spot_img
spot_img

ಬಿಎಂಡಬ್ಲ್ಯೂ ಬೈಕ್​​ಗಳ ಬೆಲೆ ಹೆಚ್ಚಳ

spot_img
spot_img

Share post:

ಪ್ರಸ್ತುತ, ಭಾರತದಲ್ಲಿನ ಎಲ್ಲಾ BMW ದ್ವಿಚಕ್ರ ವಾಹನಗಳು ಸ್ಟ್ಯಾಂಡರ್ಡ್ ಆಗಿ ಮೂರು ವರ್ಷಗಳ ವಾರಂಟಿಯೊಂದಿಗೆ ಬರುತ್ತವೆ. ಭಾರತದಲ್ಲಿ ಕಂಪನಿಯ ಕೊನೆಯ ದ್ವಿಚಕ್ರ ವಾಹನವೆಂದರೆ CE 02 ಎಲೆಕ್ಟ್ರಿಕ್ ಸ್ಕೂಟರ್, ಇದರ ಬೆಲೆ ರೂ 4.50 ಲಕ್ಷ (ಎಕ್ಸ್ ಶೋ ರೂಂ).

ಅಗ್ಗದ BMW ದ್ವಿಚಕ್ರ ವಾಹನ BMW G 310 R ಆಗಿದೆ. ಇದರ ಬೆಲೆ 2.90 ಲಕ್ಷ ರೂ. ಇದೆ. ಕಂಪನಿಯ ಅತ್ಯಂತ ದುಬಾರಿ ಮೋಟಾರ್‌ ಸೈಕಲ್ M1000 RR ಆಗಿದೆ. ಇದರ ಬೆಲೆ 49 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ) ಇದೆ. BMW Motorrad India ತನ್ನ ಎಲ್ಲಾ ಬೈಕ್​ ಮಾಡೆಲ್​ಗಳ ಬೆಲೆಗಳನ್ನು ಹೆಚ್ಚಿಸಲು ನಿರ್ಧರಿಸಿದೆ.

ಪ್ರೀಮಿಯಂ ಬೈಕ್ ತಯಾರಕ BMW Motorrad India ತನ್ನ ಎಲ್ಲಾ ಮಾದರಿಗಳ ಬೆಲೆಯನ್ನು ಜನವರಿ 1, 2025 ರಿಂದ ಶೇಕಡಾ 2.5 ರಷ್ಟು ಹೆಚ್ಚಿಸಲು ನಿರ್ಧರಿಸಿದೆ. ಒಟ್ಟಾರೆ ಇನ್‌ಪುಟ್ ವೆಚ್ಚಗಳು ಮತ್ತು ಹಣದುಬ್ಬರದ ಒತ್ತಡದಿಂದಾಗಿ ತನ್ನ ಶ್ರೇಣಿಯ ಬೆಲೆಗಳನ್ನು ಹೆಚ್ಚಿಸಲಾಗುತ್ತಿದೆ ಎಂದು ಕಂಪನಿ ಮಾಹಿತಿ ನೀಡಿದೆ.

BMW Motorrad ಇಂಡಿಯಾ ಪ್ರಸ್ತುತ ಭಾರತೀಯ ಮಾರುಕಟ್ಟೆಯಲ್ಲಿ ಮೂರು ಸ್ಥಳೀಯವಾಗಿ ಉತ್ಪಾದಿಸಲಾದ 310 ಮಾಡೆಲ್​​, BMW G 310 R, BMW G 310 GS ಮತ್ತು BMW G 310 RR ಮಾದರಿಗಳನ್ನು ಮಾರಾಟ ಮಾಡುತ್ತಿದೆ..

ಇದರ ಕಂಪ್ಲೀಟ್ಲಿ ಬಿಲ್ಟ್ ಯುನಿಟ್ (CBU) ಲೈನ್‌ಅಪ್‌ನಲ್ಲಿ M ಮಾಡೆಲ್‌ಗಳು, ಅಡ್ವೆಂಚರ್​ ಮೋಟಾರ್ ಸೈಕಲ್‌ಗಳು, ರೋಡ್‌ಸ್ಟರ್‌ಗಳು, ಟೂರಿಂಗ್ ಬೈಕ್‌ಗಳು ಮತ್ತು ಇತರ ಅನೇಕ ಮೋಟಾರ್‌ ಸೈಕಲ್‌ಗಳು ಸೇರಿವೆ. ಇದಲ್ಲದೆ, ಕಂಪನಿಯು CE 02 ಮತ್ತು CE 04 ಹೆಸರಿನ ಎರಡು ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಸಹ ಮಾರಾಟ ಮಾಡುತ್ತದೆ.

