spot_img
spot_img

RAHUL GANDHI CANCELS RALLY : ಎಎಪಿಗೆ ಸಹಾಯ ಮಾಡುವ ಉದ್ದೇಶವಿಲ್ಲ

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

New Delhi News:

ದೆಹಲಿ ಚುನಾವಣಾ ಪ್ರಚಾರಕ್ಕೆ RAHUL GANDHI ಗೈರು ಹಾಜರಿಯಿಂದ ಎಎಪಿ ಸಹಾಯ ಮಾಡುವ ಉದ್ದೇಶವನ್ನು ಹೊಂದಲಾಗಿದೆ ಎಂಬ ಊಹಾಪೋಹಗಳನ್ನು ಕಾಂಗ್ರೆಸ್​ ನಾಯಕರು ತಳ್ಳಿ ಹಾಕಿದ್ದಾರೆ.ನವದೆಹಲಿಯ ಮುಸ್ತಫಾಬಾದ್​ನಲ್ಲಿ ಆಯೋಜಿಸಿದ್ದ ಚುನಾವಣಾ ರ‍್ಯಾಲಿಯನ್ನು ರದ್ದು ಗೊಳಿಸಲಾಗಿದೆ.

RAHUL GANDHI ಅವರು ಹುಷಾರಿಲ್ಲದ ಹಿನ್ನೆಲೆ ವೈದ್ಯಕೀಯ ಸಲಹೆಗೆ ಒಳಗಾಗಿದ್ದು, ಅವರು ಪ್ರಚಾರ ಸಭೆಯಲ್ಲಿ ಭಾಗಿಯಾಗುತ್ತಿಲ್ಲ ಎಂದು ದೆಹಲಿ ಕಾಂಗ್ರೆಸ್​ ಮುಖ್ಯಸ್ಥ ದೇವೇಂದ್ರ ಯಾದವ್​ ತಿಳಿಸಿದ್ದಾರೆ.ಕಾಂಗ್ರೆಸ್​​ ನಾಯಕ ರಾಹುಲ್​ ಗಾಂಧಿ ಅನಾರೋಗ್ಯಕ್ಕೆ ಒಳಗಾಗಿದ್ದು, ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್​ ಸಮಾವೇಶಕ್ಕೆ ಗೈರಾಗಿದ್ದರು. ಇದರ ಬೆನ್ನಲ್ಲೇ ಇದೀಗ ಅವರು ರಾಷ್ಟ್ರ ರಾಜಧಾನಿಯ ವಿಧಾನಸಭಾ ಚುನಾವಣಾ ಪ್ರಚಾರದಿಂದಲೂ ಹೊರಗುಳಿಯಲು ನಿರ್ಧರಿಸಿದ್ದಾರೆ.

Don’t listen to any wind news: ಇನ್ನು ರಾಹುಲ್​ ಗಾಂಧಿ ಚುನಾವಣಾ ಪ್ರಚಾರಗಳ ರದ್ದು ಮಾಡುವ ಮೂಲಕ ಮುಸ್ಲಿಂ ಮತಗಳು ವಿಭಜನೆಯಾಗದಂತೆ ತಡೆದು ಎಎಪಿ ಸಹಾಯ ಮಾಡುವ ಉದ್ದೇಶವನ್ನು ಹೊಂದಲಾಗಿದೆ ಎಂಬ ಊಹಾಪೋಹವನ್ನು ಇದೇ ವೇಳೆ ಅವರು ತಳ್ಳಿ ಹಾಕಿದರು. ಇವೆಲ್ಲವೂ ಗಾಳಿ ಸುದ್ದಿಯಾಗಿದ್ದು, ನಾವು ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸುತ್ತಿದ್ದೇವೆ ಎಂದರು.

