R Chandru News:
R CHANDRUರವರು ಉತ್ತರಪ್ರದೇಶದ ಪುಣ್ಯಕ್ಷೇತ್ರಗಳಿಗೆ ಭೇಟಿ ಕೊಡುತ್ತಿದ್ದಾರೆ. ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ ಮಾಡಿ ಧನ್ಯರಾಗಿದ್ದಾರೆ. ಕನ್ನಡದಖ್ಯಾತ ನಟರಾದ ಇವರು ಇಂದು ಹಿಂದೂ ಧರ್ಮದ ಅತ್ಯಂತ ನಂಬಿಕೆಯ ಕ್ಷೇತ್ರವಾಗಿರೋ ಕಾಶಿಗೆ ಭೇಟಿ ಕೊಟ್ಟಿದ್ದಾರೆ. ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ನಲ್ಲಿ ಪುಣ್ಯಕ್ಷೇತ್ರಕ್ಕೆ ಭೇಟಿ ನೀಡಿರುವ ಫೋಟೋ ಹಂಚಿಕೊಂಡಿರುವ ನಿರ್ದೇಶಕರು, ”ಮುಂಜಾನೆ ವಾರಣಾಸಿಯ ಕಾಶಿ ವಿಶ್ವನಾಥನ ಸನ್ನಿಧಾನದಲ್ಲಿ. ಹರ ಹರ ಮಹಾದೇವ್” ಎಂದು R CHANDRU ರವರು ಬರೆದುಕೊಂಡಿದ್ದಾರೆ. ಬ್ಲ್ಯಾಕ್ ಶರ್ಟ್, ಕೇಸರಿ ಬಣ್ಣದ ಲುಂಗಿ, ಶಾಲ್ ಧರಿಸಿದ ನಿರ್ದೇಶಕರ ಹಣೆಯಲ್ಲಿ ಹರಿಶಿಣ, ಕುಂಕುಮ ಕಾಣಬಹುದು. ಕಳೆದ ದಿನ ತಮ್ಮ ಸಿಂಗಲ್ ಫೋಟೋಗಳನ್ನು ಹಂಚಿಕೊಂಡು, ”ವಾರಣಾಸಿಯ ಪವಿತ್ರ ಗಂಗಾ ನದಿ ತೀರದಲ್ಲಿ” ಎಂದು ಆರ್ ಚಂದ್ರುರವರು ಬರೆದುಕೊಂಡಿದ್ದಾರೆ. ಅಭಿಮಾನಿಗಳು ಫೋಟೋಗಳಿಗೆ ಮೆಚ್ಚುಗೆ ಸೂಚಿಸಿದ್ದಾರೆ.
A moment of celebration at the Maha Kumbh Mela:
ಕಳೆದ ದಿನ ಹಂಚಿಕೊಂಡಿರುವ ಪೋಸ್ಟ್ ಮಹಾ ಕುಂಭಮೇಳಕ್ಕೆ ಸಂಬಂಧಿಸಿದ್ದು. ಪುಣ್ಯ ಸ್ನಾನ ಮಾಡಿರುವ ನಿರ್ದೇಶಕರು, ಫೋಟೋಗಳನ್ನು ಶೇರ್ ಮಾಡಿ ಸುದೀರ್ಘ ಬರಹ R CHANDRU ಹಂಚಿಕೊಂಡಿದ್ದಾರೆ. R CHANDRU ”ಪ್ರತಿಯೊಬ್ಬರ ನಂಬಿಕೆ ಅಂದರೆ ಅದು ಅಪಾರವಾದ ದೈವ ಭಕ್ತಿ. ಯಾಕೆಂದರೆ ಆ ದೈವ ಶಕ್ತಿಯೇ ಅಂಥದ್ದು. ನಮ್ಮದು ಭಕ್ತಿ ಪ್ರಧಾನ ದೇಶ. ಈಗ ಇಡೀ ವಿಶ್ವವೇ ಒಂದೊಮ್ಮೆ ತಿರುಗಿ ನೋಡುವಂತಹ ಮಹಾ ಕುಂಭಮೇಳ ದೇಶದಲ್ಲಿ ನಡೆಯುತ್ತಿದೆ”.”ಗಂಗಾ, ಯಮುನಾ ಹಾಗೂ ಸರಸ್ವತಿ ನದಿಗಳ ತ್ರಿವೇಣಿ ಸಂಗಮದ ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ ಮಾಡಿದ ಮಹಾಕ್ಷಣ. ಬದುಕು ಸಾರ್ಥಕ ಭಾವ”.
