ವಿದ್ಯುತ್ ಬೇಡಿಕೆ ಮತ್ತು ಬಳಕೆ ಪ್ರಮಾಣವೂ ಏರಿಕೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ.
ಕಳೆದ ಅಕ್ಟೋಬರ್‌ನಲ್ಲಿ ದೇಶಾದ್ಯಂತ 14,047 ಕೋಟಿ ಯೂನಿಟ್ ವಿದ್ಯುತ್ ಬಳಕೆಯಾಗಿದೆ ಎಂದು ತಿಳಿಸಿದೆ.