Promotion after January 26: ಎಎಪಿ ಮತ್ತು ಬಿಜೆಪಿ ನಡುವೆ ಹೊಂದಾಣಿಕೆ ಇದೆ ಎಂದು ಆರೋಪಿಸಿದ ಯಾದವ್, ಕಾಂಗ್ರೆಸ್​ ಯಾವುದೇ ಪ್ರಚಾರ ಸಭೆ ನಡೆಸದಿದ್ದಾಗ ದೊಡ್ಡಣ್ಣ (ಬಿಜೆಪಿ) ನಾವು ಚಿಕ್ಕ ತಮ್ಮನಿಗೆ (ಎಎಪಿಗೆ) ಸಹಾಯ ಮಾಡುತ್ತಿದ್ದೇವೆ ಎಂದು ಆರೋಪಿಸುತ್ತಾರೆ. ತಮ್ಮ (ಎಎಪಿ) ದೊಡ್ಡ ಅಣ್ಣ (ಬಿಜೆಪಿ) ವಿರುದ್ಧ ಹೋರಾಟಕ್ಕೆ ಬೆಂಬಲಿಸುವುದಿಲ್ಲ ಎಂದು ಆರೋಪಿಸುತ್ತಾರೆ ಎಂದು ಇದೇ ವೇಳೆ ಎರಡೂ ಪಕ್ಷಗಳ ವಿರುದ್ಧ ಹರಿಹಾಯ್ದರು.

ಗಣರಾಜ್ಯೋತ್ಸವದ ಬಳಿಕ ನಮ್ಮ ನಾಯಕರು ದೆಹಲಿಯಲ್ಲಿ ಪ್ರಚಾರ ನಡೆಸಲಿದ್ದಾರೆ. ಮುಂದಿನ ದಿನಗಳಲ್ಲಿ ಪ್ರಿಯಾಂಕಾ ಗಾಂಧಿ ಮತ್ತು RAHUL GANDHI ವಿಧಾನಸಭಾ ಚುನಾವಣಾ ಪ್ರಚಾರ ನಡೆಸಲಿದ್ದಾರೆ ಎಂದರು.ಬುಧವಾರ ಸದರ್​ ಬಜಾರ್​ ಕ್ಷೇತ್ರದಲ್ಲಿ ಆಯೋಜಿಸಿದ್ದ ಕಾಂಗ್ರೆಸ್​​ ಪ್ರಚಾರ ಸಭಗೂ ಅವರು ಗೈರಾಗಿದ್ದರು. ರಾಹುಲ್​ ಅಗೈರಿನಲ್ಲಿ ಮತದಾರರಿಗೆ ಅವರ ಸಂದೇಶವನ್ನು ಯಾದವ್​ ಓದಿ ತಿಳಿಸಿದ್ದರು.

ಅದರಲ್ಲಿ ನನ್ನನ್ನು ಪ್ರೀತಿಸುವ ಸಾವಿರರಾರು ಜನರು ಈ ಸಭೆಗೆ ಬಂದಿರುತ್ತೀರಿ. ನಿಮಗೆ ನನ್ನ ಶುಭಾಶಯಗಳು ನಾನು ಈ ಸಭೆಯಲ್ಲಿ ಭಾಗಿಯಾಗಲು ಸಾಧ್ಯವಾಗುತ್ತಿಲ್ಲ ಎಂದು ವಿಷಾದಿಸುತ್ತೇನೆ ಎಂದು ತಿಳಿಸಿದ್ದರು.ಜನವರಿ 22ರಿಂದ ಮೂರು ದಿನಗಳ ಪ್ರಚಾರ ಸಭೆಯನ್ನು ಗಾಂಧಿ ನಡೆಸಲಿದ್ದು, ಇದು ಚುನಾವಣೆಗೆ ದೊಡ್ಡ ಉತ್ತೇಜನ ಸಿಗಲಿದೆ ಎಂದು ಕಾಂಗ್ರೆಸ್​ ಈ ಮೊದಲು ತಿಳಿಸಿತ್ತು.