”ಇಂತಹ ಅಪರೂಪದ ಧಾರ್ಮಿಕ ಮೇಳವನ್ನು ಹತ್ತಿರದಿಂದ ನೋಡಿ ಶಾಂತವಾಗಿ ಹರಿಯುವ ನದಿಯಲ್ಲಿ ಪುಣ್ಯಸ್ನಾನ ಮಾಡಿ ಮಹಾ ಮಂಗಳಾರತಿ ಪಡೆದು ಕೈ ಮುಗಿದ ಕ್ಷಣ ನಿಜಕ್ಕೂ ಧನ್ಯತಾ ಭಾವ. ನಿತ್ಯವೂ ಧ್ಯಾನಿಸುವ ಮನಸ್ಸು, ಇಷ್ಟೊಂದು ದೈವ ಮನಸ್ಸುಗಳ ಜೊತೆಯಲ್ಲಿ ಅಪರೂಪದ ಮೇಳದಲ್ಲಿ ಭಕ್ತಿಪೂರ್ವಕವಾಗಿ ಭಾಗಿ ಆಗೋದು ಕೂಡ ಖುಷಿಯ ಕ್ಷಣ”.
”ಪ್ರಯಾಗ್ ರಾಜ್ನಲ್ಲಿ 144 ವರ್ಷಗಳ ಬಳಿಕ ನಡೆಯುತ್ತಿರುವ ಈ ಮಹಾಕುಂಭ ಮೇಳವನ್ನು ಕಣ್ತುಂಬಿಕೊಳ್ಳುತ್ತಿರುವ ಭಕ್ತರಿಗೆ ಪಾರವೇ ಇಲ್ಲ. ನಿತ್ಯವೂ ಇಲ್ಲಿ ಧರ್ಮ ಜಾತ್ರೆಯ ಸಡಗರ. ಇಲ್ಲಿ ಮಿಂದೇಳುವ ಭಕ್ತರಿಗಂತೂ ಪಾರವೇ ಇಲ್ಲ”.
”ಸಿನಿಮಾ ಚಿತ್ರೀಕರಣಕ್ಕಾಗಿಯೇ ಲೊಕೇಷನ್ ಹುಡುಕಾಟಕ್ಕೆ ಬಂದ ನಾನು ಈ ಅಪರೂಪದ ಘಳಿಗೆಗೆ ಸಾಕ್ಷಿ ಆಗಿದ್ದೇನೆ ಎಂಬ ಸಂತಸ. ಮಹಾ ನಾಗಾ ಸಾಧುಗಳು, ಮಹಾ ತಪಸ್ವಿಗಳು, ಋಷಿಮುನಿಗಳು, ಅಘೋರಿಗಳು, ಸಾಧು-ಸಂತರನ್ನು ಹತ್ತಿರದಿಂದ ನೋಡಿ ಆಶೀರ್ವಾದ ಪಡೆದ ತೃಪ್ತಿ. ಜೊತೆಗೆ, ಈ ಮಹಾ ಧಾರ್ಮಿಕ ಸಮ್ಮೇಳನ ಹಿನ್ನೆಲೆಯಲ್ಲಿ ಈ ಮಣ್ಣನ್ನು ಸ್ಪರ್ಶಿಸಿದ ಶಿವನ ಆರಾಧಕರ ಆಚಾರ ವಿಚಾರವಂತೂ ಅನನ್ಯ. ಅವರೆಲ್ಲರನ್ನೂ ನೋಡಿ ಮನಸ್ಸು ಭಾವುಕವೆನಿಸಿದ್ದು ಸುಳ್ಳಲ್ಲ”.
Darshan of Bala Ramlalla:
ಇದಕ್ಕೂ ಮುನ್ನ ಶೇರ್ ಆದ ಪೋಸ್ಟ್ನಲ್ಲಿ, ‘ರಾಮ ಜನ್ಮಭೂಮಿಯಲ್ಲಿ ಬಾಲ ರಾಮಲಲ್ಲಾನ ದರ್ಶನ ಪಡೆದ ಸಾರ್ಥಕ ಕ್ಷಣಗಳು’ ಎಂದು ಪೋಸ್ಟ್ ಹಾಕಿದ್ದಾರೆ.
Aarti on Sarayu shore:
ಇನ್ನೂ ಆರತಿ ಫೋ ವಿಡಿಯೋ ಹಂಚಿಕೊಂಡು, ‘ಅಯೋಧ್ಯೆಯ ಪವಿತ್ರ ನದಿ ಸರಯು ತೀರದಲ್ಲಿ ಆರತಿ ಮಾಡಿದ ಕ್ಷಣಗಳು’ ಎಂದು ಬರೆದುಕೊಂಡಿದ್ದಾರೆ.
For ideal man’s birthplace:
ಎರಡು ದಿನದ ಹಿಂದಿನ ಪೋಸ್ಟ್ನಲ್ಲಿ, ‘ಆದರ್ಶ ಪುರುಷ ಶ್ರೀ ರಾಮ ಜನ್ಮಭೂಮಿಗೆ ನನ್ನ ಮೊದಲ ಭೇಟಿ. ಜೈ ಶ್ರೀರಾಮ್’ ಎಂದು ಬರೆದಿದ್ದಾರೆ.
ಇದನ್ನು ಓದಿರಿ : ISRO NVS 02 SATELLITE SETBACK : ಥ್ರಸ್ಟರ್ ಸಮಸ್ಯೆಯಿಂದ ನಿಗದಿತ ಕಕ್ಷೆಗೆ ಸೇರಿಸಲು ವಿಫಲ