ಪರಿಷ್ಕೃತ ಬೆಲೆಗಳು BMW ಇಂಡಿಯಾ ಪೋರ್ಟ್‌ಫೋಲಿಯೊದಲ್ಲಿನ ಎಲ್ಲಾ ಮಾದರಿಗಳ ಎಕ್ಸ್-ಶೋರೂಂ ಬೆಲೆಗಳಿಗೆ ಅನ್ವಯಿಸುತ್ತದೆ ಎಂಬುದು ಗಮನಿಸಬೇಕಾದ ಸಂಗತಿ. BMW Motorrad ಇಂಡಿಯಾ ಅಧಿಕೃತವಾಗಿ BMW ಗ್ರೂಪ್‌ನ ಭಾರತೀಯ ಅಂಗಸಂಸ್ಥೆಯ ಭಾಗವಾಗಿ ಏಪ್ರಿಲ್ 2017 ರಲ್ಲಿ ತನ್ನ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ.

Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

MOTOROLA EDGE 60 FUSION – ಅದ್ಭುತವಾದ ಕ್ಯಾಮೆರಾ ಸೆಟಪ್, ವಾಟರ್ ಪ್ರೊಟೆಕ್ಷನ್ – ಮೊಟೊರೊಲಾದ ಹೊಸ ಫೋನ್ನ ಬೆಲೆ ಕೇವಲ ಇಷ್ಟೇ!

Motorola Edge 60 Fusion: ಬಹುನಿರೀಕ್ಷಿತ ' MOTOROLA EDGE 60 FUSION' ಕೊನೆಗೂ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಕಂಪನಿಯು ಇದನ್ನು ' MOTOROLA EDGE...

RASHMIKA MANDANNA – ‘ನಾನು ಹೈದರಾಬಾದ್ನವಳು’: ರಶ್ಮಿಕಾ ಮಂದಣ್ಣ ಹೇಳಿಕೆ ವಿಚಾರ; ಮುಂದುವರಿದ ಪರ – ವಿರೋಧ ಚರ್ಚೆ

'ನ್ಯಾಷನಲ್ ಕ್ರಶ್' ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುವ ಜನಪ್ರಿಯ ನಟಿ RASHMIKA MANDANNA, ಭಾರತೀಯ ಚಿತ್ರರಂಗದಲ್ಲಿ ಮೋಡಿ ಮಾಡಿದ್ದಾರೆ. ತಮ್ಮ ನಟನಾ ಕೌಶಲ್ಯದಿಂದ ದೇಶಾದ್ಯಂತ ಅಭಿಮಾನಿಗಳ...

IPL SUBSCRIPTION PLANS – ಕೆಲವೇ ದಿನಗಳಲ್ಲಿ IPL ಹವಾ ಶುರು: ಈ ಕಂಪನಿಗಳ ಗ್ರಾಹಕರಿಗೆ ಅಗ್ಗದಲ್ಲಿ ಲಭ್ಯ!

JioHotstar Subscription: ಚಾಂಪಿಯನ್ಸ್​ ಟ್ರೋಫಿ ಕ್ರಿಕೆಟ್‌ ಟೂರ್ನಿ ಮುಗೀತು. ಮುಂದಿನ ಕೆಲವೇ ದಿನಗಳಲ್ಲಿ ಐಪಿಎಲ್​ ಜಾತ್ರೆ ಆರಂಭವಾಗಲಿದೆ. ಇದಕ್ಕಾಗಿ ಎಲ್ಲಾ ಟೆಲಿಕಾಂ ಕಂಪನಿಗಳು ತಮ್ಮ ತಮ್ಮ...

IPHONE 17 SERIES – ಐಫೋನ್ 17 ಸೀರಿಸ್ ಡಿಟೆಲ್ಸ್ ಲೀಕ್ – ಇದರ ಸ್ಪೆಷಾಲಿಟಿ ಏನ್ ಗೊತ್ತಾ?

iPhone 17 Series: ಟೆಕ್ ದೈತ್ಯ ಆಪಲ್ ತನ್ನ ಹೊಸ ಐಫೋನ್ ಸೀರಿಸ್​ ಅನ್ನು ಪ್ರತಿ ವರ್ಷ ಮಾರುಕಟ್ಟೆಗೆ ಪರಿಚಯಿಸುತ್ತದೆ. ಈ ಕ್ರಮದಲ್ಲಿ ಈ ವರ್ಷವೂ...