ಆದರೆ, ಇದರಲ್ಲಿ ಎರಡು ಚುನಾವಣಾ ಪ್ರಚಾರ ಸಭೆ ರದ್ದು ಗೊಂಡಿದೆ. ಬುಧವಾರ ಜನವರಿ 22ರ ಸಭೆಗೆ ಗೈರಾಗಿದ್ದು, ಇದೀಗ ಶುಕ್ರವಾರ ಜನವರಿ 24ರಂದು ಪಶ್ಚಿಮ ದೆಹಲಿಯ ಚುನಾವಣಾ ಪ್ರಚಾರದಲ್ಲಿ ಅವರು ಭಾಗಿಯಾಗುತ್ತಿಲ್ಲ

ಇದನ್ನು ಓದಿರಿ : THREAT TO COMEDIAN KAPIL SHARMA : ರಾಜ್ಪಾಲ್ ಯಾದವ್ಗೂ ಬಂತು ಬೆದರಿಕೆ ಸಂದೇಶ!

 

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

ARYAN KHAN:ಶಾರುಖ್ ಖಾನ್ ತಾಳ್ಮೆ ಪರೀಕ್ಷಿಸಿದ ಮಗ ಆರ್ಯನ್ ಖಾನ್.

Aryan Khan News: ಶಾರುಖ್ ಇಂಟ್ರೊಡಕ್ಷನ್​​​ ಸೀನ್​​ನೊಂದಿಗೆ ಟೀಸರ್ ಪ್ರಾರಂಭವಾಗುತ್ತದೆ. ನಿರ್ದೇಶಕರ ಕುರ್ಚಿಯಲ್ಲಿ ಕುಳಿತ ARYAN KHAN​​, ಸೂಪರ್‌ ಸ್ಟಾರ್‌ನ ಶಾಟ್ ಅನ್ನು ಮತ್ತೆ ಮತ್ತೆ...

KIDNEY FAILURE SYMPTOMS:ನಿಮ್ಮನ್ನು ನಿರಂತರವಾಗಿ ಈ ಸಮಸ್ಯೆಗಳು ಕಾಡುತ್ತಿವೆಯೇ?

Kidney Failure Symptoms News: ಮೂತ್ರಪಿಂಡಗಳು ಹಾನಿಗೊಳಗಾದ ನಂತರ ಡಯಾಲಿಸಿಸ್ ಅಥವಾ ಮೂತ್ರಪಿಂಡ ಕಸಿ ಮಾಡುವುದನ್ನು ಬಿಟ್ಟು ಬೇರೆ ಯಾವುದೇ ದಾರಿಯಿಲ್ಲ. ವೈದ್ಯಕೀಯ ತಜ್ಞರು ತಿಳಿಸುವಂತೆ...

HOW TO MAKE IDLI RAVA:ಈ ರವಾದಿಂದ ಇಡ್ಲಿಗಳು ತುಂಬಾ ಸಾಫ್ಟ್.

How to Make Idli Rave News: IDLI RAVA ಮಾಡಲು ರವೆ ಮುಖ್ಯವಾಗಿರುತ್ತದೆ. ಅದಕ್ಕಾಗಿಯೇ ಅನೇಕರು ಮಾರುಕಟ್ಟೆಗೆ ಹೋದಾಗ ಹೆಚ್ಚಿನ ಪ್ರಮಾಣದಲ್ಲಿ IDLI RAVA...

WOMAN DONATES 35 YEARS OF SAVINGS:35 ವರ್ಷದ ಉಳಿತಾಯದ ಹಣವನ್ನು ಶಿಕ್ಷಣ ಸಂಸ್ಥೆಗೆ ದಾನ ಮಾಡಿದ ಮಹಿಳೆ.

Tirupati (Andhra Pradesh) News: ರೇಣಿಗುಂಟದ ಸಿ.ಮೋಹನ ದಾನ ಮಾಡಿದ WOMAN. ಇವರು ವಿಶ್ವಸಂಸ್ಥೆಯ ಅಭಿವೃದ್ಧಿ ಮತ್ತು ನಿರ್ವಹಣೆ ವಲಯದಲ್ಲಿ ಕೊಸೊವೊ, ಅಲ್ಬೇನಿಯಾ, ಯೆಮೆನ್, ಸೌದಿ...